ಇಂಟರ್ನೆಟ್ ಸಂಪರ್ಕ, ರೈಲು, ರಸ್ತೆ, ಶಿಕ್ಷಣ, ಆರೋಗ್ಯ, ಸಂಪರ್ಕ, ಸಂಶೋಧನೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಬಹು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ
ಗುಜರಾತ್ ಫೈಬರ್ ಗ್ರಿಡ್ ನೆಟ್‌ವರ್ಕ್ ಲಿಮಿಟೆಡ್ ನ ಭಾರತ್ ನೆಟ್ ಹಂತ-II ರಾಷ್ಟ್ರಕ್ಕೆ ಸಮರ್ಪಣೆ
ರೈಲು, ರಸ್ತೆ ಮತ್ತು ನೀರು ಪೂರೈಕೆಯ ಅನೇಕ ಯೋಜನೆಗಳ ಸಮರ್ಪಣೆ
ಗಾಂಧಿನಗರದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ವಿಶ್ವವಿದ್ಯಾಲಯದ ಮುಖ್ಯ ಶೈಕ್ಷಣಿಕ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆ
ಆನಂದ್‌ನಲ್ಲಿ ಜಿಲ್ಲಾ ಮಟ್ಟದ ಆಸ್ಪತ್ರೆ ಮತ್ತು ಆಯುರ್ವೇದ ಆಸ್ಪತ್ರೆಗೆ ಶಂಕುಸ್ಥಾಪನೆ ಮತ್ತು ಅಂಬಾಜಿಯಲ್ಲಿ ರಿಂಚಡಿಯಾ ಮಹಾದೇವ ದೇವಸ್ಥಾನ ಮತ್ತು ಸರೋವರದ ಅಭಿವೃದ್ಧಿಗೆ ಚಾಲನೆ
ಗಾಂಧಿನಗರ, ಅಹಮದಾಬಾದ್, ಬನಸ್ಕಾಂತ, ಮತ್ತು ಮಹೇಶನದಲ್ಲಿ ಬಹು ರಸ್ತೆ ಮತ್ತು ನೀರು ಸರಬರಾಜು ಸುಧಾರಣೆ ಯೋಜನೆಗಳಿಗೆ ಶಂಕುಸ್ಥಾಪನೆ; ಡೀಸಾ ಏರ್ ಫೋರ್ಸ್ ಸ್ಟೇಷನ್ ರನ್ ವೇಗೆ ಶಂಕುಸ್ಥಾಪನೆ
ಅಹಮದಾಬಾದ್‌ನಲ್ಲಿ ಮಾನವ ಮತ್ತು ಜೈವಿಕ ವಿಜ್ಞಾನ ಗ್ಯಾಲರಿಗೆ ಶಿಲಾನ್ಯಾಸ, ಗಿಫ್ಟ್ ನಗರದಲ್ಲಿ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ (GBRC) ಹೊಸ ಕಟ್ಟಡಕ್ಕೆ ಶಿಲಾನ್ಯಾಸ
"ಮೆಹ್ಸಾನಾದಲ್ಲಿ ಇರುವುದು ಯಾವಾಗಲೂ ವಿಶೇಷ"
"ಇದು ದೇವರ ಕೆಲಸ (ದೇವ್ ಕಾಜ್) ಅಥವಾ ದೇಶದ ಕೆಲಸ (ದೇಶ್ ಕಾಜ್), ಎರಡೂ ತ್ವರಿತ ಗತಿಯಲ್ಲಿ ನಡೆಯುತ್ತಿರುವ ಸಮಯ"
"ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಪರಿವರ್ತಿಸುವುದು ಮೋದಿ ಅವರ ಖಾತರಿಯ ಗುರಿಯಾಗಿದೆ"
“ಮೋದಿ ಅವರು ಯಾವುದೇ ಸಂಕಸ್ಪ ಕೈಗೊಂಡರೂ ಅದನ್ನು ಪೂರೈಸುತ್ತಾರೆ, ದೀಸಾದ ಈ ರನ್‌ವೇ ಇದಕ್ಕೆ ಉದಾಹರಣೆಯಾಗಿದೆ. ಇದು ಮೋದಿ ಅವರ ಗ್ಯಾರಂಟಿ”
"ಇಂದು ನವ ಭಾರತದಲ್ಲಿ ಮಾಡಲಾಗುತ್ತಿರುವ ಪ್ರತಿಯೊಂದು ಪ್ರಯತ್ನವು ಭವಿಷ್ಯದ ಪೀಳಿಗೆಗೆ ಪರಂಪರೆ ಸೃಷ್ಟಿಸುತ್ತಿದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಮಹೇಶನಾದ ತರಭ್‌ನಲ್ಲಿ 13,500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಅಂತರ್ಜಾಲ ಸಂಪರ್ಕ, ರೈಲು, ರಸ್ತೆ, ಶಿಕ್ಷಣ, ಆರೋಗ್ಯ, ಸಂಪರ್ಕ, ಸಂಶೋಧನೆ ಮತ್ತು ಪ್ರವಾಸೋದ್ಯಮದಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳನ್ನು ಒಳಗೊಂಡಿವೆ.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಸರಿಯಾಗಿ ಒಂದು ತಿಂಗಳ ಹಿಂದೆ ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲು ಅವಕಾಶ ಸಿಕ್ಕ ಜನವರಿ 22 ದಿನಾಂಕವನ್ನು ನೆನಪಿಸಿಕೊಂಡರು. ಫೆಬ್ರವರಿ 14ರಂದು ಅಬುಧಾಬಿಯಲ್ಲಿ ಕೊಲ್ಲಿ ರಾಷ್ಟ್ರಗಳ ಮೊದಲ ಹಿಂದೂ ದೇವಾಲಯ ಉದ್ಘಾಟಿಸಿದಾಗ ಬಸಂತ ಪಂಚಮಿ ಸಂದರ್ಭ ಎದುರಾಗಿತ್ತು ಎಂದು ಪ್ರಧಾನಿ ನೆನಪಿಸಿಕೊಂಡರು. ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದು ಅವರು ಪ್ರಸ್ತಾಪಿಸಿದರು. ಜತೆಗೆ, ಇಂದು ತರಭ್‌ನ ವಲಿನಾಥ ಮಹಾದೇವ ದೇವಸ್ಥಾನದ ಪವಿತ್ರೀಕರಣ, ದರ್ಶನ ಮತ್ತು ಪೂಜೆ ನೆರವೇರಿದೆ ಎಂದರು.

 

ಭಾರತ ಮತ್ತು ಜಗತ್ತಿಗೆ, ವಲಿನಾಥ ಶಿವಧಾಮವು ಯಾತ್ರಾಸ್ಥಳವಾಗಿದೆ. ಆದರೆ ಇದು ರೇವಾರಿ ಸಮಾಜ ಮತ್ತು ದೇಶಾದ್ಯಂತ ಇರುವ ಭಕ್ತರಿಗೆ ಗುರುವಿನ ಮಂಗಳಕರ ತಾಣವಾಗಿದೆ ಎಂದು ಪ್ರಧಾನಿ ತಿಳಿಸಿದರು.

‘ದೇವ್ ಕಾಜ್’ (ದೈವಿಕ ಕಾರ್ಯಗಳು) ಮತ್ತು ‘ದೇಶ್ ಕಾಜ್’ (ರಾಷ್ಟ್ರೀಯ ಕಾರ್ಯಗಳು) ಎರಡೂ ಕ್ಷಿಪ್ರಗತಿಯಲ್ಲಿ ನಡೆಯುತ್ತಿರುವುದರಿಂದ ಭಾರತದ ಅಭಿವೃದ್ಧಿ ಪಯಣದಲ್ಲಿ ಪ್ರಸ್ತುತ ಕ್ಷಣ ಮಹತ್ವಪೂರ್ಣವಾಗಿದೆ. ಒಂದೆಡೆ ಈ ಶುಭ ಕಾರ್ಯಕ್ರಮ ನಡೆದಿದ್ದು, 13,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮತ್ತು  ಶಂಕುಸ್ಥಾಪನೆ ನೆರವೇರಿಸಲಾಗಿದೆ. ರೈಲು, ರಸ್ತೆ, ಬಂದರು, ಸಾರಿಗೆ, ನೀರು, ಭದ್ರತೆ, ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೇರಿದ ಈ ಎಲ್ಲಾ ಯೋಜನೆಗಳು ಜೀವನದ ಸುಲಭತೆ ಹೆಚ್ಚಿಸುತ್ತವೆ, ಈ ಪ್ರದೇಶದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.

ಮೆಹ್ಸಾನ ಪುಣ್ಯಭೂಮಿಯಲ್ಲಿ ದೈವಿಕ ಶಕ್ತಿಯ ಉಪಸ್ಥಿತಿ ಗಮನಿಸಿದ ಪ್ರಧಾನ ಮಂತ್ರಿ,  ಇದು ಶ್ರೀಕೃಷ್ಣ ಮತ್ತು ಭಗವಾನ್ ಮಹಾದೇವನೊಂದಿಗೆ ಸಂಬಂಧಿಸಿದ ಸಾವಿರಾರು ವರ್ಷಗಳ ಆಧ್ಯಾತ್ಮಿಕ ಪ್ರಜ್ಞೆಯೊಂದಿಗೆ ಜನರನ್ನು ಸಂಪರ್ಕಿಸುತ್ತಿದೆ. ಈ ಶಕ್ತಿಯು ಜನರನ್ನು ಗಡಿಪತಿ ಮಹಂತ್ ವೀರಂ-ಗಿರಿ ಬಾಪು ಜೀ ಅವರ ಪ್ರಯಾಣದೊಂದಿಗೆ ಸಂಪರ್ಕಿಸುತ್ತದೆ. ಗಡಿಪತಿ ಮಹಂತ್ ಬಲದೇವಗಿರಿ ಬಾಪು ಅವರ ಸಂಕಲ್ಪವನ್ನು ಮುಂದಿಟ್ಟು ಅದನ್ನು ಸಾಧಿಸಿದ್ದಕ್ಕಾಗಿ ಅವರು ಮಹಂತ ಶ್ರೀ ಜಯರಾಮಗಿರಿ ಬಾಪು ಅವರಿಗೆ ನಮಿಸಿದರು. ಬಲದೇವಗಿರಿ ಬಾಪು ಜಿ ಅವರೊಂದಿಗಿನ ಅವರ 4 ದಶಕಗಳ ಆಳವಾದ ಸಂಬಂಧವನ್ನು ಎತ್ತಿ ತೋರಿಸಿದ ಪ್ರಧಾನಿ, ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿ ಹಲವಾರು ಸಂದರ್ಭಗಳಲ್ಲಿ ಅವರನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದ್ದನ್ನು ಪ್ರಧಾನಿ ಸ್ಮರಿಸಿದರು. ಅವರು 2021 ರಲ್ಲಿ ನಿಧನರಾದರು. ಅವರು ಸಂಕಲ್ಪವನ್ನು ಸಾಧಿಸಿದ ನಂತರ ಅವರ ಅಗಲಿದ ಆತ್ಮವು ಇಂದು ಎಲ್ಲರನ್ನು ಆಶೀರ್ವದಿಸುತ್ತಿದೆ. ಶತಮಾನಗಳಷ್ಟು ಹಳೆಯದಾದ ದೇವಾಲಯವು 21ನೇ ಶತಮಾನದ ವೈಭವ ಮತ್ತು ಪ್ರಾಚೀನ ಸಂಪ್ರದಾಯಗಳ ದೈವಿಕತೆಯೊಂದಿಗೆ ಪೂರ್ಣಗೊಂಡಿದೆ. ನೂರಾರು ಕುಶಲಕರ್ಮಿಗಳು ಮತ್ತು ಶ್ರಮಜೀವಿಗಳ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ಎತ್ತಿ ತೋರಿಸಿದ ಪ್ರಧಾನಿ, ಇಂದು ವಲಿನಾಥ ಮಹಾದೇವ್, ಹಿಂಗ್ಲಾಜ್ ಮಾತಾ ಜೀ ಮತ್ತು ದತ್ತಾತ್ರೇಯ ದೇವರ ಯಶಸ್ವಿ ಪಟ್ಟಾಭಿಷೇಕ ನೆರವೇರಿದೆ. ಅವರ ಪ್ರಯತ್ನಗಳು ಶ್ಲಾಘನೀಯ. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಬೇಕು ಎಂದರು.

 

ಈ ದೇವಾಲಯಗಳು ಆರಾಧನೆಯ ಸ್ಥಳಕ್ಕಿಂತ ಹೆಚ್ಚಿನದ್ದಾಗಿದೆ. ಜತೆಗೆ, ಇದು ನಮ್ಮ ಶತಮಾನಗಳಷ್ಟು ಹಳೆಯ ನಾಗರಿಕತೆಯ ಸಂಕೇತಗಳಾಗಿವೆ. ಸಮಾಜದಲ್ಲಿ ಜ್ಞಾನ ಪಸರಿಸುವಲ್ಲಿ ದೇವಾಲಯಗಳ ಪಾತ್ರ ಬಹುದೊಡ್ಡದು. ಸ್ಥಳೀಯ ಧಾರ್ಮಿಕ ಅಖಾಡಗಳು ಜ್ಞಾನವನ್ನು ಹರಡುವ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಪುಸ್ತಕ ಪರಬ್ ಸಂಘಟನೆ, ಶಾಲೆ ಮತ್ತು ಹಾಸ್ಟೆಲ್ ನಿರ್ಮಾಣವು ಜನರಲ್ಲಿ ಜಾಗೃತಿ ಮತ್ತು ಶಿಕ್ಷಣವನ್ನು ಹೆಚ್ಚಿಸಿದೆ. "ದೇವ್ ಕಾಜ್ ಮತ್ತು ದೇಶ್ ಕಾಜ್‌ಗೆ ಇದಕ್ಕಿಂತ ಉತ್ತಮ ಉದಾಹರಣೆ ಇಲ್ಲ". ಅಂತಹ ಪ್ರಬುದ್ಧ ಸಂಪ್ರದಾಯಗಳನ್ನು ಪೋಷಿಸಿದ್ದಕ್ಕಾಗಿ ರಾಬರಿ ಸಮಾಜವನ್ನು ಪ್ರಧಾನಿ ಶ್ಲಾಘಿಸಿದರು.

ವಲಿನಾಥ್ ಧಾಮದಲ್ಲಿ ಬೇರೂರಿರುವ ಸಬ್ಕಾ ಸಾಥ್ ಸಬ್ಕಾ ವಿಕಾಸ್‌ನ ಮನೋಭಾವದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ, ಈ ಮನೋಭಾವಕ್ಕೆ ಹೊಂದಿಕೆಯಾಗಿ, ಪ್ರತಿಯೊಂದು ವರ್ಗದ ಜೀವನವನ್ನು ಉತ್ತಮಗೊಳಿಸಲು ಸರ್ಕಾರ ಬದ್ಧವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನ ಪರಿವರ್ತಿಸುವುದು ಮೋದಿ ಅವರ ಭರವಸೆಯ ಗುರಿಯಾಗಿದೆ. ಕೋಟ್ಯಂತರ ಬಡವರಿಗೆ ಪಕ್ಕಾ ಮನೆಗಳ ನಿರ್ಮಾಣದೊಂದಿಗೆ, ಇತ್ತೀಚೆಗೆ 1.25 ಲಕ್ಷ ಮನೆಗಳನ್ನು ಬಡವರಿಗೆ ಸಮರ್ಪಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. 80 ಕೋಟಿ ನಾಗರಿಕರಿಗೆ ಒದಗಿಸಿರುವ ಉಚಿತ ಪಡಿತರವನ್ನು ‘ಭಗವಾನ್ ಕಾ ಪ್ರಸಾದ್’ ಎಂದು ಅವರು ಉಲ್ಲೇಖಿಸಿದರು. 10 ಕೋಟಿ ಹೊಸ ಕುಟುಂಬಗಳಿಗೆ ‘ಅಮೃತ್’ ಪೈಪ್‌ಲೈನ್ ನೀರು ಒದಗಿಸಲಾಗಿದೆ.

 

ಕಳೆದ 2 ದಶಕಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಹೊರತಾಗಿ ಗುಜರಾತ್‌ನಲ್ಲಿ ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಸರ್ಕಾರ ಪ್ರಯತ್ನಗಳನ್ನು ನಡೆಸಿದೆ. ದಶಕಗಳಿಂದ ಭಾರತದಲ್ಲಿ ಅಭಿವೃದ್ಧಿ ಮತ್ತು ಪರಂಪರೆಯ ನಡುವೆ ಸೃಷ್ಟಿಯಾಗಿರುವ ಸಂಘರ್ಷ, ಮಂಗಳಕರವಾದ ಸೋಮನಾಥ ದೇಗುಲ ವಿವಾದದ ತಾಣವಾಗುತ್ತಿರುವುದು, ಪಾವಗಡದ ಜಾಗ ನಿರ್ಲಕ್ಷ್ಯ, ಮೊಧೇರಾದ ಸೂರ್ಯ ದೇವಾಲಯ ಮುಂದಿಟ್ಟುಕೊಂಡು ನಡೆಯುತ್ತಿರುವ ಮತ ಬ್ಯಾಂಕ್ ರಾಜಕಾರಣ, ರಾಮನ ಅಸ್ತಿತ್ವ ಪ್ರಶ್ನಿಸಿ ಅಡೆತಡೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ವಿಷಾದಿಸಿದರು. ರಾಮ್ ಲಲ್ಲಾ ಅವರ ಜನ್ಮಸ್ಥಳದಲ್ಲಿ ನಿರ್ಮಿಸಲಾದ ದೇವಾಲಯದ ಬಗ್ಗೆ ಇಡೀ ರಾಷ್ಟ್ರವು ಸಂತೋಷಪಡುತ್ತಿದ್ದರೂ, ಅದೇ ಜನರು ಇನ್ನೂ ನಕಾರಾತ್ಮಕತೆಯನ್ನು ಹರಡುತ್ತಿದ್ದಾರೆ ಎಂದು ಅವರು ಪ್ರಧಾನಿ ವಾಗ್ದಾಳಿ ನಡೆಸಿದರು.

 “ಇಂದು, ನವ ಭಾರತದಲ್ಲಿ ಮಾಡಲಾಗುತ್ತಿರುವ ಪ್ರತಿಯೊಂದು ಪ್ರಯತ್ನವು ಭವಿಷ್ಯದ ಪೀಳಿಗೆಗೆ ಪರಂಪರೆಯನ್ನು ಸೃಷ್ಟಿಸುತ್ತಿದೆ. ಇಂದು ನಿರ್ಮಾಣವಾಗುತ್ತಿರುವ ಹೊಸ ಮತ್ತು ಆಧುನಿಕ ರಸ್ತೆಗಳು ಮತ್ತು ರೈಲು ಹಳಿಗಳು ಅಭಿವೃದ್ಧಿ ಹೊಂದಿದ ಭಾರತದ ಹಾದಿಗಳು ಮಾತ್ರ. ಇಂದು ಮೆಹ್ಸಾನಾಗೆ ರೈಲು ಸಂಪರ್ಕ ಬಲಪಡಿಸಲಾಗಿದೆ. ರೈಲು ಮಾರ್ಗ ದ್ವಿಗುಣಗೊಳಿಸುವುದರಿಂದ ಕಾಂಡ್ಲಾ, ಟ್ಯೂನಾ ಮತ್ತು ಮುಂದ್ರಾ ಬಂದರುಗಳೊಂದಿಗೆ ಬನಸ್ಕಾಂತ ಮತ್ತು ಪಟಾನ್ ಸಂಪರ್ಕವನ್ನು ಸುಧಾರಿಸಿದೆ. ಡೀಸಾ ಏರ್ ಫೋರ್ಸ್ ಸ್ಟೇಷನ್ ರನ್‌ವೇಗೆ ಒಂದೂವರೆ ವರ್ಷಗಳ ಹಿಂದೆ ಶಂಕುಸ್ಥಾಪನೆ ಮಾಡಿದ್ದೇನೆ. “ಮೋದಿ ಅವರು ಯಾವುದೇ ಸಂಕಲ್ಪ ಕೈಗೊಂಡರೂ ಅದನ್ನು ಪೂರೈಸುತ್ತಾರೆ, ದೀಸಾದ ಈ ರನ್‌ವೇ ಇದಕ್ಕೆ ಉದಾಹರಣೆಯಾಗಿದೆ. ಇದು ಮೋದಿ ಅವರ ಗ್ಯಾರಂಟಿ” ಎಂದು ಪ್ರಧಾನಿ ಹೇಳಿದರು.

 

ಕೈಗಾರಿಕೀಕರಣದ ವ್ಯಾಪ್ತಿಯೊಂದಿಗೆ ಉತ್ತರ ಗುಜರಾತ್‌ನಲ್ಲಿ ಅವಕಾಶಗಳು ಬಹಳ ಸೀಮಿತವಾಗಿದ್ದ 20-25 ವರ್ಷಗಳ ಹಿಂದಿನ ಅವಧಿಯನ್ನು ನೆನಪಿಸಿಕೊಂಡ ಪ್ರಧಾನಿ, ದನಗಾಹಿಗಳ ಸವಾಲುಗಳು ಮತ್ತು ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತುತ ಸರ್ಕಾರವು ತಂದಿರುವ ಸಕಾರಾತ್ಮಕ ಬದಲಾವಣೆಗಳನ್ನು ಎತ್ತಿ ತೋರಿಸಿದ ಪ್ರಧಾನ ಮಂತ್ರಿ, ರೈತರು ವರ್ಷದಲ್ಲಿ 2-3 ಬೆಳೆಗಳನ್ನು ಬೆಳೆಯುತ್ತಾರೆ. ಇಡೀ ಪ್ರದೇಶದ ನೀರಿನ ಮಟ್ಟ ಹೆಚ್ಚಳವಾಗಿದೆ. ಇಂದು 1,500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ನೀರು ಸರಬರಾಜು ಮತ್ತು ಜಲಮೂಲಗಳಿಗೆ ಸಂಬಂಧಿಸಿದ 8 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ.  ಉತ್ತರ ಗುಜರಾತ್‌ನ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಇದು ಮತ್ತಷ್ಟು ಸಹಾಯ ಮಾಡುತ್ತದೆ. ಹನಿ ನೀರಾವರಿ ಮತ್ತು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯ ಉದಯೋನ್ಮುಖ ಪ್ರವೃತ್ತಿಗಳಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಉತ್ತರ ಗುಜರಾತ್‌ನ ರೈತರನ್ನು ಅವರು ಶ್ಲಾಘಿಸಿದರು. "ನಿಮ್ಮ ಪ್ರಯತ್ನಗಳು ದೇಶಾದ್ಯಂತ ರೈತರ ಉತ್ಸಾಹವನ್ನು ಹೆಚ್ಚಿಸುತ್ತವೆ" ಎಂದರು.

ದೇಶದ ಅಭಿವೃದ್ಧಿ ಹಾಗೂ ಪರಂಪರೆ ಸಂರಕ್ಷಿಸಲು ಸರ್ಕಾರವು ಒತ್ತು ನೀಡಿದೆ. ಇಂದಿನ ಅಭಿವೃದ್ಧಿ ಯೋಜನೆಗಳಿಗೆ ಶುಭ ಹಾರೈಕೆಗಳನ್ನು ತಿಳಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಹಲವಾರು ಸಂಸದರು, ಶಾಸಕರು ಮತ್ತು ಗುಜರಾತ್ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹಿನ್ನೆಲೆ

8000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿಗೆ ಹೈಸ್ಪೀಡ್ ಇಂಟರ್ನೆಟ್ ಒದಗಿಸುವ ಗುಜರಾತ್ ಫೈಬರ್ ಗ್ರಿಡ್ ನೆಟ್‌ವರ್ಕ್ ಲಿಮಿಟೆಡ್ ನ ಭಾರತ್ ನೆಟ್ ಹಂತ-II ಸೇರಿದಂತೆ ಪ್ರಮುಖ ಯೋಜನೆಗಳನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಮಹೆಸಾನ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಜೋಡಿ ರೈಲು ಮಾರ್ಗ, ಗೇಜ್ ಪರಿವರ್ತನೆ, ಹೊಸ ಬ್ರಾಡ್-ಗೇಜ್ ಮಾರ್ಗಕ್ಕಾಗಿ ಬಹು ಯೋಜನೆಗಳು, ಖೇಡಾ, ಗಾಂಧಿನಗರ, ಅಹಮದಾಬಾದ್ ಮತ್ತು ಮಹೆಸಾನದಲ್ಲಿ ಬಹು ರಸ್ತೆ ಯೋಜನೆಗಳು; ಗಾಂಧಿನಗರದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ವಿಶ್ವವಿದ್ಯಾಲಯದ ಮುಖ್ಯ ಶೈಕ್ಷಣಿಕ ಕಟ್ಟಡ; ಬನಸ್ಕಾಂತದಲ್ಲಿ ಬಹು ನೀರು ಸರಬರಾಜು ಯೋಜನೆಗಳು ಇದರಲ್ಲಿ ಸೇರಿವೆ.

 

ಕಾರ್ಯಕ್ರಮದ ಸಂದರ್ಭದಲ್ಲಿ, ಆನಂದ್ ಜಿಲ್ಲೆಯಲ್ಲಿ ಹೊಸ ಜಿಲ್ಲಾ ಮಟ್ಟದ ಆಸ್ಪತ್ರೆ ಮತ್ತು ಆಯುರ್ವೇದ ಆಸ್ಪತ್ರೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಬನಸ್ಕಾಂತದಲ್ಲಿರುವ ಅಂಬಾಜಿ ಪ್ರದೇಶದಲ್ಲಿ ರಿಂಚಾದಿಯ ಮಹಾದೇವ ದೇವಸ್ಥಾನ ಮತ್ತು ಸರೋವರದ ಅಭಿವೃದ್ಧಿ, ಗಾಂಧಿನಗರ, ಅಹಮದಾಬಾದ್, ಬನಸ್ಕಾಂತ ಮತ್ತು ಮಹೆಸಾನದಲ್ಲಿ ಬಹು ರಸ್ತೆ ಯೋಜನೆಗಳು; ಡೀಸಾ ಏರ್ ಫೋರ್ಸ್ ಸ್ಟೇಷನ್ ರನ್ ವೇ, ಅಹಮದಾಬಾದ್‌ನಲ್ಲಿ ಮಾನವ ಮತ್ತು ಜೈವಿಕ ವಿಜ್ಞಾನ ಗ್ಯಾಲರಿ; ಗಿಫ್ಟ್ ಸಿಟಿಯಲ್ಲಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ (GBRC) ಹೊಸ ಕಟ್ಟಡ, ಗಾಂಧಿನಗರ, ಅಹಮದಾಬಾದ್ ಮತ್ತು ಬನಸ್ಕಾಂತದಲ್ಲಿ ನೀರು ಪೂರೈಕೆ ಸುಧಾರಿಸುವ ಅನೇಕ ಯೋಜನೆಗಳು ಇದರಲ್ಲಿ ಸೇರಿವೆ.

 

 

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”