ʻಸಶಕ್ತ ಉತ್ತರಾಖಂಡ್ʼ ಪುಸ್ತಕ ಹಾಗೂ ʻಹೌಸ್ ಆಫ್ ಹಿಮಾಲಯಸ್‌ʼ ಬ್ರಾಂಡ್‌ನ ಲೋಕಾರ್ಪಣೆ
"ನಾವು ದೈವತ್ವ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೆ ಅನುಭವಿಸುವ ರಾಜ್ಯ ಉತ್ತರಾಖಂಡ"
"ಭಾರತದ ʻಎಸ್‌ಡಬ್ಲ್ಯೂಒಟಿʼ ವಿಶ್ಲೇಷಣೆಯು ಆಕಾಂಕ್ಷೆಗಳು, ಭರವಸೆ, ಆತ್ಮವಿಶ್ವಾಸ, ನಾವೀನ್ಯತೆ ಮತ್ತು ಅವಕಾಶಗಳ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ"
"ಮಹತ್ವಾಕಾಂಕ್ಷೆಯ ಭಾರತವು ಅಸ್ಥಿರ ಸರಕಾರಕ್ಕಿಂತಲೂ ಸ್ಥಿರವಾದ ಸರ್ಕಾರವನ್ನು ಬಯಸುತ್ತದೆ"
"ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರ ಪರಸ್ಪರ ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ"
'ಮೇಕ್ ಇನ್ ಇಂಡಿಯಾ' ಮಾದರಿಯಲ್ಲಿ 'ವೆಡ್ ಇನ್ ಇಂಡಿಯಾ' ಆಂದೋಲನವನ್ನು ಪ್ರಾರಂಭಿಸಿ
"ಉತ್ತರಾಖಂಡದಲ್ಲಿ ಮಧ್ಯಮ ವರ್ಗದ ಸಮಾಜದ ಶಕ್ತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ"
"ನಮ್ಮ ʻವೋಕಲ್ ಫಾರ್ ಲೋಕಲ್ʼ ಮತ್ತು ʻಲೋಕಲ್ ಫಾರ್ ಗ್ಲೋಬಲ್ʼ ಪರಿಕಲ್ಪನೆಯನ್ನು ʻಹೌಸ್ ಆಫ್ ಹಿಮಾಲಯಾಸ್ʼ ಮತ್ತಷ್ಟು ಬಲಪಡಿಸುತ್ತದೆ"
"ನಾನು ಎರಡು ಕೋಟಿ ʻಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸಲು ಸಂಕಲ್ಪ ಮಾಡಿದ್ದೇನೆ"
"ಇದು ಸರಿಯಾದ ಸಮಯ, ಇದು ಭಾರತದ ಕಾಲ”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡದ ಡೆಹ್ರಾಡೂನ್‌ನ ʻಅರಣ್ಯ ಸಂಶೋಧನಾ ಸಂಸ್ಥೆʼಯಲ್ಲಿ ನಡೆಯುತ್ತಿರುವ 'ಉತ್ತರಾಖಂಡ್ ಜಾಗತಿಕ ಹೂಡಿಕೆದಾರರ ಸಮಾವೇಶ-2023' ಅನ್ನು ಉದ್ಘಾಟಿಸಿದರು. ಇಲ್ಲಿ ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನದಲ್ಲಿ ಹೆಜ್ಜೆ ಹಾಕಿದ ಶ್ರೀ ಮೋದಿ ಅವರು ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ʻಸಶಕ್ತ ಉತ್ತರಾಖಂಡ್ʼ ಪುಸ್ತಕವನ್ನು ಹಾಗೂ ʻಹೌಸ್ ಆಫ್ ಹಿಮಾಲಯಸ್‌ʼ ಬ್ರಾಂಡ್  ಅನ್ನು ಲೋಕಾರ್ಪಣೆ ಮಾಡಿದರು. 'ಶಾಂತಿಯಿಂದ ಸಮೃದ್ಧಿಗೆ' ಎಂಬ ವಿಷಯಾಧಾರಿತವಾಗಿ ಈ ಬಾರಿಯ ಹೂಡಿಕೆದಾರರ ಸಮಾವೇಶವನ್ನು ಏರ್ಪಡಿಸಲಾಗಿದೆ.

ಉದ್ಯಮದ ಪ್ರಮುಖರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅದಾನಿ ಗ್ರೂಪ್‌ನ ನಿರ್ದೇಶಕ ಮತ್ತು ವ್ಯವಸ್ಥಾಪಕ ನಿರ್ದೇಶಕ (ಕೃಷಿ, ತೈಲ ಮತ್ತು ಅನಿಲ) ಶ್ರೀ ಪ್ರಣವ್ ಅದಾನಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉತ್ತರಾಖಂಡವು ತನ್ನ ಬೆಳವಣಿಗೆ ಮತ್ತು ಅಭಿವೃದ್ಧಿಯ ವಿಧಾನದಿಂದಾಗಿ ಖಾಸಗಿ ವಲಯದ ಹೂಡಿಕೆಗೆ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿದೆ. ಏಕೆಂದರೆ ಏಕ-ಗವಾಕ್ಷಿ ಮಾದರಿಯಲ್ಲಿ ಅನುಮತಿಗಳು, ಸ್ಪರ್ಧಾತ್ಮಕ ಭೂಮಿಯ ಬೆಲೆಗಳು, ಕೈಗೆಟುಕುವ ವಿದ್ಯುತ್ ಹಾಗೂ ಪರಿಣಾಮಕಾರಿ ವಿತರಣೆ, ಹೆಚ್ಚು ನುರಿತ ಮಾನವಶಕ್ತಿ ಮತ್ತು ರಾಷ್ಟ್ರ ರಾಜಧಾನಿಗೆ ಸಾಮೀಪ್ಯ ಮತ್ತು ಅತ್ಯಂತ ಸ್ಥಿರವಾದ ಕಾನೂನು-ಸುವ್ಯವಸ್ಥೆ ವಾತಾವರಣದ ಸಂಯೋಜನೆಯು ರಾಜ್ಯವನ್ನು ಹೂಡಿಕೆಗೆ ಆಕರ್ಷಕ ತಾಣವನ್ನಾಗಿಸಿದೆ ಎಂದರು.  ಶ್ರೀ ಅದಾನಿ ಅವರು ರಾಜ್ಯದಲ್ಲಿ ವಿಸ್ತರಿಸಲಿರುವ ಹಾಗೂ ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗಗಳನ್ನು ತರುವ ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಉತ್ತರಾಖಂಡ ರಾಜ್ಯಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ ಅವರು, ಭಾರತದ ಜನರು ತಮ್ಮ ಮೇಲೆ ಅಭೂತಪೂರ್ವ ವಿಶ್ವಾಸ ಮತ್ತು ವಿಶ್ವಾಸವನ್ನು ಇಟ್ಟಿದ್ದಾರೆ ಎಂದರು.

ʻಜೆಎಸ್‌ಡಬ್ಲ್ಯೂʼನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಜ್ಜನ್ ಜಿಂದಾಲ್ ಅವರು ಮಾತನಾಡಿ, ಕೇದಾರನಾಥ ಮತ್ತು ಬದರೀನಾಥದ ಅಭಿವೃದ್ಧಿ ಯೋಜನೆಗಳ ಸಂದರ್ಭದಲ್ಲಿ ಶ್ರೀ ಜಿಂದಾಲ್‌ ಅವರು ಅನುಭವಿಸಿದ ಉತ್ತರಾಖಂಡ ರಾಜ್ಯದೊಂದಿಗಿನ ಪ್ರಧಾನಮಂತ್ರಿಯವರ ಸಂಪರ್ಕದ ಬಗ್ಗೆ ವಿವರಿಸಿದರು. ರಾಷ್ಟ್ರದ ಮುಖವನ್ನು ಬದಲಿಸಿದ ಪ್ರಧಾನಮಂತ್ರಿಯವರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಜಿಡಿಪಿ ಬೆಳವಣಿಗೆಯ ಅಂಕಿ-ಅಂಶಗಳನ್ನು ಉಲ್ಲೇಖಿಸಿದರು. ಭಾರತವು ಶೀಘ್ರದಲ್ಲೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಜಾಗತಿಕ ಸೂಪರ್ ಪವರ್ ಆಗುವ ಭಾರತದ ಪಯಣದಲ್ಲಿ ನಾಯಕತ್ವ ವಹಿಸಿದ್ದಕ್ಕಾಗಿ ಶ್ರೀ ಜಿನಾಲ್ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ದೇಶಾದ್ಯಂತದ ಯಾತ್ರಾ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸಲು ಸರ್ಕಾರ ಒತ್ತು ನೀಡಿರುವುದನ್ನು ಅವರು ಉಲ್ಲೇಖಿಸಿದರು. ಉತ್ತರಾಖಂಡದಲ್ಲಿ ಸುಮಾರು 15,000 ಕೋಟಿ ರೂ.ಗಳ ಹೂಡಿಕೆಯನ್ನು ತರುವ ಕಂಪನಿಯ ಯೋಜನೆಯ ಬಗ್ಗೆ ಅವರು ವಿವರಿಸಿದರು. ನವೆಂಬರ್‌ನಲ್ಲಿ ಪ್ರಾರಂಭಿಸಲಾದ 'ಕ್ಲೀನ್ ಕೇದಾರನಾಥ ಯೋಜನೆ' ಬಗ್ಗೆಯೂ ಮಾತನಾಡಿದರು. ಉತ್ತರಾಖಂಡ ಸರ್ಕಾರದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಅವರು, ಭಾರತದ ಅಭಿವೃದ್ಧಿಯ ಪಯಣದಲ್ಲಿ ಕಂಪನಿ ನಿರಂತರ ಬೆಂಬಲ ನೀಡಲಿದೆ ಎಂದು ಭರವಸೆಯಿತ್ತು.

ʻಜಿ-20ʼ ಶೃಂಗಸಭೆಯ ಯಶಸ್ಸನ್ನು ಸ್ಮರಿಸಿದ ʻಐಟಿಸಿʼ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಜೀವ್ ಪುರಿ ಅವರು, ಪ್ರಧಾನಮಂತ್ರಿಯವರ ಜಾಗತಿಕ ರಾಜನೀತಿ ಮತ್ತು ಜಾಗತಿಕ ದಕ್ಷಿಣದ ದೇಶಗಳ ಒಳಿತಿಗಾಗಿ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಉದ್ದೇಶಪೂರ್ವಕ ನೀತಿ ಉಪಕ್ರಮಗಳಿಂದಾಗಿ ಬಹು ಆಯಾಮದ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತಿನ ನಡುವೆ ಭಾರತ ಅನುಕೂಲಕರ ಸ್ಥಿತಿಯಲ್ಲಿರಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಆರ್ಥಿಕತೆಯ ಅನೇಕ ಕ್ಷೇತ್ರಗಳ ಪರಿವರ್ತನೆ ಮತ್ತು ಜಿಡಿಪಿ ಸಂಖ್ಯೆಗಳು ಸ್ವತಃ ಈ ಬಗ್ಗೆ ಮಾತನಾಡುತ್ತವೆ ಎಂದು ಅವರು ಹೇಳಿದರು. ಪ್ರಧಾನಿಯವರ ನಾಯಕತ್ವದಿಂದಾಗಿ ಈ ದಶಕ ಮಾತ್ರವಲ್ಲ ಇಡೀ ಶತಮಾನವು ಭಾರತಕ್ಕೆ ಸೇರಿದೆ ಎಂದು ಜಾಗತಿಕವಾಗಿ ಕೆಲವರು ಹೇಳುವ ಪರಿಸ್ಥಿತಿಯನ್ನು ನಿರ್ಮಾಣವಾಗಿದೆ.

ʻಪತಂಜಲಿʼ ಸಂಸ್ಥೆಯ ಸಂಸ್ಥಾಪಕ ಮತ್ತು ಯೋಗ ಗುರು ಶ್ರೀ ಬಾಬಾ ರಾಮದೇವ್ ಅವರು ಮಾತನಾಡಿ, ಪ್ರಧಾನಿಯನ್ನು 'ವಿಕಸಿತ ಭಾರತʼದ ಮುನ್ನೋಟ ಉಳ್ಳವರು ಎಂದರು. ಪ್ರಧಾನಿ ಮೋದಿ ಅವರನ್ನು 140 ಕೋಟಿ ಭಾರತೀಯರು ಮತ್ತು ವಿಶ್ವದ ಕುಟುಂಬ ಸದಸ್ಯ ಎಂದು ಬಣ್ಣಿಸಿದರು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಪ್ರಧಾನ ಮಂತ್ರಿಯವರ ಗುರಿಯನ್ನು ಅವರು ಎತ್ತಿ ಹಿಡಿದರು. ಹೂಡಿಕೆಗಳನ್ನು ತರುವಲ್ಲಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ʻಪತಂಜಲಿʼಯ ಕೊಡುಗೆಗಳನ್ನು ಉಲ್ಲೇಖಿಸಿದರು. ಮುಂಬರುವ ದಿನಗಳಲ್ಲಿ 10,000 ಕೋಟಿ ರೂ.ಗಿಂತ ಅಧಿಕ ಹೂಡಿಕೆ ಮತ್ತು 10,000ಕ್ಕೂ ಹೆಚ್ಚು ಉದ್ಯೋಗಗಳ ಸೃಷ್ಟಿಯ ಬಗ್ಗೆ ಅವರು ಪ್ರಧಾನಿಗೆ ಭರವಸೆ ನೀಡಿದರು. ನವ ಭಾರತದ ನಿರ್ಮಾಣದಲ್ಲಿ ಪ್ರಧಾನಮಂತ್ರಿಯವರ ಸಂಕಲ್ಪ ಮತ್ತು ಇಚ್ಛಾಶಕ್ತಿಯನ್ನು ಅವರು ಶ್ಲಾಘಿಸಿದರು. ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಉತ್ತರಾಖಂಡದ ಮುಖ್ಯಮಂತ್ರಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ರಾಜ್ಯದಲ್ಲಿ ಘಟಕವನ್ನು ಸ್ಥಾಪಿಸುವಂತೆ ಕಾರ್ಪೊರೇಟ್ ಸಂಸ್ಥೆಗಳನ್ನು ಬಾಬಾ ರಾಮ್‌ದೇವ್‌ ಒತ್ತಾಯಿಸಿದರು. ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ರಾಜ್ಯದ ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ, ಕೃಷಿ, ಸಂಪರ್ಕ ಮತ್ತು ಮೂಲಸೌಕರ್ಯ ಕ್ಷೇತ್ರಗಳ ಅಭಿವೃದ್ಧಿಯನ್ನು ಅವರು ಶ್ಲಾಘಿಸಿದರು. ಭಾರತವನ್ನು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡುವ ಮತ್ತು ʻವಿಕಸಿತ ಭಾರತʼದ ಗುರಿಯನ್ನು ಸಾಧಿಸುವ ಪ್ರಧಾನಮಂತ್ರಿಯವರ ಸಂಕಲ್ಪವನ್ನು ಬಲಪಡಿಸುವಂತೆ ಅವರು ಹೂಡಿಕೆದಾರರಿಗೆ ಮನವಿ ಮಾಡಿದರು.

ʻಎಮಾರ್ ಇಂಡಿಯಾʼದ ಸಿಇಓ ಶ್ರೀ ಕಲ್ಯಾಣ್ ಚಕ್ರವರ್ತಿ ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ನಿರ್ದೇಶನ, ದೂರದೃಷ್ಟಿ ಮತ್ತು ಮುನ್ನೋಟವನ್ನು ಒದಗಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಭಾರತವು ʻವಿಕಸಿತ ರಾಷ್ಟ್ರʼವಾಗುವ ಪ್ರಯಾಣದಲ್ಲಿ ಪಾಲುದಾರರಾಗಲು ಕಾರ್ಪೊರೇಟ್ ಪ್ರಪಂಚದ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ʻಭಾರತ-ಯುಎಇʼ ಸಂಬಂಧದಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಎಂದು ಅವರು ಗಮನಸೆಳೆದರು. ʻಎಮಾರ್ʼನ ಪ್ರಧಾನ ಕಚೇರಿ ʻಯುಎಇʼನಲ್ಲಿದೆ. ಶ್ರೀ ಕಲ್ಯಾಣ್ ಚಕ್ರವರ್ತಿ ಅವರು ಭಾರತದ ಬಗ್ಗೆ ಜಾಗತಿಕ ದೃಷ್ಟಿಕೋನದಲ್ಲಿ ಬಂದಿರುವ ಸಕಾರಾತ್ಮಕ ಬದಲಾವಣೆಯನ್ನು ಎತ್ತಿ ತೋರಿಸಿದರು. ಜಿಎಸ್‌ಟಿ ಮತ್ತು ʻಫಿನ್‌ಟೆಕ್‌ʼ ಕ್ರಾಂತಿಯಂತಹ ಹಲವಾರು ನೀತಿ ಸುಧಾರಣೆಗಳನ್ನು ಅವರು ಉಲ್ಲೇಖಿಸಿದರು, ಇದು ಕೈಗಾರಿಕಾ ಜಗತ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.

ʻಟಿವಿಎಸ್ ಸಪ್ಲೈ ಚೈನ್ ಸೊಲ್ಯೂಷನ್ಸ್ʼನ ಅಧ್ಯಕ್ಷರಾದ ಶ್ರೀ ಆರ್ ದಿನೇಶ್ ಅವರು ಮಾತನಾಡಿ, ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವಕ್ಕೆ ಕಂಪನಿಯ ಬದ್ಧತೆಯನ್ನು ಪುನರುಚ್ಚರಿಸಿದರು. ಉತ್ತರಾಖಂಡದ ಬೆಳವಣಿಗೆಯ ಯಶೋಗಾಥೆಯಲ್ಲಿ ಸಂಸ್ಥೆಯ ಕೊಡುಗೆಗಳನ್ನು ಉಲ್ಲೇಖಿಸಿದ ಅವರು, ಟೈರ್ ಮತ್ತು ಆಟೋ ಬಿಡಿಭಾಗಗಳ ಉತ್ಪಾದನಾ ಘಟಕಗಳು ಹಾಗೂ ಸರಕು-ಸಾಗಣೆ ಮತ್ತು ವಾಹನ ವಲಯದಲ್ಲಿನ ಸೇವೆಗಳ ಉದಾಹರಣೆಗಳನ್ನು ನೀಡಿದರು. ಉತ್ಪಾದನಾ ವಲಯ ಮತ್ತು ಗೋದಾಮು ಸಾಮರ್ಥ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಹಾಗೂ ಆ ಮೂಲಕ ಸಮೂಹದ ಎಲ್ಲಾ ಕಂಪನಿಗಳಲ್ಲಿ 7,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಕಂಪನಿಯ ಯೋಜನೆಗಳನ್ನು ಅವರು ವಿವರಿಸಿದರು.  ಪ್ರಸ್ತುತ ಬದಲಾಗುತ್ತಿರುವ ವಿಶ್ವ ಸನ್ನಿವೇಶಗಳ ಹಿನ್ನೆಲೆಯಲ್ಲಿ, ಡಿಜಿಟಲ್ ಮತ್ತು ಸುಸ್ಥಿರತೆಗೆ ರೂಪಾಂತರಗೊಳ್ಳಲು ಆರ್ಥಿಕ ಬೆಂಬಲ ಮತ್ತು ಕೌಶಲ್ಯವನ್ನು ಒದಗಿಸುವ ಮೂಲಕ ವಾಹನ ಮಾರುಕಟ್ಟೆ ವಲಯದಲ್ಲಿ ಪಾಲುದಾರರನ್ನು ಕೈಹಿಡಿಯಲು ಕಂಪನಿಯು ಸಿದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. ʻಸಿಐಐʼ ಅಧ್ಯಕ್ಷರಾಗಿ, 1 ಲಕ್ಷಕ್ಕೂ ಹೆಚ್ಚು ಜನರಿಗೆ ಸಮಾಲೋಚನೆ ಮತ್ತು ಬೆಂಬಲವನ್ನು ಒದಗಿಸಲು 10 ಮಾದರಿ ವೃತ್ತಿ ಕೇಂದ್ರಗಳನ್ನು ಸ್ಥಾಪಿಸಲು ಅವರು ಬದ್ಧತೆ ವ್ಯಕ್ತಪಡಿಸಿದ್ದಾರೆ. ಆತಿಥ್ಯ, ಆರೋಗ್ಯ ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳನ್ನು ಒಳಗೊಂಡಂತೆ 10,000 ಜನರಿಗೆ ತರಬೇತಿ ನೀಡುವ ಸಾಮರ್ಥ್ಯದೊಂದಿಗೆ ʻವಿಶೇಷ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರʼವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ ಎಂದು ಅವರು ಮಾಹಿತಿ ನೀಡಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತರಾಖಂಡದ ದೇವಭೂಮಿಗೆ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ,  ಈ ಶತಮಾನದ ಮೂರನೇ ದಶಕವು  ಉತ್ತರಾಖಂಡಕ್ಕೆ ಸಂದ ದಶಕ ಎಂಬ ತಮ್ಮ ಹೇಳಿಕೆಯನ್ನು ಸ್ಮರಿಸಿದರು. ಈ ಹೇಳಿಕೆಯು ತಳಮಟ್ಟದಲ್ಲಿ ಸಾಕಾರಗೊಳ್ಳುತ್ತಿರುವುದು ತೃಪ್ತಿಯ ವಿಷಯವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಸಿಲ್ಕಿಯಾರಾದಲ್ಲಿನ ಸುರಂಗದಿಂದ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸುವ ಯೋಜನೆಯಲ್ಲಿ ಭಾಗಿಯಾಗಿರುವ ರಾಜ್ಯ ಸರ್ಕಾರ ಮತ್ತು ಎಲ್ಲರನ್ನೂ ಪ್ರಧಾನಿ ಅಭಿನಂದಿಸಿದರು.

ಉತ್ತರಾಖಂಡ ಜೊತೆಗಿನ ತಮ್ಮ ನಿಕಟ ಸಂಬಂಧವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಉತ್ತರಾಖಂಡವು ಏಕಕಾಲದಲ್ಲಿ ದೈವತ್ವ ಮತ್ತು ಅಭಿವೃದ್ಧಿಯನ್ನು ಅನುಭವಿಸುವ ರಾಜ್ಯವಾಗಿದೆ ಎಂದರು. ಈ ಭಾವನೆಯನ್ನು ಮತ್ತಷ್ಟು ವಿವರಿಸಲು ಪ್ರಧಾನಮಂತ್ರಿಯವರು ತಮ್ಮ ಕವಿತೆಗಳಲ್ಲಿ ಒಂದನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಹೂಡಿಕೆದಾರರನ್ನು, ಉದ್ಯಮದ ಪ್ರಮುಖರು ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಬಹುರಾಷ್ಟ್ರೀಯ ಕಂಪನಿಗಳು ನಡೆಸಿದ ʻಸಾಮರ್ಥ್ಯಗಳು, ದೌರ್ಬಲ್ಯ, ಅವಕಾಶ ಮತ್ತು ಅಪಾಯʼ(Strengths, Weaknesses, Opportunities, and Threats- SWOT) ವಿಶ್ಲೇಷಣೆಯ ಹೋಲಿಕೆಯನ್ನು ಉಲ್ಲೇಖಿಸಿದರು. ಭಾರತದ ಮೇಲೂ ಇಂತಹ ವಿಶ್ಲೇಷಣೆ ನಡೆಸುವಂತೆ ಒತ್ತಿ ಹೇಳಿದರು. ʻಎಸ್‌ಡಬ್ಲ್ಯೂಒಟಿʼ ವಿಶ್ಲೇಷಣೆಯ ಫಲಿತಾಂಶಗಳು ದೇಶದಲ್ಲಿ ಸಮೃದ್ಧವಾಗಿರುವ ಆಕಾಂಕ್ಷೆಗಳು, ಭರವಸೆ, ಆತ್ಮವಿಶ್ವಾಸ, ನಾವೀನ್ಯತೆ ಮತ್ತು ಅವಕಾಶಗಳನ್ನು ಸೂಚಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ನೀತಿ ಚಾಲಿತ ಆಡಳಿತದ ಸೂಚಕಗಳು ಮತ್ತು ರಾಜಕೀಯ ಸ್ಥಿರತೆಗಾಗಿ ನಾಗರಿಕರ ಸಂಕಲ್ಪವನ್ನು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. "ಮಹತ್ವಾಕಾಂಕ್ಷೆಯ ಭಾರತವು ಅಸ್ಥಿರ ಸರ್ಕಾರದ ಬದಲಿಗೆ ಸ್ಥಿರ ಸರ್ಕಾರವನ್ನು ಬಯಸುತ್ತದೆ," ಎಂದು ಹೇಳಿದ ಪ್ರಧಾನಿ, ಇದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಉದಾಹರಣೆ ನೀಡಿದರು. ಉತ್ತಮ ಆಡಳಿತ ಮತ್ತು ಸರ್ಕಾರದ ಸಾಧನೆಯ ಆಧಾರದ ಮೇಲೆ ಜನರು ಮತ ಚಲಾಯಿಸಿದ್ದಾರೆ ಎಂದು ಒತ್ತಿ ಹೇಳಿದರು. ಕೋವಿಡ್ ಸಾಂಕ್ರಾಮಿಕ ಮತ್ತು ಅಸ್ಥಿರ ಭೌಗೋಳಿಕ-ರಾಜಕೀಯ ಸನ್ನಿವೇಶವನ್ನು ಲೆಕ್ಕಿಸದೆ ದಾಖಲೆಯ ವೇಗದಲ್ಲಿ ಮುಂದುವರಿಯುವ ದೇಶದ ಸಾಮರ್ಥ್ಯದ ಬಗ್ಗೆ ಪ್ರಧಾನಿ ಮೋದಿ ವಿಶೇಷವಾಗಿ ಪ್ರಸ್ತಾಪಿಸಿದರು. "ಅದು ಕರೋನಾ ಲಸಿಕೆಯಾಗಿರಲಿ ಅಥವಾ ಆರ್ಥಿಕ ನೀತಿಗಳಾಗಿರಲಿ, ಭಾರತವು ತನ್ನ ಸಾಮರ್ಥ್ಯಗಳು ಮತ್ತು ನೀತಿಗಳಲ್ಲಿ ನಂಬಿಕೆ ಹೊಂದಿತ್ತು," ಎಂದು ಪ್ರಧಾನಿ ಹೇಳಿದರು. ಇದರ ಪರಿಣಾಮವಾಗಿ, ವಿಶ್ವದ ಇತರ ದೊಡ್ಡ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತವು ತನ್ನದೇ ಆದ ಸ್ಥಾನದಲ್ಲಿ ನಿಂತಿದೆ ಎಂದು ಪ್ರಧಾನಿ ಹೇಳಿದರು. ಉತ್ತರಾಖಂಡ ಸೇರಿದಂತೆ ಭಾರತದ ಪ್ರತಿಯೊಂದು ರಾಜ್ಯವೂ ಈ ಶಕ್ತಿಯ ಲಾಭವನ್ನು ಪಡೆಯುತ್ತಿದೆ ಎಂದು ಅವರು ಗಮನ ಸೆಳೆದರು.

ʻಡಬಲ್ ಇಂಜಿನ್ʼ ಸರ್ಕಾರದ ಪ್ರಯೋಜನಗಳನ್ನು ಪುನರುಚ್ಚರಿಸಿದ ಪ್ರಧಾನಿ, ಅದರ ದ್ವಿಮುಖ ಪ್ರಯತ್ನಗಳು ಎಲ್ಲೆಡೆ ಗೋಚರಿಸುತ್ತಿವೆ ಎಂದರು. ರಾಜ್ಯ ಸರ್ಕಾರವು ಸ್ಥಳೀಯ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದರೆ, ಭಾರತ ಸರ್ಕಾರವು ಉತ್ತರಾಖಂಡದಲ್ಲಿ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. ಸರ್ಕಾರದ ಎರಡೂ ಹಂತಗಳು ಪರಸ್ಪರರ ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ. ಗ್ರಾಮೀಣ ಪ್ರದೇಶಗಳಿಂದ ʻಚಾರ್ ಧಾಮ್ʼಗೆ ಹೋಗುವ ಕಾಮಗಾರಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೆಹಲಿ-ಡೆಹ್ರಾಡೂನ್ ನಡುವಿನ ಪ್ರಯಾಣ ಅವಧಿಯನ್ನು ಎರಡೂವರೆ ಗಂಟೆಗಳಿಗೆ ಇಳಿಸುವ ದಿನ ದೂರವಿಲ್ಲ ಎಂದರು. ಡೆಹ್ರಾಡೂನ್ ಮತ್ತು ಪಂತ್‌ನಗರ ವಿಮಾನ ನಿಲ್ದಾಣ ವಿಸ್ತರಣೆಯು ವಾಯು ಸಂಪರ್ಕವನ್ನು ಬಲಪಡಿಸುತ್ತದೆ. ರಾಜ್ಯದಲ್ಲಿ ಹೆಲಿ-ಟ್ಯಾಕ್ಸಿ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಮತ್ತು ರೈಲು ಸಂಪರ್ಕವನ್ನು ಬಲಪಡಿಸಲಾಗುತ್ತಿದೆ. ಇವೆಲ್ಲವೂ ಕೃಷಿ, ಕೈಗಾರಿಕೆ, ಸರಕು-ಸಾಗಣೆ, ಸಂಗ್ರಹಣೆ, ಪ್ರವಾಸೋದ್ಯಮ ಹಾಗೂ ಆತಿಥ್ಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ಗಡಿ ಪ್ರದೇಶಗಳಲ್ಲಿರುವ ಸ್ಥಳಗಳಿಗೆ ಸೀಮಿತ ಅಭಿವೃದ್ಧಿ ಅವಕಾಶಗಳನ್ನು ನೀಡಿದ ಹಿಂದಿನ ಸರ್ಕಾರಗಳ ಕಾರ್ಯವಿಧಾನಕ್ಕೆ ವ್ಯತಿರಿಕ್ತವಾಗಿ, ಅವುಗಳನ್ನು ದೇಶದ ಮೊದಲ ಗ್ರಾಮವಾಗಿ ಅಭಿವೃದ್ಧಿಪಡಿಸುವ ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿ ಒತ್ತಿ ಹೇಳಿದರು. ʻಮಹತ್ವಾಕಾಂಕ್ಷೆಯ ಜಿಲ್ಲೆಗಳುʼ ಮತ್ತು ʻಮಹತ್ವಾಕಾಂಕ್ಷೆಯ ಬ್ಲಾಕ್ʼಗಳ ಕಾರ್ಯಕ್ರಮವನ್ನು ಪ್ರಸ್ತಾಪಿಸಿದ ಅವರು, ಅಲ್ಲಿ ಅಭಿವೃದ್ಧಿ ಮಾನದಂಡಗಳಲ್ಲಿ ಹಿಂದುಳಿದಿರುವ ಗ್ರಾಮಗಳು ಮತ್ತು ಪ್ರದೇಶಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು. ಉತ್ತರಾಖಂಡದ ಬಳಕೆಯಾಗದ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಶ್ರೀ ಮೋದಿ ಅವರು, ಇದರ ಗರಿಷ್ಠ ಲಾಭವನ್ನು ಪಡೆದುಕೊಳ್ಳುವಂತೆ ಹೂಡಿಕೆದಾರರನ್ನು ಒತ್ತಾಯಿಸಿದರು.

ಡಬಲ್ ಇಂಜಿನ್ ಸರ್ಕಾರದ ಲಾಭ ಪಡೆದಿರುವ ಉತ್ತರಾಖಂಡದ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಭಾರತಕ್ಕೆ ಭೇಟಿ ನೀಡಲು ವಿಶ್ವದಾದ್ಯಂತ ಮತ್ತು ದೇಶದ ಜನರು ತೋರುತ್ತಿರುವ ಉತ್ಸಾಹವನ್ನು ಉಲ್ಲೇಖಿಸಿದರು. ಪ್ರವಾಸಿಗರಿಗೆ ಪ್ರಕೃತಿ ಮತ್ತು ಭಾರತದ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ʻಥೀಮ್ʼ ಆಧಾರಿತ ಪ್ರವಾಸಿ ಸರ್ಕ್ಯೂಟ್‌ಗಳ ರಚನೆಯ ಬಗ್ಗೆ ಅವರು ಮಾಹಿತಿ ನೀಡಿದರು. ಪ್ರಕೃತಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿರುವ ಉತ್ತರಾಖಂಡವು ಒಂದು ʻಬ್ರಾಂಡ್ʼ ಆಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಯೋಗ, ಆಯುರ್ವೇದ, ತೀರ್ಥಯಾತ್ರೆ ಮತ್ತು ಸಾಹಸ ಕ್ರೀಡಾ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅನ್ವೇಷಿಸಲು ಮತ್ತು ಸೃಷ್ಟಿಸಲು ಆದ್ಯತೆ ನೀಡುವಂತೆ ಅವರು ಹೂಡಿಕೆದಾರರಿಗೆ ಒತ್ತಿ ಹೇಳಿದರು. 'ಮೇಕ್ ಇನ್ ಇಂಡಿಯಾ' ಮಾದರಿಯಲ್ಲಿ 'ವೆಡ್ ಇನ್ ಇಂಡಿಯಾ' ಆಂದೋಲನವನ್ನು ಪ್ರಾರಂಭಿಸುವಂತೆ ಪ್ರಧಾನಿ ಮೋದಿ ದೇಶದ ಶ್ರೀಮಂತರು ಮತ್ತು ಯುವಕರಿಗೆ ಮನವಿ ಮಾಡಿದರು. ಮುಂದಿನ ಐದು ವರ್ಷಗಳಲ್ಲಿ ಉತ್ತರಾಖಂಡದಲ್ಲಿ ಕನಿಷ್ಠ ಒಂದು ವಿವಾಹ ಸಮಾರಂಭವನ್ನು ನಡೆಸಿ ಆಯೋಜಿಸುವಂತೆ ಅವರು ವಿನಂತಿಸಿದರು. "ಉತ್ತರಾಖಂಡದಲ್ಲಿ 1 ವರ್ಷದಲ್ಲಿ 5000 ವಿವಾಹಗಳು ನಡೆದರೂ, ಹೊಸ ಮೂಲಸೌಕರ್ಯಗಳು ಜಾರಿಗೆ ಬರುತ್ತವೆ ಮತ್ತು ರಾಜ್ಯವನ್ನು ವಿಶ್ವದ ವಿವಾಹ ತಾಣವಾಗಿ ಪರಿವರ್ತಿಸುತ್ತವೆ," ಎಂದು ಪ್ರಧಾನಿ ಹೇಳಿದರು.

ಭಾರತದಲ್ಲಿ ಬದಲಾವಣೆಯ ಬಲವಾದ ಗಾಳಿ ಬೀಸುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ 10 ವರ್ಷಗಳಲ್ಲಿ ʻಮಹತ್ವಾಕಾಂಕ್ಷೆಯ ಭಾರತʼವನ್ನು ಸೃಷ್ಟಿಸಲಾಗಿದೆ. ಈ ಹಿಂದೆ ಅವಕಾಶ ವಂಚಿತರಾಗಿದ್ದ ಹೆಚ್ಚಿನ ಪಾಲಿನ ಜನರಿಗೆ ಸರ್ಕಾರದ ಯೋಜನೆಗಳು ಮತ್ತು ಅವಕಾಶಗಳನ್ನು ತಲುಪಿಸಲಾಗುತ್ತಿದೆ. ಬಡತನದಿಂದ ಹೊರಬಂದ ಕೋಟ್ಯಂತರ ಜನರು ಆರ್ಥಿಕತೆಗೆ ಹೊಸ ವೇಗವನ್ನು ನೀಡುತ್ತಿದ್ದಾರೆ. ನವ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗ ಎರಡೂ ಹೆಚ್ಚು ಖರ್ಚು ಮಾಡುತ್ತಿವೆ ಎಂದರು. "ನಾವು ಭಾರತದ ಮಧ್ಯಮ ವರ್ಗದ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಬೇಕು. ಉತ್ತರಾಖಂಡದಲ್ಲಿ ಸಮಾಜದ ಈ ಶಕ್ತಿಯು ನಿಮಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ", ಎಂದು ಶ್ರೀ ಮೋದಿ ಹೇಳಿದರು.

ʻಹೌಸ್ ಆಫ್ ಹಿಮಾಲಯಾʼ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವನ್ನು ಪ್ರಧಾನಿ ಅಭಿನಂದಿಸಿದರು ಮತ್ತು ಇದು  ಉತ್ತರಾಖಂಡದ ಸ್ಥಳೀಯ ಉತ್ಪನ್ನಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ನವೀನ ಪ್ರಯತ್ನ ಎಂದು ಬಣ್ಣಿಸಿದರು. "ಹೌಸ್ ಆಫ್ ಹಿಮಾಲಯʼವು ʻವೋಕಲ್ ಫಾರ್ ಲೋಕಲ್ʼ ಮತ್ತು ʻಲೋಕಲ್ ಫಾರ್ ಗ್ಲೋಬಲ್ʼ ಎಂಬ ನಮ್ಮ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುತ್ತದೆ," ಎಂದು ಶ್ರೀ ಮೋದಿ ಹೇಳಿದರು. ಭಾರತದ ಪ್ರತಿಯೊಂದು ಜಿಲ್ಲೆ ಮತ್ತು ಬ್ಲಾಕ್‌ನ ಉತ್ಪನ್ನಗಳು ಜಾಗತಿಕ ಉತ್ಪನ್ನವಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಗಮನ ಸೆಳೆದರು. ವಿದೇಶಗಳಲ್ಲಿ ದುಬಾರಿ ಮಣ್ಣಿನ ಪಾತ್ರೆಗಳನ್ನು ತಯಾರಿಸಿ ವಿಶೇಷ ರೀತಿಯಲ್ಲಿ ಪ್ರಸ್ತುತಪಡಿಸುವ ಉದಾಹರಣೆಯನ್ನು ಅವರು ನೀಡಿದರು. ಸಾಂಪ್ರದಾಯಿಕವಾಗಿ ಇಂತಹ ಅನೇಕ ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುವ ಭಾರತದ ವಿಶ್ವಕರ್ಮರ ಕೌಶಲ್ಯ ಮತ್ತು ಕರಕುಶಲತೆಯ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಇಂತಹ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಅನ್ವೇಷಿಸುವ ಮಹತ್ವವನ್ನು ಒತ್ತಿ ಹೇಳಿದರು. ಅಂತಹ ಉತ್ಪನ್ನಗಳನ್ನು ವಿವಿಧ ಜಿಲ್ಲೆಗಳಲ್ಲಿ ಗುರುತಿಸುವಂತೆ ಹೂಡಿಕೆದಾರರನ್ನು ಒತ್ತಾಯಿಸಿದರು. ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ʻಎಫ್‌ಪಿಒʼಗಳೊಂದಿಗೆ ತೊಡಗಿಸಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಅವರು ಒತ್ತಾಯಿಸಿದರು. "ಉತ್ಪನ್ನಗಳನ್ನು ಸ್ಥಳೀಯ-ಜಾಗತಿಕʼವಾಗಿಸಲು ಇದು ಅದ್ಭುತ ಪಾಲುದಾರಿಕೆಯಾಗಬಹುದು," ಎಂದು ಅವರು ಹೇಳಿದರು. ʻಲಕ್ಷಾಧಿಪತಿ ದೀದಿʼ ಅಭಿಯಾನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ದೇಶದ ಗ್ರಾಮೀಣ ಪ್ರದೇಶಗಳಿಂದ ಎರಡು ಕೋಟಿ ʻಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುವ ತಮ್ಮ ಸಂಕಲ್ಪವನ್ನು ಒತ್ತಿ ಹೇಳಿದರು. ʻಹೌಸ್ ಆಫ್ ಹಿಮಾಲಯʼದ ಬ್ರಾಂಡ್ ಉದ್ಘಾಟನೆಯೊಂದಿಗೆ ಈ ಉಪಕ್ರಮವು ವೇಗವನ್ನು ಪಡೆಯಲಿದೆ ಎಂದರು. ಈ ಉಪಕ್ರಮಕ್ಕಾಗಿ ಅವರು ಉತ್ತರಾಖಂಡ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ರಾಷ್ಟ್ರೀಯ ಚಾರಿತ್ರ್ಯವನ್ನು ಬಲಪಡಿಸುವ ಬಗ್ಗೆ ಕೆಂಪು ಕೋಟೆಯಿಂದ ತಾವು ನೀಡಿದ ಕರೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ನಾವು ಏನೇ ಮಾಡಿದರೂ ಅದು ವಿಶ್ವದಲ್ಲೇ ಅತ್ಯುತ್ತಮವಾಗಿರಬೇಕು. ನಮ್ಮ ಮಾನದಂಡಗಳನ್ನು ಜಗತ್ತು ಅನುಸರಿಸಬೇಕು. ನಮ್ಮ ಉತ್ಪಾದನೆಯು ಶೂನ್ಯ ಪರಿಣಾಮ, ಶೂನ್ಯ ದೋಷದ ತತ್ವದ ಮೇಲೆ ಇರಬೇಕು. ರಫ್ತು ಆಧಾರಿತ ಉತ್ಪಾದನೆಯನ್ನು ಹೇಗೆ ಹೆಚ್ಚಿಸುವುದು ಎಂಬುದರ ಬಗ್ಗೆ ನಾವು ಈಗ ಗಮನ ಹರಿಸಬೇಕಾಗಿದೆ. ಮಹತ್ವಾಕಾಂಕ್ಷೆಯ ʻಪಿಎಲ್ಐʼ ಅಭಿಯಾನಗಳು ನಿರ್ಣಾಯಕ ಕ್ಷೇತ್ರಗಳಿಗೆ ಪರಿಸರ ವ್ಯವಸ್ಥೆಯನ್ನು ರಚಿಸುವ ಸಂಕಲ್ಪವನ್ನು ಪ್ರದರ್ಶಿಸುತ್ತವೆ ಎಂದು ಅವರು ಹೇಳಿದರು. ಹೊಸ ಹೂಡಿಕೆಯ ಮೂಲಕ ಸ್ಥಳೀಯ ಪೂರೈಕೆ ಸರಪಳಿ ಮತ್ತು ಸಣ್ಣ ಕೈಗಾರಿಕೆಗಳನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಅಗ್ಗದ ರಫ್ತಿನ ಮನಸ್ಥಿತಿಯಿಂದ ಹೊರಬಂದು ಸಾಮರ್ಥ್ಯ ವರ್ಧನೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಪೆಟ್ರೋಲಿಯಂಗೆ 15 ಲಕ್ಷ ಕೋಟಿ ರೂ.ಗಳ ಆಮದು ವೆಚ್ಚ ಮತ್ತು ಕಲ್ಲಿದ್ದಲಿಗೆ 4 ಲಕ್ಷ ಕೋಟಿ ರೂ.ಗಳ ಆಮದು ವೆಚ್ಚದ ಬಗ್ಗೆ ಅವರು ಉಲ್ಲೇಖಿಸಿದರು. ಇಂದಿಗೂ ಭಾರತವು 15 ಸಾವಿರ ಕೋಟಿ ಮೌಲ್ಯದ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಆಮದನ್ನು ಕಡಿಮೆ ಮಾಡುವ ಪ್ರಯತ್ನಗಳ ಬಗ್ಗೆ ಅವರು ವಿವರಿಸಿದರು.

ಭಾರತವು ಸಿರಿಧಾನ್ಯಗಳಂತಹ ಪೌಷ್ಟಿಕ ಆಹಾರದಿಂದ ಸಮೃದ್ಧವಾಗಿದೆ. ಹೀಗಿದ್ದರೂ ಪೌಷ್ಠಿಕಾಂಶದ ಹೆಸರಿನಲ್ಲಿ ಪ್ಯಾಕೇಜ್ ಮಾಡಿದ ಆಹಾರ ಬಳಕೆ ವಿರುದ್ಧ ಪ್ರಧಾನಿ ಎಚ್ಚರಿಕೆ ನೀಡಿದರು. ಆಯುಷ್ ಸಂಬಂಧಿತ ಸಾವಯವ ಆಹಾರದ ಸಾಧ್ಯತೆಗಳು ಮತ್ತು ಅವು ರಾಜ್ಯದ ರೈತರಿಗೆ ಮತ್ತು ಉದ್ಯಮಿಗಳಿಗೆ ಒದಗಿಸುವ ಅವಕಾಶಗಳನ್ನು ಅವರು ಎತ್ತಿ ತೋರಿಸಿದರು. ಪ್ಯಾಕೇಜ್ ಮಾಡಿದ ಆಹಾರದಲ್ಲಿಯೂ ಸಹ, ಸ್ಥಳೀಯ ಉತ್ಪನ್ನವು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಸಹಾಯ ಮಾಡುವಂತೆ ಅವರು ಕರೆ ನೀಡಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ವರ್ತಮಾನವು ಭಾರತಕ್ಕೆ, ಅದರ ಕಂಪನಿಗಳಿಗೆ ಮತ್ತು ಅದರ ಹೂಡಿಕೆದಾರರಿಗೆ ಅಭೂತಪೂರ್ವ ಸಮಯವಾಗಿದೆ ಎಂದರು. "ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ" ಎಂದು ಅವರು ಹೇಳಿದರು. ಸ್ಥಿರ ಸರ್ಕಾರ, ಬೆಂಬಲಿತ ನೀತಿ ವ್ಯವಸ್ಥೆ, ಸುಧಾರಣೆ ಮತ್ತು ಪರಿವರ್ತನೆಯ ಮನಸ್ಥಿತಿ ಹಾಗೂ ಅಭಿವೃದ್ಧಿಯಲ್ಲಿ ವಿಶ್ವಾಸದ ಸಂಯೋಜನೆಯನ್ನು ಅವರು ಶ್ಲಾಘಿಸಿದರು. "ಇದು ಸರಿಯಾದ ಸಮಯ, ಇದು ಭಾರತದ ಸಮಯ," ಎಂದು ಪ್ರಧಾನಿ ಹೇಳಿದರು. ಉತ್ತರಾಖಂಡದೊಂದಿಗೆ ಹೆಜ್ಜೆ ಹಾಕುವಂತೆ ಮತ್ತು ಅದರ ಅಭಿವೃದ್ಧಿಯ ಪಯಣದಲ್ಲಿ ಭಾಗವಹಿಸುವಂತೆ ಹೂಡಿಕೆದಾರರಿಗೆ ಮನವಿ ಮಾಡಿದರು.

ಉತ್ತರಾಖಂಡದ ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಮತ್ತು ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

'ಉತ್ತರಾಖಂಡ್ ಜಾಗತಿಕ ಹೂಡಿಕೆದಾರರ ಸಮಾವೇಶ-2023' ಉತ್ತರಾಖಂಡವನ್ನು ಹೊಸ ಹೂಡಿಕೆ ತಾಣವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಎರಡು ದಿನಗಳ ಸಮಾವೇಶವು 2023ರ ಡಿಸೆಂಬರ್ 8 ಮತ್ತು 9 ರಂದು "ಶಾಂತಿಯಿಂದ ಸಮೃದ್ಧಿಗೆ" ಎಂಬ ವಿಷಯಾಧಾರಿತವಾಗಿ ನಡೆಯಲಿದೆ.

ವಿಶ್ವದ ವಿವಿಧ ಭಾಗಗಳಿಂದ ಸಾವಿರಾರು ಹೂಡಿಕೆದಾರರು ಮತ್ತು ಪ್ರತಿನಿಧಿಗಳು ಸಮಾಶದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರು, ವಿವಿಧ ದೇಶಗಳ ರಾಯಭಾರಿಗಳು ಮತ್ತು ಪ್ರಮುಖ ಕೈಗಾರಿಕೋದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Demat tally surges to 185 million in 2024 with 46 million new additions

Media Coverage

Demat tally surges to 185 million in 2024 with 46 million new additions
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to stampede in Tirupati, Andhra Pradesh
January 09, 2025