ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹ್ಮದಾಬಾದ್‌ನಲ್ಲಿ ʻಗುಜರಾತ್ ಪಂಚಾಯತ್ ಮಹಾಸಮ್ಮೇಳನʼ ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಪಂಚಾಯತ್ ರಾಜ್ ಪ್ರತಿನಿಧಿಗಳು ಭಾಗವಹಿಸಿದ್ದರು.
ಗುಜರಾತ್ ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮಾತೃಭೂಮಿ ಎಂದು ಪ್ರಧಾನಿ ಹೇಳಿದರು. "ಬಾಪು ಯಾವಾಗಲೂ ಗ್ರಾಮೀಣ ಅಭಿವೃದ್ಧಿ, ಸ್ವಾವಲಂಬಿ ಹಳ್ಳಿಗಳ ಬಗ್ಗೆ ಮಾತನಾಡುತ್ತಿದ್ದರು. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಬಾಪು ಅವರ 'ಗ್ರಾಮೀಣ ವಿಕಾಸ'ದ ಕನಸನ್ನು ನಾವು ನನಸು ಮಾಡಬೇಕು,” ಎಂದರು.
ಸಾಂಕ್ರಾಮಿಕದ ಶಿಸ್ತುಬದ್ಧ ಮತ್ತು ಉತ್ತಮ ನಿರ್ವಹಣೆಗಾಗಿ ಗುಜರಾತ್‌ನ ಪಂಚಾಯಿತಿಗಳು ಹಾಗೂ ಹಳ್ಳಿಗಳ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. ಗುಜರಾತ್‌ನಲ್ಲಿ ಮಹಿಳಾ ಪಂಚಾಯತ್ ಪ್ರತಿನಿಧಿಗಳ ಸಂಖ್ಯೆ ಪುರುಷ ಪ್ರತಿನಿಧಿಗಳಿಗಿಂತ ಹೆಚ್ಚಾಗಿರುವ ವಿಷಯವನ್ನು ಅವರು ಒತ್ತಿ ಹೇಳಿದರು. ಒಂದೂವರೆ ಲಕ್ಷಕ್ಕೂ ಹೆಚ್ಚು ಪಂಚಾಯತ್ ಪ್ರತಿನಿಧಿಗಳು ಒಟ್ಟಾಗಿ ಚರ್ಚಿಸುವುದೆಂದರೆ, ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಸಂಕೇತಿಸುವಂತಹ ಉದಾಹರಣೆ ಅದಕ್ಕಿಂತಲೂ ಮತ್ತೊಂದಿಲ್ಲ ಎಂದರು.
ಸಣ್ಣ-ಪುಟ್ಟವಾದರೂ ಅತ್ಯಂತ ಮೂಲಭೂತ ಉಪಕ್ರಮಗಳೊಂದಿಗೆ ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಅಭಿವೃದ್ಧಿಯನ್ನು ಹೇಗೆ ಖಾತರಿಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಪಂಚಾಯತ್ ಸದಸ್ಯರಿಗೆ ಪ್ರಧಾನಿ ಮಾರ್ಗದರ್ಶನ ನೀಡಿದರು. ಶಾಲೆಯ ಜನ್ಮದಿನ ಅಥವಾ ಸಂಸ್ಥಾಪನಾ ದಿನವನ್ನು ಆಚರಿಸುವಂತೆ ಅವರು ಸಲಹೆ ನೀಡಿದರು. ಅದರ ಮೂಲಕ, ಆ ಶಾಲೆಯ ಆವರಣ ಮತ್ತು ತರಗತಿಗಳನ್ನು ಸ್ವಚ್ಛಗೊಳಿಸಲು ಹಾಗೂ ಆ ಶಾಲೆಗಾಗಿ ಉತ್ತಮ ಚಟುವಟಿಕೆಗಳನ್ನು ಕೈಗೊಳ್ಳಲು ಸಲಹೆ ನೀಡಿದರು. ಆಗಸ್ಟ್ 23ರವರೆಗೆ ದೇಶವು `ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ ಎಂದು ಹೇಳಿದ ಅವರು, ಈ ಅವಧಿಯಲ್ಲಿ ಗ್ರಾಮದಲ್ಲಿ 75 ʻಪ್ರಭಾತ್‌ಪೇರಿʼ (ಬೆಳಗಿನ ಮೆರವಣಿಗೆಗಳು) ನಡೆಸಲು ಸಲಹೆ ನೀಡಿದರು.
ಮಾತು ಮುಂದುವರಿಸಿದ ಪ್ರಧಾನಿ ಅವರು, ಈ ಅವಧಿಯಲ್ಲಿ 75 ಕಾರ್ಯಕ್ರಮಗಳನ್ನು ನಡೆಸುವಂತೆ ಹಾಗೂ ಕಾರ್ಯಕ್ರಮಗಳಲ್ಲಿ ಇಡೀ ಹಳ್ಳಿಯ ಜನರು ಒಗ್ಗೂಡಿ ಗ್ರಾಮದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಮತ್ತೊಂದು ಸಲಹೆಯಿತ್ತ ಪ್ರಧಾನಿ ಅವರು, 75 ವರ್ಷಗಳ ಭಾರತೀಯ ಸ್ವಾತಂತ್ರ್ಯದ ಸ್ಮರಣಾರ್ಥ 75 ಮರಗಳನ್ನು ನೆಡುವ ಮೂಲಕ ಗ್ರಾಮಗಳು ಸಣ್ಣ ಅರಣ್ಯವನ್ನು ಸೃಷ್ಟಿಸುವಂತೆ ಸೂಚಿಸಿದರು. ಪ್ರತಿ ಗ್ರಾಮದಲ್ಲಿ ಕನಿಷ್ಠ 75 ರೈತರು ನೈಸರ್ಗಿಕ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಭೂಮಿ ತಾಯಿಗೆ ರಾಸಾಯನಿಕ ಗೊಬ್ಬರಗಳ ವಿಷದಿಂದ ಮುಕ್ತಿ ನೀಡಬೇಕು ಎಂದು ಹೇಳಿದರು. ಮಳೆ ನೀರನ್ನು ಸಂರಕ್ಷಿಸಲು 75ಕೃಷಿ ಹೊಂಡಗಳನ್ನು ಮಾಡಬೇಕು, ಇದರಿಂದ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ ಜೊತೆಗೆ ಬೇಸಿಗೆ ದಿನಗಳಲ್ಲಿ ಸಹಾಯಕವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಕಾಲು ಬಾಯಿ ರೋಗದಿಂದ ಜಾನುವಾರುಗಳನ್ನು ರಕ್ಷಿಸುವ ನಿಟ್ಟಿನಲ್ಲಿ, ಒಂದೇ ಒಂದು ಜಾನುವಾರಿಗೂ ಲಸಿಕೆ ತಪ್ಪದಂತೆ ಕಾಯ್ದುಕೊಳ್ಳಲು ಅವರು ಸಲಹೆ ನೀಡಿದರು. ಪಂಚಾಯತ್‌ನ ಮನೆ ಮತ್ತು ಬೀದಿಗಳಲ್ಲಿ ವಿದ್ಯುತ್ ಉಳಿಸಲು ʻಎಲ್‌ಇಡಿʼ ದೀಪಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮನವಿ ಮಾಡಿದರು. ಅಲ್ಲದೆ, ಗ್ರಾಮದಲ್ಲಿ ನಿವೃತ್ತ ಸರಕಾರಿ ನೌಕರರನ್ನು ಗ್ರಾಮದ ಅಭ್ಯುದಯಕ್ಕಾಗಿ ಸಜ್ಜುಗೊಳಿಸಬೇಕು, ಗ್ರಾಮದ ಜನ್ಮದಿನವನ್ನು ಆಚರಿಸಬೇಕು, ಇದರಲ್ಲಿ ಊರಿನ ಜನರೆಲ್ಲಾ ಸೇರಿ ಜನರ ಕಲ್ಯಾಣದ ಬಗ್ಗೆ ಚರ್ಚಿಸಬೇಕು ಎಂದು ಅವರು ಹೇಳಿದರು. ಪ್ರತಿಯೊಬ್ಬ ಸದಸ್ಯರೂ ಕನಿಷ್ಠ 15 ನಿಮಿಷವಾದರೂ ಸ್ಥಳೀಯ ಶಾಲೆಗೆ ಭೇಟಿ ನೀಡಬೇಕು, ಇದರಿಂದ ಗ್ರಾಮದ ಶಾಲೆ ಕಟ್ಟುನಿಟ್ಟಿನ ನಿಗಾದಲ್ಲಿರುತ್ತದೆ. ಇದರಿಂದ ಅಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ ಎಂದು ಪಂಚಾಯತ್ ಸದಸ್ಯರಿಗೆ ಸಲಹೆ ನೀಡಿದರು. ಸರಕಾರದ ಪಾಲಿಗೆ ವಾಸ್ತವವಾಗಿ ʻಹೆದ್ದಾರಿʼಗಳಾಗಿರುವ ʻಸಾಮಾನ್ಯ ಸೇವಾ ಕೇಂದ್ರಗಳʼ (ಸಿಎಸ್‌ಸಿ) ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ಜನರನ್ನು ಜಾಗೃತಗೊಳಿಸಬೇಕು ಎಂದು ಅವರು ಪಂಚಾಯತ್ ಸದಸ್ಯರಿಗೆ ಮನವಿ ಮಾಡಿದರು. ಇದರಿಂದ ರೈಲ್ವೆ ಬುಕಿಂಗ್ ಇತ್ಯಾದಿಗಳಿಗಾಗಿ ದೊಡ್ಡ ನಗರಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬಹುದಾಗಿದ್ದು ಇದರಿಂದ ಜನರಿಗೆ ನೆರವಾಗುತ್ತದೆ ಎಂದರು. ಅಂತಿಮವಾಗಿ ಪ್ರಧಾನಮಂತ್ರಿಯವರು ಯಾವುದೇ ಮಗು ಶಾಲೆ ತೊರೆಯದಂತೆ ಮತ್ತು ಅರ್ಹತೆ ಹೊಂದಿರುವ ಯಾವುದೇ ಮಗು ಶಾಲೆಯಲ್ಲಿ ಅಥವಾ ಅಂಗಮನವಾಡಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕೆಂದು ಪಂಚಾಯತ್ ಸದಸ್ಯರಿಗೆ ಸಲಹೆ ನೀಡಿದರು. ಈ ನಿಟ್ಟಿನಲ್ಲಿ ಪಂಚಾಯತ್ ಸದಸ್ಯರು ವಚನ ನೀಡಬೇಕೆಂದು ಪ್ರಧಾನಿ ಕೋರಿದರು. ಭಾರಿ ಕರತಾಡನದೊಂದಿಗೆ ಸದಸ್ಯರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.
कोरोना के कारण दो सालों तक खेल महाकुंभ पर ब्रेक लगा रहा।
— PMO India (@PMOIndia) March 12, 2022
लेकिन भूपेन्द्र भाई ने जिस भव्यता के साथ इस आयोजन को शुरू किया है, उसने युवा खिलाड़ियों को नए जोश से भर दिया है: PM @narendramodi
मुझे याद है, 12 साल पहले 2010 में गुजरात के मुख्यमंत्री के नाते खेल महाकुंभ की शुरुआत की थी, तो वो मेरे लिए एक सपने के बीज बोने जैसा था।
— PMO India (@PMOIndia) March 12, 2022
उस बीज को मैं आज इतने विशाल वटवृक्ष का आकार लेते देख रहा हूँ: PM @narendramodi
खिलाड़ियों के चयन में पारदर्शिता की कमी भी एक बड़ा फैक्टर थी।
— PMO India (@PMOIndia) March 12, 2022
खिलाड़ियों की सारी प्रतिभा परेशानियों से जूझने में ही निकल जाती थी।
उस भंवर से निकलकर भारत के युवा आज आकाश छू रहे हैं।
गोल्ड और सिल्वर की चमक देश के आत्मविश्वास को चमका रही है: PM @narendramodi
टोक्यो Olympics में भारत ने पहली बार 7 मेडल जीते हैं।
— PMO India (@PMOIndia) March 12, 2022
यही रिकॉर्ड भारत के बेटे-बेटियों ने टोक्यो Paralympics में भी बनाया।
भारत ने इस वैश्विक प्रतियोगिता में 19 मेडल्स जीते।
लेकिन, ये तो अभी केवल शुरुआत है।
न हिंदुस्तान रुकने वाला है, न थकने वाला है: PM @narendramodi
आज स्टार्टअप इंडिया से लेकर स्टैंडअप इंडिया तक!
— PMO India (@PMOIndia) March 12, 2022
मेक इन इंडिया से लेकर आत्मनिर्भर भारत और ‘वोकल फॉर लोकल’ तक!
नए भारत के हर अभियान की ज़िम्मेदारी भारत के युवाओं ने खुद आगे बढ़कर उठाई है।
हमारे युवाओं ने भारत के सामर्थ्य को साबित करके दिखाया है: PM @narendramodi
मेरी आप सब युवाओं के लिए भी सलाह है- सफलता के लिए कभी कोई शॉर्टकट मत खोजिएगा!
— PMO India (@PMOIndia) March 12, 2022
सफलता का केवल एक ही मंत्र है- ‘Long term planning, और continuous commitment’.
न एक जीत कभी हमारा आखिरी पड़ाव हो सकती है, न एक हार: PM @narendramodi
हमने देश की प्रतिभाओं को पहचानना, उन्हें हर जरूरी सहयोग देना शुरू किया।
— PMO India (@PMOIndia) March 12, 2022
प्रतिभा होने के बावजूद हमारे युवा ट्रेनिंग के अभाव में पीछे रह जाते थे।
आज बेहतर से बेहतर ट्रेनिंग सुविधाएं खिलाड़ियों को दी जा रही हैं: PM @narendramodi
2018 में हमने मणिपुर में देश की पहली नेशनल स्पोर्ट्स यूनिवर्सिटी की स्थापना की।
— PMO India (@PMOIndia) March 12, 2022
स्पोर्ट्स में higher education के लिए यूपी में भी मेजर ध्यानचंद स्पोर्ट्स यूनिवर्सिटी शुरू होने जा रही है: PM @narendramodi