ಆಗಸ್ಟ್ 5 ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು, ಕಲಂ 370 ರದ್ದತಿ ಮತ್ತು ರಾಮಮಂದಿರ ನಿರ್ಮಾಣದ ಜೊತೆ ನಂಟು ಹೊಂದಿದೆ: ಪ್ರಧಾನಮಂತ್ರಿ
ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ ವೈಭವವನ್ನು ಮರು ಸ್ಥಾಪಿಸುವ ನಿಟ್ಟಿನಲ್ಲಿ ಇಂದು ನಮ್ಮ ಯುವಜನತೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ :ಪ್ರಧಾನಮಂತ್ರಿ
ರಾಜಕೀಯ ಸ್ವಾರ್ಥಕ್ಕಾಗಿ ಇಲ್ಲಿ ಕೆಲವರು ಸ್ವಯಂ ಹೋಲು ಹೊಡೆಯುತ್ತಿರುವುದರ ನಡುವೆಯೇ ನಮ್ಮ ಯುವಜರು ಗೆಲುವಿನ ಗೋಲು ಗಳಿಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತದ ಯುವಕರು ತಾವು ಮತ್ತು ಭಾರತ ಇಬ್ಬರೂ ಮುನ್ನಡೆಯುತ್ತಿದ್ದೇವೆ ಎಂಬ ದೃಢವಾದ ನಂಬಿಕೆ ಹೊಂದಿದ್ದಾರೆ: ಪ್ರಧಾನಮಂತ್ರಿ
ಈ ಮಹಾನ್ ದೇಶವು ಸ್ವಾರ್ಥ ಮತ್ತು ರಾಷ್ಟ್ರವಿರೋಧಿ ರಾಜಕೀಯಕ್ಕೆ ಒತ್ತೆಯಾಳಾಗಲು ಸಾದ್ಯವಿಲ್ಲ :ಪ್ರಧಾನಮಂತ್ರಿ
ಡಬಲ್ ಎಂಜಿನ್ ಸರ್ಕಾರವು ಬಡವರು, ದೀನದಲಿತರು, ಹಿಂದುಳಿದವರು ಮತ್ತು ಬುಡಕಟ್ಟುಜನಾಂಗದವರಿಗಾಗಿ ರೂಪಿಸಿದ ಯೋಜನೆಗಳನ್ನು ಉತ್ತರಪ್ರದೇಶದಲ್ಲಿ ತ್ವರಿತಗತಿಯಲ್ಲಿ ಅನುಷ್ಠಾನ ಖಾತ್ರಿಯಾಗಿದೆ :ಪ್ರಧಾನಮಂತ್ರಿ
ಉತ್ತರ ಪ್ರದೇಶವನ್ನು ಯಾವಾಗಲೂ ರಾಜಕೀಯ ಮಸೂರದಿಂದಲೇ ನೋಡಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಉತ್ತರಪ್ರದೇಶ ಭಾರತದ ಪ್ರಗತಿಗಾಥೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ ಎಂಬ ವಿಶ್ವಾಸ ಮೂಡಿದೆ: ಪ್ರಧಾನಮಂತ್ರಿ
ಈ ದಶಕವು ಉತ್ತರಪ್ರದೇಶಕ್ಕೆ ಕಳೆದ 7 ದಶಕಗಳ ಕೊರತೆಯನ್ನು ತುಂಬುವ ದಶಕವಾಗಿದೆ :ಪ್ರಧಾನಮ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಪ್ರದೇಶದಲ್ಲಿನ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಗಸ್ಟ್ 5 ಭಾರತಕ್ಕೆ ವಿಶೇಷ ದಿನವಾಗಿದೆ. ಇದೇ ಆಗಸ್ಟ್ 5ರಂದು ಎರಡು ವರ್ಷಗಳ ಹಿಂದೆ ಕಲಂ 370 ಅನ್ನು ರದ್ದುಗೊಳಿಸುವ ಮೂಲಕ ಏಕ್ ಭಾರತ್, ಶ್ರೇಷ್ಠ ಭಾರತ್ ಭಾವನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲಾಯಿತು. ಆ ಮೂಲಕ ಎಲ್ಲ ಹಕ್ಕು ಮತ್ತು ಸೌಕರ್ಯಗಳು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಾಗುವಂತೆ ಮಾಡಲಾಯಿತು. ಪ್ರಧಾನಮಂತ್ರಿ ಅವರು ನೂರಾರು ವರ್ಷಗಳ ನಂತರ ಭಾರತೀಯರು ಭವ್ಯ ರಾಮಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಇಟ್ಟಿದ್ದು ಕೂಡ ಆಗಸ್ಟ್ 5ರಂದೇ ಎಂದು ಉಲ್ಲೇಖಿಸಿದರು. ಅಯೋಧ್ಯೆಯಲ್ಲಿಂದು ರಾಮಮಂದಿರವನ್ನು ಅತ್ಯಂತ ಕ್ಷಿಪ್ರವಾಗಿ ನಿರ್ಮಾಣ ಮಾಡಲಾಗುತ್ತಿದೆ.

ಈ ದಿನಾಂಕಕ್ಕೆ ಇರುವ ಮಹತ್ವದ ಕುರಿತು ಮಾತನಾಡುವುದನ್ನು ಮುಂದುವರಿಸಿದ ಪ್ರಧಾನಮಂತ್ರಿ, ಇಂದು ತಂದ ಉತ್ಸಾಹ ಮತ್ತು ಚೈತನ್ಯದ ಬಗ್ಗೆ ಮಾತನಾಡಿದರು ಮತ್ತು ಒಲಿಂಪಿಕ್ ಮೈದಾನದಲ್ಲಿ ದೇಶದ ಪುನರುಜ್ಜೀವನಗೊಂಡ ಯುವಕರು ಹಾಕಿಯಲ್ಲಿ ತಮ್ಮ ಹೆಮ್ಮಯನ್ನು ಪುನಃ ಸ್ಥಾಪಿಸಿದರು ಎಂದರು.

ಒಂದೆಡೆ ನಮ್ಮ ದೇಶ, ನಮ್ಮ ಯುವಜನತೆ ಭಾರತಕ್ಕಾಗಿ ಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ, ಅವರು ಗೋಲುಗಳ ಗೆಲುವು ಸಾಧಿಸುತ್ತಿದ್ದಾರೆ. ಮತ್ತೊಂದೆಡೆ ದೇಶದಲ್ಲಿನ ಕೆಲವು ಜನರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸ್ವಯಂ ಗೋಲು ಹೊಡೆಯುವುದರಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ ಟೀಕಿಸಿದರು. ದೇಶಕ್ಕೆ ಏನು ಬೇಕು, ದೇಶ ಏನು ಸಾಧಿಸುತ್ತಿದೆ ಮತ್ತು ದೇಶ ಹೇಗೆ ಬದಲಾಗುತ್ತಿದೆ ಎಂಬ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಅವರು ಹೇಳಿದರು. ಈ ಮಹಾನ್ ದೇಶವು ಇಂತಹ ಸ್ವಾರ್ಥ ಮತ್ತು ದೇಶ ವಿರೋಧಿ ರಾಜಕೀಯಕ್ಕೆ ಒತ್ತೆಯಾಳಗಾಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದರು. ದೇಶದ ಅಭಿವೃದ್ಧಿಯನ್ನು ನಿಲ್ಲಿಸಲು ಈ ಜನರು ಎಷ್ಟೇ ಪ್ರಯತ್ನಿಸಿದರೂ ಸಹ ಈ ದೇಶವು ಅವರಿಗೆ ಬಗ್ಗುವುದಿಲ್ಲ, ದೇಶ ಪ್ರತಿಯೊಂದು ವಲಯದಲ್ಲೂ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ ಮತ್ತು ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಿದೆ ಎಂದರು.

ಹೊಸ ಚೈತನ್ಯ ಮತ್ತು ಸ್ಪೂರ್ತಿಯನ್ನು ವಿವರಿಸಲು ಪ್ರಧಾನಮಂತ್ರಿ ಅವರು ಭಾರತೀಯರು ಇತ್ತೀಚೆಗೆ ಮಾಡಿದ ದಾಖಲೆಗಳು ಮತ್ತು ಸಾಧನೆಗಳನ್ನು ಪಟ್ಟಿ ಮಾಡಿದರು. ಒಲಿಂಪಿಕ್ಸ್ ಮಾತ್ರವಲ್ಲದೆ, ಮುಂದೆ ಹೆಗ್ಗುರುತಾಗಲಿರುವ ದಾಖಲೆಯ 50 ಕೋಟಿ ಲಸಿಕೀಕರಣ,  ಜುಲೈ ತಿಂಗಳಲ್ಲಿ 1 ಲಕ್ಷ 16ಸಾವಿರ ರೂ, ದಾಖಲೆಯ ಜಿಎಸ್ ಟಿ ಸಂಗ್ರಹ  ಆರ್ಥಿಕತೆಯಲ್ಲಿ ಹೊಸ ವೇಗವನ್ನು ನೀಡಿದೆ ಎಂದರು. ಅನಿರೀಕ್ಷಿತ ರೀತಿಯಲ್ಲಿ ಹೆಚ್ಚಾಗಿರುವ ಮಾಸಿಕ ಕೃಷಿ ರಫ್ತು ಅಂಕಿ ಅಂಶ 2ಲಕ್ಷದ 62 ಕೋಟಿಗೆ ಏರಿಕೆಯಾಗಿರುವ ಕುರಿತು ಅವರು ಮಾತನಾಡಿದರು. ಸ್ವಾತಂತ್ರ್ಯಾನಂತರ ಇದು ಅತಿ ದೊಡ್ಡ ಸಾಧನೆಯಾಗಿದ್ದು, ಇದು ಭಾರತವನ್ನು ಅಗ್ರ 10 ಕೃಷಿ ಉತ್ಪನ್ನಗಳ ರಫ್ತು ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದೆ ಎಂದರು. ಭಾರತದ ಮೊದಲ ಮೇಡ್ ಇನ್ ಇಂಡಿಯಾ ವಿಮಾನ ನೌಕೆ ವಿಕ್ರಾಂತ್, ವಿಶ್ವದ ಅತಿ ಎತ್ತರದ ಪ್ರದೇಶ ಲಡಾಖ್ ನಲ್ಲಿ ಮೋಟಾರು ವಾಹನಗಳು ಸಂಚರಿಸಬಹುದಾದ ರಸ್ತೆ ನಿರ್ಮಾಣ ಕಾರ್ಯ ಪೂರ್ಣ ಮತ್ತು ಇ-ರುಪಿ ಬಿಡುಗಡೆ ಮತ್ತಿತರ ವಿಚಾರಗಳ ಕುರಿತು ಮಾತನಾಡಿದರು. 

ತಮ್ಮ ಸ್ಥಾನಕ್ಕಾಗಿ ಮಾತ್ರ ಚಿಂತಿಸುವವರು ಈಗ ಭಾರತವನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಟೀಕಿಸಿದರು. ನವ ಭಾರತ ಶ್ರೇಯಾಂಕಗಳಲ್ಲ, ಪದಕಗಳನ್ನು ಗೆಲ್ಲುವ ಮೂಲಕ ಇಡೀ ವಿಶ್ವವನ್ನು ಆಳುತ್ತಿದೆ.  ನವ ಭಾರತದಲ್ಲಿ ಮುನ್ನಡೆಯುವುದನ್ನು ಕುಟುಂಬದ ಹೆಸರಿನಿಂದ ನಿರ್ಧರಿಸಲಾಗುವುದಿಲ್ಲ, ಆದರೆ ಕಠಿಣ ಪರಿಶ್ರಮದಿಂದ ಸಾಧ್ಯ ಎಂದು ಅವರು ಹೇಳಿದರು. ಭಾರತದ ಯುವಜನತೆ ತಾವು ಮತ್ತು ಭಾರತ ಇಬ್ಬರೂ ಚಲಿಸುತ್ತಿದ್ದೇವೆ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದಾರೆ.

ಸಾಂಕ್ರಾಮಿಕದ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಹಿಂದೆ ದೇಶದಲ್ಲಿ ದೊಡ್ಡ ಬಿಕ್ಕಟ್ಟು ಇದ್ದಾಗ ದೇಶದ ಎಲ್ಲ ವ್ಯವಸ್ಥೆಗಳು ಕೆಟ್ಟದಾಗಿ ಅಲುಗಾಡುತ್ತಿದ್ದನ್ನು ಗಮನಿಸಿದ್ದೆವು. ಆದರೆ ಭಾರತದಲ್ಲಿ ಇಂದು, ಪ್ರತಿಯೊಬ್ಬ ಪ್ರಜೆಯೂ ಸಾಂಕ್ರಾಮಿಕದ ವಿರುದ್ಧ ಪೂರ್ಣಶಕ್ತಿಯಿಂದ ಹೋರಾಡುತ್ತಿದ್ದಾರೆ ಎಂದರು. ಶತಮಾನದಲ್ಲಿ ಒಮ್ಮೆ ಎದುರಾಗಿರುವ ಅತಿ ದೊಡ್ಡ ಬಿಕ್ಕಟ್ಟಿನ್ನು ಎದುರಿಸಲು ಕೈಗೊಂಡ ಪ್ರುಯತ್ನಗಳ ಕುರಿತು ಪ್ರಧಾನಮಂತ್ರಿ ಮಾತನಾಡಿದರು. ವೈದ್ಯಕೀಯ ಮೂಲಸೌಕರ್ಯಗಳ ವರ್ಧನೆ, ವಿಶ್ವದ ಅತಿದೊಡ್ಡ ಉಚಿತ ಲಸಿಕಾ ಕಾರ್ಯಕ್ರಮ, ದುರ್ಬಲ ವರ್ಗದವರ ಹಸಿವಿನ ವಿರುದ್ಧದ ಹೋರಾಟದ ಅಭಿಯಾನ, ಇಂತಹ ಕಾರ್ಯಕ್ರಮಗಳಿಗೆ ಲಕ್ಷಗಳು ಮತ್ತು ಕೋಟ್ಯಂತರ ರೂಪಾಯಿ ಹೂಡಿಕೆಯನ್ನು ಸ್ವೀಕರಿಸಿದರು ಮತ್ತು ಭಾರತವು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು. ಉತ್ತರ ಪ್ರದೇಶದಲ್ಲಿ ಹೆದ್ದಾರಿ, ಎಕ್ಸಪ್ರೆಸ್ ಹೈವೇ ಯೋಜನೆಗಳು, ನಿರ್ದಿಷ್ಟ ಸರಕು ಕಾರಿಡಾರ್ ಮತ್ತು ರಕ್ಷಣಾ ಕಾರಿಡಾರ್ ಗಳ ಮೂಲಕ ಸಾಂಕ್ರಾಮಿಕ ರೋಗದ ಮಧ್ಯೆ ಮೂಲಸೌಕರ್ಯ ಉತ್ಪನ್ನಗಳು ನಿಲ್ಲದೆ ಸಾಗಿವೆ.

ಬಡವರು, ದೀನದಲಿತರು, ಹಿಂದುಳಿದವರು, ಬುಡಕಟ್ಟು ಜನರಿಗಾಗಿ ಮಾಡಿದ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದನ್ನು ಡಬಲ್ ಎಂಜಿನ್ ಸರ್ಕಾರ ಖಾತ್ರಿಪಡಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕೆ ಪಿಎಂ ಸ್ವನಿಧಿ ಯೋಜನೆ ಅತಿ ದೊಡ್ಡ ಉದಾಹರಣೆಯಾಗಿದೆ ಎಂದರು. ಸಾಂಕ್ರಾಮಿಕದ ಸಮಯದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲು ಕೈಗೊಂಡ ಕ್ರಮಗಳನ್ನು ಪ್ರಧಾನಮಂತ್ರಿಯವರು ವಿಸ್ತೃತವಾಗಿ ವಿವರಿಸಿದರು. ಒಂದು ಪರಿಣಾಮಕಾರಿ ಕಾರ್ಯತಂತ್ರವು ಆಹಾರ ಬೆಲೆಗಳನ್ನು ನಿಯಂತ್ರಣದಲ್ಲಿರಿಸಿತು, ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಪೂರೈಕೆಯನ್ನು ಖಾತ್ರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು, ಅದರ ಪರಿಣಾಮ ರೈತರು ದಾಖಲೆಯ ಆಹಾರ ಧಾನ್ಯವನ್ನು ಬೆಳೆದರು ಮತ್ತು ಸರ್ಕಾರ ಎಂಎಸ್ ಪಿ ಅಡಿ ದಾಖಲೆ ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿ ಮಾಡಿತು.

ಅಲ್ಲದೆ, ಪ್ರಧಾನಮಂತ್ರಿ ಅವರು ಉತ್ತರಪ್ರದೇಶದಲ್ಲಿ ಎಂಎಸ್ ಪಿ ಖರೀದಿಯಲ್ಲಿ ದಾಖಲೆ ನಿರ್ಮಿಸಿರುವುದರ ಬಗ್ಗೆ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದರು. ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಎಂಎಸ್ ಪಿ ಲಾಭ ಪಡೆದ ರೈತರ ಸಂಖ್ಯೆ ದುಪ್ಪಟ್ಟಾಗಿದೆ. ಉತ್ತರ ಪ್ರದೇಶದಲ್ಲಿ ಸುಮಾರು 13 ಲಕ್ಷ ರೈತ ಕುಟುಂಬಗಳ ಖಾತೆಗೆ ಅವರು ಬೆಳೆದ ಬೆಳೆಗೆ  24ಸಾವಿರ ಕೋಟಿಗೂ ಅಧಿಕ ಹಣ ಜಮೆಯಾಗಿದೆ. ಉತ್ತರ ಪ್ರದೇಶದಲ್ಲಿ 17 ಲಕ್ಷ ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ, ಲಕ್ಷಾಂತರ ಬಡವರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ. ಲಕ್ಷಾಂತರ ಕುಟುಂಬಗಳಿಗೆ ಉಚಿತ ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. 27 ಲಕ್ಷ ಕುಟುಂಬಗಳಿಗೆ ರಾಜ್ಯದಲ್ಲಿ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ ದಶಕದಲ್ಲಿ ಉತ್ತರ ಪ್ರದೇಶವನ್ನು ಯಾವಾಗಲೂ ರಾಜಕೀಯ ದೃಷ್ಟಿಯಿಂದ ನೋಡಲಾಗುತ್ತಿತ್ತು ಎಂದು ಪ್ರಧಾನಮಂತ್ರಿ ಟೀಕಿಸಿದರು. ದೇಶದ ಅಭಿವೃದ್ಧಿಯಲ್ಲಿ ಉತ್ತರಪ್ರದೇಶ ಹೇಗೆ ಉತ್ತಮ ಪಾತ್ರ ನಿರ್ವಹಿಸಬಲ್ಲದು ಎಂಬ ಬಗ್ಗೆ ಚರ್ಚೆ ಮಾಡಲೂ ಸಹ ಅವಕಾಶ ನೀಡಲಿಲ್ಲ.

ಡಬಲ್ ಎಂಜಿನ್ ಸರ್ಕಾರವು ನಾವು ಸಂಕುಚಿತ ದೃಷ್ಟಿಕೋನದಿಂದ ನೋಡುವ ಮನಸ್ಥಿತಿಯನ್ನು ಬದಲಾಯಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಭಾರತದ ಪ್ರಗತಿಯ ಶಕ್ತಿ ಕೇಂದ್ರವಾಗಬಹುದು ಎನ್ನುವ ವಿಶ್ವಾಸ ಮೂಡಿದೆ ಎಂದು ಅವರು ಹೇಳಿದರು.

ಕಳೆದ 7 ದಶಕಗಳ ಕೊರತೆಯನ್ನು ನೀಗಿಸಲು ಈ ದಶಕ ಉತ್ತರಪ್ರದೇಶದ ದಶಕವಾಗಿದೆ.  ಉತ್ತರ ಪ್ರದೇಶದ ಯುವಜನತೆ, ಹೆಣ್ಣುಮಕ್ಕಳು, ಬಡವರು, ಶೋಷಿತರು ಮತ್ತು ಹಿಂದುಳಿದವರ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಮತ್ತು ಅವರಿಗೆ ಉತ್ತಮ ಅವಕಾಶಗಳನ್ನು ನೀಡದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಮಂತ್ರಿ ತಮ್ಮ ಭಾಷಣದ ಮುಕ್ತಾಯದ ವೇಳೆ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Government announces major projects to boost capacity at Kandla Port with Rs 57,000-crore investment

Media Coverage

Government announces major projects to boost capacity at Kandla Port with Rs 57,000-crore investment
NM on the go

Nm on the go

Always be the first to hear from the PM. Get the App Now!
...
President of the European Council, Antonio Costa calls PM Narendra Modi
January 07, 2025
PM congratulates President Costa on assuming charge as the President of the European Council
The two leaders agree to work together to further strengthen the India-EU Strategic Partnership
Underline the need for early conclusion of a mutually beneficial India- EU FTA

Prime Minister Shri. Narendra Modi received a telephone call today from H.E. Mr. Antonio Costa, President of the European Council.

PM congratulated President Costa on his assumption of charge as the President of the European Council.

Noting the substantive progress made in India-EU Strategic Partnership over the past decade, the two leaders agreed to working closely together towards further bolstering the ties, including in the areas of trade, technology, investment, green energy and digital space.

They underlined the need for early conclusion of a mutually beneficial India- EU FTA.

The leaders looked forward to the next India-EU Summit to be held in India at a mutually convenient time.

They exchanged views on regional and global developments of mutual interest. The leaders agreed to remain in touch.