ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶದ ಲಕ್ನೋದಲ್ಲಿಂದು 11ನೇ ಆವೃತ್ತಿಯ ರಕ್ಷಣಾ ಉತ್ಪನ್ನಗಳ ಪ್ರದರ್ಶನ ಡಿಫೆನ್ಸ್ ಎಕ್ಸ್ ಪೊ ಉದ್ಘಾಟಿಸಿದರು. ಭಾರತದ ದ್ವೈವಾರ್ಷಿಕ ಈ ಮಿಲಿಟರಿ ಉತ್ಪನ್ನಗಳ ಪ್ರದರ್ಶನ ದೇಶದ ರಕ್ಷಣಾ ಸಾಮರ್ಥ್ಯವನ್ನು ಜಾಗತಿಕ ರಕ್ಷಣಾ ಉತ್ಪಾದನಾ ತಾಣವನ್ನಾಗಿ ಬಿಂಬಿಸುವ ಉದ್ದೇಶದ್ದು, ಡಿಫೆನ್ಸ್ ಎಕ್ಸ್ ಪೊ 2020 ಕೇವಲ ಭಾರತದ ಅತಿದೊಡ್ಡ ರಕ್ಷಣಾ ಉತ್ಪನ್ನಗಳ ಪ್ರದರ್ಶನ ವೇದಿಕೆಯಲ್ಲ, ಇದು ವಿಶ್ವದ ಅತಿದೊಡ್ಡ ಡಿಫೆನ್ಸ್ ಎಕ್ಸ್ ಪೊಗಳಲ್ಲಿ ಒಂದಾಗಿದೆ. ಈ ಬಾರಿ ಒಂದು ಸಾವಿರಕ್ಕೂ ಅಧಿಕ ರಕ್ಷಣಾ ಉತ್ಪನ್ನಗಳ ಉತ್ಪಾದಕರು ಮತ್ತು ಜಗತ್ತಿನ 150 ಕಂಪನಿಗಳು ಈ ಪ್ರದರ್ಶನದ ಭಾಗವಾಗಿವೆ.
11ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ ಪೊಗೆ ಎಲ್ಲರನ್ನೂ ಸ್ವಾಗತಿಸಲು ನನಗೆ ಎರಡು ಕಾರಣಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಒಂದು ತಾವು ಭಾರತದ ಪ್ರಧಾನಮಂತ್ರಿಯಾಗಿ ಮತ್ತೊಂದು ಉತ್ತರ ಪ್ರದೇಶದ ಸಂಸದನಾಗಿ ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದರು. “ಭಾರತದ ಜನರಿಗೆ ಹಾಗೂ ಯುವ ಜನತೆಗೆ ಇದು ಅತಿದೊಡ್ಡ ಅವಕಾಶವಾಗಿದೆ, ಮೇಕ್ ಇನ್ ಇಂಡಿಯಾ ಯೋಜನೆ ಭಾರತದ ಭದ್ರತೆಯನ್ನಷ್ಟೇ ಹೆಚ್ಚಿಸಿಲ್ಲ, ರಕ್ಷಣಾ ವಲಯದಲ್ಲಿ ಸಾಕಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಇದು ಭವಿಷ್ಯದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಭಾರತ ಇಡೀ ವಿಶ್ವಕ್ಕೆ ಕೇವಲ ಮಾರುಕಟ್ಟೆ ಮಾತ್ರವಲ್ಲ, ವಿಫುಲ ಅವಕಾಶಗಳ ತಾಣ
“ಇಂದಿನ ಡಿಫೆನ್ಸ್ ಎಕ್ಸ್ ಪೊ ಭಾರತದ ವೈಶಾಲ್ಯತೆ, ಹಿಡಿದ ಕೆಲಸವನ್ನು ಛಲ ಬಿಡದೆ ಸಾಧಿಸುವುದು ಮತ್ತು ವಿಭನ್ನತೆ ಬಿಂಬಿಸುವ ಜೀವಂತ ಸಾಕ್ಷಿಯಾಗಿದೆ ಹಾಗೂ ಅಗಾಧ ಭಾಗವಹಿಸುವಿಕೆ ಹೊಂದಿದೆ. ಇದು ರಕ್ಷಣಾ ಮತ್ತು ಭದ್ರತಾ ವಲಯದಲ್ಲಿ ಭಾರತ ಅತ್ಯಂತ ಬಲಿಷ್ಠ ಪಾತ್ರದೊಂದಿಗೆ ಮುನ್ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಎಕ್ಸ್ ಪೊ ಕೇವಲ ರಕ್ಷಣೆಗೆ ಸಂಬಂಧಿಸಿದ ಉದ್ಯಮಗಳಿಗೆ ಮಾತ್ರ ಸೀಮಿತವಾದುದಲ್ಲ, ಇದು ಒಟ್ಟಾರೆ ಭಾರತದ ಬಗೆಗೆ ವಿಶ್ವದ ನಂಬಿಕೆಯನ್ನು ತೋರಿಸುತ್ತದೆ ಎಂದರು. ಯಾರಿಗೆ ರಕ್ಷಣೆ ಮತ್ತು ಆರ್ಥಿಕತೆಯ ಬಗ್ಗೆ ಚೆನ್ನಾಗಿ ತಿಳಿದಿದೆಯೋ ಅವರಿಗೆ ಖಂಡಿತವಾಗಿಯೂ ಅರ್ಥವಾಗುತ್ತದೆ. ಭಾರತ ಕೇವಲ ಮಾರುಕಟ್ಟೆಯಲ್ಲ, ಭಾರತ ಇಡೀ ವಿಶ್ವಕ್ಕೆ ವಿಪುಲ ಅವಕಾಶಗಳನ್ನು ಸೃಷ್ಟಿಸುವ ತಾಣ ಎಂಬುದು”
ರಕ್ಷಣಾ ವಲಯದಲ್ಲಿ ಡಿಜಿಟಲ್ ಪರಿವರ್ತನೆಯಿಂದ ನಾಳಿನ ಸವಾಲುಗಳ ಪ್ರತಿಫಲನ
ಪ್ರಧಾನಮಂತ್ರಿ ಅವರು ಡಿಫೆನ್ಸ್ ಎಕ್ಸ್ ಪೋ ದ ಉಪ ಘೋಷ ‘ರಕ್ಷಣಾ ವಲಯದ ಡಿಜಿಟಲ್ ಪರಿವರ್ತನೆ’ ಭವಿಷ್ಯದ ಸವಾಲುಗಳು ಮತ್ತು ಆತಂಕಗಳನ್ನು ಬಿಂಬಿಸುತ್ತದೆ ಎಂದು ಹೇಳಿದರು. ಜೀವನ ತಂತ್ರಜ್ಞಾನ ಆಧಾರಿತವಾಗುತ್ತಿರುವಂತೆಯೇ ಭದ್ರತಾ ಕಳಕಳಿ ಮತ್ತು ಸವಾಲುಗಳು ಅತ್ಯಂತ ಹೆಚ್ಚು ಗಂಭೀರವಾಗತೊಡಗಿವೆ. ಇದು ಇಂದಿಗೆ ಮಾತ್ರ ಅತ್ಯಂತ ಪ್ರಮುಖವಲ್ಲ, ಆದರೆ ಇದು ನಮ್ಮ ಭವಿಷ್ಯಕ್ಕೂ ಅತ್ಯಂತ ಪ್ರಮುಖವಾದುದು. ಜಾಗತಿಕವಾಗಿ ರಕ್ಷಣಾ ಪಡೆಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುತ್ತಿವೆ. ಭಾರತವೂ ಕೂಡ ವಿಶ್ವದ ವೇಗಕ್ಕೆ ಸರಿ ಸಮಾನತೆಯನ್ನು ಕಾಯ್ದುಕೊಳ್ಳುತ್ತಿದೆ. ಹಲವು ಪ್ರೋಟೋಟೈಪ್ (ಮಾದರಿ) ಗಳನ್ನು ಅಭಿವೃದ್ಧಿಪಡಿಸಲಾಗಿದೆ. ನಮ್ಮ ಗುರಿ ಎಂದರೆ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ವಲಯದಲ್ಲಿ ಕನಿಷ್ಠ 25 ಕೃತಕ ಬುದ್ಧಿ ಮತ್ತೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು ಎಂಬುದು.
ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸು
ಪ್ರಧಾನಮಂತ್ರಿ ಅವರು, ಲಕ್ನೋದಲ್ಲಿ ನಡೆಯುತ್ತಿರುವ ಡಿಫೆನ್ಸ್ ಎಕ್ಸ್ ಪೊ ಇನ್ನೊಂದು ಕಾರಣಕ್ಕೆ ಅತ್ಯಂತ ಪ್ರಮುಖವಾದುದು ಎಂದು ಹೇಳಿದರು. ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು, ರಕ್ಷಣಾ ಉತ್ಪಾದನಾ ವಲಯವನ್ನು ಸ್ವದೇಶಿಗೊಳಿಸುವ ಕನಸು ಕಂಡಿದ್ದರು ಮತ್ತು ಅದಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರು ಎಂದರು.
“ಅವರ ದೂರದೃಷ್ಟಿಯನ್ನು ಅನುಸರಿಸುತ್ತಾ ನಾವು ಹಲವು ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ವೇಗ ನೀಡಿದ್ದೇವೆ, ನಾವು 2014ರ ಒಂದೇ ವರ್ಷದಲ್ಲಿ 217 ರಕ್ಷಣಾ ಲೈಸೆನ್ಸ್ ಗಳನ್ನು ವಿತರಿಸಿದ್ದೇವೆ. ಕಳೆದ ಐದು ವರ್ಷಗಳಲ್ಲಿ ಅವುಗಳ ಸಂಖ್ಯೆ 460ಕ್ಕೆ ಏರಿಕೆಯಾಗಿದೆ. ಭಾರತ ಇಂದು ಪಿರಂಗಿ ತೂಪುಗಳು, ಬಂದೂಕುಗಳು, ಯುದ್ಧ ವಿಮಾನದಿಂದ ಫ್ರೈಗೇಟ್ ಸಬ್ ಮೆರಿನ್ ವರೆಗೆ ಹಲವು ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಜಾಗತಿಕ ರಕ್ಷಣಾ ಉತ್ಪನ್ನಗಳ ರಫ್ತಿನಲ್ಲಿ ಭಾರತದ ಪಾಲು ಸಾಕಷ್ಟು ಹೆಚ್ಚಾಗಿದೆ. ಕಳೆದ ಎರಡು ವರ್ಷದಲ್ಲಿ ಭಾರತ ಸುಮಾರು 17 ಸಾವಿರ ಕೋಟಿ ಮೊತ್ತದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿದೆ. ನಮ್ಮ ಗುರಿ ಏನೆಂದರೆ ರಕ್ಷಣಾ ಉತ್ಪನ್ನಗಳ ರಫ್ತು ಪ್ರಮಾಣವನ್ನು 5 ಬಿಲಿಯನ್ ಡಾಲರ್ ಗೆ ಏರಿಸುವುದು” ಎಂದು ಪ್ರಧಾನಮಂತ್ರಿ ಹೇಳಿದರು.
ರಕ್ಷಣಾ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ – ರಾಷ್ಟ್ರದ ನೀತಿಯ ಪ್ರಮುಖ ಭಾಗ
ಕಳೆದ ಐದಾರು ವರ್ಷಗಳಲ್ಲಿ ನಮ್ಮ ಸರ್ಕಾರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ನಮ್ಮ ದೇಶದ ನೀತಿಯ ಪ್ರಮುಖ ಭಾಗವನ್ನಾಗಿ ಮಾಡಿಕೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಗೆ ದೇಶದಲ್ಲಿ ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ. ಇತರೆ ರಾಷ್ಟ್ರಗಳೊಂದಿಗೆ ಜಂಟಿ ಸಹಭಾಗಿತ್ವವನ್ನು ಹೊಂದಲಾಗುತ್ತಿದೆ. ಆದ್ಯತಾ ಮನೋಭಾವದೊಂದಿಗೆ ಸಂಗ್ರಹಾಗಾರಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳೂ ನಡೆದಿವೆ. ಇದರಿಂದಾಗಿ ದೇಶ, ಬಂಡವಾಳ ಹೂಡಿಕೆ ಮತ್ತು ನಾವಿನ್ಯತೆಗೆ ಅಗತ್ಯ ವಾತಾವರಣ ಸೃಷ್ಟಿಯಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಬಳಕೆದಾರರು ಮತ್ತು ಉತ್ಪಾದಕರ ನಡುವೆ ಸಹಭಾಗಿತ್ವ
ಪ್ರಧಾನಮಂತ್ರಿ ಅವರು, ಬಳಕೆದಾರರು ಮತ್ತು ಉತ್ಪಾದಕರ ನಡುವೆ ಪಾಲುದಾರಿಕೆಯ ಮೂಲಕ ನಮ್ಮ ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸಬಹುದು ಎಂದು ಹೇಳಿದರು.
“ರಕ್ಷಣಾ ಉತ್ಪನ್ನಗಳ ಉತ್ಪಾದನೆ ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಬಾರದು, ಖಾಸಗಿ ವಲಯದಿಂದಲೂ ಸಹ ಸಮಾನ ಭಾಗೀದಾರಿಕೆ ಮತ್ತು ಪಾಲುದಾರಿಕೆ ಅಗತ್ಯವಿದೆ” ಎಂದು ಅವರು ಹೇಳಿದರು.
ನವ ಭಾರತಕ್ಕೆ ನವ ಗುರಿಗಳು
ಪ್ರಧಾನಮಂತ್ರಿ ಅವರು, ಭಾರತದಲ್ಲಿ ಎರಡು ಬೃಹತ್ ರಕ್ಷಣಾ ಉತ್ಪನ್ನಗಳ ಉತ್ಪಾದನಾ ಕಾರಿಡಾರ್ ಗಳನ್ನು ಸ್ಥಾಪಿಸಲಾಗುತ್ತಿದೆ. ಒಂದು ತಮಿಳುನಾಡಿನಲ್ಲಿ ಮತ್ತೊಂದು ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ಗೆ ಲಕ್ನೋ ಮಾತ್ರವಲ್ಲದೆ, ಆಲಿಗಢ್, ಆಗ್ರಾ, ಝಾನ್ಸಿ, ಚಿತ್ರಕೂಟ್ ಮತ್ತು ಕಾನ್ಪುರಗಳಲ್ಲಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಭಾರತದಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಹೊಸ ಗುರಿಗಳನ್ನು ನಿಗದಿಪಡಿಸಲಾಗಿದೆ.
“ಮುಂದಿನ 5 ವರ್ಷಗಳಲ್ಲಿ ರಕ್ಷಣಾ ಉತ್ಪನ್ನಗಳ ಉತ್ಪಾದನಾ ವಲಯದಲ್ಲಿರುವ ಎಂಎಸ್ಎಂಇಗಳ ಸಂಖ್ಯೆಯನ್ನು 15 ಸಾವಿರಕ್ಕಿಂತಲೂ ಹೆಚ್ಚು ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಐ-ಡೆಕ್ಸ್, ಚಿಂತನೆಯನ್ನು ವಿಸ್ತರಣೆ ಮಾಡಲು ಬಯಸಿದ್ದು, ಅದಕ್ಕೆ ಮತ್ತಷ್ಟು ಒತ್ತು ನೀಡಲು 200 ಹೊಸ ರಕ್ಷಣಾ ನವೋದ್ಯಮಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಜೊತೆಗೆ ಕನಿಷ್ಠ 50 ಹೊಸ ತಂತ್ರಜ್ಞಾನಗಳು ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆದಿವೆ. ದೇಶದ ಪ್ರಮುಖ ಉದ್ಯಮ ಸಂಸ್ಥೆಗಳಿಗೆ ನಾನು ನೀಡುವ ಸಲಹೆ ಎಂದರೆ ರಕ್ಷಣಾ ಉತ್ಪನ್ನಗಳ ಉತ್ಪಾದನೆಗೆ ದೇಶದಲ್ಲಿ ಒಂದು ಸಮಾನ ವೇದಿಕೆಯನ್ನು ಸೃಷ್ಟಿಸಬೇಕು ಎಂದು. ಆ ಮೂಲಕ ರಕ್ಷಣಾ ವಲಯದಲ್ಲಿ ತಂತ್ರಜ್ಞಾನ ಉತ್ಪಾದನೆ ಮತ್ತು ಅಭಿವೃದ್ಧಿಯ ಎರಡು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು” ಎಂದು ಪ್ರಧಾನಮಂತ್ರಿ ಹೇಳಿದರು.
उत्तर प्रदेश देश का सबसे बड़ा राज्य तो है ही,
— PMO India (@PMOIndia) February 5, 2020
आने वाले समय में ये देश में डिफेंस मैन्युफेक्चरिंग के भी सबसे बड़े हब में से भी एक होने वाला है।
ऐसे में नए दशक के इस पहले डिफेंस एक्स्पो का यहां होना,
अपने आप में प्रसन्नता का विषय है: PM @narendramodi
इस बार एक हज़ार से ज्यादा Defence Manufacturers और दुनियाभर से 150 Companies इस एक्स्पो का हिस्सा हैं।
— PMO India (@PMOIndia) February 5, 2020
इसके अलावा 30 से ज्यादा देशों के डिफेन्स मिनिस्टर्स और सैकड़ों
Business Leaders भी यहां उपस्थित हैं: PM @narendramodi
आज का ये अवसर
— PMO India (@PMOIndia) February 5, 2020
भारत की
रक्षा-सुरक्षा की चिंता करने वालों के
साथ-साथ पूरे भारत के युवाओं के लिए भी बड़ा अवसर है।
मेक इन इंडिया से भारत की सुरक्षा बढ़ेगी,
वहीं डिफेंस सेक्टर में रोजगार के नए अवसर भी बनेंगे: PM @narendramodi
दुनिया में जब
— PMO India (@PMOIndia) February 5, 2020
21वीं सदी की चर्चा होती है तो स्वाभाविक रूप से भारत की तरफ़ ध्यान जाता है।
आज का ये डिफेंस एक्सपो भारत की विशालता,
उसकी व्यापकता, उसकी विविधता और
विश्व में उसकी विस्तृत भागीदारी का सबूत है: PM @narendramodi
रक्षा और इकॉनोमी जैसे विषयों की जानकारी रखने वाले ज़रूर इस बात को जानते हैं कि भारत सिर्फ़ एक बाज़ार ही नहीं है।
— PMO India (@PMOIndia) February 5, 2020
भारत पूरे विश्व के लिए एक अपार अवसर है: PM @narendramodi
टेक्नॉलॉजी का गलत इस्तेमाल हो और टेररिज्म हो या फिर Cyber Threat,
— PMO India (@PMOIndia) February 5, 2020
ये पूरे विश्व के लिए एक बड़ी चुनौती हैं।
नए Security Challenges को देखते हुए दुनिया की तमाम डिफेंस फोर्सेस, नई टेक्नॉलॉजी को इवॉल्व कर रही हैं।
भारत भी इससे अछूता नहीं है: PM @narendramodi
Artillery Guns हों,
— PMO India (@PMOIndia) February 5, 2020
Aircraft Carrier हों,
Frigates हों, Submarines हों, Light Combat Aircrafts हों, Combat Helicopters हों, ऐसे अनेक साजो-सामान आज भारत में ही बन रहे हैं: PM @narendramodi
अब हमारा लक्ष्य ये है कि आने वाले
— PMO India (@PMOIndia) February 5, 2020
5 वर्ष में डिफेंस एक्सपोर्ट को
5 बिलियन डॉलर
यानि करीब
35 हज़ार करोड़ रुपए तक बढ़ाया जाए: PM @narendramodi
दुनिया की दूसरी बड़ी आबादी,
— PMO India (@PMOIndia) February 5, 2020
दुनिया की दूसरी बड़ी सेना और दुनिया का सबसे बड़ा लोकतंत्र,
कब तक सिर्फ और सिर्फ Import के भरोसे रह सकता था: PM @narendramodi
आधुनिक शस्त्रों के विकास के लिए दो प्रमुख आवश्यकताएं हैं- Research and Development की उच्च क्षमता और उन शस्त्रों का उत्पादन। बीते 5-6 वर्षों में हमारी सरकार ने इसे अपनी राष्ट्रनीति का प्रमुख अंग बनाया है: PM @narendramodi
— PMO India (@PMOIndia) February 5, 2020
मैं समझता हूं कि उपयोगकर्ता और उत्पादक यानि User और Producer के बीच भागीदारी से राष्ट्रीय सुरक्षा को और अधिक शक्तिशाली बनाया जा सकता है: PM @narendramodi
— PMO India (@PMOIndia) February 5, 2020
पहले डिफेंस मैन्युफेक्चरिंग में प्राइवेट सेक्टर को टेस्टिंग इंफ्रास्ट्रक्चर की बहुत समस्याएं आती थीं। इसके लिए अब रास्ते खोले गए हैं और DRDO में भारतीय उद्योगों के लिए बिना चार्ज के Transfer Of Technology की नीति बनायी गई है: PM @narendramodi
— PMO India (@PMOIndia) February 5, 2020
ऐसे कदमों से World Supply Chains में भारतीय उद्योगों की भागीदारी बढ़ेगी। दुनिया के टॉप डिफेंस मैन्युफेक्चर्रस को अधिक कंपिटेंट इंडियन पार्टर्नर्स मिलेंगे: PM @narendramodi
— PMO India (@PMOIndia) February 5, 2020
चीफ ऑफ डिफेंस स्टाफ और डिपार्टमेंट ऑफ मिलिट्री अफेयर्स के बनने से डिमांड और मैन्यूफैक्चरिंग की प्रक्रिया और आसान होने वाली है। इसका निश्चित लाभ डिफेंस सेक्टर्स से जुड़े उद्योगों को होगा और इस सेक्टर में इन्वेस्ट करने के इच्छुक आप सभी Investors को होगा: PM @narendramodi
— PMO India (@PMOIndia) February 5, 2020
आज भारत में दो बड़े डिफेंस मैन्युफेक्चरिंग कॉरिडोर का निर्माण किया जा रहा है। जिसमें से एक तमिलनाडु में और दूसरा यहीं उत्तर प्रदेश में हो रहा है: PM @narendramodi
— PMO India (@PMOIndia) February 5, 2020
यूपी के डिफेंस कॉरिडोर के तहत यहां लखनऊ के अलावा अलीगढ़,
— PMO India (@PMOIndia) February 5, 2020
आगरा, झाँसी, चित्रकूट और कानपुर में Nodes स्थापित किए जाएंगे।
वैसे यहां पास में ही अमेठी के कोरबा में Indo-Russian Rifles Private Limited के बारे में आपने जरूर सुना होगा: PM @narendramodi
भारत में डिफेंस मैन्युफेक्चरिंग को और गति देने के लिए, और विस्तार देने के लिए नए लक्ष्य, नए टारगेट रखे गए हैं। हमारा लक्ष्य रक्षा उत्पादन के क्षेत्र में MSMEs की संख्या को अगले 5 वर्षों में 15 हजार के पार पहुंचाना है: PM @narendramodi
— PMO India (@PMOIndia) February 5, 2020
आई-डेक्स के Idea को विस्तार देने के लिए, इसको Scale-Up करने के लिए, 200 नए Defence Start-Ups शुरू करने का लक्ष्य रखा गया है। कोशिश ये है कि कम से कम 50 नई Technologies और Products का विकास हो सके: PM @narendramodi
— PMO India (@PMOIndia) February 5, 2020
वैसे मेरा ये भी सुझाव है कि देश की प्रमुख इंडस्ट्री बॉडीज को डिफेंस मैन्यूफैक्चरिंग का एक कॉमन प्लेटफॉर्म बनाना चाहिए जिससे वो रक्षा के क्षेत्र में टेक्नोलॉजी के विकास और उत्पादन, दोनों का लाभ उठा सकें: PM @narendramodi
— PMO India (@PMOIndia) February 5, 2020
Outer Space में भारत की उपस्थिति, पहले से ही मजबूत है और आने वाले वर्षों में ये और सशक्त होने वाली है।भारत की स्पेस टेक्नॉलॉजी 130 करोड़ भारतीयों को गवर्नेंस से लेकर Security तक में अहम भूमिका निभा रही है: PM @narendramodi
— PMO India (@PMOIndia) February 5, 2020
मुझे गर्व है कि इस मामले में भारत ने Indigenous Technology का विकास किया है।आज ISRO भारत के लिए, पूरी दुनिया के लिए, Outer Space को Explore कर रहा है, तो भारत का DRDO इन Assets को गलत ताकतों से बचाने के लिए Defence की दीवार खड़ी कर रहा है: PM @narendramodi
— PMO India (@PMOIndia) February 5, 2020
भारत आज से नहीं बल्कि हमेशा से विश्व शांति का भरोसेमंद पार्टनर रहा है।दो World Wars में हमारा डायरेक्ट स्टेक ना होते हुए भी भारत के लाखों जवान शहीद हुए। आज दुनियाभर में 6 हज़ार से ज्यादा भारतीय सैनिक UN Peace-keeping Forces का हिस्सा हैं: PM @narendramodi
— PMO India (@PMOIndia) February 5, 2020
भारत में डिफेंस मैन्युफेक्चरिंग में असीमित संभावनाएं हैं। यहां Talent है और Technology भी है, यहां Innovation है और Infrastructure भी है, यहां Favourable Policy है और Foreign Investment की सुरक्षा भी है। यहां Demand है, Democracy है और Decisiveness भी है: PM @narendramodi
— PMO India (@PMOIndia) February 5, 2020