ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಸಹಾಯಕ ಕಾರ್ಯದರ್ಶಿಗಳಾಗಿ ಲಗತ್ತಿಸಲಾದ ಐಎಎಸ್ 2022 ಬ್ಯಾಚ್‌ನ 181 ತರಬೇತಿ ನಿರತ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸಂವಾದದ ವೇಳೆ, ವಿವಿಧ ಅಧಿಕಾರಿಗಳು ತಾವು ಪಡೆದ ತರಬೇತಿಯ ಅನುಭವವನ್ನು ಹಂಚಿಕೊಂಡರು. 2022ರಲ್ಲಿಆರಂಭ ಕಾರ್ಯಕ್ರಮದ ಸಂದರ್ಭದಲ್ಲಿ ಅವರೊಂದಿಗೆ ತಾವು ಈ ಹಿಂದೆ ನಡೆಸಿದ ಸಂವಾದವನ್ನು ಪ್ರಧಾನಿ ಸ್ಮರಿಸಿದರು. ಸಹಾಯಕ ಕಾರ್ಯದರ್ಶಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಆಡಳಿತಾತ್ಮಕ ಪಿರಮಿಡ್‌ನ ಮೇಲಿನಿಂದ ಕೆಳಗಿನವರೆಗೆ ಯುವ ಅಧಿಕಾರಿಗಳಿಗೆ ಪ್ರಾಯೋಗಿಕ ಕಲಿಕೆಯ ಅವಕಾಶವನ್ನು ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದರು.
ನವ ಭಾರತವು ನಿರ್ಲಕ್ಷ್ಯದ ವಿಧಾನದಿಂದ ತೃಪ್ತವಾಗಿಲ್ಲ ಮತ್ತು ಕ್ರಿಯಾಶೀಲತೆಯನ್ನು ಬಯಸುತ್ತದೆ ಮತ್ತು ಅವರು ಎಲ್ಲಾ ನಾಗರಿಕರಿಗೆ ಸಾಧ್ಯವಾದಷ್ಟು ಉತ್ತಮ ಆಡಳಿತ, ಉತ್ಪಾದನೆಯ ಗುಣಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಪ್ರಧಾನಿ ಹೇಳಿದರು. ಲಕ್ಷಾದಿಪತಿ ದೀದಿ, ಡ್ರೋನ್ ದೀದಿ, ಪಿಎಂ ಆವಾಸ್ ಯೋಜನೆ ಮುಂತಾದ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಈ ಯೋಜನೆಗಳನ್ನು ಜನರಿಗೆ ಮತ್ತಷ್ಟು ತಲುಪಿಸಲು ಅವರೆಲ್ಲರೂ ಪರಿಪೂರ್ಣ ವಿಧಾನದಿಂದ ಕೆಲಸ ಮಾಡಬೇಕು ಎಂದರು. ಸ್ಯಾಚುರೇಶನ್(ತೃಪ್ತಿದಾಯಕ) ವಿಧಾನವು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುತ್ತದೆ ಮತ್ತು ತಾರತಮ್ಯವನ್ನು ತಡೆಯುತ್ತದೆ ಎಂದು ಅವರು ಹೇಳಿದರು. ಸೇವಾ ವಿತರಣೆಯಲ್ಲಿ ಅವು ಸ್ಪೀಡ್ ಬ್ರೇಕರ್‌ಗಳಾಗಬೇಕೇ ಅಥವಾ ಸೂಪರ್ ಫಾಸ್ಟ್ ಹೆದ್ದಾರಿಯಾಗಬೇಕೇ ಎಂಬುದು ಈಗ ಅವರ ಆಯ್ಕೆಯಾಗಿದೆ ಎಂದು ಅವರು ಹೇಳಿದರು. ಅವರು ವೇಗವರ್ಧಕ ಏಜೆಂಟ್‌ಗಳಾಗಲು ಆಶಿಸಬೇಕು ಮತ್ತು ಬದಲಾವಣೆಯನ್ನು ತಮ್ಮ ಕಣ್ಣ ಮುಂದೆ ನೋಡಿದಾಗ ಅವರು ತೃಪ್ತಿಯನ್ನು ಅನುಭವಿಸುತ್ತಾರೆ ಎಂದು ಅವರು ಹೇಳಿದರು.
ರಾಷ್ಟ್ರ ಮೊದಲು ಎಂಬುದು ಕೇವಲ ಘೋಷಣೆಯಲ್ಲ, ಅದು ತಮ್ಮ ಜೀವನದ ಗುರಿಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಈ ಪ್ರಯಾಣದಲ್ಲಿ ತಮ್ಮೊಂದಿಗೆ ನಡೆಯುವಂತೆ ಅಧಿಕಾರಿಗಳಿಗೆ ಕರೆ ನೀಡಿದರು. ಐಎಎಸ್ ಆಗಿ ಆಯ್ಕೆಯಾದ ನಂತರ ಅವರು ಪಡೆದ ಪ್ರಶಂಸೆಗಳು ಗತಕಾಲದ ಸಂಗತಿಗಳಾಗಿವೆ ಮತ್ತು ಅವರು ಭೂತಕಾಲದಲ್ಲಿ ಉಳಿಯುವ ಬದಲು ಭವಿಷ್ಯದತ್ತ ಸಾಗಬೇಕು ಎಂದು ಅವರು ಹೇಳಿದರು.
ರಾಜ್ಯ ಸಚಿವ (ಸಿಬ್ಬಂದಿ) ಶ್ರೀ ಜಿತೇಂದ್ರ ಸಿಂಗ್, ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ.ಮಿಶ್ರಾ, ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಮತ್ತು ಕಾರ್ಯದರ್ಶಿ (ಗೃಹ ಮತ್ತು ಡಿಒಪಿಟಿ) ಶ್ರೀ ಎ.ಕೆ. ಭಲ್ಲಾ ಮತ್ತು ಇತರ ಹಿರಿಯ ಅಧಿಕಾರಿಗಳು ಸಂವಾದದ ಸಂದರ್ಭದಲ್ಲಿ ಉಪಸ್ಥಿತರಿದ್ದರು.