ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಲಕ್ನೋದಲ್ಲಿ ‘ಆಜಾದಿ@75-ಹೊಸ ನಗರ ಭಾರತ: ನಗರ ಚಿತ್ರಣದ ಪರಿವರ್ತನೆ’ಸಮ್ಮೇಳನ ಮತ್ತು ಎಕ್ಸ್‌ಪೋವನ್ನು ಉದ್ಘಾಟಿಸಿದರು. ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಹರ್ದೀಪ್ ಪುರಿ, ಶ್ರೀ ಮಹೇಂದ್ರ ನಾಥ್ ಪಾಂಡೆ, ಶ್ರೀ ಕೌಶಲ್ ಕಿಶೋರ್, ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಹಾಜರಿದ್ದರು.
ಉತ್ತರ ಪ್ರದೇಶದ 75 ಜಿಲ್ಲೆಗಳ 75,000 ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ (ಪಿಎಂಎವೈ-ಯು) ಮನೆಗಳ ಕೀಲಿಗಳನ್ನು ಪ್ರಧಾನಮಂತ್ರಿಯವರು ಡಿಜಿಟಲ್ ಆಗಿ ನೀಡಿದರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಅಡಿಯಲ್ಲಿ ಉತ್ತರ ಪ್ರದೇಶದ 75 ನಗರಾಭಿವೃದ್ಧಿ ಯೋಜನೆಗಳ ಉದ್ಘಾಟನೆ/ಶಂಕುಸ್ಥಾಪನೆಯನ್ನೂ ಪ್ರಧಾನಿ ನೆರವೇರಿಸಿದರು. ಲಕ್ನೋ, ಕಾನ್ಪುರ, ವಾರಾಣಸಿ, ಪ್ರಯಾಗರಾಜ್, ಗೋರಖ್‌ಪುರ, ಝಾನ್ಸಿ ಮತ್ತು ಗಾಜಿಯಾಬಾದ್ ಸೇರಿದಂತೆ ಏಳು ನಗರಗಳಿಗೆ ಫೇಮ್-II ಅಡಿಯಲ್ಲಿ 75 ಬಸ್ಸುಗಳಿಗೆ ಹಸಿರು ನಿಶಾನೆ ತೋರಿದರು. ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವಿವಿಧ ಪ್ರಮುಖ ಕಾರ್ಯಗಳ ಅಡಿಯಲ್ಲಿ 75 ಯೋಜನೆಗಳನ್ನು ಒಳಗೊಂಡ ಕಾಫಿ ಟೇಬಲ್ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಯಿತು. ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ (ಬಿಬಿಎಯು) ಶ್ರೀ ಅಟಲ್ ಬಿಹಾರಿ ವಾಜಪೇಯಿ ಪೀಠವನ್ನು ಸ್ಥಾಪಿಸುವುದಾಗಿ ಪ್ರಧಾನಮಂತ್ರಿಯವರು ಘೋಷಿಸಿದರು.
ಪ್ರಧಾನಿಯವರು ಆಗ್ರಾದ ಶ್ರೀಮತಿ ವಿಮಲೇಶ್ ಅವರೊಂದಿಗೆ ಸಂವಾದ ನಡೆಸುವಾಗ, ಪಿಎಂ ಆವಾಸ್, ಅನಿಲ ಸಿಲಿಂಡರ್, ಶೌಚಾಲಯ, ವಿದ್ಯುತ್, ನೀರಿನ ಸಂಪರ್ಕ ಮತ್ತು ಪಡಿತರ ಚೀಟಿ ಇತ್ಯಾದಿ ಯೋಜನೆಗಳಿಂದ ತಾವು ಪ್ರಯೋಜನ ಪಡೆದಿರುವುದಾಗಿ ಅವರು ತಿಳಿಸಿದರು. ಸರ್ಕಾರದ ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಮತ್ತು ಮಕ್ಕಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವಂತೆ ಪ್ರಧಾನಿಯವರು ಆಕೆಗೆ ತಳಿಸಿದರು.
ಕಾನ್ಪುರದ ರಾಮ್ ಜಂಕಿ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿಯವರು, ಹಾಲು ಮಾರಾಟಗಾರು ಸ್ವಾಮಿತ್ವ ಯೋಜನೆಯಿಂದ ಪ್ರಯೋಜನಗಳನ್ನು ಪಡೆದಿದ್ದಾರೆಯೇ ಎಂದು ಕೇಳಿದರು. ಫಲಾನುಭವಿಯು ತಾನು 10 ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡಿರುವುದಾಗಿ ಮತ್ತು ಅದನ್ನು ತನ್ನ ವ್ಯವಹಾರದಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದರು. ವ್ಯವಹಾರವನ್ನು ಡಿಜಿಟಲ್ ವಹಿವಾಟಿನಲ್ಲಿ ಹೆಚ್ಚಾಗಿ ಮಾಡುವಂತೆ ಆಕೆಗೆ ಪ್ರಧಾನಮಂತ್ರಿ ಸೂಚಿಸಿದರು.
ಲಲಿತಪುರದ ಪಿಎಂ ಆವಾಸ್ ಯೋಜನೆಯ ಫಲಾನುಭವಿ ಶ್ರೀಮತಿ ಬಬಿತಾ ಅವರ ಜೀವನೋಪಾಯ ಮತ್ತು ಯೋಜನೆಯ ಬಗ್ಗೆ ಅನುಭವವನ್ನು ಪ್ರಧಾನಿ ಕೇಳಿದರು. ಜನ್ ಧನ್ ಖಾತೆಯಿಂದಾಗಿ ಹಣವು ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಬಡವರಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವಾಮಿತ್ವ ಯೋಜನೆಯ ಲಾಭಗಳನ್ನು ಪಡೆದುಕೊಳ್ಳುವಂತೆ ಪ್ರಧಾನಮಂತ್ರಿಯವರು ಆಕೆಗೆ ಕೇಳಿಕೊಂಡರು. ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ತುಂಬಾ ಆರಾಮವಾಗಿ ಮತ್ತು ಹರ್ಷಚಿತ್ತದಿಂದ ಮಾತುಕತೆ ನಡೆಸಿದರು. ಸಂವಾದವು ಅನೌಪಚಾರಿಕ ಮತ್ತು ಸಹಜವಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಎಲ್ಲಾ ಆಸ್ತಿಗಳು ಮನೆಯ ಪುರುಷರ ಹೆಸರಿನಲ್ಲೇ ಇರುವ ಪರಿಸ್ಥಿತಿ ಬದಲಾಗಬೇಕಿದೆ. ಈ ನಿಟ್ಟಿನ ಕ್ರಮವಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಮನೆಗಳನ್ನು ಮಹಿಳೆಯರು ಅಥವಾ ಅವರು ಜಂಟಿ ಮಾಲೀಕತ್ವದಲ್ಲಿ ನೋಂದಾಯಿಸಲಾಗುತ್ತಿದೆ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರಂತಹ ದೂರದರ್ಶಿ ನಾಯಕನನ್ನು ಭಾರತಾಂಬೆಗೆ ಸಮರ್ಪಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಲಕ್ನೋವನ್ನು ಅಭಿನಂದಿಸಿದರು. "ಇಂದು, ಅವರ ನೆನಪಿಗಾಗಿ, ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧ್ಯಯನ ಪೀಠವನ್ನು ಸ್ಥಾಪಿಸಲಾಗುತ್ತಿದೆ" ಎಂದು ಅವರು ಘೋಷಿಸಿದರು.
ಹಿಂದಿನ ಸರ್ಕಾರಗಳ ಸಂಖ್ಯೆಗಳಿಗೆ ಹೋಲಿಸಿದರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಮನೆಗಳಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ನಗರಗಳಲ್ಲಿ 1.13 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗುತ್ತಿದೆ ಮತ್ತು ಈ ಪೈಕಿ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಈಗಾಗಲೇ ನಿರ್ಮಿಸಿ, ಬಡವರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದ ಮತ್ತು ಸೂರು ಇಲ್ಲದ ನಗರ ಬಡಜನರ ಮೂರು ಕೋಟಿ ಕುಟುಂಬಗಳು ಈಗ ಲಕ್ಷಾಧಿಪತಿಗಳಾಗುವ ಅವಕಾಶವನ್ನು ಪಡೆದುಕೊಂಡಿವೆ ಎಂದು ಪ್ರಧಾನಿ ಹೇಳಿದರು. "ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ದೇಶದಲ್ಲಿ ಸುಮಾರು 3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ, ಅವುಗಳ ವೆಚ್ಚ ಎಷ್ಟಾಗಿದೆ ಎಂದರೆ, ಆ ಜನರು ಈಗ ಲಕ್ಷಾಧಿಪತಿಗಳಾಗಿದ್ದಾರೆ "ಎಂದು ಶ್ರೀ ಮೋದಿ ಹೇಳಿದರು. ಉತ್ತರ ಪ್ರದೇಶದಲ್ಲಿ ಇಂದು ವಿತರಿಸಲಾಗಿರುವ ಮನೆಗಳಿಗೂ ಮೊದಲು, ಹಿಂದಿನ ಸರ್ಕಾರಗಳು 18000 ಕ್ಕೂ ಹೆಚ್ಚು ಮನೆಗಳಿಗೆ ಅನುಮೋದನೆ ನೀಡಿದ್ದವು. ಆದರೆ ಆ ಸಮಯದಲ್ಲಿ 18 ಮನೆಗಳನ್ನು ಸಹ ನಿರ್ಮಿಸಲಿಲ್ಲ ಎಂದು ಪ್ರಧಾನಿ ಹೇಳಿದರು. ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, 9 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಗರ ಬಡವರಿಗೆ ಹಸ್ತಾಂತರಿಸಲಾಯಿತು ಮತ್ತು 14 ಲಕ್ಷ ಮನೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಈ ಮನೆಗಳು ಆಧುನಿಕ ಸೌಕರ್ಯಗಳನ್ನು ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.
ನಗರಗಳ ಮಧ್ಯಮ ವರ್ಗದವರ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಸರ್ಕಾರವು ಅತ್ಯಂತ ಗಂಭೀರ ಪ್ರಯತ್ನವನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ (ರೇರಾ) ಕಾಯಿದೆ ಅವುಗಳಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕಾನೂನು ಇಡೀ ವಸತಿ ವಲಯದಲ್ಲಿ ಅಪನಂಬಿಕೆ ಮತ್ತು ವಂಚನೆಯನ್ನು ತಡೆಯಲು ಸಹಾಯ ಮಾಡಿದೆ ಮತ್ತು ಎಲ್ಲಾ ಪಾಲುದಾರರಿಗೆ ಪ್ರಯೋಜನ ನೀಡಿದೆ ಎಂದು ಅವರು ಹೇಳಿದರು.
ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷ ಸುಮಾರು 1000 ಕೋಟಿ ರೂಪಾಯಿಗಳನ್ನು ಉಳಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಈಗ ಈ ಮೊತ್ತವನ್ನು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಎಲ್‌ಇಡಿಯು ನಗರಗಳಲ್ಲಿ ವಾಸಿಸುವ ಜನರ ವಿದ್ಯುತ್ ಬಿಲ್ ಅನ್ನು ಬಹಳವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು.
ಭಾರತದ ನಗರ ವಲಯದಲ್ಲಿ ಕಳೆದ 6-7 ವರ್ಷಗಳಲ್ಲಿ ತಂತ್ರಜ್ಞಾನದಿಂದಾಗಿ ದೊಡ್ಡ ಪರಿವರ್ತನೆಯಾಗಿದೆ ಎಂದು ಪ್ರಧಾನಿ ಹೇಳಿದರು. ಇಂದು ದೇಶದ 70 ಕ್ಕೂ ಹೆಚ್ಚು ನಗರಗಳಲ್ಲಿ ನಡೆಯುತ್ತಿರುವ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳಿಗೆ ತಂತ್ರಜ್ಞಾನವು ಆಧಾರವಾಗಿದೆ. "ಇಂದು ನಾವು 'ಪಹ್ಲೆ ಆ್ಯಪ್' - ಟೆಕ್ನಾಲಜಿ ಫಸ್ಟ್ 'ಎಂದು ಹೇಳಬೇಕು," ಎಂದು ಪ್ರಧಾನಿಯವರು ಸಾಂಸ್ಕೃತಿಕ ನಗರಿಯಲ್ಲಿ ಹೇಳಿದರು.
ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರು ಹೇಳಿದರು. ಈ ಯೋಜನೆಯ ಮೂಲಕ, 25 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 2500 ಕೋಟಿ ರೂ.ಗೂ ಹೆಚ್ಚು ಸಹಾಯವನ್ನು ನೀಡಲಾಗಿದೆ. ಇದರಲ್ಲಿ, ಉತ್ತರ ಪ್ರದೇಶದ 7 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಸ್ವನಿಧಿ ಯೋಜನೆಯ ಲಾಭ ಪಡೆದಿದ್ದಾರೆ ಎಂದರು. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುತ್ತಿರುವುದಕ್ಕೆ ಅವರು ಮಾರಾಟಗಾರರನ್ನು ಅಭಿನಂದಿಸಿದರು.
ಇಂದು, ಮೆಟ್ರೋ ಸೇವೆಯು ದೇಶದ ಪ್ರಮುಖ ನಗರಗಳಿಗೆ ವೇಗವಾಗಿ ವಿಸ್ತರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2014 ರಲ್ಲಿ, ಮೆಟ್ರೋ ಸೇವೆಯು 250 ಕಿಮೀಗಿಂತಲೂ ಕಡಿಮೆ ಇತ್ತು. ಇಂದು ಮೆಟ್ರೋ ರೈಲುಗಳು ಸುಮಾರು 750 ಕಿಮೀ ಮಾರ್ಗದಲ್ಲಿ ಚಲಿಸುತ್ತಿವೆ. ದೇಶದಲ್ಲಿ ಈಗ 1000 ಕಿಲೋಮೀಟರ್‌ಗಳಷ್ಟು ಮೆಟ್ರೋ ಟ್ರ್ಯಾಕ್‌ಗಳಲ್ಲಿ ಕೆಲಸ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
मुझे इस बात की भी खुशी होती है कि देश में पीएम आवास योजना के तहत जो घर दिए जा रहे हैं, उनमें 80 प्रतिशत से ज्यादा घरों पर मालिकाना हक महिलाओं का है या फिर वो ज्वाइंट ओनर हैं: PM @narendramodi
— PMO India (@PMOIndia) October 5, 2021
लखनऊ ने अटल जी के रूप में एक विजनरी, मां भारती के लिए समर्पित राष्ट्रनायक देश को दिया है।
— PMO India (@PMOIndia) October 5, 2021
आज उनकी स्मृति में, बाबा साहब भीमराव आंबेडकर यूनिवर्सिटी में अटल बिहारी वाजपेयी चेयर स्थापित की जा रही है: PM @narendramodi
2014 के बाद से हमारी सरकार ने पीएम आवास योजना के तहत शहरों में 1 करोड़ 13 लाख से ज्यादा घरों के निर्माण की मंजूरी दी है।
— PMO India (@PMOIndia) October 5, 2021
इसमें से 50 लाख से ज्यादा घर बनाकर, उन्हें गरीबों को सौंपा भी जा चुका है: PM @narendramodi
मेरे जो साथी, झुग्गी-झोपड़ी में जिंदगी जीते थे, उनकी पास पक्की छत नहीं थी, ऐसे तीन करोड़ परिवारों को लखपति बनने का अवसर मिला है।
— PMO India (@PMOIndia) October 5, 2021
प्रधानमंत्री आवास योजना के तहत देश में जो करीब-करीब 3 करोड़ घर बने हैं, आप उनकी कीमत का अंदाजा लगाइए।
ये लोग लखपति बने हैं: PM @narendramodi
हमारे यहां कुछ महानुभाव कहते हैं कि मोदी ने क्या किया?
— PMO India (@PMOIndia) October 5, 2021
आज पहली बार मैं ऐसी बात बताना चाहता हूं जिसके बाद बड़े-बड़े विरोधी, जो दिन रात हमारा विरोध करने में ही अपनी ऊर्जा खपाते हैं, वो मेरा ये भाषण सुनने के बाद टूट पड़ेंगे: PM @narendramodi
शहरी मिडिल क्लास की परेशानियों और चुनौतियों को भी दूर करने का हमारी सरकार ने बहुत गंभीर प्रयास किया है।
— PMO India (@PMOIndia) October 5, 2021
Real Estate Regulatory Authority यानि रेरा कानून ऐसा एक बड़ा कदम रहा है।
इस कानून ने पूरे हाउसिंग सेक्टर को अविश्वास और धोखाधड़ी से बाहर निकालने में बहुत बड़ी मदद की है: PM
LED स्ट्रीट लाइट लगने से शहरी निकायों के भी हर साल करीब 1 हज़ार करोड़ रुपए बच रहे हैं।
— PMO India (@PMOIndia) October 5, 2021
अब ये राशि विकास के दूसरे कार्यों में उपयोग में लाई जा रही है।
LED ने शहर में रहने वाले लोगों का बिजली बिल भी बहुत कम किया है: PM @narendramodi
भारत में पिछले 6-7 वर्षों में शहरी क्षेत्र में बहुत बड़ा परिवर्तन टेक्नोलॉजी से आया है।
— PMO India (@PMOIndia) October 5, 2021
देश के 70 से ज्यादा शहरों में आज जो इंटीग्रेटेड कमांड एंड कंट्रोल सेंटर चल रहे हैं, उसका आधार टेक्नोलॉजी ही है: PM @narendramodi
पीएम स्वनिधि योजना के तहत रेहड़ी-पटरी वालों को, स्ट्रीट वेंडर्स को बैंकों से जोड़ा जा रहा है।
— PMO India (@PMOIndia) October 5, 2021
इस योजना के माध्यम से 25 लाख से ज्यादा साथियों को 2500 करोड़ रुपए से अधिक की मदद दी गई है।
इसमें भी यूपी के 7 लाख से ज्यादा साथियों ने स्वनिधि योजना का लाभ लिया है: PM @narendramodi
आज भारत मेट्रो सेवा का देश भर के बड़े शहरों में तेजी से विस्तार कर रहा है।
— PMO India (@PMOIndia) October 5, 2021
2014 में जहां 250 किलोमीटर से कम रूट पर मेट्रो चलती थी, वहीं आज लगभग 750 किलोमीटर में मेट्रो दौड़ रही है।
देश में आज एक हज़ार किलोमीटर से अधिक मेट्रो ट्रैक पर काम चल रहा है: PM @narendramodi