ಗುಜರಾತ್ ನ ಸೂರತ್ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಿದರು. ಅವರು ಹೊಸ ಟರ್ಮಿನಲ್ ಕಟ್ಟಡವನ್ನು ಸಂದರ್ಶಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;
"ಸೂರತ್ ನಲ್ಲಿನ ಹೊಸ ಏಕೀಕೃತ ಟರ್ಮಿನಲ್ ಕಟ್ಟಡವು ನಗರದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಪ್ರಗತಿಯನ್ನು ಸೂಚಿಸುತ್ತದೆ. ಈ ಅತ್ಯಾಧುನಿಕ ಸೌಲಭ್ಯವು ಉತ್ತಮ ಪ್ರಯಾಣದ ಅನುಭವವನ್ನು ಹೆಚ್ಚಿಸುವುದಲ್ಲದೆ ಆರ್ಥಿಕ ಬೆಳವಣಿಗೆ, ಪ್ರವಾಸೋದ್ಯಮ ಮತ್ತು ಸಂಪರ್ಕಗಳನ್ನು ಕೂಡಾ ಹೆಚ್ಚಿಸುತ್ತದೆ.
The new integrated terminal building in Surat marks a significant leap in the city's infrastructure development. This state-of-the-art facility will not only enhance the travel experience but also boost economic growth, tourism and connectivity. pic.twitter.com/3TjFz8BM7w
— Narendra Modi (@narendramodi) December 17, 2023
ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಸೇರಿದಂತೆ ಇತರರು ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಜೊತೆಗಿದ್ದರು.
ಹಿನ್ನೆಲೆ
ಟರ್ಮಿನಲ್ ಕಟ್ಟಡವು 1200 ದೇಶೀಯ ಪ್ರಯಾಣಿಕರು ಮತ್ತು 600 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಜನಸಂದಣಿಯ ಸಮಯಗಳಲ್ಲಿ ಸುಗಮವಾಗಿ ನಿರ್ವಹಿಸಲು ಸಜ್ಜುಗೊಂಡಿದೆ ಮತ್ತು ಜನಸಂದಣಿಯ (ಪೀಕ್ ಅವರ್) ಸಾಮರ್ಥ್ಯವನ್ನು 3000 ಪ್ರಯಾಣಿಕರಿಗೆ ಹೆಚ್ಚಿಸುವ ಅವಕಾಶವನ್ನು ಹೊಂದಿದೆ ಮತ್ತು ವಾರ್ಷಿಕ ನಿರ್ವಹಣೆ ಸಾಮರ್ಥ್ಯ 55 ಲಕ್ಷ ಪ್ರಯಾಣಿಕರಿಗೆ ಹೆಚ್ಚಾಗಲಿದೆ. ಟರ್ಮಿನಲ್ ಕಟ್ಟಡವು ಸೂರತ್ ನಗರಕ್ಕೆ ಹೆಬ್ಬಾಗಿಲು ಆಗಿರುವುದರಿಂದ, ಅದರ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಸತ್ವವು ಆಂತರಿಕ ಮತ್ತು ಬಾಹ್ಯ ಎರಡರಲ್ಲೂ ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ, ಪ್ರವಾಸಿಗರಿಗೆ ಸ್ಥಳೀಯತೆಯ ಪ್ರಜ್ಞೆ-ಅನುಭೂತಿಯನ್ನು ಸೃಷ್ಟಿಸುತ್ತದೆ.
ನವೀಕರಿಸಿದ ಟರ್ಮಿನಲ್ ಕಟ್ಟಡದ ಮುಂಭಾಗವು ಸೂರತ್ ನಗರದ 'ರಾಂಡರ್' ಪ್ರದೇಶದ ಹಳೆಯ ಮನೆಗಳ ಶ್ರೀಮಂತ ಮತ್ತು ಸಾಂಪ್ರದಾಯಿಕ ಮರಗೆಲಸದೊಂದಿಗೆ ಪ್ರಯಾಣಿಕರ ಅನುಭವವನ್ನು ಉತ್ಕೃಷ್ಟಗೊಳಿಸುವ ಗುರಿಯನ್ನು ಹೊಂದಿದೆ. ಡಬಲ್ ಇನ್ಸುಲೇಟೆಡ್ ರೂಫಿಂಗ್ ಸಿಸ್ಟಮ್, ಶಕ್ತಿ ಉಳಿತಾಯಕ್ಕಾಗಿ ಕ್ಯಾನೋಪಿಗಳು, ಕಡಿಮೆ ಶಾಖದ ಲಾಭ ಡಬಲ್ ಗ್ಲೇಜಿಂಗ್ ಘಟಕ, ಮಳೆ ನೀರು ಕೊಯ್ಲು, ನೀರು ಸಂಸ್ಕರಣಾ ಘಟಕ, ಒಳಚರಂಡಿ ಸಂಸ್ಕರಣಾ ಘಟಕ, ಇತರ ಸೌರ ವಿದ್ಯುತ್ ಸ್ಥಾವರಕ್ಕಾಗಿ ಭೂಚೌಕಟ್ಟು ಮತ್ತು ಮರುಬಳಕೆಯ ನೀರಿನ ಬಳಕೆಯಂತಹ ವಿವಿಧ ಸಮರ್ಥನೀಯ ವೈಶಿಷ್ಟ್ಯಗಳನ್ನು ವಿಮಾನ ನಿಲ್ದಾಣದ ಗೃಹ IV ಕಂಪ್ಲೈಂಟ್ ಹೊಸ ಟರ್ಮಿನಲ್ ಕಟ್ಟಡವು ಹೊಂದಿದೆ.