ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿ-ಬ್ಲಾಕ್‌ನಲ್ಲಿರುವ ʻಭಾರತೀಯ ಪತ್ರಿಕಾ ಸಂಘʼದ (ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ- ಐಎನ್‌ಎಸ್) ಕಾರ್ಯಾಲಯಕ್ಕೆ ಭೇಟಿದರು ಮತ್ತು ಈ ವೇಳೆ ʻಐಎನ್‌ಎಸ್ ಟವರ್ಸ್ʼ ಉದ್ಘಾಟನೆ ಮಾಡಿದರು. ಮುಂಬೈನಲ್ಲಿ ಅತ್ಯಾಧುನಿಕ ಮತ್ತು ಪರಿಣಾಮಕಾರಿ ಕಚೇರಿ ಸ್ಥಳಕ್ಕಾಗಿ ʻಐಎನ್ಎಸ್ʼ ಸದಸ್ಯರ ಅಗತ್ಯಗಳು ಹೆಚ್ಚಾಗುತ್ತಿದ್ದು, ಹೊಸ ಕಟ್ಟಡವು ಇದನ್ನು ಪೂರೈಸುತ್ತದೆ. ಜೊತೆಗೆ, ಮುಂಬೈನ ಪತ್ರಿಕಾ ಉದ್ಯಮಕ್ಕೆ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸ ಗೋಪುರದ ಉದ್ಘಾಟನೆಗಾಗಿ ಭಾರತೀಯ ಪತ್ರಿಕಾ ಸಂಘದ ಎಲ್ಲ ಸದಸ್ಯರನ್ನು ಅಭಿನಂದಿಸಿದರು ಮತ್ತು ಹೊಸ ಜಾಗದಲ್ಲಿ ಕೆಲಸದ ಸುಗಮತೆಯು ಭಾರತದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ʻಭಾರತೀಯ ಪತ್ರಿಕಾ ಸಂಘʼ ರೂಪುಗೊಂಡಿತ್ತು ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಸಂಸ್ಥೆ ಭಾರತದ ಪಯಣದ ಏರಿಳಿತಗಳಿಗೆ ಸಾಕ್ಷಿಯಾಗಿದ್ದಲ್ಲದೆ, ಅದನ್ನು ಬದುಕಿ, ಜನರಿಗೆ ತಿಳಿಸಿತ್ತು ಎಂದರು. ಆದ್ದರಿಂದ, ಒಂದು ಸಂಸ್ಥೆಯಾಗಿ ಭಾರತೀಯ ಪತ್ರಿಕಾ ಸಂಘದ ಕೆಲಸದ ಪರಿಣಾಮವು ರಾಷ್ಟ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಮಾಧ್ಯಮಗಳು ದೇಶದ ಪರಿಸ್ಥಿತಿಗಳ ಮೂಕ ಪ್ರೇಕ್ಷಕರಾಗಿರುವ ಬದಲಿಗೆ, ಆ ಪರಿಸ್ಥಿತಿಗಳನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪ್ರಧಾನಿ ಹೇಳಿದರು. ವಿಕಸಿತ ಭಾರತದ ಮುಂದಿನ 25 ವರ್ಷಗಳ ಪ್ರಯಾಣದಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪಾತ್ರವನ್ನು ಅವರು ಒತ್ತಿ ಹೇಳಿದರು. ನಾಗರಿಕರ ಹಕ್ಕುಗಳು ಮತ್ತು ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರವನ್ನು ಅವರು ಎತ್ತಿ ತೋರಿದರು. ಆತ್ಮವಿಶ್ವಾಸ ಹೊಂದಿರುವ ಜನರು ಹೇಗೆ ಶ್ರೇಷ್ಠ ಯಶಸ್ಸನ್ನು ಸಾಧಿಸಬಲ್ಲರು ಎಂಬುದಕ್ಕೆ ಭಾರತದಲ್ಲಿ ಡಿಜಿಟಲ್ ವಹಿವಾಟಿನ ಕ್ರಾಂತಿಯೇ ಉದಾಹರಣೆ ಎಂದು ಅವರು ಉಲ್ಲೇಖಿಸಿದರು. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಬಗ್ಗೆ ಪ್ರಮುಖ ರಾಷ್ಟ್ರಗಳು ಆಸಕ್ತಿ ತೋರಿವೆ ಎಂದು ಅವರು ಹೇಳಿದರು. ಈ ಯಶಸ್ಸಿನಲ್ಲಿ ಮಾಧ್ಯಮಗಳ ಪಾತ್ರವನ್ನು ಅವರು ಶ್ಲಾಘಿಸಿದರು.
ಗಂಭೀರ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ಒಂದು ಸಂವಾದವನ್ನು ಸೃಷ್ಟಿಸುವಲ್ಲಿ ಮಾಧ್ಯಮಗಳ ಸ್ವಾಭಾವಿಕ ಪಾತ್ರವನ್ನು ಪ್ರಧಾನಿ ಉಲ್ಲೇಖಿಸಿದರು. ಮಾಧ್ಯಮಗಳ ಕಾರ್ಯನಿರ್ವಹಣೆಯ ಮೇಲೆ ಸರ್ಕಾರದ ನೀತಿಗಳ ಪ್ರಭಾವವನ್ನು ಅವರು ಒತ್ತಿ ಹೇಳಿದರು. ʻಜನ್ ಧನ್ʼ ಯೋಜನೆಯ ಆಂದೋಲನದ ಮೂಲಕ ಆರ್ಥಿಕ ಸೇರ್ಪಡೆ ಹಾಗೂ ಬ್ಯಾಂಕ್ ಖಾತೆಗಳನ್ನು ತೆರೆಯುವ ಮತ್ತು ಸುಮಾರು 50 ಕೋಟಿ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಯೋಜಿಸಿದ ಉದಾಹರಣೆಯನ್ನು ಅವರು ನೀಡಿದರು. ಈ ಯೋಜನೆಯು ʻಡಿಜಿಟಲ್ ಇಂಡಿಯಾʼ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವ ಉಪಕ್ರಮಗಳಲ್ಲಿ ಅತ್ಯಂತ ಸಹಾಯವಾಗಿದೆ ಎಂದು ಅವರು ಹೇಳಿದರು. ಅಂತೆಯೇ, ʻಸ್ವಚ್ಛ ಭಾರತʼ ಅಥವಾ ʻಸ್ಟಾರ್ಟ್ ಅಪ್ ಇಂಡಿಯಾʼದಂತಹ ಉಪಕ್ರಮಗಳು ವೋಟ್ ಬ್ಯಾಂಕ್ ರಾಜಕೀಯದಿಂದ ಪ್ರಭಾವಿತವಾಗಿಲ್ಲ ಎಂದು ಪ್ರಧಾನಿ ಹೇಳಿದರು. ಈ ಆಂದೋಲನಗಳನ್ನು ರಾಷ್ಟ್ರೀಯ ಸಂವಾದದ ಭಾಗವನ್ನಾಗಿ ಮಾಡಿದ್ದಕ್ಕಾಗಿ ಅವರು ಮಾಧ್ಯಮಗಳನ್ನು ಶ್ಲಾಘಿಸಿದರು.
ʻಭಾರತೀಯ ಪತ್ರಿಕಾ ಸಂಘʼ ಕೈಗೊಂಡ ನಿರ್ಧಾರಗಳು ದೇಶದ ಮಾಧ್ಯಮಗಳಿಗೆ ಮಾರ್ಗಸೂಚಿಯಾಗಿವೆ ಎಂದು ಹೇಳಿದ ಪ್ರಧಾನಿ, ಸರ್ಕಾರವು ಪ್ರಾರಂಭಿಸುವ ಯಾವುದೇ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾಗಿರಬೇಕಾಗಿಲ್ಲ ಮತ್ತು ಒತ್ತಿಹೇಳುವ ಯಾವುದೇ ವಿಚಾರವು ಸರ್ಕಾರಕ್ಕೆ ಮಾತ್ರ ಸೇರಿದ್ದಾಗಿರಬೇಕಿಲ್ಲ ಎಂದು ಗಮನಸೆಳೆದರು. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼ ಮತ್ತು ʻಹರ್ ಘರ್ ತಿರಂಗಾʼದಂತಹ ಅಭಿಯಾನಗಳ ಉದಾಹರಣೆಗಳನ್ನು ಅವರು ನೀಡಿದರು. ಅವುಗಳನ್ನು ಸರ್ಕಾರವು ಪ್ರಾರಂಭಿಸಿತು ಆದರೆ ಮಾಧ್ಯಮಗಳು ಅವುಗಳನ್ನು ಇಡೀ ರಾಷ್ಟ್ರವು ಮುಂದಕ್ಕೆ ಕೊಂಡೊಯ್ದವು. ಅಂತೆಯೇ, ರಾಜಕೀಯ ವಿಷಯಕ್ಕಿಂತ ಮಾನವೀಯ ವಿಷಯವಾದ ಪರಿಸರ ಸಂರಕ್ಷಣೆಗೆ ಸರ್ಕಾರ ಒತ್ತು ನೀಡುತ್ತಿರುವುದನ್ನು ಪ್ರಧಾನಿ ಒತ್ತಿ ಹೇಳಿದರು. ಇದರ ಭಾಗವಾಗಿ, ಇತ್ತೀಚೆಗೆ ಪ್ರಾರಂಭಿಸಲಾದ 'ತಾಯಿಯ ಹೆಸರಲ್ಲಿ ತಲಾ ಒಂದು ಮರʼ ಅಭಿಯಾನವನ್ನು ಉಲ್ಲೇಖಿಸಿದರು. ಇದರ ಬಗ್ಗೆ ಇಂದು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ ಎಂದರು. ಪ್ರಧಾನಮಂತ್ರಿಯವರು ಭಾಗವಹಿಸಿದ್ದ ʻಜಿ 7ʼ ಶೃಂಗಸಭೆಯಲ್ಲಿ ವಿಶ್ವ ನಾಯಕರು ಈ ಕಾರ್ಯಕ್ರಮದ ಬಗ್ಗೆ ತೀವ್ರ ಆಸಕ್ತಿ ತೋರಿಸಿದರು. ಯುವ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಎಲ್ಲಾ ಮಾಧ್ಯಮ ಸಂಸ್ಥೆಗಳು ಈ ಪ್ರವೃತ್ತಿಗೆ ಸೇರಬೇಕೆಂದು ಅವರು ಒತ್ತಾಯಿಸಿದರು. "ರಾಷ್ಟ್ರದ ಪ್ರಯತ್ನವಾಗಿ ಇಂತಹ ಉಪಕ್ರಮಗಳನ್ನು ಮುಂದುವರಿಸುವಂತೆ ನಾನು ಮಾಧ್ಯಮ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು. ಭಾರತದ ಸಂವಿಧಾನದ 75ನೇ ವರ್ಷಾಚರಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಂವಿಧಾನದ ಬಗ್ಗೆ ನಾಗರಿಕರ ಕರ್ತವ್ಯ ಪ್ರಜ್ಞೆ ಮತ್ತು ಜಾಗೃತಿಯನ್ನು ಹೆಚ್ಚಿಸುವಲ್ಲಿ ಮಾಧ್ಯಮಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು.
ಪ್ರವಾಸೋದ್ಯಮಕ್ಕೂ ಪ್ರತಿಯೊಬ್ಬರ ಸಾಮೂಹಿಕ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಪತ್ರಿಕೆಗಳು ನಿರ್ದಿಷ್ಟ ತಿಂಗಳಲ್ಲಿ ನಿರ್ದಿಷ್ಟ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು ಎಂದು ಅವರು ಸಲಹೆ ನೀಡಿದರು. ಇದು ರಾಜ್ಯಗಳ ನಡುವೆ ಪರಸ್ಪರ ಹಿತಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಪತ್ರಿಕೆಗಳು ತಮ್ಮ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪ್ರಧಾನಿ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಭಾರತದ ಯಶಸ್ಸನ್ನು ವಿಶ್ವದ ಮೂಲೆ ಮೂಲೆಗೂ ಕೊಂಡೊಯ್ಯುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ ಎಂದರು. “ಒಂದು ದೇಶದ ಜಾಗತಿಕ ಚಿತ್ರಣವು ಅದರ ಆರ್ಥಿಕತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ,” ಎಂದು ಪ್ರಧಾನಿ ಹೇಳಿದರು. ಭಾರತದ ಸ್ಥಾನಮಾನದ ಹೆಚ್ಚಳ ಮತ್ತು ಜಾಗತಿಕ ಪ್ರಗತಿಗೆ ಕೊಡುಗೆ ನೀಡುವ ಸಾಮರ್ಥ್ಯ ಹೆಚ್ಚುತ್ತಿರುವುದರಿಂದ ಭಾರತೀಯ ವಲಸಿಗರ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಅವರು ಉಲ್ಲೇಖಿಸಿದರು. ವಿಶ್ವಸಂಸ್ಥೆಯ ಎಲ್ಲ ಭಾಷೆಗಳಲ್ಲಿ ಭಾರತೀಯ ಪ್ರಕಾಶನ ವಿಸ್ತರಣೆಯಾಗಲಿ ಎಂದು ಅವರು ಹಾರೈಸಿದರು. ಈ ಪ್ರಕಟಣೆಗಳ ವೆಬ್‌ಸೈಟ್‌ಗಳು, ಮೈಕ್ರೋಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳು ಆ ಭಾಷೆಗಳಲ್ಲಿರಬಹುದು, ಅಂತಹ ಪ್ರಯತ್ನಗಳಲ್ಲಿ ʻಕೃತಕ ಬುದ್ಧಿಮತ್ತೆʼ ಒದಗಿಸಿದ ಸುಲಭವನ್ನು ಬಳಸಿಕೊಳ್ಳಲು ಅವರು ಸಲಹೆ ನೀಡಿದರು.
ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಪ್ರಕಟಣೆಗೆ ಸಂಬಂಧಿಸಿದಂತೆ ಮುದ್ರಿತ ಆವೃತ್ತಿಗಳಿಗೆ ಹೋಲಿಸಿದರೆ ಡಿಜಿಟಲ್ ಆವೃತ್ತಿಗಳಲ್ಲಿ ಸ್ಥಳಾವಕಾಶದ ನಿರ್ಬಂಧಗಳಿಲ್ಲದ ಕಾರಣ ಡಿಜಿಟಲ್ ಆವೃತ್ತಯನ್ನೇ ಬಳಸಿಕೊಳ್ಳುವಂತೆ ಹಾಗೂ ಇಂದು ನೀಡಲಾದ ಸಲಹೆಗಳನ್ನು ಪರಿಗಣಿಸುವಂತೆ ಮಾಧ್ಯಮ ಸಂಸ್ಥೆಗಳನ್ನು ಒತ್ತಾಯಿಸಿದರು. "ನೀವೆಲ್ಲರೂ ಈ ಸಲಹೆಗಳನ್ನು ಪರಿಗಣಿಸುತ್ತೀರಿ, ಹೊಸ ಪ್ರಯೋಗಗಳನ್ನು ಮಾಡುತ್ತೀರಿ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ನೀವು ಹೆಚ್ಚು ಬಲವಾಗಿ ಕೆಲಸ ಮಾಡಿದಷ್ಟೂ ದೇಶವು ಹೆಚ್ಚು ಪ್ರಗತಿ ಸಾಧಿಸುತ್ತದೆ, ಎಂದು ಹೇಳುವ ಮೂಲಕ ಅವರು ಮಾತು ಮುಗಿಸಿದರು.
ಮಹಾರಾಷ್ಟ್ರ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವೀಸ್ ಮತ್ತು ಶ್ರೀ ಅಜಿತ್ ಪವಾರ್ ಹಾಗೂ ಭಾರತೀಯ ಪತ್ರಿಕಾ ಸಂಘದ ಅಧ್ಯಕ್ಷ ಶ್ರೀ ರಾಕೇಶ್ ಶರ್ಮಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
आज भारत एक ऐसे कालखंड में है जब उसकी अगले 25 वर्षों की यात्रा बहुत अहम है: PM @narendramodi pic.twitter.com/hO3uNbE2o5
— PMO India (@PMOIndia) July 13, 2024
जिस देश के नागरिकों में अपने सामर्थ्य को लेकर आत्मविश्वास आ जाता है...वो सफलता की नई ऊंचाई प्राप्त करने लगते हैं।
— PMO India (@PMOIndia) July 13, 2024
भारत में भी आज यही हो रहा है: PM @narendramodi pic.twitter.com/D6PbpfG2Am
विश्व में भारत की साख बढ़ी है। pic.twitter.com/NDngvPO015
— PMO India (@PMOIndia) July 13, 2024