"ಭಾರತೀಯ ಆರೋಗ್ಯ ಕ್ಷೇತ್ರ ಗಳಿಸಿರುವ ಜಾಗತಿಕ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಕರೆಯುವಂತೆ ಮಾಡಿದೆ"
"ನಾವು ಇಡೀ ಮಾನವಕುಲದ ಯೋಗಕ್ಷೇಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಮತ್ತು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ನಾವು ಇಡೀ ಜಗತ್ತಿಗೆ ಈ ಮನೋಭಾವವನ್ನು ತೋರಿಸಿದ್ದೇವೆ.
"ಭಾರತವು ಉದ್ಯಮವನ್ನು ಬೃಹತ್ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಹೊಂದಿದೆ. ಈ ಶಕ್ತಿಯನ್ನು "ಸಂಶೋಧನೆ ಮತ್ತು ಮೇಕ್ ಇನ್ ಇಂಡಿಯಾ" ಗೆ ಬಳಸಿಕೊಳ್ಳುವ ಅಗತ್ಯವಿದೆ.
"ಲಸಿಕೆಗಳು ಮತ್ತು ಔಷಧಿಗಳಿಗೆ ಪ್ರಮುಖ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಾವು ಯೋಚಿಸಬೇಕು. ಇದು ಭಾರತ ಸಾಧಿಸಬೇಕಾದ ಒಂದು ಎಲ್ಲೆಯಾಗಿದೆ”
“ನಾನು ನಿಮ್ಮೆಲ್ಲರನ್ನೂ ಭಾರತದಲ್ಲಿ ಐಡಿಏಟ್ ಇನ್ ಇಂಡಿಯಾ, ಇನ್ನೋವೇಟ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಮಾಡಲು ಆಹ್ವಾನಿಸುತ್ತೇನೆ. ನಿಮ್ಮ ನಿಜವಾದ ಶಕ್ತಿಯನ್ನು ಅನ್ವೇಷಿಸಿ ಮತ್ತು ಜಗತ್ತಿಗೆ ಸೇವೆ ಸಲ್ಲಿಸಿ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಔಷಧ ಕ್ಷೇತ್ರದ ಮೊದಲ ಜಾಗತಿಕ ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಂಕ್ರಾಮಿಕ ರೋಗವು ಔಷಧ ಕ್ಷೇತ್ರದ ಬಗ್ಗೆ ತೀವ್ರ ಗಮನ ಸೆಳೆದಿದೆ ಎಂದು ಹೇಳಿದರು. ಜೀವನಶೈಲಿಯಾಗಿರಲಿ, ಅಥವಾ ಔಷಧಗಳಾಗಿರಲಿ, ಅಥವಾ ವೈದ್ಯಕೀಯ ತಂತ್ರಜ್ಞಾನವೇ ಆಗಿರಲಿ, ಅಥವಾ ಲಸಿಕೆಗಳಾಗಿರಲಿ, ಆರೋಗ್ಯ ರಕ್ಷಣೆಯ ಪ್ರತಿಯೊಂದು ಅಂಶವೂ ಕಳೆದ ಎರಡು ವರ್ಷಗಳಲ್ಲಿ ಜಾಗತಿಕ ಗಮನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಔಷಧ ಉದ್ಯಮವೂ ಸವಾಲನ್ನು ಮೆಟ್ಟಿ ನಿಂತಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಭಾರತೀಯ ಆರೋಗ್ಯ ಕ್ಷೇತ್ರವು ಗಳಿಸಿದ ಜಾಗತಿಕ ನಂಬಿಕೆಯು ಇತ್ತೀಚಿನ ದಿನಗಳಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಕರೆಯಲು ಕಾರಣವಾಗಿದೆ" ಎಂದು ಶ್ರೀ ಮೋದಿ ಹೇಳಿದರು.

“ಕ್ಷೇಮದ ನಮ್ಮ ವ್ಯಾಖ್ಯಾನವು ಭೌತಿಕ ಗಡಿಗಳಿಂದ ಸೀಮಿತವಾಗಿಲ್ಲ ಎಂದು ಪ್ರಧಾನಮಂತ್ರಿ ವಿವರಿಸಿದರು. ನಾವು ಇಡೀ ಮಾನವಕುಲದ ಯೋಗಕ್ಷೇಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಮತ್ತು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ನಾವು ಈ ಮನೋಭಾವವನ್ನು ಇಡೀ ಜಗತ್ತಿಗೆ ತೋರಿಸಿದ್ದೇವೆ. ಸಾಂಕ್ರಾಮಿಕದ ಸಮಯದಲ್ಲಿ, “ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ನಾವು 150 ದೇಶಗಳಿಗೆ ಜೀವರಕ್ಷಕ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಿದ್ದೇವೆ. ನಾವು ಈ ವರ್ಷ ಸುಮಾರು 100 ದೇಶಗಳಿಗೆ 65 ದಶಲಕ್ಷ ಡೋಸ್ ಕೋವಿಡ್ ಲಸಿಕೆಗಳನ್ನು ರಫ್ತು ಮಾಡಿದ್ದೇವೆ” ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಔಷಧ ಅನ್ವೇಷಣೆಯಲ್ಲಿ ಮತ್ತು ನಾವೀನ್ಯಪೂರ್ಣ ವೈದ್ಯಕೀಯ ಸಲಕರಣೆಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸುವ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ರೂಪಿಸುವ ಕಲ್ಪನೆಯನ್ನು ಪ್ರಧಾನಮಂತ್ರಿ ಮುಂದಿಟ್ಟರು. ಎಲ್ಲಾ ಬಾಧ್ಯಸ್ಥರುಗಳೊಂದಿಗೆ ವ್ಯಾಪಕ ಸಮಾಲೋಚನೆಯ ಆಧಾರದ ಮೇಲೆ ನೀತಿ ಮಧ್ಯಸ್ಥಿಕೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಉದ್ಯಮವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಭಾರತ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಈ ಶಕ್ತಿಯನ್ನು "ಸಂಶೋಧಿಸಿ ಮತ್ತು ಮೇಕ್ ಇನ್ ಇಂಡಿಯಾ" ಗೆ ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಸ್ವದೇಶಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುವಂತೆ ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. "ಇಂದು, ಭಾರತದ 1.3 ಶತಕೋಟಿ ಜನರು ಭಾರತವನ್ನು ಆತ್ಮನಿರ್ಭರ ಮಾಡಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಲಸಿಕೆಗಳು ಮತ್ತು ಔಷಧಿಗಳಿಗೆ ಪ್ರಮುಖ ಸಾಮಗ್ರಿಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ನಾವು ಯೋಚಿಸಬೇಕು. ಭಾರತವು ಸಾಧಿಸಬೇಕಾದ ಒಂದು ಎಲ್ಲೆ ಇದಾಗಿದೆ” ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.

ಐಡಿಏಟ್ ಇನ್ ಇಂಡಿಯಾ, ಇನ್ನೋವೇಟ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಗೆ ಪ್ರಧಾನಮಂತ್ರಿ ಅವರು ಬಾಧ್ಯಸ್ಥರನ್ನು ಆಹ್ವಾನಿಸಿದರು. ನಿಮ್ಮ ನಿಜವಾದ ಶಕ್ತಿಯನ್ನು ಅನ್ವೇಷಿಸಿ ಮತ್ತು ಜಗತ್ತಿಗೆ ಸೇವೆ ಸಲ್ಲಿಸಿ ಎಂದು ಅವರು ತಮ್ಮ ಭಾಷಣ ಸಮಾಪ್ತಿಗಳೊಳಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage