ಸುಮಾರು ರೂ.980 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಓಖಾ ಮುಖ್ಯಭೂಮಿ ಮತ್ತು ಬೇಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುವ ಸುದರ್ಶನ ಸೇತುವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ಆಧಾರಿತ ಸೇತುವೆಯಾಗಿದೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ:
“ಸುದರ್ಶನ ಸೇತು ಓಖಾದ ಪ್ರಧಾನ ಭೂಪ್ರದೇಶದಿಂದ ಮತ್ತು ಬೇಂಟ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುತ್ತದೆ. ಸುಮಾರು ರೂ. 980 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 2.32 ಕಿಮೀ ಉದ್ದವಿದ್ದು, ದೇಶದಲ್ಲೇ ಅತಿ ಉದ್ದದ ಕೇಬಲ್-ಆಧಾರಿತ ಸೇತುವೆಯಾಗಿದೆ.
"ಸುದರ್ಶನ್ ಸೇತು ಅದ್ಬುತವಾಗಿದೆ!"
Delighted to inaugurate Sudarshan Setu today - a bridge that connects lands and people. It stands vibrantly as a testament of our commitment to development and progress. pic.twitter.com/G2eZEsa7EY
— Narendra Modi (@narendramodi) February 25, 2024
Stunning Sudarshan Setu! pic.twitter.com/VpNlb95WMe
— Narendra Modi (@narendramodi) February 25, 2024
ಹಿನ್ನೆಲೆ
ಸುದರ್ಶನ ಸೇತು ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿ ಮತ್ತು ಎರಡೂ ಬದಿಗಳಲ್ಲಿ ಭಗವಾನ್ ಕೃಷ್ಣನ ಚಿತ್ರಗಳನ್ನು ಒಳಗೊಂಡಿದೆ. ಇದು ಫುಟ್ ಪಾತ್ ನ ಮೇಲಿನ ಭಾಗಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿದ್ದು, ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಈ ಸೇತುವೆಯು ಸಾರಿಗೆಯನ್ನು ಸುಗಮಗೊಳಿಸುತ್ತದೆ ಮತ್ತು ದ್ವಾರಕಾ ಮತ್ತು ಬೇಂಟ್-ದ್ವಾರಕಾ ನಡುವೆ ಪ್ರಯಾಣಿಸುವ ಭಕ್ತರ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸೇತುವೆಯ ನಿರ್ಮಾಣದ ಮೊದಲು, ಯಾತ್ರಾರ್ಥಿಗಳು ಬೇಂಟ್ ದ್ವಾರಕಾವನ್ನು ತಲುಪಲು ದೋಣಿ ಸಾರಿಗೆಯನ್ನು ಅವಲಂಬಿಸಬೇಕಾಗಿತ್ತು. ಈ ಸಾಂಪ್ರದಾಯಿಕ ಸೇತುವೆಯು ದೇವಭೂಮಿ ದ್ವಾರಕಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿಯೂ ಕಾರ್ಯನಿರ್ವಹಿಸಲಿದೆ.
ಪ್ರಧಾನಮಂತ್ರಿಯವರೊಂದಿಗೆ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಸಂಸದರಾದ ಶ್ರೀ ಸಿ.ಆರ್. ಪಾಟೀಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.