ಭೂತಾನ್ನ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ದೇಶದ ದೊರೆ ಘನತೆವೆತ್ತ ಜಿಗ್ಮೆ ಕೇಸರ್ ನಮ್‌ಗೇಯ್ಲ್ ವಾಂಗ್‌ಚುಕ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ʻಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊʼ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಈ ಆತ್ಮೀಯ ನಡೆಗಾಗಿ ಶ್ರೀ ಮೋದಿ ಅವರು ಭೂತಾನ್ನ ಘನತೆವೆತ್ತ ದೊರೆಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಭೂತಾನ್ ಪ್ರಧಾನಿ ಮಾಡಿದ ಟ್ವೀಟ್‌ಗೆ ಉತ್ತರಿಸಿರುವ ಪ್ರಧಾನಿ ಮೋದಿ, ಸರಣಿ ಟ್ವೀಟ್‌ಗಳಲ್ಲಿ ಹೀಗೆ ಹೇಳಿದ್ದಾರೆ:
"ಲಿಯೋನ್ಚೆನ್@PMBhutan ಅವರಿಗೆ ಧನ್ಯವಾದಗಳು! ಈ ಆತ್ಮೀಯ ನಡೆಯಿಂದ ನಾನು ತುಂಬಾ ಪುಳಕಿತನಾಗಿದ್ದೇನೆ ಮತ್ತು ಭೂತಾನ್ನ ಘನತೆವೆತ್ತ ದೊರೆಗೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ.
ನಮ್ಮ ಭೂತಾನ್ ಸಹೋದರ-ಸಹೋದರಿಯರಿಂದ ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುವ ಸುಯೋಗ ನನಗೆ ದೊರೆತಿದೆ. ಭೂತಾನ್‌ನ ರಾಷ್ಟ್ರೀಯ ದಿನದ ಶುಭ ಸಂದರ್ಭದಲ್ಲಿ ಅವರೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ.
ಸುಸ್ಥಿರ ಅಭಿವೃದ್ಧಿಯ ವಿಶಿಷ್ಟ ಮಾದರಿ ಮತ್ತು ಆಳವಾದ ಆಧ್ಯಾತ್ಮಿಕ ಜೀವನ ವಿಧಾನಕ್ಕಾಗಿ ನನಗೆ ಭೂತಾನ್ ಬಗ್ಗೆ ಅಪಾರ ಮೆಚ್ಚುಗೆಯಿದೆ. ಡ್ರಕ್ ಗ್ಯಾಲ್ಪೋಸ್ ಅವರ ಉತ್ತರಾಧಿಕಾರಿಗಳು - ಘನತೆವೆತ್ತ ದೊರೆಗಳು– ಭೂತಾನ್‌ಗೆ ಒಂದು ವಿಶಿಷ್ಟ ಗುರುತನ್ನು ನೀಡಿದ್ದಾರೆ ಮತ್ತು ಎರಡೂ ದೇಶಗಳ ನಡುವೆ ಪರಸ್ಪರ ಹಂಚಿಕೊಂಡಂತಹ ವಿಶೇಷ ಸ್ನೇಹ ಬಂಧವನ್ನು ಪೋಷಿಸಿದ್ದಾರೆ.
ಭೂತಾನ್ ಸದಾ ಭಾರತದ ಆಪ್ತ ಸ್ನೇಹಿತ ಮತ್ತು ನೆರೆಹೊರೆ ದೇಶಗಳಲ್ಲಿ ಒಂದಾಗಿರುತ್ತದೆ. ಭೂತಾನ್‌ನ ಅಭಿವೃದ್ಧಿ ಪ್ರಯಾಣಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ನಮ್ಮ ಬೆಂಬಲ ಮುಂದುವರಿಯಲಿದೆ.”
Thank you, Lyonchhen @PMBhutan! I am deeply touched by this warm gesture, and express my grateful thanks to His Majesty the King of Bhutan. https://t.co/uVWC4FiZYT
— Narendra Modi (@narendramodi) December 17, 2021