Quoteವಡೋದರ ಮುಂಬೈ ವಲಯದ ರಾಷ್ಟ್ರೀಯ ಮಹತ್ವದ ಎಕ್ಸ್‌ ಪ್ರೆಸ್‌ ಹೆದ್ದಾರಿ ದೇಶಕ್ಕೆ ಸರ್ಮಪಣೆ
Quoteಕಕ್ರಾಪರ್‌ ಅಣು ಇಂಧನ ಕೇಂದ್ರದಲ್ಲಿ ಎರಡು ಹೊಸ ಒತ್ತಡದ ಭಾರೀ ಜಲ ರಿಯಾಕ್ಟರ್‌ ಗಳು ದೇಶಕ್ಕೆ ಅರ್ಪಣೆ : ಕೆಎಪಿಎಸ್‌ -3 ಮತ್ತು ಕೆಎಪಿಎಸ್‌ -4
Quoteನವ್ಸಾರಿಯಲ್ಲಿ ಪಿಎಂ ಮಿತ್ರ ಪಾರ್ಕ್‌ ನಿರ್ಮಾಣ ಕಾಮಗಾರಿ ಆರಂಭ
Quoteಸೂರತ್‌ ನಗರ ಪಾಲಿಕೆ, ಸೂರತ್‌ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಡ್ರೀಮ್‌ ಸಿಟಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
Quoteರಸ್ತೆ, ರೈಲು, ಶಿಕ್ಷಣ ಮತ್ತು ನೀರು ಪೂರೈಕೆ ಯೋಜನೆಗಳಿಗೆ ಶಿಲಾನ್ಯಾಸ
Quote“ನವಸಾರಿಯಲ್ಲಿರುವುದು ಯಾವಾಗಲೂ ಒಂದು ದೊಡ್ಡ ಭಾವನೆ. ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿರುವುದರಿಂದ ಗುಜರಾತ್‌ ನ ಅಭಿವೃದ್ಧಿಯಾನವನ್ನು ಬಲಗೊಳಿಸಲಿದೆ”
Quote“ಎಲ್ಲಿ ಇತರರ ವಾಗ್ದಾನ ಅಸ್ತಿತ್ವದಲ್ಲಿಲ್ಲವೋ ಅಲ್ಲಿ ಮೋದಿ ಗ್ಯಾರೆಂಟಿ ಪ್ರಾರಂಭವಾಗಲಿದೆ”
Quote“ಅದು ಬಡವರು ಇಲ್ಲವೆ ಮಧ್ಯಮ ವರ್ಗದವರು ಅಥವಾ ಗ್ರಾಮೀಣ, ನಗರ ಪ್ರದೇಶವಿರಬಹುದು, ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ
Quote“ಇಂದು ದೇಶದ ಸಣ್ಣ ನಗರಗಳಲ್ಲಿಯೂ ಅತ್ಯುತ್ತಮ ಮೂಲ ಸೌಕರ್ಯ ಸಂಪರ್ಕ ಕಲ್ಪಿಸಲಾಗುತ್ತಿದೆ”
Quote“ಜಗತ್ತು ಇಂದು ಡಿಜಿಟಲ್‌ ಇಂಡಿಯಾಗೆ ಮಾನ್ಯತೆ ನೀಡಿದೆ”

ಗುಜರಾತ್‌ ನ ನವ್ಸಾರಿಯಲ್ಲಿಂದು 47,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಹಂತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಇಂಧನ, ರೈಲು, ರಸ್ತೆ, ಜವಳಿ, ಶಿಕ್ಷಣ, ನೀರು ಪೂರೈಕೆ, ಸಂಪರ್ಕ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದ ವಿಸ್ತೃತ ಯೋಜನೆಗಳನ್ನು ಇವುಗಳು ಒಳಗೊಂಡಿವೆ.    

ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್‌ ನ ಮೂರನೇ ಕಾರ್ಯಕ್ರಮದ ಬಗ್ಗೆ ಒತ್ತಿ ಹೇಳಿದರು ಮತ್ತು ಗುಜರಾತ್‌ ನ ಪಶುಫಲಕಗಳ[ಜಾನುವಾರುಗಳ ತಳಿ]ನ್ನು ಸ್ಮರಿಸಿಕೊಂಡರು. ಇದೇ ದಿನದಂದು ಗುಜರಾತ್‌ ಡೈರಿ ಪಾಲುದಾರರು ಭಾಗವಹಿಸಿದ್ದನ್ನು ಸ್ಮರಿಸಿಕೊಂಡರು. ಮೆಹ್ಸಾನದಲ್ಲಿ ವಲಿನಾಥ್‌ ಮಹದೇವ್‌ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಉಲ್ಲೇಖಿಸಿದರು. “ನಾನು ಇದೀಗ ನವ್ಸಾರಿಯಲ್ಲಿ ಅಭಿವೃದ್ಧಿಯ ಉತ್ಸವದಲ್ಲಿ ಭಾಗಿಯಾಗಿದ್ದೇನೆ” ಎಂದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ಮೊಬೈಲ್‌ ಫೋನ್‌ ಗಳ ಬ್ಯಾಟರಿ ದೀಪಗಳನ್ನು ಆನ್‌ ಮಾಡಿ ಅಭಿವೃದ್ಧಿಯ ಈ ನೆನಪಿನ ಉತ್ಸವದಲ್ಲಿ ಭಾಗಿಯಾಗುವಂತೆ ಕೋರಿದರು. ಇಂದು ವಡೋದರ, ನವ್ಸಾರಿ, ಭರೂಚ್‌ ಮತ್ತು ಸೂರತ್‌ ಮತ್ತಿತರೆ ಪ್ರದೇಶಗಳಲ್ಲಿ 40,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಜವಳಿ, ವಿದ್ಯುತ್‌ ಮತ್ತು ನಗರಾಭಿವೃದ್ಧಿ ಯೋಜನೆಗಳು ಬರುತ್ತಿರುವುದರಿಂದ ಪ್ರಧಾನಮಂತ್ರಿಯವರು ನಾಗರಿಕರನ್ನು ಅಭಿನಂದಿಸಿದರು. 

 

|

ಸುತ್ತಮುತ್ತ ಮೋದಿ ಕಿ ಗ್ಯಾರೆಂಟಿ ಝೇಂಕಾರ ಮೊಳಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ನೀಡಿದ ವಾಗ್ದಾನಗಳನ್ನು ಈಡೇರಿಸುವ ಖಚಿತತೆಯನ್ನು ಒತ್ತಿ ಹೇಳಿದರು. ಬಹಳ ಹಿಂದಿನಿಂದಲೂ ಗುಜರಾತ್‌ ಜನರಿಗೆ ಇದು ತಿಳಿದಿರುವ ಸತ್ಯವಾಗಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ ʼಎಫ್‌ ಅಂದರೆ ಐದು ವಿಚಾರಗಳು, ಫಾರ್ಮ್‌, ಫಾರ್ಮ್‌ ನಿಂದ ಫ್ರಾಬ್ರಿಕ್,  ಫ್ಯಾಬ್ರಿಕ್‌ ನಿಂದ ಕಾರ್ಖಾನೆ, ಕಾರ್ಖಾನೆಯಿಂದ ಪ್ಯಾಷನ್‌, ಪ್ಯಾಷನ್‌ ನಿಂದ ಫಾರಿನ್‌ʼ ಎಂಬ ಘೋಷವಾಕ್ಯವನ್ನು ಉಲ್ಲೇಖಿಸಿದರು. ಜವಳಿ ಸಂಪೂರ್ಣ ಪೂರೈಕೆ ಸರಪಳಿ ವ್ಯವಸ್ಥೆ ಹೊಂದುವುದು ಗುರಿಯಾಗಿದೆ ಎಂದು ಹೇಳಿದರು. ʼಇಂದು ರೇಷ್ಮೆ ನಗರ ಸೂರತ್‌ ನಿಂದ ನವ್ಸಾರಿವರೆಗೆ ವಿಸ್ತರಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ವಲಯದಲ್ಲಿ ಅತಿದೊಡ್ಡ ಉತ್ಪಾದಕರು ಮತ್ತು ರಫ್ತುದಾರರ ಜೊತೆ ಸ್ಪರ್ಧಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಜವಳಿ ಕ್ಷೇತ್ರದಲ್ಲಿ ಗುಜರಾತ್‌ ಪಾತ್ರದ ಬಗ್ಗೆ ಒತ್ತಿ ಹೇಳಿದ ಅವರು, ಸೂರತ್‌ ನ ಅಸಾಧಾರಣ ಜವಳಿ ಉತ್ಪಾದನೆಯನ್ನು ಅನಾವರಣಗೊಳಿಸಬೇಕು. ಪಿಎಂ ಮಿತ್ರಾ ಪಾರ್ಕ್‌ ಪೂರ್ಣಗೊಂಡರೆ ಇಡೀ ಪ್ರದೇಶದ ಚಹರೆಯೇ ಬದಲಾಗಲಿದೆ ಎಂದು ಒತ್ತಿ ಹೇಳಿದರು. ಇದರ ನಿರ್ಮಾಣಕ್ಕಾಗಿ 3000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪಿಎಂ ಮಿತ್ರಾ ಪಾರ್ಕ್‌ ಮೌಲ್ಯವರ್ಧಿತ ಪರಿಸರ ಚಟುವಟಿಕೆಗಳಾದ ನೇಯ್ಗೆ, ಗೋಣಿ ಚೀಲ ನೇಯ್ಗೆ, ಸಿದ್ಧ ಉಡುಪು, ಜವಳಿ ತಂತ್ರಜ್ಞಾನ ಮತ್ತು ಜವಳಿ ಯಂತ್ರೋಪಕರಣಗಳಿಂದಾಗಿ ಉದ್ಯೋಗ ಸೃಜನೆಗೆ ಪುಷ್ಟಿ ದೊರೆಯಲಿದೆ. ಈ ಪಾರ್ಕ್‌ ನಲ್ಲಿ ಕಾರ್ಮಿಕರಿಗೆ ಮನೆಗಳು, ಸಾಗಾಣೆ, ಗೋದಾಮು, ಆರೋಗ್ಯ ಸೌಲಭ್ಯಗಳು ಮತ್ತು ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಒಳಗೊಂಡಿದೆ.    

ತಾಪಿ ನದಿಗೆ 800 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದರಿಂದ ಸೂರತ್‌ ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಸಲು ನೆರವಾಗಲಿದೆ. ಜೊತೆಗೆ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಲಿದೆ. 

ದೈನಂದಿನ ಬಳಕೆ ಮತ್ತು ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 20 – 25 ವರ್ಷಗಳ ಹಿಂದೆ ಗುಜರಾತ್‌ ನಲ್ಲಿ ವಿದ್ಯುತ್‌ ಕಡಿತ ಸಾಮಾನ್ಯವಾಗಿತ್ತು. ಗುಜರಾತ್‌ ಮುಖ್ಯಮಂತ್ರಿಯಾದ ನಂತರ ಎದುರಿಸಿದ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಆಗ ಕಲ್ಲಿದ್ದಲು ಮತ್ತು ಅನಿಲ ಪ್ರಮುಖ ಅಡೆತಡೆಯಾಗಿತ್ತು. ಜಲ ವಿದ್ಯುತ್‌ ಉತ್ಪಾದನೆ ಸೀಮಿತವಾಗಿತ್ತು. ಸುಧಾರಿತ ತಂತ್ರಜ್ಞಾನದ ಉತ್ತೇಜನ ಮತ್ತು ಬೃಹತ್‌ ಸೌರ ಮತ್ತು ಪವನ ವಿದ್ಯುತ್‌ ಉತ್ಪಾದನೆಯತ್ತ ಉತ್ತೇಜನ ನೀಡುತ್ತಿರುವುದನ್ನು ಪ್ರಸ್ತಾಪಿಸಿ, ವಿದ್ಯುತ್‌ ಉತ್ಪಾದನೆಯ ಬಿಕ್ಕಟ್ಟಿನಿಂದ ರಾಜ್ಯವನ್ನು ಹೊರತರುವ ಪ್ರಯತ್ನದ ಒಳನೋಟವನ್ನು ನೀಡುವಾಗ ಪ್ರಧಾನಮಂತ್ರಿಯವರು, “ಮೋದಿ ಹೈ ತೋ ಮುಮ್ಕಿನ್‌ ಹೈ” ಎಂದು ಉದ್ಗರಿಸಿದರು. 

 

|

ಅಣು ಇಂಧನ ವಿದ್ಯುತ್‌ ಉತ್ಪಾದನೆಯನ್ನು ವಿಸ್ತಾರವಾಗಿ ಪ್ರಸ್ತಾಪಿಸಿದ ಅವರು, ಎರಡು ಹೊಸ ಭಾರೀ ಒತ್ತಡದ ಜಲ ರಿಯಾಕ್ಟರ್‌ [ಪಿಎಚ್‌ ಡಬ್ಲ್ಯುಆರ್] ಕಕ್ರಾಪರ್‌ ಅಣು ಇಂಧನ ವಿದ್ಯುತ್‌ ಘಟಕಗಳು [ಕೆಎಪಿಎಸ್] ಘಟಕ – 3 ಮತ್ತು ಘಟಕ – 4 ಗಳನ್ನು ರಾಷ್ಟ್ರಕ್ಕೆ ಇಂದು ಸಮರ್ಪಿಸಲಾಗಿದೆ. ಈ ರಿಯಾಕ್ಟರ್‌ ಗಳು ಸ್ವಾವಲಂಬಿ ಭಾರತಕ್ಕೆ ಉದಾಹರಣೆಯಾಗಿದೆ ಮತ್ತು ಗುಜರಾತ್‌ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.  

ದಕ್ಷಿಣ ಗುಜರಾತ್‌ ನಲ್ಲಿ ಹಿಂದೆಂದೂ ಕಂಡರಿಯದಂತೆ ಅತ್ಯಾಧುನಿಕ ಮೂಲ ಸೌಕರ್ಯ ವಲಯದಲ್ಲಿ ಅಭಿವೃದ್ಧಿಯಾಗುತ್ತಿದೆ. ಪಿಎಂ ಸೂರ್ಯಘರ್‌ ಯೋಜನೆ ಮನೆಗಳ ವಿದ್ಯುತ್‌ ಬಿಲ್‌ ಅಷ್ಟೇ ಕಡಿತಗೊಳಿಸುವದಷ್ಟೇ ಅಲ್ಲದೇ ಆದಾಯ ಸೃಷ್ಟಿಯ ಮಾಧ್ಯಮವೂ ಆಗಲಿದೆ. ಈ ವಲಯದ ಮೂಲಕ ಮೊದಲ ಬುಲೆಟ್‌ ರೈಲು ಸಂಚರಿಸಲಿದ್ದು, ದೇಶದ ಮುಂಬೈ – ಸೂರತ್‌ ನಡುವಿನ ಅತಿ ದೊಡ್ಡ ಕೈಗಾರಿಕಾ ಕೇಂದ್ರವನ್ನು ಸಂಪರ್ಕಿಸಲು ಸಾಧ್ಯವಾಗಲಿದೆ ಎಂದರು. 

“ನವ್ಸಾರಿ ಇದೀಗ ಕೈಗಾರಿಕಾಭಿವೃದ್ಧಿಗಾಗಿ ಮಾನ್ಯತೆ ಪಡೆದಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಂಪೂರ್ಣ ಪಶ್ಚಿಮ ಗುಜರಾತ್‌, ನವ್ಸಾರಿ ಒಳಗೊಂಡಂತೆ ಇಡೀ ಪ್ರದೇಶ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಈ ವಲಯದ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕೈಗೊಂಡ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಹಣ್ಣಿನ ಕೃಷಿಯು ಹೊಸ ವಲಯವಾಗಿ ಹೊರ ಹೊಮ್ಮುತ್ತಿರುವುದನ್ನು ಎತ್ತಿ ತೋರಿಸಿದರು ಮತ್ತು ನವ್ಸಾರಿಯ ವಿಶ್ವ ಪ್ರಸಿದ್ಧ ಹಪಸ್‌ ಮತ್ತು ವಲ್ಸಾರಿ ತಳಿಗಳ ಮಾವು ಮತ್ತು ಸಪೋಟ [ಸಪೋಡಿಲ್ಲಾ] ಕೃಷಿ ಚಟುವಟಿಕೆಯನ್ನು ಪ್ರಸ್ತಾಪಿಸಿದರು. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ ರೈತರು 350 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.     

 

|

ಯುವ ಸಮೂಹ, ಬಡವರು, ರೈತರು ಮತ್ತು ಮಹಿಳೆಯರ ಸಬಲೀಕರಣದ ಗ್ಯಾರೆಂಟಿಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಗ್ಯಾರೆಂಟಿಯು ಕೇವಲ ಯೋಜನೆಗಳನ್ನು ಮಾಡುವುದನ್ನು ಮೀರಿದ್ದಾಗಿದ್ದು, ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳುವುದನ್ನು ವಿಸ್ತರಿಸುತ್ತದೆ ಎಂದು ಹೇಳಿದರು. 

ಬುಡಕಟ್ಟು ಮತ್ತು ಕರಾವಳಿ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದ್ದನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಹಾಲಿ ಸರ್ಕಾರ ಉಮಾರ್ಗಾಮ್‌ ನಿಂದ ಅಂಬಾಜಿವರೆಗೆ ಪ್ರತಿಯೊಂದು ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ರಾಷ್ಟ್ರಮಟ್ಟದಲ್ಲೂ ಇದು ಮುಂದುವರೆದಿದ್ದು, 100 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಮಾನದಂಡಗಳಲ್ಲಿ ಹಿಂದುಳಿದ ಭಾಗಗಳೊಂದಿಗೆ ಮುನ್ನಡೆಯುತ್ತಿದೆ ಎಂದರು.    

“ಮೋದಿಯವರ ಗ್ಯಾರೆಂಟಿ ಎಲ್ಲಿ ಪ್ರಾರಂಭವಾಗುತ್ತದೆಯೋ ಅಲ್ಲಿ ಇತರ ಭರವಸೆಗಳು ಅಸ್ತಿತ್ವದಲ್ಲಿರುವುದಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದರು. ಬಡವರಿಗೆ ಪಕ್ಕಾ ಮನೆಗಳು, ಉಚಿತ ಪಡಿತರ ಯೋಜನೆ, ವಿದ್ಯುತ್‌, ಕೊಳಾಯಿ ಮೂಲಕ ನೀರು ಮತ್ತು ಬಡವರು, ರೈತರು, ಮಳಿಗೆ ಕಾರ್ಮಿಕರು ಹಾಗೂ ಕಾರ್ಮಿಕರಿಗೆ ವಿಮಾ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಪಟ್ಟಿ ಮಾಡಿದರು. “ಇದು ಇಂದು ವಾಸ್ತವವಾಗಿದೆ, ಏಕೆಂದರೆ ಇದು ಮೋದಿ ಗ್ಯಾರೆಂಟಿ” ಎಂದರು. 

ಬುಡಕಟ್ಟು ಸಮುದಾಯದ ಸಿಕಲ್‌ ಸೆಲ್‌ ರಕ್ತ ಹೀನತೆ ಸಮಸ್ಯೆ ಬಗೆಹರಿಸಿದ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಈ ಸಮಸ್ಯೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ತಳಮಟ್ಟದ ಪ್ರಯತ್ನಗಳು ಅಗತ್ಯ. ತಾವು ಮುಖ್ಯಮಂತ್ರಿಯಾದ ದಿನಗಳಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ನಿಭಾಯಿಸಲು ರಾಜ್ಯದ ಪೂರ್ವಭಾವಿ ಕ್ರಮಗಳನ್ನು ಪ್ರಸ್ತಾಪಿಸಿದರು. ಈ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ವ್ಯಾಪಕ ರಾಷ್ಟ್ರೀಯ ಪ್ರಯತ್ನಗಳನ್ನು ಸಹ ಪಟ್ಟಿ ಮಾಡಿದರು. “ನಾವು ಇದೀಗ ಸಿಕಲ್‌ ಸೆಲ್‌ ಅನೀಮಿಯಾ ಮುಕ್ತಗೊಳಿಸಲು ರಾಷ್ಟ್ರೀಯ ಅಭಿಯಾನ ಆರಂಭಿಸಿದ್ದೇವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶದ ಬುಡಕಟ್ಟು ಪ್ರದೇಶಗಳಿಂದ ಈ ರೋಗ ನಿರ್ಮೂಲನೆ ಮಾಡಲು ಸರ್ಕಾರ ಸಮಗ್ರ ಕ್ರಮಗಳನ್ನು ಕೈಗೊಂಡಿದೆ. “ಬುಡಕಟ್ಟು ವಲಯಗಳಲ್ಲಿ ದೇಶಾದ್ಯಂತ ಸಿಕಲ್‌ ಸೆಲ್‌ ಅನಿಮೀಯಾ ರೋಗ ತಪಾಸಣೆಗೆ ಈ ಅಭಿಯಾನದಡಿ ಕ್ರಮ ಕೈಗೊಳ್ಳಲಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಬುಡಕಟ್ಟು ಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳು ಬರುತ್ತಿರುವುದನ್ನು ಪ್ರಸ್ತಾಪಿಸಿದರು. 

“ಅದು ಬಡವರು ಇಲ್ಲವೆ ಮಧ್ಯಮವರ್ಗದವರಿರಬಹುದು, ಗ್ರಾಮೀಣ ಇಲ್ಲವೆ ನಗರ ಪ್ರದೇಶವಿರಬಹುದು, ಪ್ರತಿಯೊಬ್ಬ ನಾಗರಿಕರ ಜೀವನಮಟ್ಟ ಸುಧಾರಣೆಗೆ ನಮ್ಮ ಸರ್ಕಾರ ಪ್ರಯತ್ನಶೀಲವಾಗಿದೆ. ಸರ್ಕಾರ ಎಲ್ಲರನ್ನೊಳಗೊಂಡ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಹಿಂದಿನ ಕಾಲದ ಆರ್ಥಿಕತೆಯು ಕುಂಠಿತಗೊಂಡ ಪರಿಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, “ಆರ್ಥಿಕ ನಿಶ್ಚಲತೆ ಎಂದರೆ ದೇಶವು ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿತ್ತು” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವರಿಸಿದರು. ಈ ಅವಧಿಯಲ್ಲಿ ಗ್ರಾಮೀಣ ಮತ್ತು ನಗರ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದರು. 2014 ನಂತರ ಭಾರತದ ಆರ್ಥಿಕತೆ 11 ನೇ ಶ್ರೇಯಾಂಕದಿಂದ 5 ನೇ ಅತಿ ದೊಡ್ಡ ಆರ್ಥಿಕತೆಯಾಗಿ ರೂಪುಗೊಂಡಿದೆ. ಭಾರತದ ನಾಗರಿಕರಲ್ಲಿ ಇಂದು ವೆಚ್ಚ ಮಾಡಲು ಹಣ ಇದೆ ಮತ್ತು ಭಾರತ ವೆಚ್ಚ ಮಾಡುತ್ತಿದೆ. ಆದ್ದರಿಂದ ದೇಶದ ಸಣ್ಣ ನಗರಗಳಿಗೂ ಇಂದು ಅತ್ಯುತ್ತಮ ಮೂಲ ಸೌಕರ್ಯದ ಸಂಪರ್ಕ ಕಲ್ಪಿಸುತ್ತಿದೆ. ಸಣ್ಣ ನಗರಗಳಿಗೂ ಇಂದು ವಾಯುಮಾರ್ಗ ಸೇವೆ ಇದೆ ಮತ್ತು 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ.   

 

|

ಡಿಜಿಟಲ್‌ ಇಂಡಿಯಾ ಉಪಕ್ರಮದ ಮಹತ್ವ ಮತ್ತು ಯಶಸ್ಸಿನತ್ತ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, “ಜಗತ್ತು ಇಂದು ಡಿಜಿಟಲ್‌ ಇಂಡಿಯಾಗೆ ಮಾನ್ಯತೆ ನೀಡಿದೆ”. ಡಿಜಿಟಲ್‌ ಇಂಡಿಯಾ ಸಣ್ಣ ನಗರಗಳಲ್ಲೂ ಕ್ರೀಡೆಯಷ್ಟೇ ಅಲ್ಲದೇ ಹೊಸ ನವೋಮದ್ಯಗಳು ಆರಂಭವಾಗಿವೆ. ಅಂತಹ ಸಣ್ಣ ಪಟ್ಟಣಗಳಲ್ಲಿ ನವ ಮಧ್ಯಮ ವರ್ಗ ಹೊರ ಹೊಮ್ಮಿದೆ. ಇದು ಭಾರತವನು ಮೂರನೇ ಆರ್ಥಿಕ ಶಕ್ತಿಯಾಗಿಸಲು ಪ್ರೇರೇಪಣೆ ನೀಡಲಿದೆ ಎಂದು ನುಡಿದರು.  

ಅಭಿವೃದ್ಧಿ ಮತ್ತು ಪರಂಪರೆಗೆ ಸರ್ಕಾರ ಆದ್ಯತೆ ನೀಡಿದೆ. ಈ ಪ್ರದೇಶ ಭಾರತದ ನಂಬಿಕೆ ಮತ್ತು ಇತಿಹಾಸದ ಪ್ರಮುಖ ಕೇಂದ್ರವಾಗಿದೆ. ಅದು ಸ್ವಾತಂತ್ರ್ಯ ಚಳವಳಿಯಾಗಿರಬಹುದು, ಇಲ್ಲವೆ ರಾಷ್ಟ್ರ ನಿರ್ಮಾಣವಾಗಿರಬಹುದು. ಸ್ವಜನ ಪಕ್ಷಪಾತ, ತುಷ್ಟೀಕರಣ ಮತ್ತು ಭ್ರಷ್ಟಾಚಾರದ ರಾಜಕೀಯದಿಂದಾಗಿ ಈ ಪ್ರದೇಶದ ಪರಂಪರೆಯನ್ನು ಕಡೆಗಣಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಪರಂಪರೆಯ ಪ್ರತಿಧ್ವನಿ ಇಂದು ಪ್ರಪಂಚದಾದ್ಯಂತ ಕೇಳಿ ಬರುತ್ತಿದೆ. ದಂಡಿ ಸ್ಮಾರಕ ಪ್ರದೇಶದ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ ಅವರು, ಇದು ಉಪ್ಪಿನ ಸತ್ಯಾಗ್ರಹ ಆರಂಭವಾದ ಸ್ಥಳ. ಸರ್ದಾರ್‌ ಪಟೇಲ್‌ ಅವರ ಕೊಡುಗೆಗಾಗಿ ಸಮರ್ಪಿತವಾದ ಏಕತೆಯ ಪ್ರತಿಮೆ ನಿರ್ಮಾಣವನ್ನು ಸಹ ಉಲ್ಲೇಖಿಸಿದರು. 

ಮುಂದಿನ 25 ವರ್ಷಗಳಿಗೆ ದೇಶವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಲು ರೂಪಿಸಿದ ನೀಲ ನಕ್ಷೆ ನಮ್ಮ ಮುಂದಿದೆ. “ಈ 25 ವರ್ಷಗಳಲ್ಲಿ ನಾವು ವಿಕಸಿತ ಗುಜರಾತ್‌ ಮತ್ತು ವಿಕಸಿತ ಭಾರತ ನಿರ್ಮಾಣ ಮಾಡುತ್ತೇವೆ” ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. 

ಹಿನ್ನೆಲೆ

ನವ್ಸಾರಿಯಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ದೇಶಕ್ಕೆ ಹಲವು ಅಭಿವೃದ್ಧಿ ಯೋಜನೆಗಳನ್ನು ಸರ್ಮಪಿಸಿದರು. ವಡೋದರ ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ, ಬರೂಚ್, ನವಸಾರಿ, ವಲ್ಸದ್ ಭಾಗದಲ್ಲಿ ಬಹು ಹಂತದ ರಸ್ತೆ ಯೋಜನೆಗಳು, ತಾಪಿಯಲ್ಲಿ ಬಹುಹಂತದ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ಬರೂಚ್ ಮತ್ತಿತರೆಡೆಗಳಲ್ಲಿ ಒಳಚರಂಡಿ ಸೇರಿ ಹಲವು ಯೋಜನೆಗಳು ಇದರಲ್ಲಿ ಸೇರಿವೆ. ಪಿಎಂ ಮೆಗಾ ಸಮಗ್ರ ಜವಳಿ ವಲಯ ಮತ್ತು ಸಿದ್ಧ ಉಡುಪು (ಪಿಎಂ ಮಿತ್ರ) ಕಾಮಗಾರಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು.  

ಬರೂಚ್ - ದಹೆಜ್ ಎಕ್ಸ್ ಪ್ರೆಸ್ ಹೆದ್ದಾರಿ ನಿಯಂತ್ರಣ ಯೋಜನೆಗೆ ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದರು. ವಡೋದರದಲ್ಲಿ ಬಹು ಹಂತದ ಯೋಜನೆಗಳಾದ ಎಸ್.ಎಸ್.ಜಿ ಆಸ್ಪತ್ರೆ, ವಡೋದರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸೂರತ್, ವಡೋದರ ಮತ್ತು ಪಂಚ್ ಮಹಲ್ ನಲ್ಲಿ ರೈಲ್ವೆ ಗೇಜ್ ಪರಿವರ್ತನೆ ಯೋಜನೆಗಳು, ವಲ್ಸದ್ ನಲ್ಲಿ ಹಲವಾರು ನೀರು ಪೂರೈಕೆ ಯೋಜನೆಗಳು, ಶಾಲೆ ಮತ್ತು ವಸತಿ ನಿಲಯದ ಕಟ್ಟಡ ಹಾಗೂ ನರ್ಮದಾ ಜಿಲ್ಲೆಯಲ್ಲಿ ಇತರೆ ಯೋಜನೆಗಳಿಗೆ ಚಾಲನೆ ನೀಡಿದರು. 

ಸೂರತ್ ಮಹಾನಗರ ಪಾಲಿಕೆ, ಸೂರತ್ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಡ್ರೀಮ್ ಸಿಟಿ ಯೋಜನೆಯಡಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು ಮತ್ತು ಲೋಕಾರ್ಪಣೆ ಮಾಡಿದರು.  

ಕಕ್ರಾಪರ್ ಪರಮಾಣು ವಿದ್ಯುತ್ ಕೇಂದ್ರದಲ್ಲಿ ಎರಡು ಹೊಸ ಒತ್ತಡದ ಭಾರೀ ಜಲ ರಿಯಾಕ್ಟರ್ ಗಳನ್ನು - (ಕೆಎಪಿಎಸ್)  ಘಟಕ -3 ಮತ್ತು (ಕೆಎಪಿಎಸ್)  ಘಟಕ - 4 ರಾಷ್ಟ್ರಕ್ಕೆ ಸಮರ್ಪಿಸಿದರು. ಇದನ್ನು ಬಾರತೀಯ ಅಣು ಇಂಧನ ನಿಗಮ (ಎನ್.ಪಿ.ಸಿ.ಐ.ಎಲ್), 22,500 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ನಿರ್ಮಿಸಿದೆ. ಕೆಎಪಿಎಸ್  ಘಟಕ -3 ಮತ್ತು ಕೆಎಪಿಎಸ್ ಘಟಕ - 4 ಯೋಜನೆಗಳನ್ನು  1400 (700*2) ಮೆಗಾವ್ಯಾಟ್ ಸಂಚಿತ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿದೆ.  ಎಂಡಬ್ಲ್ಯು ಮತ್ತು ಅತಿ ದೊಡ್ಡ ದೇಶೀಯ ಕಾರ್ಯಕ್ರಮ ಪಿಎಚ್ ಡಬ್ಲ್ಯುಆರ್ ಗಳು ಇದರಲ್ಲಿ ಸೇರಿವೆ. ಇವು ಮೊದಲ ರೀತಿಯ ರಿಯಾಕ್ಟರ್ ಗಳು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯತೆಗಳೊಂದಿಗೆ ವಿಶ್ವದ ಅತ್ಯುತ್ತಮವಾದವುಗಳೊಂದಿಗೆ ಹೋಲಿಸಬಹುದಾಗಿದೆ. ಒಟ್ಟಾರೆಯಾಗಿ ಈ ಎರಡು ರಿಯಾಕ್ಟರ್ ಗಳು ವರ್ಷಕ್ಕೆ 10.4 ಶತಕೋಟಿ ಯೂನಿಟ್ ಶುದ್ಧ ವಿದ್ಯುತ್ ಅನ್ನು ಉತ್ಪಾದಿಸುತ್ತವೆ ಮತ್ತು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಚತ್ತೀಸ್ ಘಡ, ಗೋವಾ ಮತ್ತು ಕೇಂದ್ರಾಡಳಿ ಪ್ರದೇಶಗಳಾದ ದಾದ್ರಾ ಹಾಗೂ ನಾಗರ್ ಹವೇಲಿ, ದಮನ್ ಮತ್ತು ದಿಯು ವಿನಂತಹ ಪ್ರದೇಶಗಳ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತದೆ.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Union cabinet extends National Health Mission for another 5 years

Media Coverage

Union cabinet extends National Health Mission for another 5 years
NM on the go

Nm on the go

Always be the first to hear from the PM. Get the App Now!
...
Prime Minister pays homage to Balasaheb Thackeray ji on his birth anniversary
January 23, 2025

The Prime Minister Shri Narendra Modi today paid homage to Balasaheb Thackeray ji on his birth anniversary. Shri Modi remarked that Shri Thackeray is widely respected and remembered for his commitment to public welfare and towards Maharashtra’s development.

In a post on X, he wrote:

“I pay homage to Balasaheb Thackeray Ji on his birth anniversary. He is widely respected and remembered for his commitment to public welfare and towards Maharashtra’s development. He was uncompromising when it came to his core beliefs and always contributed towards enhancing the pride of Indian culture.”