QuoteToday, Indian Railways is cleaner than ever. The broad gauge rail network has been made safer than ever before by unmanned gates: PM Modi
QuoteOpposition parties spreading fake news that MSP will be withdrawn: PM Modi on new farm bill
QuoteI assure the farmers that the MSP will continue in future the way it is happening today. Government will continue purchasing their produces: PM

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಿಹಾರದಲ್ಲಿ ಹೊಸ ರೈಲು ಮಾರ್ಗಗಳು ಮತ್ತು ವಿದ್ಯುದ್ದೀಕರಣ ಯೋಜನೆಗಳನ್ನೂ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಬಿಹಾರದಲ್ಲಿ ರೈಲು ಸಂಪರ್ಕ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೋಸಿ ಮಹಾಸೇತು ಮತ್ತು ಕಿಯುಲ್ ಸೇತುವೆಯ ಉದ್ಘಾಟನೆ, ವಿದ್ಯುದ್ದೀಕರಣ ಯೋಜನೆಗಳು, ರೈಲ್ವೆಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಉತ್ತೇಜನ ಮತ್ತು ಹೊಸ ಉದ್ಯೋಗ ಸೃಷ್ಟಿ ಯೋಜನೆಗಳಂತಹ ಸುಮಾರು 3000 ಕೋಟಿ ರೂ. ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ. ಈ ಯೋಜನೆಗಳು ಬಿಹಾರದ ರೈಲು ಜಾಲವನ್ನು ಉತ್ತಮಪಡಿಸುವುದಲ್ಲದೆ ಪಶ್ಚಿಮ ಬಂಗಾಳ ಮತ್ತು ಪೂರ್ವ ಭಾರತದ ರೈಲು ಸಂಪರ್ಕವನ್ನೂ ಬಲಪಡಿಸುತ್ತವೆ ಎಂದರು.

ಬಿಹಾರ ಸೇರಿದಂತೆ ಪೂರ್ವ ಭಾರತದ ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಹೊಸ ಮತ್ತು ಆಧುನಿಕ ಸೌಲಭ್ಯಗಳನ್ನು ಪಡೆದ ಬಿಹಾರದ ಜನರನ್ನು ಪ್ರಧಾನಿ ಅಭಿನಂದಿಸಿದರು. ರಾಜ್ಯದಲ್ಲಿ ಅನೇಕ ನದಿಗಳು ಹಾದು ಹೋಗುವುದರಿಂದ ಬಿಹಾರದ ಅನೇಕ ಭಾಗಗಳು ಪರಸ್ಪರ ಸಂಪರ್ಕ ಕಡಿದುಕೊಳ್ಳುತ್ತವೆ. ಇದರಿಂದಾಗಿ ಜನರು ಸುತ್ತಿ ಬಳಸಿ ದೀರ್ಘ ಪ್ರಯಾಣವನ್ನು ಮಾಡಬೇಕಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ನಾಲ್ಕು ವರ್ಷಗಳ ಹಿಂದೆ ಪಾಟ್ನಾ ಮತ್ತು ಮುಂಗೆರ್‌ನಲ್ಲಿ ಎರಡು ಮಹಾ ಸೇತುವೆಗಳ ನಿರ್ಮಾಣವನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು. ಈಗ ಈ ಎರಡು ರೈಲು ಸೇತುವೆಗಳ ಕಾರ್ಯಾರಂಭದಿಂದಾಗಿ, ಉತ್ತರ ಮತ್ತು ದಕ್ಷಿಣ ಬಿಹಾರದ ನಡುವಿನ ಪ್ರಯಾಣವು ಸುಗಮಗೊಂಡಿದೆ ಮತ್ತು ಇದು ವಿಶೇಷವಾಗಿ ಉತ್ತರ ಬಿಹಾರದಲ್ಲಿ ಅಭಿವೃದ್ಧಿಗೆ ಹೊಸ ಆವೇಗವನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು.

|

ಎಂಟೂವರೆ ದಶಕಗಳ ಹಿಂದೆ ಸಂಭವಿಸಿದ ತೀವ್ರ ಭೂಕಂಪವು ಮಿಥಿಲಾ ಮತ್ತು ಕೋಸಿ ಪ್ರದೇಶವನ್ನು ಪ್ರತ್ಯೇಕಿಸಿತ್ತು ಮತ್ತು ಇದು ಕೊರೊನಾದಂತಹ ಸಾಂಕ್ರಾಮಿಕ ರೋಗದ ನಡುವೆ ಎರಡೂ ಪ್ರದೇಶಗಳನ್ನು ಪರಸ್ಪರ ಜೋಡಿಸಲಾಗುತ್ತಿರುವುದು ಕಾಕತಾಳೀಯವಾಗಿದೆ ಎಂದು ಪ್ರಧಾನಿ ಹೇಳಿದರು. ಸೇತುವೆ ನಿರ್ಮಾಣದಲ್ಲಿ ಸಹ ತೊಡಗಿಸಿಕೊಂಡಿದ್ದ ವಲಸೆ ಕಾರ್ಮಿಕರ ಕಠಿಣ ಪರಿಶ್ರಮದಿಂದಾಗಿ ಇಂದು ಸುಪೌಲ್–ಅಸನ್‌ಪುರ–ಕುಪಾಹಾ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಅವರು ಹೇಳಿದರು. ಮಿಥಿಲಾ ಮತ್ತು ಕೋಸಿ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಹರಿಸಲು 2003 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮತ್ತು ಶ್ರೀ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದಾಗ ಈ ಹೊಸ ಕೋಸಿ ರೈಲು ಮಾರ್ಗವನ್ನು ರೂಪಿಸಲಾಯಿತು ಎಂದು ಅವರು ಹೇಳಿದರು. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ತ್ವರಿತವಾಗಿ ನಡೆಸಲಾಯಿತು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುಪೌಲ್–ಅಸನ್‌ಪುರ್ ಕುಪಾಹಾ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ಸುಪೌಲ್–ಅಸನ್‌ಪುರ ನಡುವೆ ಕೋಸಿ ಮಹಾ ಸೇತುವೆ ಮೂಲಕ ಪ್ರಾರಂಭವಾಗುವ ಹೊಸ ರೈಲು ಸೇವೆ ಸುಪೌಲ್, ಅರೇರಿಯಾ ಮತ್ತು ಸಹರ್ಸಾ ಜಿಲ್ಲೆಗಳ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಈಶಾನ್ಯ ಭಾರತದ ಜನರಿಗೆ ಪರ್ಯಾಯ ರೈಲು ಮಾರ್ಗವೂ ಆಗುತ್ತದೆ. ಈ ಮಹಾ ಸೇತು ಮೂಲಕ 300 ಕಿ.ಮೀ ಪ್ರಯಾಣವನ್ನು 22 ಕಿ.ಮೀ.ಗೆ ಇಳಿಸಲಾಗಿದೆ ಮತ್ತು ಇದು ಇಡೀ ಪ್ರದೇಶದಲ್ಲಿ ವ್ಯಾಪಾರ ಮತ್ತು ಉದ್ಯೋಗವನ್ನು ಉತ್ತೇಜಿಸುತ್ತದೆ. ಇದು ಬಿಹಾರದ ಜನರ ಸಮಯ ಮತ್ತು ಹಣವನ್ನು ಉಳಿಸುತ್ತದೆ ಎಂದು ಅವರು ಹೇಳಿದರು.

ಕೋಸಿ ಮಹಾ ಸೇತುವಿನಂತೆಯೇ, ಕಿಯುಲ್ ನದಿಯಲ್ಲಿ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಸೌಲಭ್ಯ ಹೊಂದಿರುವ ಹೊಸ ರೈಲು ಮಾರ್ಗದಲ್ಲಿ ರೈಲುಗಳು ಗಂಟೆಗೆ 125 ಕಿಲೋಮೀಟರ್ ವೇಗದಲ್ಲಿ ಚಲಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಹೌರಾ–ದೆಹಲಿಯ ಮುಖ್ಯ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಸರಾಗಗೊಳಿಸುತ್ತದೆ ಮತ್ತು ಅನಗತ್ಯ ವಿಳಂಬಗಳನ್ನು ತಪ್ಪಿಸಿ, ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಕಳೆದ 6 ವರ್ಷಗಳಿಂದ ನವ ಭಾರತದ ಆಕಾಂಕ್ಷೆಗಳಿಗೆ ಅನುಗುಣವಾಗಿ ಮತ್ತು ‘ಆತ್ಮನಿರ್ಭರ ಭಾರತ್’ನಿರೀಕ್ಷೆಗಳನ್ನು ಈಡೇರಿಸಲು  ಭಾರತೀಯ ರೈಲ್ವೆಯನ್ನು ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಇಂದು ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಸ್ವಚ್ಛವಾಗಿದೆ ಎಂದು ಅವರು ಹೇಳಿದರು. ಬ್ರಾಡ್ ಗೇಜ್ ರೈಲು ಮಾರ್ಗಗಳಿಂದ ಮಾನವರಹಿತ ರೈಲು ಕ್ರಾಸಿಂಗ್‌ಗಳನ್ನು ತೆಗೆದುಹಾಕುವ ಮೂಲಕ ಭಾರತೀಯ ರೈಲ್ವೆ ಹಿಂದೆಂದಿಗಿಂತಲೂ ಸುರಕ್ಷಿತವಾಗಿದೆ. ಭಾರತೀಯ ರೈಲ್ವೆಯ ವೇಗ ಹೆಚ್ಚಾಗಿದೆ ಎಂದು ಅವರು ಹೇಳಿದರು. ವಂದೇ ಭಾರತ್ ನಂತಹ ಮೇಡ್ ಇನ್ ಇಂಡಿಯಾ ರೈಲುಗಳು ಸ್ವಾವಲಂಬನೆ ಮತ್ತು ಆಧುನಿಕತೆಯ ಸಂಕೇತವಾಗಿದ್ದು ರೈಲ್ವೆ ಜಾಲದ ಭಾಗವಾಗುತ್ತಿವೆ ಎಂದು ತಿಳಿಸಿದರು.

|

ರೈಲ್ವೆಯಲ್ಲಿನ ಆಧುನೀಕರಣದಿಂದಾಗಿ ಬಿಹಾರವು ಭಾರಿ ಲಾಭ ಪಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು, ಮಾಧೇಪುರದಲ್ಲಿ ಎಲೆಕ್ಟ್ರಿಕ್ ಲೋಕೊ ಕಾರ್ಖಾನೆ ಮತ್ತು ಮಾರ್ಹೌರಾದಲ್ಲಿ ಡೀಸೆಲ್ ಲೋಕೊ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ. ಈ ಎರಡೂ ಯೋಜನೆಗಳಲ್ಲಿ ಸುಮಾರು 44000 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಭಾರತದ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಲೋಕೋಮೋಟಿವ್ – 12000 ಅಶ್ವಶಕ್ತಿಯ ಲೋಕೋಮೋಟಿವ್ ಅನ್ನು ಬಿಹಾರದಲ್ಲಿ ತಯಾರಿಸಲಾಗಿದೆಯೆಂದು ಬಿಹಾರದ ಜನರು ಹೆಮ್ಮೆ ಪಡುತ್ತಾರೆ ಎಂದು ಅವರು ಹೇಳಿದರು. ವಿದ್ಯುತ್ ಲೋಕೋಮೋಟಿವ್ಗಳನ್ನು ನಿರ್ವಹಿಸುವ ಬಿಹಾರದ ಮೊದಲ ಲೋಕೊ ಶೆಡ್ ಸಹ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಇಂದು ಬಿಹಾರದಲ್ಲಿ ಸುಮಾರು ಶೇ.90 ರಷ್ಟು ರೈಲು ಜಾಲವನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು. ಕಳೆದ 6 ವರ್ಷಗಳ ಅವಧಿಯಲ್ಲಿ ಬಿಹಾರದಲ್ಲಿ 3000 ಕಿಲೋಮೀಟರ್‌ಗಿಂತ ಹೆಚ್ಚಿನ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ. 2014 ಕ್ಕೂ ಹಿಂದಿನ 5 ವರ್ಷಗಳಲ್ಲಿ ಬಿಹಾರದಲ್ಲಿ ಕೇವಲ 325 ಕಿ.ಮೀ ಹೊಸ ರೈಲು ಮಾರ್ಗಗಳು ಮಾತ್ರ ಕಾರ್ಯಾಚರಿಸುತ್ತಿದ್ದವು. 2014 ರ ನಂತರದ 5 ವರ್ಷಗಳಲ್ಲಿ ಬಿಹಾರದಲ್ಲಿ ಸುಮಾರು 700 ಕಿ.ಮೀ ಹೊಸ ರೈಲು ಮಾರ್ಗಗಳು ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ 1000 ಕಿ.ಮೀ ಹೊಸ ರೈಲು ಮಾರ್ಗಗಳು ನಿರ್ಮಾಣ ಹಂತದಲ್ಲಿವೆ ಎಂದು ಅವರು ಹೇಳಿದರು.

ಹಾಜಿಪುರ – ಘೋಸ್ವಾರ್ – ವೈಶಾಲಿ ರೈಲು ಮಾರ್ಗದ ಆರಂಭದಿಂದ ದೆಹಲಿ ಮತ್ತು ಪಾಟ್ನಾವನ್ನು ನೇರ ರೈಲು ಸೇವೆಯ ಮೂಲಕ ಸಂಪರ್ಕಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಈ ಸೇವೆಯು ವೈಶಾಲಿಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡಲಿದ್ದು, ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಪ್ರತ್ಯೇಕ ಸರಕು ಕಾರಿಡಾರ್‌ಗಳ ಕೆಲಸ ಸಹ ವೇಗವಾಗಿ ನಡೆಯುತ್ತಿದೆ ಮತ್ತು ಬಿಹಾರದಲ್ಲಿ ಸುಮಾರು 250 ಕಿ.ಮೀ ಉದ್ದದ ಕಾರಿಡಾರ್ ನಿರ್ಮಾಣವಾಗಲಿದೆ. ಈ ಯೋಜನೆ ಪೂರ್ಣಗೊಂಡ ನಂತರ, ಪ್ರಯಾಣಿಕ ರೈಲುಗಳ ವಿಳಂಬದ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಸರಕುಗಳ ಚಲನೆಯಲ್ಲಿನ ವಿಳಂಬವೂ ಸಹ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

|

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರೈಲ್ವೆ ದಣಿವರಿಯದೆ ಕೆಲಸ ಮಾಡಿದೆ ಎಂದು ಪ್ರಧಾನಿ ಶ್ಲಾಘಿಸಿದರು. ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವಲ್ಲಿ ಮತ್ತು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರನ್ನು ಮರಳಿ ಕರೆತರುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ. ಕೊರೊನಾ ಅವಧಿಯಲ್ಲಿ ಬಿಹಾರ ಮತ್ತು ಮಹಾರಾಷ್ಟ್ರ ನಡುವೆ ದೇಶದ ಮೊದಲ ಕಿಸಾನ್ ರೈಲು ಪರಿಚಯಿಸಲಾಯಿತು ಎಂದು ಅವರು ಹೇಳಿದರು.

ಈ ಹಿಂದೆ ಬಿಹಾರದಲ್ಲಿ ಕೆಲವೇ ಕೆಲವು ವೈದ್ಯಕೀಯ ಕಾಲೇಜುಗಳಿದ್ದವು. ಇದರಿಂದಾಗಿ ಬಿಹಾರದ ರೋಗಿಗಳು ಸಾಕಷ್ಟು ಅನಾನುಕೂಲತೆಗಳನ್ನು ಅನುಭವಿಸಬೇಕಾಯಿತು, ಬಿಹಾರದ ಪ್ರತಿಭಾನ್ವಿತ ಯುವಕರು ಸಹ ವೈದ್ಯಕೀಯ ಅಧ್ಯಯನಕ್ಕಾಗಿ ಇತರ ರಾಜ್ಯಗಳಿಗೆ ಹೋಗಬೇಕಾಗಿತ್ತು. ಇಂದು ಬಿಹಾರದಲ್ಲಿ, 15 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ, ಅವುಗಳಲ್ಲಿ ಹಲವು ಕಳೆದ ಕೆಲವು ವರ್ಷಗಳಲ್ಲಿ ನಿರ್ಮಿಸಲ್ಪಟ್ಟಿವೆ. ಕೆಲವು ದಿನಗಳ ಹಿಂದೆ ಬಿಹಾರದ ದರ್ಭಾಂಗದಲ್ಲಿ ಹೊಸ ಏಮ್ಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಮತ್ತು ಇದು ಸಾವಿರಾರು ಹೊಸ ಉದ್ಯೋಗಗಳನ್ನು ಸಹ ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಕೃಷಿ ಸುಧಾರಣಾ ಮಸೂದೆ

ಕೃಷಿ ಕ್ಷೇತ್ರದ ಸುಧಾರಣೆಯಲ್ಲಿ ದೇಶಕ್ಕೆ ನಿನ್ನೆ ಒಂದು ಐತಿಹಾಸಿಕ ದಿನ ಎಂದು ಪ್ರಧಾನಿ ಹೇಳಿದರು. ಕೃಷಿ ಸುಧಾರಣಾ ಮಸೂದೆಯನ್ನು ಅಂಗೀಕರಿಸಲಾಗಿದ್ದು, ಇದು ನಮ್ಮ ರೈತರನ್ನು ಅನೇಕ ನಿರ್ಬಂಧಗಳಿಂದ ಮುಕ್ತಗೊಳಿಸಿದೆ. ಇದಕ್ಕಾಗಿ ದೇಶದ ರೈತರಿಗೆ ಶುಭ ಹಾರೈಸಿದ ಅವರು, ಈ ಸುಧಾರಣೆಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡುತ್ತವೆ. ಈ ಸುಧಾರಣೆಗಳು ರೈತರ ಗಳಿಕೆಯಲ್ಲಿ ಹೆಚ್ಚಿನ ಪಾಲನ್ನು ತೆಗೆದುಕೊಳ್ಳುತ್ತಿದ್ದ ಮಧ್ಯವರ್ತಿಗಳಿಂದ ರೈತರನ್ನು ರಕ್ಷಿಸುತ್ತವೆ ಎಂದು ಅವರು ಹೇಳಿದರು.

|

ಕೃಷಿ ಸುಧಾರಣಾ ಮಸೂದೆಯ ಬಗ್ಗೆ ಸುಳ್ಳುಗಳನ್ನು ಹರಡುತ್ತಿರುವ ಪ್ರತಿಪಕ್ಷಗಳನ್ನು ಟೀಕಿಸಿದ ಪ್ರಧಾನಿ, ಈ ದೇಶವನ್ನು ದಶಕಗಳಿಂದ ಆಳಿದ ಕೆಲವರು ಈ ವಿಷಯದ ಬಗ್ಗೆ ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ಸುಧಾರಣೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆಯಲ್ಲಿ ಕೃಷಿ ಮಾರುಕಟ್ಟೆಯ ನಿಬಂಧನೆಗಳ ಬದಲಾವಣೆಯ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿದರು. ಕನಿಷ್ಠ ಬೆಂಬಲ ಬೆಲೆ  ಲಾಭವನ್ನು ಸರ್ಕಾರವು ರೈತರಿಗೆ ನೀಡುವುದಿಲ್ಲ ಎಂಬ ಸುಳ್ಳು ಪ್ರಚಾರವನ್ನು ಅವರು ಅಲ್ಲಗಳೆದರು ಮತ್ತು ಕನಿಷ್ಠ ಬೆಂಬಲ ಬೆಲೆ  ಮೂಲಕ ರೈತರಿಗೆ ನ್ಯಾಯಯುತ ಬೆಲೆ ನೀಡಲು ಸರ್ಕಾರ ಬದ್ಧವಾಗಿದೆ ಮತ್ತು ಸರ್ಕಾರದ ಖರೀದಿ ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಹೇಳಿದರು. ಹೊಸ ನಿಬಂಧನೆಗಳು ಜಾರಿಗೆ ಬರುವುದರಿಂದ ರೈತರು ತಮ್ಮ ಬೆಳೆ ಕೊಯ್ಲು ಮಾಡಬಹುದು ಮತ್ತು ದೇಶದ ಯಾವುದೇ ಮಾರುಕಟ್ಟೆಗಳಲ್ಲಿ ಅವರು ಬಯಸಿದ ಬೆಲೆಗೆ ಮಾರಾಟ ಮಾಡಬಹುದು ಎಂದು ಅವರು ಹೇಳಿದರು. ಎಪಿಎಂಸಿ ಕಾಯ್ದೆಯಿಂದ ಆಗಿರುವ ಹಾನಿಯನ್ನು ಮನಗಂಡ ಬಿಹಾರ ಮುಖ್ಯಮಂತ್ರಿ ಈ ಕಾನೂನನ್ನು ಬಿಹಾರದಲ್ಲಿ ತೆಗೆದುಹಾಕಿದ್ದಾರೆ ಎಂದು ಅವರು ಹೇಳಿದರು. ರೈತರ ಜೀವನವನ್ನು ಸುಧಾರಿಸಲು ಸರ್ಕಾರ ಕೈಗೊಂಡ ಉಪಕ್ರಮಗಳಾದ ಪ್ರಧಾನ ಮಂತ್ರಿ ಕಿಸಾನ್ ಕಲ್ಯಾಣ್ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ, ಬೇವು ಲೇಪಿತ ಯೂರಿಯಾ, ದೇಶದಲ್ಲಿ ಕೋಲ್ಡ್ ಸ್ಟೋರೇಜ್ ಜಾಲದ ನಿರ್ಮಾಣ, ಆಹಾರ ಸಂಸ್ಕರಣಾ ಕೈಗಾರಿಕೆಗಳು ಮತ್ತು ಕೃಷಿ ಮೂಲಸೌಕರ್ಯ ನಿಧಿಯ ರಚನೆಗಳ ಬಗ್ಗೆ ಪ್ರಧಾನಿ ವಿವರಿಸಿದರು.

ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಜಾನುವಾರುಗಳನ್ನು ರೋಗಗಳಿಂದ ರಕ್ಷಿಸಲು ರಾಷ್ಟ್ರವ್ಯಾಪಿ ಅಭಿಯಾನ ನಡೆಸಲಾಗುತ್ತಿದೆ. ತಮ್ಮನ್ನು ದಾರಿ ತಪ್ಪಿಸುತ್ತಿರುವವರ ಬಗ್ಗೆ ದೇಶದ ರೈತರು ಜಾಗರೂಕರಾಗಿರಬೇಕು ಎಂದು ಅವರು ಬಗ್ಗೆ ಆಗ್ರಹಿಸಿದರು. ಇವರು ರೈತರನ್ನು ರಕ್ಷಿಸುತ್ತೇವೆಂದು ಜಾಣ್ಮೆ ತೋರುತ್ತಿದ್ದಾರೆ, ಆದರೆ ವಾಸ್ತವವಾಗಿ ಅವರು ರೈತರನ್ನು ಅನೇಕ ಸಂಕೋಲೆಗಳಲ್ಲಿ ಬಂಧಿಸಿಡಲು ಬಯಸುತ್ತಾರೆ. ಅವರು ಮಧ್ಯವರ್ತಿಗಳನ್ನು ಬೆಂಬಲಿಸುತ್ತಿದ್ದಾರೆ ಮತ್ತು ರೈತರ ಆದಾಯವನ್ನು ಲೂಟಿ ಮಾಡುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಹೇಳಿದರು.  ಈ ಸುಧಾರಣೆಗಳು ದೇಶದ ಅವಶ್ಯಕತೆಯಾಗಿದೆ ಮತ್ತು ಇಂದಿನ ಬೇಡಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು.

 

Click here to read full text speech

  • Reena chaurasia August 31, 2024

    BJP BJP
  • Manda krishna BJP Telangana Mahabubabad District mahabubabad July 14, 2022

    🌷🌷🌷🌷🌷
  • Manda krishna BJP Telangana Mahabubabad District mahabubabad July 14, 2022

    🌹🌹🌹🌹🌹
  • Manda krishna BJP Telangana Mahabubabad District mahabubabad July 14, 2022

    🙏🙏🙏
  • Manda krishna BJP Telangana Mahabubabad District mahabubabad July 14, 2022

    🌹🌹
  • Shivkumragupta Gupta July 03, 2022

    जय भारत
  • Shivkumragupta Gupta July 03, 2022

    जय हिंद
  • Shivkumragupta Gupta July 03, 2022

    जय श्री सीताराम
  • Shivkumragupta Gupta July 03, 2022

    जय श्री राम
  • Laxman singh Rana February 22, 2022

    namo namo 🇮🇳🙏🚩🚩
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Visited ‘Mini India’: A Look Back At His 1998 Mauritius Visit

Media Coverage

When PM Modi Visited ‘Mini India’: A Look Back At His 1998 Mauritius Visit
NM on the go

Nm on the go

Always be the first to hear from the PM. Get the App Now!
...
I reaffirm India’s commitment to strong bilateral relations with Mauritius: PM at banquet hosted by Mauritius President
March 11, 2025

Your Excellency राष्ट्रपति धरमबीर गोकुल जी,

First Lady श्रीमती बृंदा गोकुल जी,
उप राष्ट्रपति रोबर्ट हंगली जी,
प्रधान मंत्री रामगुलाम जी,
विशिष्ट अतिथिगण,

मॉरिशस के राष्ट्रीय दिवस समारोह में मुख्य अतिथि के रूप में एक बार फिर शामिल होना मेरे लिए सौभाग्य की बात है।

इस आतिथ्य सत्कार और सम्मान के लिए मैं राष्ट्रपति जी का हार्दिक आभार व्यक्त करता हूँ।
यह केवल भोजन का अवसर नहीं है, बल्कि भारत और मॉरीशस के जीवंत और घनिष्ठ संबंधों का प्रतीक है।

मॉरीशस की थाली में न केवल स्वाद है, बल्कि मॉरीशस की समृद्ध सामाजिक विविधता की झलक भी है।

इसमें भारत और मॉरीशस की साझी विरासत भी समाहित है।

मॉरीशस की मेज़बानी में हमारी मित्रता की मिठास घुली हुई है।

इस अवसर पर, मैं - His Excellency राष्ट्रपति धरमबीर गोकुल जी और श्रीमती बृंदा गोकुल जी के उत्तम स्वास्थ्य और कल्याण; मॉरीशस के लोगों की निरंतर प्रगति, समृद्धि और खुशहाली की कामना करता हूँ; और, हमारे संबंधों के लिए भारत की प्रतिबद्धता दोहराता हूँ

जय हिन्द !
विवे मॉरीस !