ತಮ್ಮ ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರೊಂದಿಗೆ ಜಂಟಿಯಾಗಿ ಬಾಪು ಮತ್ತು ಬಂಗಬಂಧು ಕುರಿತಾದ ಡಿಜಿಟಲ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಬಾಪು ಮತ್ತು ಬಂಗಬಂಧು ಇಬ್ಬರೂ ದಕ್ಷಿಣ ಏಷ್ಯಾ ವಲಯದ ಅನುಕರಣೀಯ ವ್ಯಕ್ತಿತ್ವದವರಾಗಿದ್ದು, ಅವರ ಚಿಂತನೆಗಳು ಮತ್ತು ಸಂದೇಶಗಳು ಜಗತ್ತಿನಾದ್ಯಂತ ಮಾರ್ದನಿಸುತ್ತಿವೆ.
ಪ್ರದರ್ಶನದ ಮೇಲ್ವಿಚಾರಕರಾದ ಶ್ರೀ ಬಿರಾದ್ ಯಾಜ್ಞಿಕ್ ಅವರು ನಾಯಕರಿಗೆ ಪ್ರದರ್ಶನದ ವೀಕ್ಷಣೆಗೆ ಜತೆಯಾದರು, ಶೇಖ್ ರೆಹಾನಾ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Remembering two exemplary personalities from our region, whose thoughts and message resonates globally.
— PMO India (@PMOIndia) March 26, 2021
A digital exhibition on Bapu and Bangabandhu was inaugurated earlier this evening. pic.twitter.com/KKuGll8NE1