ಗೌರವಾನ್ವಿತ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರ ಗೌರವಾರ್ಥ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಔತಣಕೂಟ ಆಯೋಜಿಸಿದ್ದರು.
ಈ ಕುರಿತು ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
“ಗೌರವಾನ್ವಿತ ರಾಷ್ಟ್ರಪತಿ ಕೋವಿಂದ್ ಜಿ ಅವರ ಗೌರವಾರ್ಥ ಔತಣ ಕೂಟ ಆಯೋಜಿಸಲಾಗಿತ್ತು. ಶ‍್ರೀಮತಿ ದ್ರೌಪದಿ ಮುರ್ಮು ಜಿ, ವೆಂಕಯ್ಯ ಜಿ, ಸಚಿವರು ಒಳಗೊಂಡಂತೆ ಇತರ ಗೌರವಾನ್ವಿತ ಗಣ್ಯರು ಪಾಲ್ಗೊಂಡಿದ್ದರು. ಔತಣ ಕೂಟದಲ್ಲಿ ಹಲವಾರು ತಳಮಟ್ಟದ ಸಾಧಕರು, ಪದ್ಮ ಪ್ರಶಸ್ತಿ ಪುರಸ್ಕೃತರು, ಬುಡಕಟ್ಟು ಸಮುದಾಯದ ನಾಯಕರು ಮತ್ತು ಇತರರನ್ನು ಸ್ವಾಗತಿಸಲು ನಮಗೆ ಸಂತೋಷವಾಯಿತು. “ರಾಷ್ಟ್ರಪತಿ ಕೋವಿಡ್ ಅವರ ಗೌರವಾರ್ಥ ಔತಣಕೂಟದಿಂದ ಇನ್ನೂ ಕೆಲವು ನೋಟಗಳು” ಎಂದು [ಛಾಯಾಚಿತ್ರಗಳೊಂದಿಗೆ] ಟ್ವೀಟ್ ಮಾಡಿದ್ದಾರೆ.
Hosted a dinner in honour of President Kovind Ji. Smt. Droupadi Murmu Ji, Venkaiah Ji, other esteemed dignitaries including Ministers were present. We were also glad to welcome several grassroots level achievers, Padma awardees, tribal community leaders and others at the dinner. pic.twitter.com/Do9j2hneYK
— Narendra Modi (@narendramodi) July 22, 2022