ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೊತ್ತಮೊದಲ ಬೋಡೋಲ್ಯಾಂಡ್ ಮೊಹೋತ್ಸವವನ್ನು ಉದ್ಘಾಟಿಸಿದರು. ಶಾಂತಿಯನ್ನು ಉಳಿಸಿಕೊಳ್ಳಲು ಮತ್ತು ವೈವಿದ್ಯಮಯ ಬೋಡೋ ಸಮಾಜವನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಎರಡು ದಿನಗಳ ಬೃಹತ್ ಕಾರ್ಯಕ್ರಮ - ಬೋಡೋಲ್ಯಾಂಡ್ ಮೊಹೋತ್ಸವವನ್ನು ಆಯೋಜಿಸಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ತಿಕ ಪೂರ್ಣಿಮಾ ಮತ್ತು ದೇವ್ ದೀಪಾವಳಿಯ ಶುಭ ಸಂದರ್ಭದಲ್ಲಿ ಭಾರತದ ಸಮಸ್ತ ನಾಗರಿಕರಿಗೆ ಶುಭಾಶಯ ಕೋರಿದರು. ಇಂದು ಆಚರಿಸಲಾಗುತ್ತಿರುವ ಶ್ರೀ ಗುರುನಾನಕ್ ದೇವ್ ಜಿ ಅವರ 555 ನೇ ಪ್ರಕಾಶ್ ಪರ್ವದಂದು ಜಗತ್ತಿನಾದ್ಯಂತ ಇರುವ ಎಲ್ಲಾ ಸಿಖ್ ಸಹೋದರ ಸಹೋದರಿಯರಿಗೆ ಅವರು ಶುಭಾಶಯಗಳನ್ನು ಕೋರಿದರು. ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವಾರ್ಷಿಕೋತ್ಸವ ಮೂಲಕ ಭಾರತದ ನಾಗರಿಕರು ಜನಜಾತೀಯ ಗೌರವ ದಿವಸವನ್ನು ಆಚರಿಸುತ್ತಿದ್ದಾರೆ ಎಂದು ಅವರು ಹೇಳಿದರು. ಮೊತ್ತಮೊದಲ ಬೋಡೋಲ್ಯಾಂಡ್ ಮೊಹೋತ್ಸವವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹಳ ಸಂತೋಷಪಟ್ಟರು ಮತ್ತು ಸಮೃದ್ಧಿ, ಸಂಸ್ಕೃತಿ ಮತ್ತು ಶಾಂತಿಯ ಹೊಸ ಭವಿಷ್ಯವನ್ನು ಆಚರಿಸಲು ಬಂದಿರುವ ದೇಶಾದ್ಯಂತದ ಬೋಡೋ ಜನರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಈ ಸಂದರ್ಭವನ್ನು ತನಗೆ ಭಾವನಾತ್ಮಕ ಕ್ಷಣ ಎಂದು ಕರೆದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 50 ವರ್ಷಗಳ ಸುದೀರ್ಘ ಹಿಂಸಾಚಾರವನ್ನು ಕೊನೆಗೊಳಿಸಿರುವುದರಿಂದ ಮತ್ತು ಬೋಡೋಲ್ಯಾಂಡ್ ತನ್ನ ಮೊದಲ ಏಕತೆಯ ಹಬ್ಬವನ್ನು ಆಚರಿಸುತ್ತಿರುವ ಕಾರಣ ಇದು ಅತ್ಯಂತ ಸೂಕ್ತವಾದ ಹಾಗೂ ಅತ್ಯಂತ ವಿಶೇಷ ಕ್ಷಣ ಎಂದು ಹೇಳಿದರು. ವಿಶೇಷ ರಣಚಂಡಿ ನೃತ್ಯವು ಬೋಡೋಲ್ಯಾಂಡ್ ನ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು. ವರ್ಷಗಳ ಹೋರಾಟ ಮತ್ತು ಮಧ್ಯಸ್ಥಿಕೆ ಪ್ರಯತ್ನಗಳ ನಂತರ ಹೊಸ ಇತಿಹಾಸವನ್ನು ಸೃಷ್ಟಿಸಿದ ಬೋಡೋ ಜನತೆಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದರು.
2020ರ ಬೋಡೋ ಶಾಂತಿ ಒಪ್ಪಂದದ ನಂತರ ಕೊಕ್ರಜಾರ್ ಗೆ ಭೇಟಿ ನೀಡುವ ಅವಕಾಶವನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತನ್ನ ಮೇಲೆ ಉಷ್ಣತೆಯ ತಾಪ ಮತ್ತು ಪ್ರೀತಿಯನ್ನು ಸುರಿದ ಬೋಡೋಗಳಲ್ಲಿ ನಾನೂ ಒಬ್ಬನೆಂದು ಭಾವಿಸಿಕೊಂಡೆ ಎಂದು ಹೇಳಿದರು. ಅವರ ಭೇಟಿಯ ನಾಲ್ಕು ವರ್ಷಗಳ ನಂತರವೂ ಅದೇ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆಯನ್ನು ಪುನಃ ಅನುಭವಿಸಲು ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು. ಅವರು ಬೋಡೋಗಳಿಗೆ ನೀಡಿದ ತಮ್ಮ ಮಾತುಗಳನ್ನು ನೆನಪಿಸಿಕೊಳ್ಳತ್ತಾ, ಶಸ್ತ್ರಾಸ್ತ್ರಗಳನ್ನು ತ್ಯಜಿಸುವ ಮೂಲಕ ಜನರು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿರುವುದನ್ನು ನೋಡಿದ ನಂತರ ಬೋಡೋಲ್ಯಾಂಡ್ ನಲ್ಲಿ ಶಾಂತಿ ಮತ್ತು ಸಮೃದ್ಧಿಯ ಹೊಸ ಉದಯವಾಗಿದೆ ಎಂದು ಹೇಳಿದರು. ಇಂದು ಸಂತೋಷದ ಜನರು ಮತ್ತು ಉಜ್ವಲವಾದ ಆಚರಣೆಗಳನ್ನು ವೀಕ್ಷಿಸಿದ ಪ್ರಧಾನಮಂತ್ರಿಯವರು, ಇದು ನಿಜವಾಗಿಯೂ ಅವರಿಗೆ ಭಾವನಾತ್ಮಕ ಕ್ಷಣವಾಗಿದೆ. ಬೋಡೋ ಜನರ ಉಜ್ವಲ ಭವಿಷ್ಯಕ್ಕಾಗಿ ವಿವಿಧ ಯೋಜನೆಗಳ ಮೂಲಕ ಬಲವಾದ ಅಡಿಪಾಯವನ್ನು ಹಾಕಲಾಗಿದೆ. ಬೋಡೋಲ್ಯಾಂಡ್ ನಲ್ಲಿ ಕಳೆದ 4 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿಕಾರ್ಯಗಳು ಅತ್ಯಂತ ಮಹತ್ವದ್ದಾಗಿದೆ. "ಶಾಂತಿ ಒಪ್ಪಂದದ ನಂತರ ಬೋಡೋಲ್ಯಾಂಡ್ ಅಭಿವೃದ್ಧಿಯ ಹೊಸ ಅಲೆಗೆ ಸಾಕ್ಷಿಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಬೋಡೋ ಶಾಂತಿ ಒಪ್ಪಂದದ ಪ್ರಯೋಜನಗಳು ಮತ್ತು ಬೋಡೋಗಳ ಜೀವನದ ಮೇಲೆ ಅದರ ಪ್ರಭಾವವನ್ನು ಸನಿಹದಿಂದ ನೋಡಲು ಅವಕಾಶ ಸಿಕ್ಕಿದೆ, ನಾನು ಇಂದು ತೃಪ್ತಿ ಹೊಂದಿದ್ದೇನೆ ಎಂದು ಅವರು ಹೇಳಿದರು. ಬೋಡೋ ಶಾಂತಿ ಒಪ್ಪಂದವು ಅನೇಕ ಇತರ ಒಪ್ಪಂದಗಳಿಗೆ ಹೊಸ ಮಾರ್ಗಗಳನ್ನು ತೆರೆದಿದೆ. ಒಪ್ಪಂದದ ಫಲವಾಗಿ ಅಸ್ಸಾಂ ಒಂದರಲ್ಲೇ 10 ಸಾವಿರಕ್ಕೂ ಹೆಚ್ಚು ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಹಿಂಸಾಚಾರದ ಹಾದಿಯನ್ನು ತೊರೆದು ಅಭಿವೃದ್ಧಿಯ ಮುಖ್ಯವಾಹಿನಿಗೆ ಮರಳಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದರು. ಕರ್ಬಿ ಆಂಗ್ಲಾಂಗ್ ಒಪ್ಪಂದ, ಬ್ರೂ-ರಿಯಾಂಗ್ ಒಪ್ಪಂದ ಮತ್ತು ಎನ್.ಎಲ್.ಎಫ್.ಟಿ.-ತ್ರಿಪುರಾ ಒಪ್ಪಂದಗಳು ಕೂಡಾ ಒಂದು ದಿನ ನಿಜವಾಗುವುದು ಎಂದು ಊಹಿಸಲಾಗದ ಸ್ಥಿತಿಯಿತ್ತು, ಅವುಗಳು ಯಾರ ಕಲ್ಪನೆಗೂ ಮೀರಿತ್ತು. ಜನರು ಮತ್ತು ಸರ್ಕಾರದ ನಡುವಿನ ಪರಸ್ಪರ ನಂಬಿಕೆಯನ್ನು ಇಬ್ಬರೂ ಗೌರವಿಸಿದ್ದಾರೆ ಮತ್ತು ಈಗ ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರವು ಬೋಡೋಲ್ಯಾಂಡ್ ಮತ್ತು ಅದರ ಜನರ ಅಭಿವೃದ್ಧಿಯಲ್ಲಿ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ ಎಂದು ಶ್ರೀ ಮೋದಿ ಅವರು ಹೇಳಿದರು.
ಪ್ರಾದೇಶಿಕವಾಗಿ ಬೋಡೋ ಪ್ರದೇಶದಲ್ಲಿರುವ ಬೋಡೋ ಸಮುದಾಯದ ಅಗತ್ಯತೆಗಳು ಮತ್ತು ಆಕಾಂಕ್ಷೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ಆದ್ಯತೆಯನ್ನು ವಿವರಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಂ ಸರ್ಕಾರವು ಬೋಡೋಲ್ಯಾಂಡ್ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಮಂಜೂರು ಮಾಡಿತ್ತು. ಇದರ ಜೊತೆಗೆ ಕೇಂದ್ರ ಸರ್ಕಾರ 1500 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡಿದೆ. ಬೋಡೋಲ್ಯಾಂಡ್ ನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 700 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ ಜನರ ಬಗ್ಗೆ ಸರ್ಕಾರವು ಅತ್ಯಂತ ಸೂಕ್ಷ್ಮತೆಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ ನ 4 ಸಾವಿರಕ್ಕೂ ಹೆಚ್ಚು ಮಾಜಿ ಕಾರ್ಯಕರ್ತರಿಗೆ ಪುನರ್ವಸತಿ ನೀಡಲಾಗಿದ್ದು, ಅನೇಕ ಯುವಕರಿಗೆ ಅಸ್ಸಾಂ ಪೊಲೀಸರಲ್ಲಿ ಉದ್ಯೋಗ ನೀಡಲಾಗಿದೆ. ಬೋಡೋ ಸಂಘರ್ಷದಿಂದ ಸಂತ್ರಸ್ತರಾದ ಪ್ರತಿ ಕುಟುಂಬಕ್ಕೆ ಅಸ್ಸಾಂ ಸರ್ಕಾರ 5 ಲಕ್ಷ ರೂಪಾಯಿ ನೆರವು ನೀಡಿದೆ. ಬೋಡೋಲ್ಯಾಂಡ್‌ನ ಅಭಿವೃದ್ಧಿಗಾಗಿ ಅಸ್ಸಾಂ ಸರ್ಕಾರವು ಪ್ರತಿ ವರ್ಷ 800 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಯಾವುದೇ ಪ್ರದೇಶದ ಅಭಿವೃದ್ಧಿಗೆ ಯುವಕರು ಮತ್ತು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಅವಕಾಶಗಳ ಲಭ್ಯತೆಯು ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸೀಡ್ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಇದು ಕೌಶಲ್ಯ, ಉದ್ಯಮಶೀಲತೆ, ಉದ್ಯೋಗ ಮತ್ತು ಅಭಿವೃದ್ಧಿಯ ಮೂಲಕ ಯುವಕರ ಕಲ್ಯಾಣ ಎಂದರ್ಥ ಮತ್ತು ಬೋಡೋ ಯುವಕರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಬಂದೂಕು ಹಿಡಿದ ಯುವಕರು ಈಗ ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ. ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ನ ತಂಡಗಳ ಭಾಗವಹಿಸುವಿಕೆಯೊಂದಿಗೆ ಕೊಕ್ರಜಾರ್‌ನಲ್ಲಿ ನಡೆಯುತ್ತಿರುವ ಡುರಾಂಡ್ ಕಪ್‌ನ ಎರಡು ಆವೃತ್ತಿಗಳು ಐತಿಹಾಸಿಕವಾಗಿದೆ. ಪ್ರಧಾನ ಶಾಂತಿ ಒಪ್ಪಂದದ ನಂತರ, ಬೋಡೋಲ್ಯಾಂಡ್ ಸಾಹಿತ್ಯೋತ್ಸವವನ್ನು ಕಳೆದ ಮೂರು ವರ್ಷಗಳಿಂದ ಕೊಕ್ರಜಾರ್‌ನಲ್ಲಿ ನಿರಂತರವಾಗಿ ನಡೆಸಲಾಯಿತು, ಇದು ಬೋಡೋ ಸಾಹಿತ್ಯಕ್ಕೆ ಉತ್ತಮ ಸೇವೆಯನ್ನು ಹಾಗೂ ಉತ್ತೇಜನ ನೀಡುವುದನ್ನು ಸೂಚಿಸುತ್ತದೆ. ಇದು ಬೋಡೋ ಸಾಹಿತ್ಯ ಮತ್ತು ಬೋಡೋ ಭಾಷೆಯ ಆಚರಣೆಯ ದಿನವಾಗಿದ್ದು, ನಾಳೆ ಸಾಂಸ್ಕೃತಿಕ ಪಥಸಂಚಲನ ನಡೆಯಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹಾಗೂ ಇಂದಿನ ಬೋಡೋ ಸಾಹಿತ್ಯ ಸಭೆಯ 73ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೋಡೋ ಜನತೆಗೆ ಶುಭಾಶಯ ಕೋರಿದರು.
ಬೋಡೋ ಮೊಹೋತ್ಸೊವ್ ನಲ್ಲಿ ಏರ್ಪಡಿಸಿದ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ ಅನುಭವವನ್ನು ವಿವರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭೌಗೋಳಿಕ ವೈಶಿಷ್ಟತೆಯ ಸೂಚನೆ(ಜಿಐ) ಟ್ಯಾಗ್ ಅನ್ನು ಪಡೆದಿರುವ ಅರೋನ್ನಯೇ, ದೋಖೋನಾ, ಗಮ್ಸ, ಕರೈ-ದಖಿನಿ, ಥೋರ್ಖಾ, ಜೌ ಗಿಶಿ, ಖಾಮ್ ಮತ್ತು ಇಂತಹದೇ ಇತರ ಉತ್ಪನ್ನಗಳಂತಹ ಶ್ರೀಮಂತ ಬೋಡೋ ಕಲೆ, ಕೌಶಲ್ಯತೆ, ಮತ್ತು ಕರಕುಶಲತೆಯನ್ನು ವೀಕ್ಷಿಸಿ ಬಹಳ ಸಂತೋಷವಾಗಿದೆ ಎಂದು ಹೇಳಿದರು. ಜಿಐ ಟ್ಯಾಗ್‌ನ ಪ್ರಾಮುಖ್ಯತೆಯು ಉತ್ಪನ್ನಗಳ ಗುರುತನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದು ಜಗತ್ತಿನಲ್ಲಿ ಎಲ್ಲೇ ಇದ್ದರೂ ಬೋಡೋಲ್ಯಾಂಡ್ ಮತ್ತು ಬೋಡೋ ಸಂಸ್ಕೃತಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ರೇಷ್ಮೆ ಕೃಷಿಯು ಯಾವಾಗಲೂ ಬೋಡೋ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಸರ್ಕಾರವು ಬೋಡೋಲ್ಯಾಂಡ್ ರೇಷ್ಮೆ ಕೃಷಿ ಮಿಷನ್ ಅನ್ನು ಜಾರಿಗೆ ತಂದಿದೆ. ಪ್ರತಿ ಬೋಡೋ ಕುಟುಂಬದಲ್ಲಿ ನೇಯ್ಗೆ ಮಾಡುವ ಸಂಪ್ರದಾಯವಿದೆ. ಬೋಡೋಲ್ಯಾಂಡ್ ಹ್ಯಾಂಡ್ಲೂಮ್ ಮಿಷನ್ ಮೂಲಕ ಬೋಡೋ ಸಮುದಾಯದ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಅಗತ್ಯ ಪೂರಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿಯವರು ಹೇಳಿದರು
"ಅಸ್ಸಾಂ ಭಾರತದ ಪ್ರವಾಸೋದ್ಯಮ ಕ್ಷೇತ್ರದ ದೊಡ್ಡ ಶಕ್ತಿಯಾಗಿದೆ, ಹಾಗೂ ಬೋಡೋಲ್ಯಾಂಡ್ ಅಸ್ಸಾಂನ ಪ್ರವಾಸೋದ್ಯಮದ ಶಕ್ತಿಯಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದರು. ಮಾನಸ್ ರಾಷ್ಟ್ರೀಯ ಉದ್ಯಾನವನ, ರೈಮೋನಾ ರಾಷ್ಟ್ರೀಯ ಉದ್ಯಾನವನ ಮತ್ತು ಸಿಖ್ನಾ ಝಲಾವೊ ರಾಷ್ಟ್ರೀಯ ಉದ್ಯಾನವನದ ದಟ್ಟವಾದ ಕಾಡುಗಳು ಒಂದು ಕಾಲದಲ್ಲಿ ಗಲಭೆಕೋರರು ಅಡಗಿಕೊಳ್ಳುತ್ತಿದ್ದವು, ಈಗ ಇವುಗಳು ಯುವಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ಮಾಧ್ಯಮವಾಗುತ್ತಿರುವ ಬಗ್ಗೆ ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಬೋಡೋಲ್ಯಾಂಡ್ ನಲ್ಲಿ ಬೆಳೆಯುತ್ತಿರುವ ಪ್ರವಾಸೋದ್ಯಮವು ಯುವಕರಿಗೆ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಬೋಡೋಫಾ ಉಪೇಂದ್ರ ನಾಥ ಬ್ರಹ್ಮ ಮತ್ತು ಗುರುದೇವ್ ಕಾಳಿಚರಣ್ ಬ್ರಹ್ಮ ಅವರ ಕೊಡುಗೆಗಳನ್ನು ಸ್ಮರಿಸಿದ ಶ್ರೀ ಮೋದಿ, ಗುರುದೇವ್ ಕಾಳಿಚರಣ್ ಬ್ರಹ್ಮ ಅವರು ಸಮಾಜವನ್ನು ಒಗ್ಗೂಡಿಸಿದರು. ಅಹಿಂಸೆ ಮತ್ತು ಆಧ್ಯಾತ್ಮಿಕತೆ. ಬೋಡೋ ತಾಯಂದಿರು ಮತ್ತು ಸಹೋದರಿಯರು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯದ ಕನಸುಗಳನ್ನು ಹೊಂದಿದ್ದರು, ಬೋಡೋಫಾ ಯಾವಾಗಲೂ ಭಾರತದ ಸಮಗ್ರತೆ ಮತ್ತು ಬೋಡೋ ಜನರ ಸಾಂವಿಧಾನಿಕ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ವಿಧಾನವನ್ನು ಮುಂದಿಟ್ಟಿದ್ದರು. ಹಾಗೂ ಪ್ರತಿ ಬೋಡೋ ಕುಟುಂಬವು ಈಗ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡುವ ಆಕಾಂಕ್ಷೆಯನ್ನು ಹೊಂದಿದೆ. ಇದಕ್ಕೆ ಕಾರಣ, ಅವರ ಮುಂದಿರುವ ಯಶಸ್ವಿ ಬೋಡೋ ವ್ಯಕ್ತಿಗಳು, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಹರಿಶಂಕರ ಬ್ರಹ್ಮಾ, ಮೇಘಾಲಯದ ಮಾಜಿ ರಾಜ್ಯಪಾಲರಾದ ಶ್ರೀ ರಂಜಿತ್ ಶೇಖರ್ ಮುಶಾಹರಿಯಂತಹ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ಸೇವೆ ಸಲ್ಲಿಸಿದ ಮಾದರಿ ವ್ಯಕ್ತಿಗಳು, ಅವರುಗಳು ಹೊಂದಿದ್ದ ಬೋಡೋ ಸಮುದಾಯದ ಪ್ರತಿಷ್ಠೆಗಳು.. ಬೋಡೋಲ್ಯಾಂಡ್ ನ ಯುವಕರು ಉತ್ತಮ ವೃತ್ತಿಜೀವನವನ್ನು ನಿರ್ಮಿಸುವ ಕನಸು ಕಾಣುತ್ತಿದ್ದಾರೆ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಬೋಡೋ ಕುಟುಂಬದೊಂದಿಗೆ ಅವರ ಪ್ರಗತಿಯಲ್ಲಿ ಪಾಲುದಾರರಾಗಿ ನಿಂತಿವೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು.
ಅಸ್ಸಾಂ ಸೇರಿದಂತೆ ಇಡೀ ಈಶಾನ್ಯ ಪ್ರದೇಶವು ಭಾರತದ ಅಷ್ಟಲಕ್ಷ್ಮಿಯಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿ ನೀಡಲು ಪೂರ್ವ ಭಾರತದಿಂದ ಅಭಿವೃದ್ಧಿಯ ಉದಯವಾಗಲಿದೆ . ಆದ್ದರಿಂದ, ಈಶಾನ್ಯ ರಾಜ್ಯಗಳ ನಡುವಿನ ಗಡಿ ವಿವಾದಗಳಿಗೆ ಸೌಹಾರ್ದಯುತ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಈಶಾನ್ಯದಲ್ಲಿ ಶಾಶ್ವತ ಶಾಂತಿಗಾಗಿ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು.
ಕಳೆದ ದಶಕದಲ್ಲಿ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಸುವರ್ಣ ಯುಗ ಆರಂಭವಾಗಿದೆ. ಸರ್ಕಾರದ ನೀತಿಗಳಿಂದಾಗಿ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಅಸ್ಸಾಂನ ಲಕ್ಷಾಂತರ ಜನರು ಬಡತನವನ್ನು ಸೋಲಿಸಿದ್ದಾರೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಅಸ್ಸಾಂ ಅಭಿವೃದ್ಧಿಯ ಹೊಸ ದಾಖಲೆಗಳನ್ನು ರಚಿಸುತ್ತಿದೆ. ಸರ್ಕಾರವು ವಿಶೇಷವಾಗಿ ಆರೋಗ್ಯ ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ. ಕಳೆದ ಒಂದೂವರೆ ವರ್ಷಗಳಲ್ಲಿ, ಅಸ್ಸಾಂಗೆ 4 ದೊಡ್ಡ ಆಸ್ಪತ್ರೆಗಳಾದ ಗುವಾಹಟಿ ಏಮ್ಸ್ ಮತ್ತು ಕೊಕ್ರಜಾರ್, ನಲ್ಬರಿ, ನಾಗಾಂವ್ ವೈದ್ಯಕೀಯ ಕಾಲೇಜುಗಳನ್ನು ನೀಡಲಾಗಿದೆ, ಇದು ಜನರ ಕಷ್ಟಗಳನ್ನು ಕಡಿಮೆ ಮಾಡಿದೆ. ಅಸ್ಸಾಂನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ತೆರೆಯುವುದು ಈಶಾನ್ಯ ರೋಗಿಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. 2014 ಕ್ಕಿಂತ ಮೊದಲು ಅಸ್ಸಾಂನಲ್ಲಿದ್ದ ವೈದ್ಯಕೀಯ ಕಾಲೇಜುಗಳ ಸಂಖ್ಯೆ 6 , ಅದನ್ನು ಈಗ 12 ಕ್ಕೆ ಹೆಚ್ಚಿಸಲಾಗಿದೆ. ಇನ್ನೂ 12 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಕೆಲಸ ಈಗ ನಡೆಯುತ್ತಿದೆ, ಇದು ಯುವಜನರಿಗೆ ಅವಕಾಶಗಳ ಹೊಸ ಬಾಗಿಲುಗಳನ್ನು ತೆರೆಯುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು.
ಬೋಡೋ ಶಾಂತಿ ಒಪ್ಪಂದವು ತೋರಿಸಿದ ಮಾರ್ಗವು ಇಡೀ ಈಶಾನ್ಯಕ್ಕೆ ಸಮೃದ್ಧಿಯ ಹಾದಿಯಾಗಿದೆ. ಬೋಡೋಲ್ಯಾಂಡ್ ಅನ್ನು ಶತಮಾನಗಳ-ಹಳೆಯ ಸಂಸ್ಕೃತಿಯ ಶ್ರೀಮಂತ ವಾಸಸ್ಥಾನವೆಂದು ಪರಿಗಣಿಸಲಾಗಿದೆ, ನಾವು ಈ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನಿರಂತರವಾಗಿ ಬಲಪಡಿಸಬೇಕಾಗಿದೆ ಎಂದು ಹೇಳುತ್ತಾ, ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಶ್ರೀ ಮೋದಿಯವರು, ಬೋಡೋಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು 1 ನೇ ಬೋಡೋಲ್ಯಾಂಡ್ ಮೊಹೋತ್ಸವದಲ್ಲಿ ಭಾಗವಹಿಸಿ ಯಶಸ್ಸುಗೊಳಿಸಿದ ಎಲ್ಲರಿಗೂ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಬೋಡೋಲ್ಯಾಂಡ್ ಪ್ರಾದೇಶಿಕ ವಲಯದ ಮುಖ್ಯಸ್ಥರಾದ ಶ್ರೀ ಪ್ರಮೋದ್ ಬೋರೋ, ಸಮಸ್ತ ಬೋಡೋ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ದೀಪೆನ್ ಬೋಡೋ, ಬೋಡೋ ಸಾಹಿತ್ಯ ಸಭಾದ ಅಧ್ಯಕ್ಷರಾದ ಶ್ರೀ ದೀಪೆನ್ ಬೋಡೋ, ಡಾ ಸೂರತ್ ನರ್ಜಾರಿ ಇತರರು ಉಪಸ್ಥಿತರಿದ್ದರು. ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಸರ್ಮಾ ಅವರು ಕಾರ್ಯಕ್ರಮಕ್ಕೆ ವಿಡಿಯೊ ಸಂಪರ್ಕ ಮೂಲಕ ಸಮಾವೇಶದಲ್ಲಿ ಭಾಗವಹಿಸಿದರು.
ಹಿನ್ನೆಲೆ
ಪ್ರಪ್ರಥಮ ಬೋಡೋಲ್ಯಾಂಡ್ ಮೊಹೋತ್ಸೊವ್, ಎರಡು ದಿನಗಳ ಕಾರ್ಯಕ್ರಮವಾಗಿದ್ದು, ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಇದು ಶಾಂತಿಯನ್ನು ಉಳಿಸಿಕೊಳ್ಳಲು ಮತ್ತು ವೈವಿದ್ಯಮಯ ಬೋಡೋ ಸಮಾಜವನ್ನು ನಿರ್ಮಿಸಲು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಬೃಹತ್ ಕಾರ್ಯಕ್ರಮವಾಗಿದೆ. ಇದು ಬೋಡೋಲ್ಯಾಂಡ್‌ನಲ್ಲಿ ಮಾತ್ರವಲ್ಲದೆ ಅಸ್ಸಾಂ, ಪಶ್ಚಿಮ ಬಂಗಾಳ, ನೇಪಾಳ ಮತ್ತು ಈಶಾನ್ಯದ ಇತರ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಬೋಡೋ ಜನರನ್ನು ಏಕೀಕರಿಸುವ ಗುರಿಯನ್ನು ಹೊಂದಿದೆ. ಮೊಹೊತ್ಸೊವ್ ನ ವಿಷಯವು 'ಸಮೃದ್ಧ ಭಾರತಕ್ಕಾಗಿ ಶಾಂತಿ ಮತ್ತು ಸಾಮರಸ್ಯ' ಎಂಬುದು ಬೋಡೋ ಸಮುದಾಯದ ಶ್ರೀಮಂತ ಸಂಸ್ಕೃತಿ, ಭಾಷೆ ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ (ಬಿ.ಟಿ.ಆರ್.) ಇತರ ಸಮುದಾಯಗಳೊಂದಿಗೆ. ಇದು ಬೋಡೋಲ್ಯಾಂಡ್‌ನ ಸಾಂಸ್ಕೃತಿಕ ಮತ್ತು ಭಾಷಿಕ ಪರಂಪರೆಯ ಶ್ರೀಮಂತಿಕೆ, ಪರಿಸರ ಜೈವಿಕ ವೈವಿಧ್ಯತೆ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ .
ಗಮನಾರ್ಹವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕ್ರಿಯಾತ್ಮಕ ನಾಯಕತ್ವದಲ್ಲಿ 2020ರಲ್ಲಿ ಬೋಡೋ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರದ ಯುವಜನತೆಯಲ್ಲಿ ಚೇತರಿಕೆ ಮತ್ತು ಸಮಾಜದಲ್ಲಿ ಸ್ಥಿತಿಸ್ಥಾಪಕತ್ವದ ಗಮನಾರ್ಹ ಪ್ರಯಾಣವನ್ನು ಕಾಣಬಹುದು, ಈ ನಿಟ್ಟಿನಲ್ಲಿ ಮೊಹೋತ್ಸೊವ್ ಆಚರಿಸಲಾಗುತ್ತಿದೆ. ಈ ಶಾಂತಿ ಒಪ್ಪಂದವು ಬೋಡೋಲ್ಯಾಂಡ್ ನಲ್ಲಿ ದಶಕಗಳ ಸಂಘರ್ಷ, ಹಿಂಸಾಚಾರ ಮತ್ತು ಜೀವಹಾನಿಗಳನ್ನು ಪರಿಹರಿಸುವುದಲ್ಲದೆ ಇತರ ಶಾಂತಿ ವಸಾಹತುಗಳಿಗೆ ವೇಗವರ್ಧಕವಾಗಿಯೂ ಕಾರ್ಯನಿರ್ವಹಿಸಿತು.
"ಭಾರತೀಯ ಪರಂಪರೆ ಮತ್ತು ಸಂಪ್ರದಾಯಗಳಿಗೆ ಕೊಡುಗೆ ನೀಡುವ ಶ್ರೀಮಂತ ಬೋಡೋ ಸಂಸ್ಕೃತಿ, ಸಂಪ್ರದಾಯ ಮತ್ತು ಸಾಹಿತ್ಯ" ಎಂಬ ಅಧಿವೇಶನವು ಮಹೋತ್ಸವದ ಪ್ರಮುಖ ಅಂಶವಾಗಿದೆ ಮತ್ತು ಶ್ರೀಮಂತ ಬೋಡೋ ಸಂಸ್ಕೃತಿ, ಸಂಪ್ರದಾಯಗಳು, ಭಾಷೆ ಮತ್ತು ಸಾಹಿತ್ಯದ ಕುರಿತು ಚರ್ಚೆಗಳಿಗೆ ಸಾಕ್ಷಿಯಾಗಲಿದೆ. “ರಾಷ್ಟ್ರೀಯ ಶಿಕ್ಷಣ ನೀತಿ, 2020 ಮೂಲಕ ಮಾತೃಭಾಷಾ ಮಾಧ್ಯಮದ ಸವಾಲುಗಳು ಮತ್ತು ಅವಕಾಶಗಳು” ಕುರಿತು ಮತ್ತೊಂದು ಅಧಿವೇಶನವೂ ನಡೆಯಲಿದೆ. ಬೋಡೋಲ್ಯಾಂಡ್ ಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ "ಸ್ಥಳೀಯ ಸಾಂಸ್ಕೃತಿಕ ಸಭೆ ಮತ್ತು ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಮೂಲಕ ʼವೈವಿದ್ಯಮಯ ಬೋಡೋಲ್ಯಾಂಡ್' ಪ್ರದೇಶವನ್ನು ನಿರ್ಮಿಸುವ ಕುರಿತು ವಿಷಯಾಧಾರಿತ ಚರ್ಚೆಯನ್ನು ಸಹ ಆಯೋಜಿಸಲಾಗುತ್ತದೆ.
ವಿಶೇಷವಾಗಿ ಬೋಡೋಲ್ಯಾಂಡ್ ಪ್ರದೇಶ ಹಾಗೂ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಭಾರತದ ಇತರ ಭಾಗಗಳು ಮತ್ತು ನೆರೆಯ ರಾಜ್ಯಗಳಾದ ನೇಪಾಳ ಮತ್ತು ಭೂತಾನ್ ನಿಂದ ಐದು ಸಾವಿರಕ್ಕೂ ಹೆಚ್ಚು ಸಾಂಸ್ಕೃತಿಕ, ಭಾಷಾ ಮತ್ತು ಕಲಾ ಆಸಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು.
Click here to read full text speech
बोडो लोगों के उज्ज्वल भविष्य की मजबूत नींव तैयार हो चुकी है: PM @narendramodi pic.twitter.com/QAiZQaXHbN
— PMO India (@PMOIndia) November 15, 2024
पूरा नॉर्थ ईस्ट, भारत की अष्टलक्ष्मी है: PM @narendramodi pic.twitter.com/EfQhPzA726
— PMO India (@PMOIndia) November 15, 2024