ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯಲ್ಲಿರುವ ಸಿಂಬಾಯಸಿಸ್ ವಿಶ್ವವಿದ್ಯಾಲಯದ ಸುವರ್ಣ ಸಂಭ್ರಮವನ್ನು ಉದ್ಘಾಟಿಸಿದರು. ಸಿಂಬಾಯಸಿಸ್ ಆರೋಗ್ಯ ಧಾಮವನ್ನೂ ಅವರು ಉದ್ಘಾಟಿಸಿದರು. ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೋಶಿಯಾರಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳನ್ನು, ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಅಲ್ಲಿಯ ಸಿಬ್ಬಂದಿಯನ್ನು ಅಭಿನಂದಿಸುತ್ತ, ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿರುವ ’ವಸುಧೈವ ಕುಟುಂಬಕ್ಕಮ್’ ಕುರಿತು ಗಮನ ಸೆಳೆದರು. ವಿಶ್ವದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದಿರುವ ಈ ಆಧುನಿಕ ಸಂಸ್ಥೆಯು ಜಗತ್ತಿಗೆ ನಮ್ಮ ಪುರಾತನ ಪರಂಪರೆಯನ್ನು ಪರಿಚಯಿಸುತ್ತಿದೆ. ಜ್ಞಾನದ ಹರವು ವಿಸ್ತಾರವಾಗಬೇಕು. ಜಗತ್ತಿನಾದ್ಯಂತ ಹರಡಬೇಕು. ಜ್ಞಾನವು ಇಡೀ ಜಗತ್ತನ್ನು ಒಟ್ಟಿಗೆ ಕೂಡಿಡುವ ಮಾಧ್ಯಮವಾಗಬೇಕು. ಜಗವೆಲ್ಲ ಒಂದೇ ಕುಟುಂಬ ಎನ್ನುವ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಇಂಥ ಪರಂಪರೆ ಮತ್ತು ಸಂಪ್ರದಾಯಗಳು ಈಗಲೂ ನಮ್ಮ ದೇಶದಲ್ಲಿ ಜೀವಂತವಾಗಿವೆ ಎನ್ನುವುದೇ ನಮ್ಮ ಹೆಮ್ಮೆಯಾಗಿದೆ’ ಎಂದರು.
ಪ್ರಧಾನ ಮಂತ್ರಿಗಳು ಭಾರತದ ನವ ಆತ್ಮವಿಶ್ವಾಸವನ್ನು ಎತ್ತಿ ತೋರಿ, ನವಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ ಎಂಬುದಕ್ಕೆ ಒತ್ತು ನೀಡಿ ಹೇಳಿದರು. ಜಗತ್ತಿನ ಮೂರನೆಯ ಅತಿದೊಡ್ಡ ಸ್ಟಾರ್ಟಪ್ ಇಕೊಸಿಸ್ಟಮ್ ಇರುವ ದೇಶವಾಗಿ ಹೊರಹೊಮ್ಮಿದೆ. ‘ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನಿಮ್ಮೆಲ್ಲರ ಮಹತ್ವಾಕಾಂಕ್ಷೆಗಳನ್ನು ಪ್ರತಿನಿಧಿಸುತ್ತವೆ. ಇಂದಿನ ಭಾರತವು, ನಾವೀನ್ಯವನ್ನು ಉತ್ತೇಜಿಸುತ್ತದೆ. ಸುಧಾರಿಸುತ್ತಿದೆ. ಇಡೀ ಜಗತ್ತನ್ನೆ ಪ್ರಭಾವಿಸುತ್ತಿದೆ ಎಂದು ಹೇಳಿದರು. ಎಲ್ಲ ಪುಣೇಕರ್‌ಗಳಿಗೆ, ಪುಣೆಯವಾಸಿಗಳಿಗೆ ಕೊರೊನಾ ಲಸಿಕೆಗಳನ್ನು ನೀಡುವ ಸಂದರ್ಭದಲ್ಲಿ ಇಡೀ ದೇಶ ಒಗ್ಗೂಡಿದ ಬಗೆಯನ್ನು ವಿವರಿಸಿ ಹೇಳಬೇಕಾಗಿಲ್ಲ. ಭಾರತವು ತನ್ನ ಶಕ್ತಿಯನ್ನು ಎತ್ತಿ ತೋರಿಸಿದೆ ಎಂದರು.
ಯುಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಯುದ್ದರಂಗದಿಂದ ಭಾರತೀಯರನ್ನು ‘ಆಪರೇಷನ್ ಗಂಗಾ’ ಮೂಲಕ ಸುರಕ್ಷಿತವಾಗಿ ಕರೆತರುತ್ತಿದೆ ಎಂಬುದಕ್ಕೆ ಅತಿ ಹೆಚ್ಚು ಮಹತ್ವ ನೀಡಿ ತಿಳಿಸಿದರು. ಜಗತ್ತಿನ ಅತಿದೊಡ್ಡ ದೇಶಗಳಿಗೆ ತಮ್ಮ ನಾಗರಿಕರನ್ನು ರಕ್ಷಿಸುವುದು ಕಷ್ಟವಾಗುತ್ತಿದೆ. ಆದರೆ ನಾವಿಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತಂದಿರುವುದು, ಭಾರತದ ಪ್ರಭಾವ ಹೆಚ್ಚುತ್ತಿರುವುದರ ಪ್ರತೀಕವಾಗಿದೆ.
ಪ್ರಧಾನ ಮಂತ್ರಿಗಳು ಈ ತಲೆಮಾರಿನ ಯುವಜನಾಂಗವನ್ನು ಉದ್ದೇಶಿಸಿ ಮಾತನಾಡುತ್ತ, ನಿಮ್ಮ ತಲೆಮಾರು ಅತಿ ಅದೃಷ್ಟವಂತದ್ದು. ಯುದ್ಧ, ಅವಲಂಬಿತ ಮನೋಸ್ಥಿತಿಯ ದುಷ್ಪರಿಣಾಮಗಳನ್ನು ಈ ತಲೆಮಾರು ಎದುರಿಸಬೇಕಾಗಿಲ್ಲ. ಇಂಥ ಬದಲಾವಣೆ ಬಂದಿದೆಯೆಂದರೆ ಅದಕ್ಕೆ ಕಾರಣ ಈ ಕಾಲದ ಯುವಜನಾಂಗವೂ ಆಗಿದೆ. ಈ ಶ್ರೇಯದ ಪರಿಪೂರ್ಣ ಯಶಸ್ಸು ನಮ್ಮ ಯುವಜನಾಂಗಕ್ಕೆ ಸೇರಬೇಕಾಗಿದೆ ಎಂದು ಶ್ಲಾಘಿಸಿದರು.
ನಮ್ಮ ವ್ಯಾಪ್ತಿಯಿಂದಾಚೆ ಇದ್ದ ಕ್ಷೇತ್ರಗಳಲ್ಲಿಯೂ ಭಾರತವೀಗ ಜಾಗತಿಕ ನಾಯಕನಂತೆ ಹೊರಹೊಮ್ಮಿದೆ. ಭಾರತವು ಜಾಗತಿಕವಾಗಿ ಮೊಬೈಲ್‌ಫೋನುಗಳನ್ನು ಉತ್ಪಾದಿಸುವ ಎರಡನೆಯ ಅತಿ ದೊಡ್ಡ ರಾಷ್ಟ್ರವಾಗಿದೆ. ಏಳು ವರ್ಷಗಳ ಹಿಂದೆ ಕೇವಲ 2 ಕಂಪನಿಗಳು ಮೊಬೈಲ್ ಫೋನುಗಳನ್ನು ಉತ್ಪಾದಿಸುತ್ತಿದ್ದವು. ಇಂದು 200ಕ್ಕಿಂತಲೂ ಹೆಚ್ಚು ಘಟಕಗಳು ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಿರತವಾಗಿವೆ. ರಕ್ಷಣಾಪಡೆಯಲ್ಲಿಯೂ ಭಾರತವು ಅತಿದೊಡ್ಡ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿತ್ತು. ಈಗ ಸುರಕ್ಷೆಗೆ ಸಂಬಂಧಿಸಿದಂತೆ ರಫ್ತುಗೊಳಿಸುವ ರಾಷ್ಟ್ರವಾಗಿ ಬದಲಾಗಿದೆ. ಈಗ ಎರಡು ಬೃಹತ್‌ಪ್ರಮಾಣದ ಎರಡು ಸುರಕ್ಷಾ ಕಾರಿಡಾರ್‌ಗಳು ಬರಲಿವೆ. ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಘಟಕಗಳು ಆರಂಭವಾಗಲಿವೆ. ಭದ್ರತಾಪಡೆಯ ಎಲ್ಲ ಅಗತ್ಯಗಳನ್ನೂ ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಹುತೇಕ ವಿಶೇಷ ಕ್ಷೇತ್ರಗಳು ಮುಕ್ತವಾಗಿವೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು. ಜಿಯೊ ಸ್ಪಾಶಿಯಲ್ ಸಿಸ್ಟಮ್ಸ್, ಡ್ರೋನ್‌ಗಳು, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ದೇಶದಲ್ಲಿರುವ ಇಂದಿನ ಸರ್ಕಾರವು ಯುವಜನತೆಯ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿದೆ. ಅದೇ ಕಾರಣದಿಂದಲೇ ಅನೇಕ ಕ್ಷೇತ್ರಗಳನ್ನು ಮುಕ್ತವಾಗಿರಿಸಲಾಗಿದೆ. ಒಂದಾದ ನಂತರ ಒಂದರಂತೆ ಎಲ್ಲ ಕ್ಷೇತ್ರಗಳನ್ನೂ ಯುವಜನತೆಗೆ ಮುಕ್ತವಾಗಿರಿಸಲಾಗುತ್ತಿದೆ.
ನೀವು ಯಾವುದೇ ಕ್ಷೇತ್ರದಲ್ಲಿರಲಿ, ನಿಮ್ಮ ಭವಿಷ್ಯದಲ್ಲಿ ಒಂದಷ್ಟು ಗುರಿಗಳನ್ನು ನಿರ್ಧರಿಸುವಂತೆಯೇ ದೇಶಕ್ಕಾಗಿಯೂ ಕೆಲವು ಗುರಿಗಳನ್ನು ನಿರ್ಧರಿಸಿ ಎಂದು ಪ್ರಧಾನಿ ಮೋದಿ ಅವರು ಕೋರಿಕೊಂಡರು. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ಸ್ವಾಸ್ಥ್ಯವನ್ನು ನೋಡಿಕೊಳ್ಳಿ. ಸುದೃಢಕಾಯಗಳಾಗಿ. ಸಂತೋಷದಿಂದಿರಿ, ಉಜ್ವರ ಭವಿಷ್ಯ ಹೊಂದಿರಿ. ನಮ್ಮ ವೈಯಕ್ತಿಕ ಬೆಳವಣಿಗೆಯಿಂದ ದೇಶದ ಅಭಿವೃದ್ಧಿಯ ಗುರಿಯಾಗಿ ಬದಲಾದಾಗ ದೇಶ ನಿರ್ಮಿಸುವ ಕೆಲಸದಲ್ಲಿ ಸಹಭಾಗಿಯಾಗುವ ಭಾವ ಬರುತ್ತದೆ ಎಂದು ಯುವಜನಾಂಗಕ್ಕೆ ಉತ್ತೇಜನದ ಮಾತುಗಳನ್ನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ಒಂದು ಗುರಿಯನ್ನಿರಿಸಿಕೊಂಡು ಅದಕ್ಕೆ ತಕ್ಕನಾಗಿ ಶ್ರಮಿಸಬೇಕು. ರಾಷ್ಟ್ರೀಯ ಮತ್ತು ಜಾಗತಿಕ ಬೇಡಿಕೆಗಳು, ಬೇಕುಬೇಡಗಳನ್ನು ಗಮನದಲ್ಲಿರಿಸಿಕೊಂಡು ಇವನ್ನು ಮುಂದುವರಿಯಬೇಕು. ಅಂಥ ಯೋಚನೆಗಳು, ಆಲೋಚನೆಗಳು ಮತ್ತು ಯೋಜನೆಗಳಿದ್ದರೆ ಅವುಗಳನ್ನು ಪ್ರಧಾನಮಂತ್ರಿ ಕಚೇರಿಯೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು ಎಂದೂ ಕರೆ ನೀಡಿದರು.
मुझे ये भी बताया गया है कि Symbiosis ऐसी University है जहां ‘वसुधैव कुटुम्बकम्’ पर अलग से एक कोर्स है।
— PMO India (@PMOIndia) March 6, 2022
ज्ञान का व्यापक प्रसार हो, ज्ञान पूरे विश्व को एक परिवार के रूप में जोड़ने का माध्यम बने, ये हमारी संस्कृति रही है।
मुझे खुशी है कि ये परंपरा हमारे देश में आज भी जीवंत है: PM
आज आपका देश दुनिया की सबसे बड़ी economies में शामिल है।
— PMO India (@PMOIndia) March 6, 2022
दुनिया का तीसरा सबसे बड़ा start-up ecosystem आज हमारे देश में है: PM @narendramodi
स्टार्टअप इंडिया, स्टैंडअप इंडिया, मेक इन इंडिया और आत्मनिर्भर भारत जैसे मिशन आपके aspirations को represent कर रहे हैं।
— PMO India (@PMOIndia) March 6, 2022
आज का इंडिया innovate कर रहा है, improve कर रहा है, और पूरी दुनिया को influence कर रहा है: PM @narendramodi
पुणे में रहने वाले लोग तो अच्छी तरह जानते हैं कि कोरोना वैक्सीनेशन को लेकर भारत ने किस तरह पूरी दुनिया के सामने अपना सामर्थ्य दिखाया है।
— PMO India (@PMOIndia) March 6, 2022
अभी आप लोग यूक्रेन संकट के समय भी देख रहे हैं कि कैसे ऑपरेशन गंगा चलाकर भारत अपने नागरिकों को युद्ध क्षेत्र से सुरक्षित बाहर निकाल रहा है: PM
आपकी जेनेरेशन एक तरह से खुशनसीब है कि उसे पहले वाली defensive और dependent psychology का नुकसान नहीं उठाना पड़ा।
— PMO India (@PMOIndia) March 6, 2022
लेकिन, देश में अगर ये बदलाव आया है तो इसका सबसे पहला क्रेडिट भी आप सभी को जाता है, हमारे युवा को जाता है, हमारे youth को जाता है: PM @narendramodi
Mobile manufacturing में भारत दुनिया का दूसरा सबसे बड़ा देश बनकर उभरा है।
— PMO India (@PMOIndia) March 6, 2022
सात साल पहले भारत में सिर्फ 2 मोबाइल मैन्यूफैक्चरिंग कंपनियां थीं, आज 200 से ज्यादा मैन्यूफैक्चरिंग यूनिट्स इस काम में जुटी हैं: PM @narendramodi
आज देश में जो सरकार है, वो देश के युवाओं के सामर्थ्य पर, आपके सामर्थ्य पर भरोसा करती है।
— PMO India (@PMOIndia) March 6, 2022
इसलिए हम एक के बाद एक सेक्टर्स को आपके लिए खोलते जा रहे हैं।
इन अवसरों का खूब फायदा उठाइए: PM @narendramodi
आप चाहे जिस किसी फील्ड में हों, जिस तरह आप अपने career के लिए goals set करते हैं, उसी तरह आपके कुछ goals देश के लिए होने चाहिए: PM @narendramodi
— PMO India (@PMOIndia) March 6, 2022