ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ್ ಮಾರ್ಗ್ 7ರಲ್ಲಿರುವ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸದಲ್ಲಿಂದು ಕ್ರಿಸ್‌ಮಸ್ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದೊಂದಿಗೆ ಸಂವಾದ ನಡೆಸಿದರು. ಕ್ರಿಸ್‌ಮಸ್ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳು ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಎಲ್ಲರಿಗೂ, ವಿಶೇಷವಾಗಿ ಕ್ರೈಸ್ತ ಸಮುದಾಯದ ಜನರಿಗೆ ಕ್ರಿಸ್ಮಸ್ ಶುಭಾಶಯ ಕೋರಿದ ಪ್ರಧಾನ ಮಂತ್ರಿ, ಈ ವಿಶೇಷ ಮತ್ತು ಪವಿತ್ರ ಸಂದರ್ಭದಲ್ಲಿ ತಮ್ಮೊಂದಿಗೆ ಸೇರಿದ್ದಕ್ಕಾಗಿ ಹಾಜರಿದ್ದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಕ್ರಿಸ್‌ಮಸ್ ಅನ್ನು ಒಟ್ಟಿಗೆ ಆಚರಿಸುವ ಇಂಡಿಯನ್ ಮೈನಾರಿಟಿ ಫೌಂಡೇಶನ್‌ನ ಪ್ರಸ್ತಾಪ ಸ್ವೀಕರಿಸಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು, ಈ ಉಪಕ್ರಮಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ದೀರ್ಘಕಾಲದಿಂದಲೂ ಕ್ರೈಸ್ತ ಸಮುದಾಯದೊಂದಿಗೆ ಹೊಂದಿರುವ ನಿಕಟ ಮತ್ತು ಆತ್ಮೀಯ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಪ್ರಧಾನಿ, ಗುಜರಾತ್ ಮುಖ್ಯಮಂತ್ರಿಯಾಗಿ ಕ್ರೈಸ್ತ ಸಮುದಾಯ ಮತ್ತು ಅವರ ಮುಖಂಡರೊಂದಿಗೆ ಆಗಾಗ್ಗೆ ಸಭೆಗಳನ್ನು ನಡೆಸುತ್ತಿದ್ದುದ್ದನ್ನು ನೆನಪಿಸಿಕೊಂಡರು. ಕೆಲವು ವರ್ಷಗಳ ಹಿಂದೆ ಪೋಪ್ ಅವರೊಂದಿಗಿನ ಅವರ ಸಂವಾದವನ್ನು ಅತ್ಯಂತ ಸ್ಮರಣೀಯ ಕ್ಷಣ ಎಂದು ಕರೆದ ಪ್ರಧಾನಿ, ಸಾಮಾಜಿಕ ಸಾಮರಸ್ಯ, ಜಾಗತಿಕ ಭ್ರಾತೃತ್ವ, ಹವಾಮಾನ ಬದಲಾವಣೆ ಮತ್ತು ಭೂಮಿಯನ್ನು ಉತ್ತಮ ಸ್ಥಳವಾಗಿಸಲು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಂತಹ ವಿಷಯಗಳ ಕುರಿತು ನಡೆದ ಚರ್ಚೆಗಳ ಮೇಲೆ ಬೆಳಕು ಚೆಲ್ಲಿದರು.
ಕ್ರಿಸ್‌ಮಸ್ ಕೇವಲ ಯೇಸುಕ್ರಿಸ್ತನ ಜನ್ಮದಿನ ಆಚರಿಸುವ ದಿನವಲ್ಲ, ಆದರೆ ಅವರ ಜೀವನ, ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸಿಕೊಳ್ಳುವ ದಿನವಾಗಿದೆ. ಯೇಸು ಜೀವಿತ ಕಾಲದ ಸಹಾನುಭೂತಿ ಮತ್ತು ಸೇವೆಯ ಮೌಲ್ಯಗಳನ್ನು ಪಾಲಿಸಬೇಕು. ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸಲು ಯೇಸು ಶ್ರಮಿಸಿದ್ದಾನೆ. ಎಲ್ಲರಿಗೂ ನ್ಯಾಯವು ಮೇಲುಗೈ ಸಾಧಿಸುತ್ತದೆ. ಈ ಮೌಲ್ಯಗಳೇ ಭಾರತದ ಅಭಿವೃದ್ಧಿ ಪಯಣದಲ್ಲಿ ಮಾರ್ಗದರ್ಶಕ ಬೆಳಕಿನಂತೆ ದಾರಿ ತೋರುತ್ತಿದೆ ಎಂದರು.
ಇತರರ ಸೇವೆಗೆ ಒತ್ತು ನೀಡುವ ಪವಿತ್ರ ಬೈಬಲ್‌ನ ಉದಾಹರಣೆ ನೀಡಿದ ಪ್ರಧಾನಿ ಮೋದಿ ಅವರು, ಸಾಮಾಜಿಕ ಜೀವನದ ವಿವಿಧ ಹರವುಗಳ ನಡುವಿನ ಮೌಲ್ಯಗಳ ಹೋಲಿಕೆಯನ್ನು ಎತ್ತಿ ತೋರಿಸಿದರು. “ಸೇವೆಯೇ ಸರ್ವೋಚ್ಚ ಧರ್ಮ. ಪವಿತ್ರ ಬೈಬಲ್‌ನಲ್ಲಿ ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸತ್ಯವೇ ನಮಗೆ ಮೋಕ್ಷದ ಹಾದಿ ತೋರಿಸುತ್ತದೆ ಎಂದು ಹೇಳಲಾಗಿದೆ”. ನಮ್ಮನ್ನು ನಾವು ಮುಕ್ತಗೊಳಿಸುವ ಅಂತಿಮ ಸತ್ಯವನ್ನು ತಿಳಿದುಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುವ ಎಲ್ಲಾ ಪವಿತ್ರ ಉಪನಿಷತ್ತುಗಳನ್ನು ಅವರು ಉಲ್ಲೇಖಿಸಿದ್ದಾರೆ. ಹಂಚಿಕೆಯ ಮೌಲ್ಯಗಳು ಮತ್ತು ಪರಂಪರೆಯ ಮೇಲೆ ಗಮನ ಕೇಂದ್ರೀಕರಿಸಿ ಮುಂದುವರಿಯಲು ಪ್ರಧಾನಿ ಮೋದಿ ಕರೆ ನೀಡಿದರು. “21ನೇ ಶತಮಾನದ ಆಧುನಿಕ ಭಾರತಕ್ಕೆ ಈ ಸಹಕಾರ, ಸೌಹಾರ್ದತೆ ಮತ್ತು ಸಬ್ಕಾ ಪ್ರಯಸ್‌ನ ಆತ್ಮವು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ಬಡತನ ನಿರ್ಮೂಲನೆಗಾಗಿ ಶ್ರಮಿಸುತ್ತಿರುವವರಿಗೆ ಆಶೀರ್ವಾದ ನೀಡುವಂತೆ ಪ್ರಾರ್ಥಿಸಿದ ಪ್ರಧಾನ ಮಂತ್ರಿ, ಪೋಪ್ ಅವರ ಸಂದೇಶವನ್ನು ಕ್ರಿಸ್ಮಸ್ ಭಾಷಣದಲ್ಲಿ ಪ್ರಸ್ತಾಪಿಸಿದರು. ಬಡತನವು ವ್ಯಕ್ತಿಗಳ ಘನತೆ ಹಾನಿ ಮಾಡುವ ಕಲ್ಪನೆಯನ್ನು ತರುತ್ತದೆ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರದೊಂದಿಗೆ ಅನುರಣಿಸುತ್ತದೆ. "ಅಭಿವೃದ್ಧಿಯ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ನಮ್ಮ ಸರ್ಕಾರವು ಖಾತ್ರಿಪಡಿಸುತ್ತಿದೆ. ಇದರಿಂದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಪ್ರಧಾನಿ, ಅನೇಕ ಕ್ರೈಸ್ತ ಧರ್ಮದ ಜನರು, ವಿಶೇಷವಾಗಿ ಬಡ ವರ್ಗದವರು ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
"ಕ್ರೈಸ್ತ ಸಮುದಾಯದ ಕೊಡುಗೆಯನ್ನು ರಾಷ್ಟ್ರವು ಹೆಮ್ಮೆಯಿಂದ ಅಂಗೀಕರಿಸುತ್ತದೆ". ಸ್ವಾತಂತ್ರ್ಯ ಚಳವಳಿಗೆ ಕ್ರೈಸ್ತ ಸಮುದಾಯದ ಕೊಡುಗೆಗಳನ್ನು ಶ್ಲಾಘಿಸಿದ ಅವರು, ವಿವಿಧ ಬೌದ್ಧಿಕ ಚಿಂತಕರು ಮತ್ತು ನಾಯಕರ ಹೋರಾಟಗಳನ್ನು ಪ್ರಸ್ತಾಪಿಸಿದರು. ಸೈಂಟ್ ಸ್ಟೀಫನ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸುಶೀಲ್ ಕುಮಾರ್ ರುದ್ರ ಅವರ ಸಾರಥ್ಯದಲ್ಲಿ ಅಸಹಕಾರ ಚಳವಳಿ ರೂಪಿಸಲಾಗಿದೆ ಎಂದು ಗಾಂಧೀಜಿ ಅವರೇ ಹೇಳಿದ್ದಾರೆ ಎಂದು ಸ್ಮರಿಸಿದರು. ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಕ್ರೈಸ್ತ ಸಮುದಾಯವು ವಹಿಸಿದ ನಿರ್ಣಾಯಕ ಪಾತ್ರವನ್ನು ಎತ್ತಿ ಹಿಡಿದ ಅವರು, ಬಡವರು ಮತ್ತು ವಂಚಿತರ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ಉಲ್ಲೇಖಿಸಿದರು. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಪ್ರಮುಖ ಕ್ಷೇತ್ರಗಳಲ್ಲಿ ಅವರ ಕೊಡುಗೆಗಳು ಅಪಾರ ಎಂದರು.
2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪವನ್ನು ಮತ್ತು ಈ ಪ್ರಯಾಣದಲ್ಲಿ ಯುವಕರ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಪ್ರಧಾನಿ, ಯುವಕರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸದೃಢತೆ ಅಗತ್ಯವಿದೆ. ಫಿಟ್‌ನೆಸ್, ಸಿರಿಧಾನ್ಯ, ಪೋಷಣೆ ಮತ್ತು ಮಾದಕ ದ್ರವ್ಯಗಳ ವಿರುದ್ಧದ ಅಭಿಯಾನವನ್ನು ಜನಪ್ರಿಯಗೊಳಿಸುವ ಆಂದೋಲನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಪ್ರಧಾನಿ ಸಮುದಾಯದ ಮುಖಂಡರಿಗೆ ಮನವಿ ಮಾಡಿದರು.
ಕ್ರಿಸ್‌ಮಸ್‌ನಲ್ಲಿ ಉಡುಗೊರೆಗಳನ್ನು ನೀಡುವ ಸಂಪ್ರದಾಯ ಗಮನಿಸಿದ ಪ್ರಧಾನಿ, ಮುಂಬರುವ ಪೀಳಿಗೆಗೆ ಉತ್ತಮ ಗ್ರಹವನ್ನು ಉಡುಗೊರೆಯಾಗಿ ನೀಡುವಂತೆ ಸಲಹೆ ನೀಡಿದರು. "ಸುಸ್ಥಿರತೆಯು ಇಂದಿನ ಕಾಲದ ಅಗತ್ಯವಾಗಿದೆ", ಸುಸ್ಥಿರ ಜೀವನಶೈಲಿಯನ್ನು ಬದುಕುವುದು ಮಿಷನ್ ಲೈಫ್‌ನ ಕೇಂದ್ರ ಸಂದೇಶವಾಗಿದೆ. ಇದು ಭಾರತವು ನೇತೃತ್ವ ವಹಿಸುತ್ತಿರುವ ಅಂತಾರಾಷ್ಟ್ರೀಯ ಆಂದೋಲನವಾಗಿದೆ. ಈ ಅಭಿಯಾನವು ಗ್ರಹಗಳ ಪರವಾದ ಜೀವನಶೈಲಿ ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ. ಮರುಬಳಕೆ ಮತ್ತು ಪುನರ್ ಬಳಕೆ, ಜೈವಿಕ ವಿಘಟನೀಯ ವಸ್ತುಗಳನ್ನು ಬಳಸುವುದು, ಸಿರಿಧಾನ್ಯಗಳ ಬಳಕೆ ಅಳವಡಿಸಿಕೊಳ್ಳುವುದು ಮತ್ತು ಕನಿಷ್ಠ ಇಂಗಾಲದ ಹೆಜ್ಜೆಗುರುತು ಹೊಂದಿರುವ ಉತ್ಪನ್ನಗಳನ್ನು ಖರೀದಿಸುವುದನ್ನು ಅವರು ಉಲ್ಲೇಖಿಸಿದರು. ಸಾಮಾಜಿಕ ಪ್ರಜ್ಞೆಯುಳ್ಳ ಕ್ರೈಸ್ತ ಸಮುದಾಯವು ಈ ಧ್ಯೇಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವೋಕಲ್ ಫಾರ್ ಲೋಕಲ್ ಬಗ್ಗೆಯೂ ಪ್ರಧಾನಿ ಚರ್ಚಿಸಿದರು. “ನಾವು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಿದಾಗ, ನಾವು ಭಾರತದಲ್ಲಿ ತಯಾರಿಸಿದ ಸರಕುಗಳ ರಾಯಭಾರಿಗಳಾದಾಗ, ಅದು ದೇಶಕ್ಕೆ ಸೇವೆಯ ಒಂದು ರೂಪವಾಗಿದೆ. ಸ್ಥಳೀಯರಿಗೆ ಹೆಚ್ಚು ಧ್ವನಿಯಾಗುವಂತೆ ನಾನು ಕ್ರೈಸ್ತ ಸಮುದಾಯವನ್ನು ಒತ್ತಾಯಿಸುತ್ತೇನೆ" ಎಂದರು.
ಹಬ್ಬ ಹರಿದಿನಗಳು ರಾಷ್ಟ್ರವನ್ನು ಒಂದುಗೂಡಿಸಲಿ, ಪ್ರತಿಯೊಬ್ಬ ಪ್ರಜೆಯನ್ನು ಒಗ್ಗೂಡಿಸಲಿ ಎಂದು ಪ್ರಧಾನಿ ಹಾರೈಸಿದರು. “ಈ ಹಬ್ಬವು ನಮ್ಮ ವೈವಿಧ್ಯತೆಯಲ್ಲಿಯೂ ನಮ್ಮನ್ನು ಏಕತೆಯನ್ನು ಕಾಪಾಡುವ ಬಾಂಧವ್ಯವನ್ನು ಬಲಪಡಿಸಲಿ. ಈ ಕ್ರಿಸ್‌ಮಸ್ ಹಬ್ಬವು ನಮ್ಮೆಲ್ಲರ ಜೀವನದಲ್ಲಿ ಸಂತೋಷ ತುಂಬಲಿ. ಮುಂಬರುವ ವರ್ಷವು ನಮಗೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಶಾಂತಿ ತರಲಿ” ಎಂದು ಪ್ರಧಾನ ಮಂತ್ರಿ ಭಾಷಣ ಮುಕ್ತಾಯಗೊಳಿಸಿದರು.
ದೇಶಾದ್ಯಂತ ಕ್ರೈಸ್ತ ಸಮುದಾಯದ ಪ್ರಮುಖರು ಸಂವಾದದಲ್ಲಿ ಭಾಗವಹಿಸಿದ್ದರು. ರೋಮನ್ ಕ್ಯಾಥೋಲಿಕ್ ಚರ್ಚ್ ಆಫ್ ಇಂಡಿಯಾದ ಕಾರ್ಡಿನಲ್ ಮತ್ತು ಕಾರ್ಡಿನಲ್ ಸಲಹೆಗಾರರ ಪೋಪ್ ಕೌನ್ಸಿಲ್‌ನ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಬಾಂಬೆಯ ಆರ್ಚ್‌ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಈ ದಿನವು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇತರರ ಅಭಿವೃದ್ಧಿ ಮತ್ತು ಪ್ರಗತಿಗಾಗಿ ಕೆಲಸ ಮಾಡುವ ಯೇಸುಕ್ರಿಸ್ತನ ಬೋಧನೆಗಳೊಂದಿಗೆ ಸಾದೃಶ್ಯ ಚಿತ್ರಿಸುವಾಗ ಉತ್ತಮ ಆಡಳಿತದ ಬಗ್ಗೆ ವಾಜಪೇಯಿ ಹೊಂದಿದ್ದ ಉತ್ಸಾಹದ ಬಗ್ಗೆ ಮಾತನಾಡಿದರು. ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಾಸ್ ಅವರು ದೇಶ, ಕ್ರೈಸ್ತ ಸಮುದಾಯ ಮತ್ತು ಇಡೀ ವಿಶ್ವದ ಏಳಿಗೆಗೆ ಪ್ರಧಾನಿ ಮೋದಿ ನಡೆಸಿರುವ ಪ್ರಯತ್ನಗಳಿಗೆ ಧನ್ಯವಾದ ಅರ್ಪಿಸಿದರು.
ಖ್ಯಾತ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರು ತಮ್ಮ ಸುದೀರ್ಘ ಕ್ರೀಡಾ ವೃತ್ತಿಜೀವನದಲ್ಲಿ ಕ್ರೀಡೆಗಳ ರೂಪಾಂತರವನ್ನು ಉಲ್ಲೇಖಿಸಿದರು. ದೇಶದ ನಾಯಕತ್ವವು ಇಂದಿನ ಕ್ರೀಡಾಪಟುಗಳ ಸಾಧನೆಗಳನ್ನು ಹೇಗೆ ಆಚರಿಸುತ್ತಿದೆ. ಖೇಲೊ ಇಂಡಿಯಾ ಮತ್ತು ಫಿಟ್ ಇಂಡಿಯಾ ಮೂಲಕ ಕ್ರೀಡೆಗಳ ಬಗ್ಗೆ ಮಾತನಾಡಲಾಗುತ್ತಿದೆ. ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ರಂಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು. ಈ ಎಲ್ಲಾ ಪರಿವರ್ತನೆಗೆ ಪ್ರಧಾನಿ ಅವರ ನಾಯಕತ್ವದಿಂದ ಸಾಧ್ಯವಾಗಿದೆ. ಮಹಿಳಾ ಸಬಲೀಕರಣವು ಹೇಗೆ ವಾಸ್ತವವಾಗುತ್ತಿದೆ ಬುದರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ಪ್ರತಿಯೊಬ್ಬ ಭಾರತೀಯ ಹೆಣ್ಣುಮಕ್ಕಳು ಕನಸು ಕಾಣಲು ಸಿದ್ಧರಿದ್ದಾರೆ, ಅವರ ಕನಸುಗಳು ಮುಂದೊಂದು ದಿನ ನನಸಾಗುತ್ತವೆ ಎಂದು ಅವರಿಗೆ ತಿಳಿದಿದೆ". 2036ರ ಒಲಿಂಪಿಕ್ಸ್ ಆಯೋಜಿಸುವ ಭಾರತದ ಪ್ರಸ್ತಾಪಕ್ಕೆ ಅಂಜು ಸಂತಸ ವ್ಯಕ್ತಪಡಿಸಿದರು.
ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಉಪಸ್ಥಿತಿಗಾಗಿ ದೆಹಲಿಯ ಡಯಾಸಿಸ್, ಚರ್ಚ್ ಆಫ್ ನಾರ್ತ್ ಇಂಡಿಯಾದ ಬಿಷಪ್ ರೆ.ಡಾ. ಪಾಲ್ ಸ್ವರೂಪ್ ಅವರು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಸುವಾರ್ತೆ ಮತ್ತು ಯೇಸುಕ್ರಿಸ್ತನ ಆಗಮನದ ಕಥೆಯನ್ನು ನೆನಪಿಸಿಕೊಳ್ಳುತ್ತಾ, ಡಾ. ಸ್ವರೂಪ್ ಅವರು ಜನರಿಗಾಗಿ ಯೇಸು ಕ್ರಿಸ್ತನು ಮಾಡಿದ ತ್ಯಾಗಗಳನ್ನು ಪ್ರಸ್ತಾಪಿಸಿದರು. ಸಮಾಜ ಮತ್ತು ಜನರ ಕಡೆಗೆ ಪ್ರಧಾನ ಮಂತ್ರಿ ಅವರ ಪ್ರಯತ್ನಗಳ ಸಾದೃಶ್ಯವನ್ನು ಚಿತ್ರಿಸಿದರು. ಅವರು ಪ್ರಧಾನ ಮಂತ್ರಿ ಅವರಿಗೆ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ ಪ್ರಾಂಶುಪಾಲ ಜಾನ್ ವರ್ಗೀಸ್ ಮಾತನಾಡಿ, ಶಿಕ್ಷಣ ಸಮುದಾಯದ ಪ್ರತಿನಿಧಿಯಾಗಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಇತರ ನೀತಿಗಳಲ್ಲಿ ಪ್ರತಿಬಿಂಬಿತವಾಗಿರುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿ, ದೃಢತೆ ಮತ್ತು ವಿಶಾಲ ಹೃದಯವನ್ನು ಶ್ಲಾಘಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ದೃಷ್ಟಿಕೋನಗಳ ಸ್ಥಳೀಯ ಮತ್ತು ಜಾಗತಿಕ ಅಂಶಗಳನ್ನು ಎತ್ತಿ ತೋರಿಸಿದ ಅವರು, ಶಾಲಾ ಶಿಕ್ಷಣದ ಮೇಲೆ ಎನ್ಇಪಿ ಗಮನ ಶ್ಲಾಘನೀಯ. ಮಾತೃಭಾಷೆಯ ಉತ್ತೇಜನ ಮತ್ತು ಬೋರ್ಡ್ ಪರೀಕ್ಷೆಗಳನ್ನು 12ನೇ ತರಗತಿಗೆ ಸೀಮಿತಗೊಳಿಸುವುದು ಮುಂತಾದ ನಿಬಂಧನೆಗಳನ್ನು ಅವರು ಪ್ರಗತಿಪರ ಹಂತಗಳಾಗಿವೆ ಎಂದು ಉಲ್ಲೇಖಿಸಿದರು. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಸಂಪನ್ಮೂಲಗಳ ಹಂಚಿಕೆ ಮತ್ತು ಉನ್ನತ ಸಾಧನೆ ಮಾಡುವ ಸಂಸ್ಥೆಗಳಿಗೆ ಸ್ವಾಯತ್ತೆ ಭರವಸೆಯನ್ನು ಅವರು ಶ್ಲಾಘಿಸಿದರು. ಇತ್ತೀಚಿನ ದಿನಗಳಲ್ಲಿ ಆವಿಷ್ಕಾರ, ಆರೋಗ್ಯ ಮತ್ತು ಕ್ರೀಡೆಗಳ ಉತ್ತೇಜನವನ್ನು ಅವರು ಶ್ಲಾಘಿಸಿದರು. ಶ್ರೀ ಜಾನ್ ವರ್ಗೀಸ್ ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನ ಯಂಗ್ ಲೀಡರ್ಸ್ ನೈಬರ್‌ಹುಡ್ ಫಸ್ಟ್ ಫೆಲೋಶಿಪ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಇದು ನೆರೆಹೊರೆಯ ಮೊದಲ ನೀತಿಯ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿದೆ. ಜಿ-20 ಶೃಂಗಸಭೆಯಲ್ಲಿ ಭಾರತದ ಯಶಸ್ವಿ ನಾಯಕತ್ವವನ್ನು ಸ್ಪರ್ಶಿಸಿದ ಶ್ರೀ ವರ್ಗೀಸ್, ಜಾಗತಿಕ ದಕ್ಷಿಣದ ಧ್ವನಿಯಾಗುವ ಪ್ರಧಾನ ಮಂತ್ರಿ ಅವರ ಇಂಗಿತವನ್ನು ಶ್ಲಾಘಿಸಿದರು. “ಭಾರತವು ಶ್ರೇಷ್ಠ ನಾಗರಿಕತೆಯಾಗಿದೆ, ನಿಮ್ಮ ಹೆಜ್ಜೆಗಳು ಮತ್ತು ನೀತಿಗಳು ಅದ್ಭುತ ಫಲಿತಾಂಶಗಳನ್ನು ತೋರಿಸಿವೆ. ಒಬ್ಬ ಶಿಕ್ಷಕರಾಗಿ, ನೀವು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ, ರಾಷ್ಟ್ರೀಯ ಶಿಕ್ಷಣ, ನೆರೆಹೊರೆ ಮೊದಲ ನೀತಿಯಂತಹ ಹಂತಗಳ ಮೂಲಕ ನಮ್ಮ ಯುವಜನರು ಪಡೆಯುವ ಪ್ರಯೋಜನಗಳನ್ನು ನಾನು ನೋಡುತ್ತೇನೆ. ಇವೆಲ್ಲವೂ ಜಾಗತಿಕವಾಗಿ ಭಾರತವನ್ನು ಉನ್ನತ ಸ್ಥಾನದಲ್ಲಿ ಇರಿಸುತ್ತದೆ”. ಕಾಲೇಜು ಚಾಪೆಲ್‌ನಲ್ಲಿ ನಿನ್ನೆ ರಾತ್ರಿ ದೇಶದ ನಾಯಕನಾಗಿ, ಪ್ರಧಾನ ಮಂತ್ರಿಯಾಗಿ ಮೋದಿ ಅವರ ಸೇವೆ ಮುಂದುವರಿಯಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದು ಅವರು ಮಾಹಿತಿ ನೀಡಿದರು. ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಬಗ್ಗೆ ಪ್ರಧಾನಿ ಹೊಂದಿರುವ ಪ್ರೀತಿಯನ್ನು ಗಮನಿಸಿದ ಪ್ರಾಂಶುಪಾಲರು, ತಮಿಳಿನಲ್ಲೇ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ದೆಹಲಿಯ ಆರ್ಚ್ ಡಯಾಸಿಸ್‌ನ ಆರ್ಚ್ ಬಿಷಪ್ ಅನಿಲ್ ಕೌಟೊ ಅವರು, ಕ್ರಿಸ್‌ಮಸ್ ಆಚರಣೆಯನ್ನು ತಮ್ಮ ನಿವಾಸದಲ್ಲಿ ಆಯೋಜಿಸಿದ್ದಕ್ಕಾಗಿ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿದರು, ಇದು ಕ್ರೈಸ್ತ ಸಮುದಾಯದ ಆಚರಣೆ ಮಾತ್ರವಲ್ಲ, ರಾಷ್ಟ್ರೀಯ ಹಬ್ಬವಾಗಿದೆ. ಶಾಂತಿ, ಪ್ರೀತಿ ಮತ್ತು ಏಕತೆಯ ಸಂದೇಶ ಸಾರಿದ ಅವರು, ದೇಶದ ಎಲ್ಲಾ ನಾಗರಿಕರ ಯೋಗಕ್ಷೇಮಕ್ಕಾಗಿ ಮತ್ತು ಪ್ರಧಾನ ಮಂತ್ರಿ ಅವರ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಸಂದೇಶ ಈಡೇರಿಸಲಿ ಎಂದು ಹಾರೈಸಿದರು. ಕ್ರೈಸ್ತ ಸಮುದಾಯವು ಯಾವಾಗಲೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡಿದೆ. ಭಾರತದ ಅಭಿವೃದ್ಧಿ, ಏಕತೆ ಮತ್ತು ಪ್ರಗತಿಗೆ ನಿರಂತರ ಬೆಂಬಲ ನೀಡುವುದಾಗಿ ಪ್ರಧಾನಿಗೆ ಭರವಸೆ ನೀಡಿದರು. ರಾಷ್ಟ್ರಕ್ಕಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಅವರ ಅದ್ಭುತ ನಾಯಕತ್ವವನ್ನು ಮುಂದುವರಿಸಲು ದೇವರು ಬುದ್ಧಿವಂತಿಕೆ, ಅನುಗ್ರಹ ಮತ್ತು ಶಕ್ತಿ ನೀಡಲಿ ಎಂದು ಅವರು ಪ್ರಧಾನ ಮಂತ್ರಿ ಅವರನ್ನು ಆಶೀರ್ವದಿಸಿದರು. ಅವರು ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುವ ಮೂಲಕ ರಾಷ್ಟ್ರ ಮತ್ತು ಅದರ ನಾಗರಿಕರಿಗೆ ಯಶಸ್ಸು ತರಲಿ ಎಂದು ಶುಭ ಹಾರೈಸಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು
ಕಾರ್ಯಕ್ರಮದ ನೇಪಥ್ಯದಲ್ಲಿ ಮಾತನಾಡಿದ ರೆ.ಡಾ. ಪೌಲ್ ಸ್ವರೂಪ್, ಪ್ರಧಾನ ಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ಕ್ರಿಸ್‌ಮಸ್ ಆಚರಿಸಿದ ಸಂತಸವನ್ನು ಪುನರುಚ್ಚರಿಸಿದರು. ಬಿಷಪ್ ಥಾಮಸ್ ಮಾರ್ ಆಂಟೋನಿಯೋಸ್ ಅವರು ಕ್ರಿಸ್‌ಮಸ್ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಾಸ್ ಮಾತನಾಡಿ, ಪ್ರಧಾನ ಮಂತ್ರಿ ಅವರ ವಿಚಾರಗಳು ಪ್ರತಿಯೊಬ್ಬ ಭಾರತೀಯನಿಗೂ ಹರಡುತ್ತಿದೆ. ನಮ್ಮ ದೇಶವು ವಿಶ್ವದ ಅಗ್ರಗಣ್ಯ ದೇಶವಾಗಬಹುದು. ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಎಂಬ ಮಂತ್ರದೊಂದಿಗೆ ಪ್ರಧಾನಿ ಅವರು ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶಕ್ಕೆ ನಾಯಕತ್ವ ನೀಡುತ್ತಿದ್ದಾರೆ ಎಂದು ಆರ್ಚ್ ಬಿಷಪ್ ಅನಿಲ್ ಕೂಟೊ ಸಂತಸ ವ್ಯಕ್ತಪಡಿಸಿದರು.
ಸೇಂಟ್ ಸ್ಟೀಫನ್ಸ್ ಕಾಲೇಜು ಪ್ರಾಂಶುಪಾಲ ಜಾನ್ ವರ್ಗೀಸ್ ಮಾತನಾಡಿ, ಪ್ರತಿ ಕ್ಷೇತ್ರದಲ್ಲೂ ಮಾನದಂಡವನ್ನು ಎತ್ತರಕ್ಕೆ ಇರಿಸುವ ಪ್ರಸ್ತುತ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿದರು. ‘ಭಾರತ ಗೆದ್ದರೆ ಜಗತ್ತು ಗೆಲ್ಲುತ್ತದೆ’ ಎಂದು ಹೇಳಿದರು.
ಮುತ್ತೂಟ್ ಗ್ರೂಪ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಾಂಡರ್ ಜಾರ್ಜ್ ಅವರು ರಾಷ್ಟ್ರದ ಪರಿವರ್ತನೆಯಲ್ಲಿ ಪ್ರಧಾನ ಮಂತ್ರಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದರು. ಇದು ಕೇವಲ ಕ್ರೈಸ್ತ ಸಮುದಾಯದಿಂದ ಮಾತ್ರವಲ್ಲದೆ, ಭಾರತದ ಪ್ರತಿಯೊಂದು ಸಮುದಾಯದಿಂದಲೂ ಉತ್ತಮ ಭವಿಷ್ಯದ ಭರವಸೆಯಾಗಿದೆ. ಜೋಯಾಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಅಲುಕ್ಕಾಸ್ ಜಾಯ್ ವರ್ಗೀಸ್ ಅವರು, ಪ್ರಧಾನ ಮಂತ್ರಿ ಅವರ ಸರಳ ಮತ್ತು ಸ್ನೇಹಪರ ವ್ಯಕ್ತಿತ್ವವನ್ನು ಮೆಚ್ಚಿದರು.
ಬಹ್ರೇನ್‌ನ ಎನ್‌ಆರ್‌ಐ ಉದ್ಯಮಿ ಕುರಿಯನ್ ವರ್ಗೀಸ್ ಅವರು ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಭಾರತಕ್ಕೆ ಸಕಾರಾತ್ಮಕ ದೃಷ್ಟಿಕೋನವನ್ನು ಸೃಷ್ಟಿಸಲು ಪ್ರಧಾನ ಮಂತ್ರಿ ಅವರ ಪ್ರಯತ್ನಗಳನ್ನು ಎತ್ತಿ ತೋರಿಸಿದರು.
ಪ್ರಧಾನಿ ಅವರನ್ನು ಶ್ರೇಷ್ಠ ನಾಯಕ ಎಂದು ಕರೆದಿರುವ ಅಥ್ಲೀಟ್ ಅಂಜು ಬಾಬಿ ಜಾರ್ಜ್, ಕ್ರೀಡೆಗೆ ಉತ್ತೇಜನ ನೀಡುವ ಪ್ರಧಾನಿ ಅವರ ಉತ್ಸಾಹವನ್ನು ಶ್ಲಾಘಿಸಿದರು. "ಸಮೀಪದ ಭವಿಷ್ಯದಲ್ಲಿ ನಾವು ಉನ್ನತ ಸ್ಥಾನದಲ್ಲಿರುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದರು.
ಭಾರತದ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಅವರ ಕೊಡುಗೆಯನ್ನು ನಟ ಡಿನೋ ಮೋರಿಯಾ ಶ್ಲಾಘಿಸಿದರು. ದೇಶವು ತನ್ನ ಜನರೊಂದಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು.
QS Quacquarelli Symondsನಲ್ಲಿ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಅಶ್ವಿನ್ ಜೆರೋಮ್ ಫೆರ್ನಾಂಡಿಸ್ ಮಾತನಾಡಿ, ಪ್ರಧಾನಿ ಮೋದಿ ಅವರ ನಾಯಕತ್ವವು ಪ್ರಪಂಚದಾದ್ಯಂತ ದೊಡ್ಡದಾಗಿದೆ ಮತ್ತು ಭಾರತಕ್ಕೆ ದೊಡ್ಡ ಮನವಿಯನ್ನು ಸೃಷ್ಟಿಸಿದೆ ಎಂದರು.
ದಿ ಹೋಲಿ ಸೀ ವ್ಯಾಟಿಕನ್ ರಾಯಭಾರ ಕಚೇರಿಯ ಸೆಕೆಂಡ್ ಸೆಕ್ರೆಟರಿ ಕೆವಿನ್ ಜೆ. ಕಿಮ್ಟಿಸ್ ಮಾತನಾಡಿ, ಭಾರತೀಯ ಜನರ ಕಡೆಗೆ ಪ್ರಧಾನ ಮಂತ್ರಿ ಅವರ ಸಮರ್ಪಣೆಯನ್ನು ಒತ್ತಿಹೇಳಿದರು. ಅಲ್ಲಿ ಅವರ ಸೇವೆಯು ಸರ್ಕಾರದ ಆದ್ಯತೆಯಾಗಿದೆ ಎಂದರು.
ಬಿಷಪ್ ಸೈಮನ್ ಜಾನ್ ಅವರು, ಮೊದಲ ಬಾರಿಗೆ ತಮ್ಮ ನಿವಾಸದಲ್ಲಿ ಕ್ರಿಸ್‌ಮಸ್ ಆಚರಿಸಲು ಕ್ರೈಸ್ತ ಸಮುದಾಯಕ್ಕೆ ಆಹ್ವಾನ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಅಪೊಲೊ 24*7 ಸಿಇಒ ಆಂಥೋನಿ ಜೇಕಬ್ ಅವರು, ಪ್ರಧಾನ ಮಂತ್ರಿ ಸಹೃದಯ ಮನುಷ್ಯ. ಸಂವಾದ ನಡೆಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು.
ಕ್ರೈಸ್ಟ್ ಯೂನಿವರ್ಸಿಟಿಯ ಆಡಳಿತಾಧಿಕಾರಿ ಸನ್ನಿ ಜೋಸೆಫ್ ಅವರು ಈ ಅವಕಾಶದ ಬಗ್ಗೆ ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರ ಭವಿಷ್ಯದ ದೃಷ್ಟಿಕೋನ ಮತ್ತು ಅವರ ಸಂದೇಶವು ಪ್ರತಿಯೊಬ್ಬರ ಉತ್ಸಾಹವನ್ನು ಹೆಚ್ಚಿಸಿದೆ ಎಂದು ಹೇಳಿದರು.
ದೆಹಲಿಯ ವೆಲ್ಸ್ ಫಾರ್ಗೋ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಯಾಕೂಬ್ ಮ್ಯಾಥ್ಯೂ, ಪ್ರಧಾನಿ ಅವರ ನಾಯಕತ್ವ ಶೈಲಿ, ಬದಲಾವಣೆ ತರುವ ಅವರ ಮನಸ್ಥಿತಿ ಶ್ಲಾಘನೀಯ ಎಂದರು.
A few years ago, I had the privilege of meeting The Holy Pope. It was a moment that left a lasting impression on me: PM @narendramodi pic.twitter.com/3UQz1EnJly
— PMO India (@PMOIndia) December 25, 2023
Christmas is the day when we celebrate the birth of Jesus Christ. This is also a day to remember his life, message and values. pic.twitter.com/3KZmh3POuk
— PMO India (@PMOIndia) December 25, 2023
We believe in the mantra of 'Sabka Saath, Sabka Vikas, Sabka Vishwas, Sabka Prayas': PM @narendramodi pic.twitter.com/ygjHqcYqab
— PMO India (@PMOIndia) December 25, 2023
India's youth are the most important partners in the country's development journey: PM @narendramodi pic.twitter.com/N6zWrBgerX
— PMO India (@PMOIndia) December 25, 2023
Let us gift a better planet to the coming generations: PM @narendramodi pic.twitter.com/Y3vZwoomga
— PMO India (@PMOIndia) December 25, 2023