Quote"ಕಳೆದ ವರ್ಷ, ಇದೇ ಮೊದಲ ಬಾರಿಗೆ ಭಾರತದಲ್ಲಿ ಮೊಬೈಲ್ ಮೂಲಕ ಪಾವತಿಯು ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮೀರಿದೆ"
Quote"ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೈಗೊಳ್ಳಲಾದ ಕ್ರಾಂತಿಕಾರಿ ಉಪಕ್ರಮಗಳು, ಆಡಳಿತದಲ್ಲಿ ಅಳವಡಿಸಿಕೊಳ್ಳಬಹುದಾದ ನವೀನ ‘ಫಿನ್ ಟೆಕ್’ ಪರಿಹಾರಗಳಿಗೆ ಬಾಗಿಲು ತೆರೆದಿವೆ "
Quote"ಈ ‘ಫಿನ್‌ಟೆಕ್’ ಉಪಕ್ರಮಗಳನ್ನು ‘ಫಿನ್‌ಟೆಕ್’ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಇದಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಕ್ರಾಂತಿಗೆ ದಾರಿಯಾಗಬೇಕಿದೆ"
Quote"ವಿಶ್ವಾಸ ಎಂದರೆ ಜನರ ಹಿತಾಸಕ್ತಿಗಳ ಭದ್ರತೆಗೆ ಖಾತರಿ ಒದಗಿಸುವುದು. ‘ಫಿನ್‌ಟೆಕ್’ನಲ್ಲಿ ಭದ್ರತೆ ಕುರಿತ ಸಂಶೋಧನೆಗಳ ಹೊರತಾಗಿ ‘ಫಿನ್‌ಟೆಕ್’ ನಾವಿನ್ಯತೆ ಅಪೂರ್ಣವಾಗುತ್ತದೆ"
Quote"ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳ ಮೂಲಕ ವಿಶ್ವದಾದ್ಯಂತ ನಾಗರಿಕರ ಜೀವನವನ್ನು ಸುಧಾರಿಸಬಹುದು"
Quote"ಗಿಫ್ಟ್‌ ಸಿಟಿ(GIFT City) ಕೇವಲ ಒಂದು ಕಟ್ಟಡಗಳ ಸಂಕೀರ್ಣವಲ್ಲ, ಅದು ಭಾರತವನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು, ಬೇಡಿಕೆ, ಜನಸಂಖ್ಯೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇದು ಆಲೋಚನೆಗಳು, ನಾವಿನ್ಯತೆ ಮತ್ತು ಹೂಡಿಕೆಗೆ ಭಾರತದ ಮುಕ್ತತೆಯನ್ನು ಪ್ರತಿನಿಧಿಸುತ್ತದೆ"
Quoteಹಣಕಾಸು ಎಂಬುದು ಆರ್ಥಿಕತೆಯ ಜೀವಾಳ ಮತ್ತು ತಂತ್ರಜ್ಞಾನವು ಅದರ ವಾಹಕವಾಗಿದೆ. ಅಂತ್ಯೋದಯದ ಸಾಧನೆಗೆ ಇವೆರಡೂ ಸಮಾನ ಮಹತ್ವ ಹೊಂದಿವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಫಿನ್‌ಟೆಕ್’ ಕುರಿತ ಚಿಂತನೆಯ ನಾಯಕತ್ವ ವೇದಿಕೆಯಾದ ‘ಇನ್‌ಫಿನಿಟಿ ಫೋರಂ’ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರೆನ್ಸಿಯ ಚರಿತ್ರೆಯು ಅದ್ಭುತ ವಿಕಾಸವನ್ನು ನಮ್ಮ ಕಣ್ಣ ಮುಂದಿರಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ, ಭಾರತದಲ್ಲಿ ಮೊದಲ ಬಾರಿಗೆ ಮೊಬೈಲ್ ಪಾವತಿಯು ಎಟಿಎಂ ನಗದು ಹಿಂಪಡೆಯುವಿಕೆಯ ಮೊತ್ತವನ್ನು ಮೀರಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಯಾವುದೇ ಭೌತಿಕ ಶಾಖಾ ಕಚೇರಿಗಳಿಲ್ಲ  ಸಂಪೂರ್ಣ ಡಿಜಿಟಲ್ ಬ್ಯಾಂಕುಗಳು ಈಗಾಗಲೇ ವಾಸ್ತವ ರೂಪ ತಳೆದಿವೆ ಮತ್ತು ಮುಂದಿನ ಒಂದು ದಶಕದೊಳಗೆ ಅವು ಅತಿ ಸಾಮಾನ್ಯವೆನಿಸಲಿವೆ. "ಮಾನವರು ವಿಕಸನಗೊಂಡಂತೆ, ನಮ್ಮ ವಹಿವಾಟುಗಳ ರೂಪವೂ ವಿಕಸನಗೊಂಡಿತು. ಪರಸ್ಪರ ವಿನಿಮಯ ವ್ಯವಸ್ಥೆಯಿಂದ ಲೋಹಗಳವರೆಗೆ, ನಾಣ್ಯಗಳಿಂದ ನೋಟುಗಳಿಗೆ, ಚೆಕ್‌ಗಳಿಂದ ಕಾರ್ಡ್‌ಗಳವರೆಗೆ, ಇಂದು ನಾವು ಇಲ್ಲಿಗೆ ತಲುಪಿದ್ದೇವೆ", ಎಂದು ಅವರು ಹೇಳಿದರು.

ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಾಗ ಅಥವಾ ತಂತ್ರಜ್ಞಾನದ ನವೀಕರಣದ ವಿಚಾರದಲ್ಲಿ ತಾನು ಎಂದೂ ಇತರರಿಗಿಂತ ಹಿಂದೆ ಬಿದ್ದಿಲ್ಲ ಎಂಬುದನ್ನು ಭಾರತವು ಜಗತ್ತಿಗೆ ಸಾಬೀತುಪಡಿಸಿದೆ ಎಂದು ಪ್ರಧಾನಿ ಹೇಳಿದರು. ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೈಗೊಂಡ ಕ್ರಾಂತಿಕಾರಿ ಉಪಕ್ರಮಗಳು ನವೀನ ‘ಫಿನ್‌ಟೆಕ್’ ಪರಿಹಾರಗಳಿಗೆ ಕಾರಣವಾಗಿದ್ದು, ಇವುಗಳನ್ನು ಆಡಳಿತದಲ್ಲಿ ಬಳಸಲು ಅವಕಾಶ ದೊರೆತಿದೆ. ಈ ‘ಫಿನ್‌ಟೆಕ್’ ಉಪಕ್ರಮಗಳನ್ನು ‘ಫಿನ್‌ಟೆಕ್’ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಈಗ ಬಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಕ್ರಾಂತಿ ಇದಾಗಬೇಕಿದೆ", ಎಂದು ಅವರು ಹೇಳಿದರು.

ತಂತ್ರಜ್ಞಾನವು ಆರ್ಥಿಕ ಒಳಗೊಳ್ಳುವಿಕೆ ಸಾಧನೆಗೆ ಹೇಗೆ ಸಹಾಯಕವಾಗಿದೆ ಎಂಬುದನ್ನು ವಿವರಿಸಿದ ಶ್ರೀ ಮೋದಿ, 2014ರಲ್ಲಿ 50% ಕ್ಕಿಂತ ಕಡಿಮೆ ಭಾರತೀಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಕಳೆದ 7 ವರ್ಷಗಳಲ್ಲಿ 430 ದಶಲಕ್ಷ ಜನ್‌ಧನ್ ಖಾತೆಗಳನ್ನು ತೆರೆಯಲಾಗಿದ್ದು, ಈಗ ಬ್ಯಾಂಕ್‌ ಖಾತೆ ಸೌಲಭ್ಯ ಎಂಬುದು ಬಹುತೇಕ ಸಾರ್ವತ್ರೀಕರಣಗೊಂಡಿದೆ ಎಂದು ಗಮನ ಸೆಳೆದರು. ಅವರು ಕಳೆದ ವರ್ಷ 1.3 ಶತಕೋಟಿ ವಹಿವಾಟುಗಳಿಗೆ ಸಾಕ್ಷಿಯಾದ 690 ದಶಲಕ್ಷ ‘ರೂಪೇ ಕಾರ್ಡ್’ಗಳಂತಹ ಉಪಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಕಳೆದ ತಿಂಗಳಲ್ಲಿ ಯುಪಿಐ ಮೂಲಕ ಸುಮಾರು 4.2 ಶತಕೋಟಿ ವಹಿವಾಟುಗಳನ್ನು ನಡೆಸಲಾಗಿದೆ; ಪ್ರತಿ ತಿಂಗಳು ಜಿಎಸ್‌ಟಿ ಪೋರ್ಟಲ್‌ನಲ್ಲಿ ಸುಮಾರು 300 ದಶಲಕ್ಷ ಇನ್‌ವಾಯ್ಸ್‌ಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ; ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ, ಪ್ರತಿದಿನ ಸುಮಾರು 1.5 ದಶಲಕ್ಷ ರೈಲ್ವೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲಾಗುತ್ತಿದೆ; ಕಳೆದ ವರ್ಷ, 1.3 ಶತರಕೋಟಿ ವಹಿವಾಟುಗಳಿಗೆ ‘ಫಾಸ್ಟ್‌ಟ್ಯಾಗ್‌’ ಸಾಕ್ಷಿಯಾಗಿದೆ; ‘ಪ್ರಧಾನಮಂತ್ರಿ ಸ್ವಾನಿಧಿ’ ಯೋಜನೆಯು ದೇಶಾದ್ಯಂತ ಸಣ್ಣ ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಅನುವು ಮಾಡಿದೆ;  ‘ಇ-ರೂಪಿ’ ಯುಪಿಐ ವ್ಯವಸ್ಥೆಯು ಸೋರಿಕೆಗಳಿಲ್ಲದೆ ನಿರ್ದಿಷ್ಟ ಸೇವೆಗಳನ್ನು ಉದ್ದೇಶಿತರಿಗೆ ತಲುಪಿಸಲು ಅನುವು ಮಾಡಿಕೊಟ್ಟಿದೆ ಎಂದರು.

ಹಣಕಾಸು ಒಳಗೊಳ್ಳುವಿಕೆಯು ‘ಫಿನ್‌ಟೆಕ್’ ಕ್ರಾಂತಿಯ ಚಾಲಕಶಕ್ತಿ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿಯವರು, ಆದಾಯ, ಹೂಡಿಕೆಗಳು, ವಿಮೆ ಮತ್ತು ಸಾಂಸ್ಥಿಕ ಸಾಲ ಎಂಬ 4 ಸ್ತಂಭಗಳ ಮೇಲೆ ಫಿನ್‌ಟೆಕ್’ ನಿಂತಿದೆ ಎಂದರು. ''ಆದಾಯ ಬೆಳೆದಾಗ ಹೂಡಿಕೆ ಸಾಧ್ಯ. ವಿಮಾ ರಕ್ಷಣೆಯು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆಗಳನ್ನು ಪ್ರೇರೇಪಿಸುತ್ತದೆ. ಸಾಂಸ್ಥಿಕ ಸಾಲವು ವ್ಯವಹಾರದ ವಿಸ್ತರಣೆಗೆ ರೆಕ್ಕೆಗಳನ್ನು ನೀಡುತ್ತದೆ. ನಾವು ಈ ಪ್ರತಿಯೊಂದು ಸ್ತಂಭಕ್ಕೆ ಸಂಬಂಧಿಸಿದಂತೆಯೂ ಸಾಕಷ್ಟು ಕೆಲಸ ಮಾಡಿದ್ದೇವೆ. ಈ ಎಲ್ಲಾ ಅಂಶಗಳು ಒಗ್ಗೂಡಿದಾಗ, ಇದ್ದಕ್ಕಿದ್ದಂತೆ ಹಣಕಾಸು ವಲಯದಲ್ಲಿ ಇನ್ನೂ ಅನೇಕರು ಪಾಲ್ಗೊಳ್ಳುವಿಕೆಯನ್ನು ನೀವು ಕಾಣುತ್ತೀರಿ", ಎಂದು ಪ್ರಧಾನಿ ವಿವರಿಸಿದರು.

ಈ ಆವಿಷ್ಕಾರಗಳನ್ನು ಜನಸಾಮಾನ್ಯರು ವ್ಯಾಪಕವಾಗಿ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ‘ಫಿನ್‌ಟೆಕ್’ನಲ್ಲಿ ವಿಶ್ವಾಸ ಉಳಿಸಿಕೊಳ್ಳಬೇಕಾದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಸಾಮಾನ್ಯ ಭಾರತೀಯರು ಡಿಜಿಟಲ್ ಪಾವತಿಗಳು ಮತ್ತು ಅಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಮ್ಮ ‘ಫಿನ್‌ಟೆಕ್’ ಪರಿಸರವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸವನ್ನು ತೋರಿಸಿದ್ದಾರೆ. "ಈ ವಿಶ್ವಾಸವು ಒಂದು ಜವಾಬ್ದಾರಿಯಾಗಿದೆ. ವಿಶ್ವಾಸ ಎಂದರೆ ನೀವು ಜನರ ಹಿತಾಸಕ್ತಿಗಳ ಭದ್ರತೆಗೆ ನೀಡುವ ಖಾತರಿಯಾಗಿದೆ. ‘ಫಿನ್‌ಟೆಕ್’ ಕ್ಷೇತ್ರದಲ್ಲಿ ಭದ್ರತೆ ಕುರಿತ ಆವಿಷ್ಕಾರಗಳಿಲ್ಲದೆ, ‘ಫಿನ್‌ಟೆಕ್’ ನಾವಿನ್ಯತೆ ಅಪೂರ್ಣವಾಗಲಿದೆ", ಎಂದು ಅವರು ಹೇಳಿದರು.

‘ಫಿನ್‌ಟೆಕ್’ ಕ್ಷೇತ್ರದಲ್ಲಿ ಭಾರತದ ಹೊಂದಿರುವ ವ್ಯಾಪಕ ಅನುಭವದ ಅನ್ವಯಿಕೆ ಕುರಿತು ಪ್ರಧಾನಿ ಮಾತನಾಡಿದರು. ಅನುಭವಗಳು ಮತ್ತು ಪರಿಣತಿಯನ್ನು ವಿಶ್ವದೊಂದಿಗೆ ಹಂಚಿಕೊಳ್ಳುವ ಮತ್ತು ಅವುಗಳಿಂದ ಕಲಿಯುವ ಭಾರತದ ಪ್ರವೃತ್ತಿಯನ್ನು ಅವರು ಒತ್ತಿ ಹೇಳಿದರು. "ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳು ವಿಶ್ವದಾದ್ಯಂತ ನಾಗರಿಕರ ಜೀವನವನ್ನು ಸುಧಾರಿಸಬಲ್ಲವು", ಎಂದು ಪ್ರಧಾನಿ ಹೇಳಿದರು.

‘ಗಫ್ಟ್‌ ಸಿಟಿ’ಯು ಕೇವಲ ಒಂದು ಕಟ್ಟಡಗಳ ಸಂಕೀರ್ಣವಲ್ಲ, ಅದು ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು, ಬೇಡಿಕೆ, ಜನಸಂಖ್ಯೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇದು ಆಲೋಚನೆಗಳು, ನಾವಿನ್ಯತೆ ಮತ್ತು ಹೂಡಿಕೆಗೆ ಭಾರತದ ಮುಕ್ತತೆಯನ್ನು ಪ್ರತಿನಿಧಿಸುತ್ತದೆ. ‘ಗಿಫ್ಟ್‌ ಸಿಟಿ’ಯು ಜಾಗತಿಕ ‘ಫಿನ್‌ಟೆಕ್ ’ ಜಗತ್ತಿಗೆ ಪ್ರವೇಶದ್ವಾರವಾಗಿದೆ ಎಂದರು.

"ಹಣಕಾಸು ಎಂಬುದು ಆರ್ಥಿಕತೆಯ ಜೀವಾಳವಾದರೆ ತಂತ್ರಜ್ಞಾನವು ಅದರ ವಾಹಕವಾಗಿದೆ. ಅಂತ್ಯೋದಯ ಮತ್ತು ಸರ್ವೋದಯವನ್ನು ಸಾಧಿಸಲು ಇವೆರಡೂ ಸಮಾನ ಪ್ರಾಮುಖ್ಯತೆ ಹೊಂದಿವೆ,” ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರವು(ಐಎಫ್‌ಎಸ್‌ಸಿಎ) ‘ಗಿಫ್ಟ್ ಸಿಟಿ’ ಮತ್ತು ‘ಬ್ಲೂಮ್‌ಬರ್ಗ್’ ಸಹಯೋಗದೊಂದಿಗೆ ಭಾರತ ಸರಕಾರದ ನೇತೃತ್ವದಲ್ಲಿ 2021ರ ಡಿಸೆಂಬರ್ 3 ಮತ್ತು 4ರಂದು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ವೇದಿಕೆಯ ಮೊದಲ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್‌ ಪಾಲುದಾರ ರಾಷ್ಟ್ರಗಳಾಗಿವೆ.

‘ಇನ್‌ಫಿನಿಟಿ ಫೋರಂ’ ವೇದಿಕೆಯು ನೀತಿ, ವ್ಯವಹಾರ ಮತ್ತು ತಂತ್ರಜ್ಞಾನದಲ್ಲಿ ವಿಶ್ವದ ಪ್ರಮುಖ ದೇಶಗಳನ್ನು ಒಟ್ಟುಗೂಡಿಸುತ್ತದೆ. ಆ ಮೂಲಕ ಸಮಗ್ರ ಅಭಿವೃದ್ಧಿಗಾಗಿ, ಮಾನವಕುಲದ ಸೇವೆಗಾಗಿ ತಂತ್ರಜ್ಞಾನ ಮತ್ತು ನಾವಿನ್ಯತೆಯನ್ನು ‘ಫಿನ್‌ಟೆಕ್’ ಉದ್ಯಮವು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಚರ್ಚಿಸಲು ಹಾಗೂ ಕಾರ್ಯಸಾಧ್ಯವಾದ ಒಳನೋಟವನ್ನು ಹೊಂದಲು ಅವಕಾಶ ಒದಗಿಸುತ್ತದೆ.

ಈ ಬಾರಿಯ ವೇದಿಕೆಯ ಕಾರ್ಯಸೂಚಿಯಲ್ಲಿ 'ಬಿಯಾಂಡ್' (ಅದಕ್ಕೂ ಮಿಗಿಲಾದದ್ದು) ಎಂಬ ವಿಷಯದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ; ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಸರಕಾರಗಳು ಮತ್ತು ಉದ್ಯಮಗಳು ಭೌಗೋಳಿಕ ಗಡಿಗಳನ್ನು ಮೀರಿ ವ್ಯವಹರಿಸುತ್ತಿರುವ ಹಿನ್ನೆಲೆಯಲ್ಲಿ ‘ಎಲ್ಲೆಗಳನ್ನು ಮೀರಿ ಫಿನ್‌ಟೆಕ್’ ಸೇರಿದಂತೆ ಹಲವು ಉಪ-ವಿಷಯಗಳನ್ನೂ ಕಾರ್ಯಸೂಚಿ ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಗೆ ಚಾಲನೆ ನೀಡಲು ‘ಸ್ಪೇಸ್‌ಟೆಕ್, ‘ಗ್ರೀನ್‌ಟೆಕ್’ ಮತ್ತು ‘ಅಗ್ರಿಟೆಕ್’ನಂತಹ ಉದಯೋನ್ಮುಖ ಕ್ಷೇತ್ರಗಳನ್ನು ಒಳಗೊಂಡ ‘ಫಿನ್‌ಟೆಕ್ ಬಿಯಾಂಡ್ ಫೈನಾನ್ಸ್’; ಭವಿಷ್ಯದಲ್ಲಿ ಫಿನ್‌ಟೆಕ್ ಉದ್ಯಮದ ಸ್ವರೂಪದ ಮೇಲೆ ‘ಕ್ವಾಂಟಮ್ ಕಂಪ್ಯೂಟಿಂಗ್’ ಹೇಗೆ ಪರಿಣಾಮ ಬೀರಬಹುದು ಹಾಗೂ ಹೊಸ ಅವಕಾಶಗಳನ್ನು ಉತ್ತೇಜಿಸಬಹುದು ಎಂಬುದರ ಮೇಲೆ ಗಮನ ಹರಿಸುವ ‘ಫಿನ್‌ಟೆಕ್ ಬಿಯಾಂಡ್ ನೆಕ್ಸ್ಟ್’ ಇವುಗಳು ಸಹ ಕಾರ್ಯಸೂಚಿಯ ಉಪ ವಿಷಯಗಳಲ್ಲಿ ಸೇರಿವೆ.

ಈ ವೇದಿಕೆಯಲ್ಲಿ 70ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌷
  • Reena chaurasia September 07, 2024

    bjp
  • Rakesh meena February 06, 2024

    तभी तो लोग मोदी को चुनते हैं
  • Mahendra singh Solanki Loksabha Sansad Dewas Shajapur mp December 09, 2023

    नमो नमो नमो नमो नमो नमो नमो नमो नमो नमो नमो नमो नमो नमो
  • Rajneesh Mishra October 12, 2022

    जय श्री राम
  • n.d.mori August 07, 2022

    Namo Namo Namo Namo Namo Namo Namo 🌹
  • G.shankar Srivastav August 02, 2022

    नमस्ते
  • Jayanta Kumar Bhadra June 30, 2022

    Jay Sri Krishna
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's first microbiological nanosat, developed by students, to find ways to keep astronauts healthy

Media Coverage

India's first microbiological nanosat, developed by students, to find ways to keep astronauts healthy
NM on the go

Nm on the go

Always be the first to hear from the PM. Get the App Now!
...
Prime Minister Narendra Modi greets the people of Arunachal Pradesh on their Statehood Day
February 20, 2025

The Prime Minister, Shri Narendra Modi has extended his greetings to the people of Arunachal Pradesh on their Statehood Day. Shri Modi also said that Arunachal Pradesh is known for its rich traditions and deep connection to nature. Shri Modi also wished that Arunachal Pradesh may continue to flourish, and may its journey of progress and harmony continue to soar in the years to come.

The Prime Minister posted on X;

“Greetings to the people of Arunachal Pradesh on their Statehood Day! This state is known for its rich traditions and deep connection to nature. The hardworking and dynamic people of Arunachal Pradesh continue to contribute immensely to India’s growth, while their vibrant tribal heritage and breathtaking biodiversity make the state truly special. May Arunachal Pradesh continue to flourish, and may its journey of progress and harmony continue to soar in the years to come.”