ಸಮಯದಲ್ಲಿ, ಇಂದೋರ್ ಉತ್ತಮವಾಗಿ ಬದಲಾಗಿದೆ ಆದರೆ ದೇವಿ ಅಹಿಲಿಯಾಬಾಯಿಯ ಸ್ಫೂರ್ತಿಯನ್ನು ಎಂದಿಗೂ ಕಳೆದುಕೊಂಡಿಲ್ಲ ಮತ್ತು ಇಂದು ಇಂದೋರ್ ಸ್ವಚ್ಛತಾ ಮತ್ತು ನಾಗರಿಕ ಕರ್ತವ್ಯವನ್ನು ನೆನಪಿಸುತ್ತದೆ
ತ್ಯಾಜ್ಯದಿಂದ ಗೋಬರ್ಧನ್, ಗೋಬರ್ ಧನದಿಂದ ಶುದ್ಧ ಇಂಧನ, ಶುದ್ಧ ಇಂಧನದಿಂದ ಶಕ್ತಿಯು ಜೀವನದ ದೃಢೀಕರಣ ಸರಪಳಿ
ಮುಂಬರುವ ಎರಡು ವರ್ಷಗಳಲ್ಲಿ 75 ದೊಡ್ಡ ಪುರಸಭೆಗಳಲ್ಲಿ ಗೋಬರ್ ಧನ್ ಬಯೋ ಸಿಎನ್‌ಜಿ ಘಟಕಗಳನ್ನು ಸ್ಥಾಪಿಸಲಾಗುವುದು
ಸರ್ಕಾರವು ಸಮಸ್ಯೆಗಳಿಗೆ ತ್ವರಿತ-ಸ್ಥಿರ ತಾತ್ಕಾಲಿಕ ಪರಿಹಾರಗಳ ಬದಲಿಗೆ ಶಾಶ್ವತ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸಿದೆ
ದೇಶದ ಕಸ ವಿಲೇವಾರಿ ಸಾಮರ್ಥ್ಯವು 2014 ರಿಂದ 4 ಪಟ್ಟು ಹೆಚ್ಚಾಗಿದೆ. 1600 ಕ್ಕೂ ಹೆಚ್ಚು ದೇಹಗಳು ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ತೊಡೆದುಹಾಕಲು ವಸ್ತು ಚೇತರಿಕೆ ಸೌಲಭ್ಯಗಳನ್ನು ಪಡೆಯುತ್ತಿವೆ
"ಭಾರತದ ಹೆಚ್ಚಿನ ನಗರಗಳನ್ನು ನೀರಿನ ಪ್ಲಸ್ ಮಾಡಲು ಇದು ಸರ್ಕಾರದ ಪ್ರಯತ್ನವಾಗಿದೆ. ಸ್ವಚ್ಛ ಭಾರತ್ ಮಿಷನ್‌ನ ಎರಡನೇ ಹಂತದಲ್ಲಿ ಇದನ್ನು ಒತ್ತಿಹೇಳಲಾಗಿದೆ. "
ನಮ್ಮ ಸಫಾಯಿ ಕರ್ಮಚಾರಿಗಳ ಪ್ರಯತ್ನ ಮತ್ತು ಸಮರ್ಪಣೆಗಾಗಿ ನಾವು ಅವರಿಗೆ ಋಣಿಯಾಗಿದ್ದೇವೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದೋರ್‌ನ “ಗೋಬರ್-ಧನ್(ಬಯೋ-ಸಿಎನ್ ಜಿ) ಘಟಕ”ವನ್ನು ಉದ್ಘಾಟಿಸಿದರು. ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯಿ ಸಿಂಗ್ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಕೇಂದ್ರ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ, ಡಾ. ವೀರೇಂದ್ರ ಕುಮಾರ್ ಮತ್ತು ಶ್ರೀ ಕೌಶಲ್ ಕಿಶೋರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ರಾಣಿ ಅಹಲ್ಯಾಬಾಯಿ ಅವರನ್ನು ಸ್ಮರಿಸಿಕೊಂಡು ಅವರು ಇಂದೋರ್‌ನಗರದ ಜತೆ ಹೊಂದಿದ್ದ ಸಂಬಂಧವನ್ನು ನೆನಪಿಸಿಕೊಂಡು ತಮ್ಮ ಭಾಷಣ ಆರಂಭಿಸಿದರು. ಇಂದೋರ್‌ನಮಗೆ ದೇವಿ ಅಹಲ್ಯಾಬಾಯಿ ಹೋಲ್ಕರ್ ಮತ್ತು ಅವರ ಸೇವಾ ಪ್ರಜ್ಞೆಯನ್ನು ನೆನಪಿಸುತ್ತದೆ ಎಂದರು. ಕಾಲಾನುಕ್ರಮೇಣ ಇಂದೋರ್ ಅತ್ಯುತ್ತಮ ರೀತಿಯಲ್ಲಿ ಬದಲಾಗುತ್ತಿದೆ. ಆದರೆ ದೇವಿ ಅಹಿಲಿಯಾ ಬಾಯಿ ಅವರ ಸ್ಫೂರ್ತಿಯಿಂದ ಹೊರಬಂದಿಲ್ಲ ಮತ್ತು ಇಂದು ಇಂದೋರ್‌ನಮಗೆ ಸ್ವಚ್ಛತೆ ಮತ್ತು ನಾಗರಿಕ ಕರ್ತವ್ಯವನ್ನು ನೆನಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಾಶಿವಿಶ್ವನಾಥ ಧಾಮದಲ್ಲಿ ಸುಂದರವಾದ ದೇವಿ ಅಹಲ್ಯಾಬಾಯಿ ಪ್ರತಿಮೆ ಇರುವುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಪ್ರಧಾನಮಂತ್ರಿ ಅವತು ಗೋಬರ್ ಧನ್ ದ ಪ್ರಾಮುಖ್ಯತೆ ಕುರಿತು ಪ್ರತಿಪಾದಿಸಿದರು ಮತ್ತು ನಗರದ ಮನೆಗಳಲ್ಲಿನ ಹಸಿತ್ಯಾಜ್ಯ ಮತ್ತು ಗೋವುಗಳ ತ್ಯಾಜ್ಯ ಹಾಗೂ ಕೃಷಿ ತ್ಯಾಜ್ಯ ಗೋಬರ್ ಧನ್ ವಾಗಿದೆ ಎಂದರು. ತ್ಯಾಜ್ಯದಿಂದ ಗೋಬರ್ ಧನ್, ಗೋಬರ್ ಧನ್ ದಿಂದ ಶುದ್ಧ ಅನಿಲ, ಶುದ್ಧ ಅನಿಲದಿಂದ ಇಂಧನ ಇದು ಜೀವವನ್ನು ಖಾತ್ರಿಪಡಿಸುವ ಸರಣಿಯಾಗಿದೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ ದೇಶದ 75 ಬೃಹತ್ ಮಹಾನಗರ ಪಾಲಿಕೆಗಳಲ್ಲಿ ಗೋಬರ್ ಧನ್ ಬಯೋ ಸಿಎನ್ ಜಿ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತದ ನಗರಗಳನ್ನು ಸ್ವಚ್ಛ, ಮಾಲಿನ್ಯರಹಿತಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ದೀರ್ಘಾವಧಿಯವರೆಗೆ ನಡೆಯಲಿದೆ ಮತ್ತು ಇದು ಶುದ್ಧ ಇಂಧನದ ದಿಕ್ಕಿನಲ್ಲಿ ಸಾಗಿದೆ” ಎಂದು ಹೇಳಿದರು. ಕೇವಲ ನಗರಗಳು ಮಾತ್ರವಲ್ಲ, ಗೋಬರ್ ಧನ್ ಘಟಕಗಳನ್ನು ಗ್ರಾಮಗಳಲ್ಲೂ ಸಹ ಸ್ಥಾಪಿಸಲಾಗುವುದು. ಆ ಮೂಲಕ ರೈತರಿಗೆ ಹೆಚ್ಚಿನ ಆದಾಯ ಬರುವಂತೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. ಇದು ಭಾರತೀಯ ಹವಾಗುಣ ಬದ್ಧತೆಗಳನ್ನು ಪೂರೈಸಲು ಬಿಡಾಡಿ ಮತ್ತು ಉಪಯೋಗಕ್ಕೆ ಬಾರದಂತಹ ಗೋವುಗಳ ಸಮಸ್ಯೆ ಪರಿಹಾರಕ್ಕೂ ನೆರವಾಗಲಿದೆ ಎಂದರು.

ಕಳೆದ 7 ವರ್ಷಗಳಿಂದೀಚೆಗೆ ತಮ್ಮ ಸರ್ಕಾರ ಸಮಸ್ಯೆಗಳಿಗೆ ತ್ವರಿತವಾಗಿ ತಾತ್ಕಾಲಿಕ ಪರಿಹಾರಗಳನ್ನು ಹುಡುಕುವ ಬದಲಿಗೆ ಕಾಯಂ ಪರಿಹಾರಗಳನ್ನು ಒದಗಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎರಡನೇ ಹಂತದ ಸ್ವಚ್ಛ ಭಾರತ್ ಮಿಷನ್ ಅಡಿ ಸರ್ಕಾರ ಸಾವಿರಾರು ಎಕರೆ ಭೂಮಿಯ ಮೇಲಿರುವ ಲಕ್ಷಾಂತರ ಟನ್ ತ್ಯಾಜ್ಯವನ್ನು ತೆರವುಗೊಳಿಸಲು ಮತ್ತು ಅದರಿಂದ ಆಗುವ ವಾಯು ಮತ್ತು ಜಲಮಾಲಿನ್ಯದಿಂದ ಉಂಟಾಗುವ ರೋಗಗಳ ನಿವಾರಣೆಗೆ ಮುಂದಾಗಿದೆ ಎಂದು ಅವರು ಹೇಳಿದರು. ಸ್ವಚ್ಛ ಭಾರತ್ ಅಭಿಯಾನ ಮಹಿಳೆಯರ ಘನತೆಯನ್ನು ಹೆಚ್ಚಿಸಲು ಕಾರಣವಾಗಿರುವುದೇ ಅಲ್ಲದೆ, ಗ್ರಾಮಗಳು ಮತ್ತು ನಗರಗಳನ್ನು ಸುಂದರಗೊಳಿಸಿದೆ. ಇದೀಗ ಹಸಿ ತ್ಯಾಜ್ಯದ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಸರ್ಕಾರ ಈ ತ್ಯಾಜ್ಯ ಪರ್ವತಗಳನ್ನು ಮುಂದಿನ ಎರಡು-ಮೂರು ವರ್ಷಗಳಲ್ಲಿ ಹಸಿರುವ ವಲಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದರು. 2014ರಿಂದೀಚೆಗೆ ದೇಶದಲ್ಲಿ ತ್ಯಾಜ್ಯ ವಿಲೇವಾರಿ ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. 1600ಕ್ಕೂ ಅಧಿಕ ಸಂಸ್ಥೆಗಳು ಬಿಡಿ ಪ್ಲಾಸ್ಟಿಕ್ ಬಳಕೆ ಮುಕ್ತಗೊಳಿಸಲು ಅದರಲ್ಲಿನ ವಸ್ತುಗಳನ್ನು ಪುನಃ ಪಡೆಯುವ ಕಾರ್ಯದಲ್ಲಿ ತೊಡಗಿವೆ.

ಸ್ವಚ್ಛತೆ ಮತ್ತು ಪ್ರವಾಸೋದ್ಯಮದ ನಡುವಿನ ಸಂಬಂಧವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಸ್ವಚ್ಛತೆಯಿಂದಾಗಿ ಪ್ರವಾಸೋದ್ಯಮ ವೃದ್ಧಿಯಾಗುತ್ತಿದೆ ಮತ್ತು ಇದು ಹೊಸ ಆರ್ಥಿಕತೆ ಉದಯಕ್ಕೆ ಕಾರಣವಾಗಿದೆ ಎಂದರು. ಈ ನಿಟ್ಟಿನಲ್ಲಿ ಇಂದೋರ್, ಸ್ವಚ್ಛ ನಗರಿ ಸಾಧನೆ ಮಾಡಿರುವ ಉದಾಹರಣೆಯನ್ನು ನೀಡಿದರು. “ಹಲವು ಭಾರತೀಯ ನಗರಗಳಲ್ಲಿ ಅಧಿಕ ನೀರು ಹೊಂದುವಂತೆ ಮಾಡುವುದು ಸರ್ಕಾರದ ಪ್ರಯತ್ನವಾಗಿದೆ. “ಸ್ವಚ್ಛ ಭಾರತ್ ಮಿಷನ್ ಎರಡನೇ ಹಂತದಲ್ಲಿ ಇದಕ್ಕೆ ಒತ್ತು ನೀಡಲಾಗಿದೆ” ಎಂದು ಹೇಳಿದರು.

ಕಳೆದ 7-8 ವರ್ಷಗಳಿಂದೀಚೆಗೆ ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣ ಶೇ. 1ರಷ್ಟು ಇದ್ದದ್ದು, ಸುಮಾರು ಶೇ.8ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ಅವಧಿಯಲ್ಲಿ ಎಥೆನಾಲ್ ಪೂರೈಕೆ ಪ್ರಮಾಣ ಗಣನೀಯವಾಗಿ 40 ಕೋಟಿ ಲೀಟರ್ ನಿಂದ 300 ಕೋಟಿ ಲೀಟರ್ ಗೆ ಹೆಚ್ಚಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳು ಮತ್ತು ರೈತರಿಗೆ ಸಹಾಯಕವಾಗಿದೆ ಎಂದರು.

ಬಜೆಟ್ ನಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಂಡಿರುವ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಕಲ್ಲಿದ್ದಲು ಆಧಾರಿತ ವಿದ್ಯುತ್ ಘಟಕಗಳಲ್ಲಿ ಕೃಷಿ ತ್ಯಾಜ್ಯ ಅಥವಾ ಪರಲಿಯನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು. “ಇದರಿಂದ ರೈತರ ಸಮಸ್ಯೆಗಳ ನಿವಾರಣೆಗೆ ಸಹಾಯಕವಾಗುವುದಲ್ಲದೆ, ಕೃಷಿ ತ್ಯಾಜ್ಯದಿಂದ ರೈತರಿಗೆ ಅಧಿಕ ಆದಾಯವೂ ದೊರಕಲಿದೆ” ಎಂದು ಅವರು ಹೇಳಿದರು.

ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಲಕ್ಷಾಂತರ ಸಫಾಯಿ ಕರ್ಮಚಾರಿಗಳು ದೇಶಾದ್ಯಂತ ಅಹರ್ನಿಷಿ ದುಡಿಯುತ್ತಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕದ ವೇಳೆ ಅವರ ಸೇವಾ ಪ್ರಜ್ಞೆಗಾಗಿ ವಿಶೇಷ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪ್ರಧಾನಮಂತ್ರಿ ಹೇಳಿದರು. ಕುಂಭಮೇಳದ ವೇಳೆ ಪ್ರಯಾಗ್ ರಾಜ್ ನಲ್ಲಿ ಸಫಾಯಿ ಕರ್ಮಚಾರಿಗಳ ಕಾಲು ತೊಳೆದು ಅವರಿಗೆ ತಾವು ಹೇಗೆ ಗೌರವ ಸಲ್ಲಿಸಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಹಿನ್ನೆಲೆ

“ತ್ಯಾಜ್ಯರಹಿತ ನಗರಗಳನ್ನು” ಸೃಷ್ಟಿಸು ಒಟ್ಟಾರೆ ದೂರದೃಷ್ಟಿಯುಳ್ಳ ಸ್ವಚ್ಛ ಭಾರತ್ ಮಿಷನ್ 2.0ಗೆ ಪ್ರಧಾನಮಂತ್ರಿ ಅವರು ಇತ್ತೀಚೆಗೆ ಚಾಲನೆ ನೀಡಿದ್ದರು. ಈ ಯೋಜನೆಯನ್ನು ‘ತ್ಯಾಜ್ಯದಿಂದ ಸಂಪತ್ತು ಸೃಷ್ಟಿ’ ಮತ್ತು ‘ಆರ್ಥಿಕ ಚಲಾವಣೆ’-ಸಂಪನ್ಮೂಲಗಳ ಗರಿಷ್ಠ ಪುನರ್ ಬಳಕೆ ಎಂಬ ತತ್ವದಡಿ ಜಾರಿಗೊಳಿಸಲಾಗುತ್ತಿದ್ದು, ಈ ಎರಡೂ ಅಂಶಗಳನ್ನು ಇಂದೋರ್ ಬಯೋ ಸಿಎನ್ ಜಿ ಘಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇಂದು ಉದ್ಘಾಟಿಸಲಾದ ಘಟಕ ಪ್ರತಿ ದಿನ 550 ಟನ್ ವಿಂಗಡಿಸಲಾದ ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಿದೆ. ಅಲ್ಲದೆ ಇದು ಪ್ರತಿ ದಿನ 17,000 ಕೆ.ಜಿ. ಸಿಎನ್ ಜಿಅನ್ನು ಮತ್ತು ಪ್ರತಿ ದಿನ 100 ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸುವ ನಿರೀಕ್ಷೆ ಇದೆ. ಈ ಘಟಕ ಶೂನ್ಯ ಭೂಭರ್ತಿ ಮಾದರಿಯನ್ನು ಆಧರಿಸಿದೆ. ಇದರಲ್ಲಿ ಯಾವುದೇ ರೀತಿಯ ತ್ಯಾಜ್ಯ ಸೃಷ್ಟಿಯಾಗುವುದಿಲ್ಲ. ಅಲ್ಲದೆ ಈ ಯೋಜನೆಯಿಂದ ಹಸಿರು ಅನಿಲ ಹೊರಸೂಸುವಿಕೆ ತಗ್ಗುವುದರ ಜತೆಗೆ ಹಸಿರು ಇಂಧನ ಮತ್ತು ಸಾವಯವ ರಸಗೊಬ್ಬರ ಉತ್ಪಾದನೆಯಾಗುವ ಮೂಲಕ ಪರಿಸರಕ್ಕೆ ಹಲವು ಪ್ರಯೋಜನಗಳನ್ನು ದೊರಕಿಸಿಕೊಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ವಿಶೇಷ ಉದ್ದೇಶದ ಇಂದೋರ್ ಶುದ್ಧ ಇಂಧನ ಪ್ರೈ.ಲಿ. ಸಂಸ್ಥೆಯನ್ನು ಇಂದೋರ್ ಮಹಾನಗರ ಪಾಲಿಕೆ(ಐಎಂಸಿ) ಮತ್ತು ಇಂಡೊ ಎನ್ವಿರೊ ಇಂಟಿಗ್ರೇಟೆಡ್ ಸೊಲ್ಯೂಷನ್ಸ್ ಲಿ.(ಐಇಐಎಸ್ಎಲ್) ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಡಿ ಸ್ಥಾಪಿಸಿದ್ದು, ಇದಕ್ಕೆ ಐಇಐಎಸ್ಎಲ್ ಶೇ.100ರಷ್ಟು ಅಂದರೆ 150 ಕೋಟಿ ರೂ. ಬಂಡವಾಳ ಹೂಡಿದೆ. ಈ ಘಟಕದಿಂದ ಕನಿಷ್ಠ ಶೇ.50ರಷ್ಟು ಸಿಎನ್ ಜಿಅನ್ನು ಇಂದೋರ್ ಮಹಾನಗರ ಪಾಲಿಕೆ ಖರೀದಿಸಲಿದೆ. ಇದೇ ಮೊದಲ ಭಾರಿಗೆ ಸಿಎನ್ ಜಿ ಯಿಂದ ಸುಮಾರು 400 ನಗರ ಬಸ್ ಗಳನ್ನು ಓಡಿಸಲಾಗುತ್ತಿದೆ. ಉಳಿದ ಸಿಎನ್ ಜಿ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು. ಸಾವಯವ ರಸಗೊಬ್ಬರ, ಕೃಷಿ ಮತ್ತು ತೋಟಗಾರಿಕಾ ಉದ್ದೇಶಗಳಿಗೆ ರಾಸಾಯನಿಕ ರಸಗೊಬ್ಬರದ ಬದಲಿಗೆ ಬಳಕೆ ಮಾಡಲು ನೆರವಾಗಲಿದೆ.

 

Click here to read PM's speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Ray Dalio: Why India is at a ‘Wonderful Arc’ in history—And the 5 forces redefining global power

Media Coverage

Ray Dalio: Why India is at a ‘Wonderful Arc’ in history—And the 5 forces redefining global power
NM on the go

Nm on the go

Always be the first to hear from the PM. Get the App Now!
...
Prime Minister pays tributes to Shri Atal Bihari Vajpayee ji at ‘Sadaiv Atal’
December 25, 2025

The Prime Minister, Shri Narendra Modi paid tributes at ‘Sadaiv Atal’, the memorial site of former Prime Minister, Atal Bihari Vajpayee ji, on his birth anniversary, today. Shri Modi stated that Atal ji's life was dedicated to public service and national service and he will always continue to inspire the people of the country.

The Prime Minister posted on X:

"पूर्व प्रधानमंत्री श्रद्धेय अटल बिहारी वाजपेयी जी की जयंती पर आज दिल्ली में उनके स्मृति स्थल ‘सदैव अटल’ जाकर उन्हें श्रद्धांजलि अर्पित करने का सौभाग्य मिला। जनसेवा और राष्ट्रसेवा को समर्पित उनका जीवन देशवासियों को हमेशा प्रेरित करता रहेगा।"