ಮುಂಬೈ ಮೆಟ್ರೋ ಲೈನ್ 3 ರ ಮೊದಲನೇ ಹಂತದ ಆರೇ ಜೆ ವಿ ಎಲ್‌ ಆರ್‌ ನಿಂದ ಬಿಕೆಸಿ ವಿಭಾಗವನ್ನು ಉದ್ಘಾಟಿಸಿದರು
ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆ ಮತ್ತು ಎಲಿವೇಟೆಡ್ ಈಸ್ಟರ್ನ್ ಫ್ರೀವೇ ವಿಸ್ತರಣೆಗೆ ಶಂಕುಸ್ಥಾಪನೆ ಮಾಡಿದರು
ನವಿ ಮುಂಬೈ ವಿಮಾನ ನಿಲ್ದಾಣದ ಪ್ರಭಾವದ ಅಧಿಸೂಚಿತ ಪ್ರದೇಶ (NAINA) ಯೋಜನೆಗೆ ಅಡಿಪಾಯ ಹಾಕಿದರು
ಥಾಣೆ ಮಹಾನಗರ ಪಾಲಿಕೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು
ಭಾರತದ ಪ್ರಗತಿಯಲ್ಲಿ ಮಹಾರಾಷ್ಟ್ರ ಪ್ರಮುಖ ಪಾತ್ರ ವಹಿಸುತ್ತದೆ, ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸಲು ಥಾಣೆಯಿಂದ ಅನೇಕ ಪರಿವರ್ತಕ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ: ಪ್ರಧಾನಮಂತ್ರಿ
ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ, ನಿರ್ಣಯ ಮತ್ತು ಉಪಕ್ರಮವು ವಿಕಸಿತ ಭಾರತದ ಗುರಿಗೆ ಸಮರ್ಪಿತವಾಗಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಥಾಣೆಯಲ್ಲಿ ಸುಮಾರು 32,800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರವು ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದೆ ಮತ್ತು ಇದು ಕೇವಲ ಮಹಾರಾಷ್ಟ್ರ ಮತ್ತು ಮರಾಠಿ ಭಾಷೆಗೆ ಗೌರವವಲ್ಲ, ಭಾರತಕ್ಕೆ ಶ್ರೀಮಂತ ಜ್ಞಾನ, ತತ್ವಜ್ಞಾನ, ಆಧ್ಯಾತ್ಮಿಕತೆ ಮತ್ತು ಸಾಹಿತ್ಯವನ್ನು ನೀಡಿದ ಸಂಪ್ರದಾಯಕ್ಕೆ ಸಲ್ಲಿಸಿದ ಗೌರವವಾಗಿದೆ ಎಂದು ಒತ್ತಿ ಹೇಳಿದರು.. ಜಗತ್ತಿನಾದ್ಯಂತ ಇರುವ ಎಲ್ಲಾ ಮರಾಠಿ ಭಾಷಿಗರನ್ನು ಶ್ರೀ ಮೋದಿ ಅಭಿನಂದಿಸಿದರು.

ನವರಾತ್ರಿಯ ಸಂದರ್ಭದಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಉಲ್ಲೇಖಿಸಿದ ಪ್ರಧಾನಿ ಇಂದು ವಾಶಿಮ್‌ಗೆ ಭೇಟಿ ನೀಡಿದರು, ಅಲ್ಲಿ ಅವರು ದೇಶದ 9.5 ಕೋಟಿ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯನ್ನು ವಿತರಿಸಿದರು ಮತ್ತು ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಮಹಾರಾಷ್ಟ್ರದ ಆಧುನಿಕ ಅಭಿವೃದ್ಧಿಯತ್ತ ಥಾಣೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಾಗುತ್ತಿದೆ ಮತ್ತು ಇಂದಿನ ಸಂದರ್ಭವು ರಾಜ್ಯದ ಉಜ್ವಲ ಭವಿಷ್ಯದ ಒಂದು ನೋಟವಾಗಿದೆ ಎಂದು ಅವರು ಹೇಳಿದರು. ಇಂದು ರೂ 30,000 ಕೋಟಿಗೂ ಹೆಚ್ಚು ಮೌಲ್ಯದ ಮುಂಬೈ ಎಂಎಂಆರ್ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ರೂ 12,000 ಕೋಟಿಗೂ ಹೆಚ್ಚು ಮೌಲ್ಯದ ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು. ಇಂದಿನ ಅಭಿವೃದ್ಧಿ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಇದು ಮುಂಬೈ ಮತ್ತು ಥಾಣೆಗೆ ಆಧುನಿಕ ಗುರುತನ್ನು ನೀಡುತ್ತದೆ ಎಂದು ಹೇಳಿದರು.

 

ಮುಂಬೈನ ಆರೆಯಿಂದ ಬಿಕೆಸಿವರೆಗಿನ ಆಕ್ವಾ ಲೈನ್ ಮೆಟ್ರೋ ಕೂಡ ಇಂದಿನಿಂದ ಪ್ರಾರಂಭವಾಗುತ್ತಿದೆ ಎಂದು ಪ್ರಧಾನಿ ಘೋಷಿಸಿದರು. ಮುಂಬೈನ ಜನರು ಈ ಮೆಟ್ರೋ ಮಾರ್ಗಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು ಎಂದು ಅವರು ಹೇಳಿದರು. ಆಕ್ವಾ ಮೆಟ್ರೋ ಲೈನ್‌ ಗೆ ನೀಡಿದ ಬೆಂಬಲಕ್ಕಾಗಿ ಜಪಾನ್ ಸರ್ಕಾರ ಮತ್ತು ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೆಐಸಿಎ) ಗೆ ಶ್ರೀ ಮೋದಿ ವಿಶೇಷವಾಗಿ ಧನ್ಯವಾದ ಹೇಳಿದರು. ಹಾಗಾಗಿ ಈ ಮೆಟ್ರೋ ಮಾರ್ಗ ಭಾರತ-ಜಪಾನ್ ಸೌಹಾರ್ದದ ಪ್ರತೀಕವೂ ಹೌದು ಎಂದು ಅವರು ಹೇಳಿದರು.

ಶ್ರೀ ಬಾಳಾಸಾಹೇಬ್ ಠಾಕ್ರೆ ಅವರು ಥಾಣೆಯೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು ಎಂದು ಶ್ರೀ ಮೋದಿ ಹೇಳಿದರು. ಥಾಣೆ ದಿವಂಗತ ಶ್ರೀ ಆನಂದ್ ದಿಘೆ ಅವರ ನಗರವೂ ​​ಆಗಿದೆ ಎಂದು ಅವರು ಹೇಳಿದರು. ಥಾಣೆ ಭಾರತಕ್ಕೆ ಮೊದಲ ಮಹಿಳಾ ವೈದ್ಯೆ ಡಾ.ಆನಂದಿ ಭಾಯಿ ಜೋಶಿಯನ್ನು ನೀಡಿತು ಎಂದು ಮೋದಿ ಹೇಳಿದರು. ಇಂದು ಅಭಿವೃದ್ಧಿ ಕಾರ್ಯಗಳಿಂದ ಈ ಎಲ್ಲ ದೂರದೃಷ್ಟಿಯ ಕನಸುಗಳನ್ನು ನನಸು ಮಾಡುತ್ತಿದ್ದೇವೆ ಎಂದರು. ಇಂದು ಆರಂಭವಾದ ಅಭಿವೃದ್ಧಿ ಕಾರ್ಯಗಳಿಗಾಗಿ ಥಾಣೆ, ಮುಂಬೈ ಮತ್ತು ಮಹಾರಾಷ್ಟ್ರದ ಜನತೆಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

"ವಿಕಸಿತ ಭಾರತ ಇಂದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ನಮ್ಮ ಸರ್ಕಾರದ ಪ್ರತಿಯೊಂದು ನಿರ್ಧಾರ, ನಿರ್ಣಯ ಮತ್ತು ಕನಸು ವಿಕಸಿತ ಭಾರತಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದರು.ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಮುಂಬೈ, ಥಾಣೆ ಮುಂತಾದ ನಗರಗಳನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ಅಗತ್ಯ ಎಂದು ಪ್ರಧಾನಿ ಹೇಳಿದರು. ಹಿಂದಿನ ಸರ್ಕಾರಗಳ ಲೋಪದೋಷಗಳನ್ನು ನಿಭಾಯಿಸುವ ಜೊತೆಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾಗಿರುವುದರಿಂದ ಸರ್ಕಾರ ತನ್ನ ಪ್ರಯತ್ನವನ್ನು ಇಮ್ಮಡಿಗೊಳಿಸಬೇಕಾಗಿದೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರಗಳ ಬಗ್ಗೆ ಮಾತನಾಡಿದ ಅವರು, ಮುಂಬೈನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ವಾಹನದಟ್ಟಣೆಯ ಹೊರತಾಗಿಯೂ, ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪರಿಹಾರಗಳನ್ನು ಕೈಗೊಳ್ಳಲಿಲ್ಲ. ಬೆಳೆಯುತ್ತಿರುವ ಸಮಸ್ಯೆಗಳಿಂದಾಗಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ಸ್ತಬ್ಧವಾಗುವ ಭೀತಿ ಎದುರಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದೆ ಮತ್ತು ಇಂದು 300 ಕಿಲೋಮೀಟರ್‌ ಗಳ ಮೆಟ್ರೋ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಕರಾವಳಿ ರಸ್ತೆಯು ಮೆರೈನ್ ಡ್ರೈವ್‌ ನಿಂದ ಬಾಂದ್ರಾಕ್ಕೆ ಪ್ರಯಾಣಿಸಲು ತೆಗೆದುಕೊಳ್ಳುವ ಸಮಯವನ್ನು 12 ನಿಮಿಷಗಳಿಗೆ ಕಡಿಮೆಗೊಳಿಸಿದೆ, ಅಟಲ್ ಸೇತು ಉತ್ತರ ಮತ್ತು ದಕ್ಷಿಣ ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಆರೆಂಜ್ ಗೇಟ್ ಟು ಮರೈನ್ ಡ್ರೈವ್ ಭೂಗತ ಸುರಂಗ ಯೋಜನೆ ಕೂಡ ವೇಗ ಪಡೆದುಕೊಂಡಿದೆ ಎಂದು ಅವರು ಹೇಳಿದರು. ನಗರದ ವಿವಿಧ ಯೋಜನೆಗಳಾದ ವರ್ಸೋವಾದಿಂದ ಬಾಂದ್ರಾ ಸಮುದ್ರ ಸೇತುವೆ ಯೋಜನೆ, ಪೂರ್ವ ಮುಕ್ತ ಮಾರ್ಗ, ಥಾಣೆ-ಬೊರಿವಲಿ ಸುರಂಗ, ಥಾಣೆ ವರ್ತುಲ ಮೆಟ್ರೋ ರೈಲು ಯೋಜನೆಗಳನ್ನು ಪಟ್ಟಿ ಮಾಡಿದ ಶ್ರೀ ಮೋದಿ, ಅಭಿವೃದ್ಧಿ ಯೋಜನೆಗಳು ಮುಂಬೈನ ಮುಖವನ್ನು ಬದಲಾಯಿಸುತ್ತಿವೆ ಮತ್ತು ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳ ಸಮಸ್ಯೆಗಳನ್ನು ಕಡಿಮೆ ಮಾಡುವ ಮೂಲಕ ಮುಂಬೈ ಜನರಿಗೆ ಅಪಾರ ಪ್ರಯೋಜನವನ್ನು ನೀಡುತ್ತವೆ ಎಂದು ಒತ್ತಿ ಹೇಳಿದರು. ಈ ಯೋಜನೆಗಳು ಕೈಗಾರಿಕೆಗಳ ಬೆಳವಣಿಗೆಯೊಂದಿಗೆ ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.

 

ಪ್ರಸ್ತುತ ರಾಜ್ಯ ಸರ್ಕಾರವು ಮಹಾರಾಷ್ಟ್ರದ ಅಭಿವೃದ್ಧಿಯನ್ನು ತನ್ನ ಏಕೈಕ ಉದ್ದೇಶವೆಂದು ಪರಿಗಣಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಹಿಂದಿನ ಸರ್ಕಾರಗಳ ನುಣುಚಿಕೊಳ್ಳುವ ಧೋರಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಮುಂಬೈ ಮೆಟ್ರೋ 2.5 ವರ್ಷಗಳಷ್ಟು ವಿಳಂಬವಾಯಿತು ಮತ್ತು ಅದರ ವೆಚ್ಚ 14,000 ಕೋಟಿ ರೂ.ಹೆಚ್ಚಾಯಿತು. ಈ ಹಣ ಮಹಾರಾಷ್ಟ್ರದ ಕಷ್ಟಪಟ್ಟು ದುಡಿಯುವ ತೆರಿಗೆದಾರರಿಗೆ ಸೇರಿದ್ದು ಎಂದು ಪ್ರಧಾನಿ ಒತ್ತಿ ಹೇಳಿದರು.

ಅವರು ಅಭಿವೃದ್ಧಿ ವಿರೋಧಿಗಳು ಎಂಬುದಕ್ಕೆ ಹಿಂದಿನ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಸಾಕ್ಷಿಯಾಗಿದೆ ಎಂದು ಹೇಳಿದ ಪ್ರಧಾನಿ, ಅಟಲ್ ಸೇತು ವಿರುದ್ಧ ಪ್ರತಿಭಟನೆಗಳು, ಮುಂಬೈ-ಅಹಮದಾಬಾದ್ ಬುಲೆಟ್ ರೈಲು ನಿಲ್ಲಿಸುವ ಪಿತೂರಿ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಜಲಸಂಬಂಧಿತ ಯೋಜನೆಗಳನ್ನು ಸ್ಥಗಿತಗೊಳಿಸಿದ ಉದಾಹರಣೆಗಳನ್ನು ನೀಡಿದರು. ಹಿಂದಿನದರಿಂದ ಪಾಠಗಳನ್ನು ಕಲಿಯುವಂತೆ ಸಲಹೆ ನೀಡಿದ ಪ್ರಧಾನಮಂತ್ರಿಯವರು ತುಷ್ಟೀಕರಣ ರಾಜಕಾರಣದಲ್ಲಿ ತೊಡಗುವವರ ಬಗ್ಗೆ ಎಚ್ಚರಿಕೆಯಿಂದಿರುವಂತೆ ತಿಳಿಸಿದರು.

 

ದೇಶ ಮತ್ತು ಮಹಾರಾಷ್ಟ್ರಕ್ಕಾಗಿ ಪ್ರಾಮಾಣಿಕ ಮತ್ತು ಸ್ಥಿರ ನೀತಿಗಳನ್ನು ಹೊಂದಿರುವ ಸರ್ಕಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಿರುವುದು ಮಾತ್ರವಲ್ಲದೆ ಸಾಮಾಜಿಕ ಮೂಲಸೌಕರ್ಯಗಳನ್ನು ಬಲಪಡಿಸಿದೆ ಎಂದು ಅವರು ಹೇಳಿದರು. “ನಾವು ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ರೈಲು ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ದಾಖಲೆಯನ್ನು ನಿರ್ಮಿಸಿದ್ದೇವೆ ಮತ್ತು 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ. ನಾವು ಇನ್ನೂ ದೇಶವನ್ನು ಇನ್ನಷ್ಟು ಮುಂದೆ ಕೊಂಡೊಯ್ಯಬೇಕಾಗಿದೆ” ಎಂದು ಹೇಳಿದ ಪ್ರಧಾನಿ, ಮಹಾರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಈ ಸಂಕಲ್ಪಕ್ಕೆ ಬೆಂಬಲವಾಗಿ ನಿಂತಿದ್ದಾರೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಸಿಪಿ ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಈ ಪ್ರದೇಶದಲ್ಲಿ ನಗರ ಚಲನಶೀಲತೆಯನ್ನು ಹೆಚ್ಚಿಸುವ ಪ್ರಮುಖ ಪ್ರಯತ್ನದಲ್ಲಿ, ಪ್ರಧಾನಮಂತ್ರಿಯವರು ಪ್ರಮುಖ ಮೆಟ್ರೋ ಮತ್ತು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು 14,120 ಕೋಟಿ ರೂಪಾಯಿ ವೆಚ್ಚದ ಮುಂಬೈ ಮೆಟ್ರೋ ಲೈನ್ - 3 ರ ಬಿಕೆಸಿಯಿಂದ ಆರೆ ಜೆ ವಿ ಎಲ್‌ ಆರ್ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು. ಈ ವಿಭಾಗವು 10 ನಿಲ್ದಾಣಗಳನ್ನು ಹೊಂದಿರುತ್ತದೆ, ಅದರಲ್ಲಿ 9 ಭೂಗತವಾಗಿರುತ್ತವೆ. ಮುಂಬೈ ಮೆಟ್ರೋ ಲೈನ್ - 3 ಪ್ರಮುಖ ಸಾರ್ವಜನಿಕ ಸಾರಿಗೆ ಯೋಜನೆಯಾಗಿದ್ದು ಅದು ಮುಂಬೈ ನಗರ ಮತ್ತು ಉಪನಗರಗಳ ನಡುವಿನ ಪ್ರಯಾಣವನ್ನು ಸುಧಾರಿಸುತ್ತದೆ. ಸಂಪೂರ್ಣ ಕಾರ್ಯಾಚರಣೆಯ ಮಾರ್ಗ-3 ಪ್ರತಿದಿನ ಸುಮಾರು 12 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುವ ನಿರೀಕ್ಷೆಯಿದೆ.

ಸುಮಾರು 12,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಥಾಣೆ ಇಂಟಿಗ್ರಲ್ ರಿಂಗ್ ಮೆಟ್ರೋ ರೈಲು ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. 20 ಎತ್ತರಿಸಿದ ಮತ್ತು 2 ಭೂಗತ ನಿಲ್ದಾಣಗಳೊಂದಿಗೆ ಯೋಜನೆಯ ಒಟ್ಟು ಉದ್ದ 29 ಕಿ.ಮೀ. ಈ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಯು ಮಹಾರಾಷ್ಟ್ರದ ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರವಾದ ಥಾಣೆಯ ಬೆಳೆಯುತ್ತಿರುವ ಸಾರಿಗೆ ಅಗತ್ಯಗಳನ್ನು ಪರಿಹರಿಸುವ ಪ್ರಮುಖ ಉಪಕ್ರಮವಾಗಿದೆ.

 

ಸುಮಾರು 3,310 ಕೋಟಿ ರೂಪಾಯಿ ಮೌಲ್ಯದ ಛೇಡಾ ನಗರದಿಂದ ಆನಂದ್ ನಗರ, ಥಾಣೆಯವರೆಗೆ ಎಲಿವೇಟೆಡ್ ಈಸ್ಟರ್ನ್ ಫ್ರೀವೇ ವಿಸ್ತರಣೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಈ ಯೋಜನೆಯು ದಕ್ಷಿಣ ಮುಂಬೈನಿಂದ ಥಾಣೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.

ಇದಲ್ಲದೆ, ಪ್ರಧಾನಿಯವರು ಸುಮಾರು 2,550 ಕೋಟಿ ರೂಪಾಯಿ ವೆಚ್ಚದ ನವಿ ಮುಂಬೈ ವಿಮಾನ ನಿಲ್ದಾಣ ಪ್ರಭಾವದ ಅಧಿಸೂಚಿತ ಪ್ರದೇಶ (NAINA) ಯೋಜನೆಯ ಹಂತ-1 ಕ್ಕೆ ಅಡಿಗಲ್ಲು ಹಾಕಿದರು. ಯೋಜನೆಯು ಪ್ರಮುಖ ರಸ್ತೆಗಳು, ಸೇತುವೆಗಳು, ಮೇಲ್ಸೇತುವೆಗಳು, ಅಂಡರ್‌ಪಾಸ್‌ ಗಳು ಮತ್ತು ಸಮಗ್ರ ಉಪಯುಕ್ತತೆಯ ಮೂಲಸೌಕರ್ಯಗಳ ನಿರ್ಮಾಣವನ್ನು ಒಳಗೊಂಡಿದೆ.

ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಥಾಣೆ ಮಹಾನಗರಪಾಲಿಕೆ ಕಟ್ಟಡಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಥಾಣೆ ಮಹಾನಗರಪಾಲಿಕೆಯ ಬಹುಮಹಡಿ ಆಡಳಿತ ಕಟ್ಟಡವು ಮಹಾನಗರ ಪಾಲಿಕೆಯ ಹೆಚ್ಚಿನ ಕಚೇರಿಗಳಿಗೆ ಸ್ಥಳಾವಕಾಶ ನೀಡುವ ಮೂಲಕ ಥಾಣೆಯ ನಾಗರಿಕರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi