ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆʼಗೆ ಒಂದು ಕೋಟಿಗೂ ಹೆಚ್ಚು ಕುಟುಂಬಗಳು ನೋಂದಾಯಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಧಾನಮಂತ್ರಿಯವರು ʻಎಕ್ಸ್ʼ ವೇದಿಕೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಅತ್ಯುತ್ತಮ ಸುದ್ದಿ!
"ಪ್ರಾರಂಭವಾದ ಸುಮಾರು ಒಂದು ತಿಂಗಳಲ್ಲೇ 1 ಕೋಟಿಗೂ ಅಧಿಕ ಕುಟುಂಬಗಳು ಈಗಾಗಲೇ ʻಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆʼಗೆ ನೋಂದಾಯಿಸಿಕೊಂಡಿವೆ.
ದೇಶದ ಎಲ್ಲಾ ಭಾಗಗಳಿಂದ ನೋಂದಣಿಗಳು ಹರಿದು ಬರುತ್ತಿವೆ. ಅಸ್ಸಾಂ, ಬಿಹಾರ, ಗುಜರಾತ್, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ನೋಂದಣಿಗಳು ನಡೆದಿವೆ.
ಇನ್ನೂ ನೋಂದಾಯಿಸಿಕೊಳ್ಳದವರು ಸಹ ಆದಷ್ಟು ಬೇಗ pmsuryaghar.gov.in ಮೂಲಕ ನೋಂದಾಯಿಸಿಕೊಳ್ಳಿ "
"ಈ ಉಪಕ್ರಮವು ಇಂಧನ ಉತ್ಪಾದನೆಯನ್ನು ಖಾತರಿಪಡಿಸುವುದರ ಜೊತೆಗೆ ಮನೆಗಳಿಗೆ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಭರವಸೆ ನೀಡುತ್ತದೆ. ಇದು ʻಪರಿಸರಕ್ಕಾಗಿ ಜೀವನಶೈಲಿʼ(LiFE) ಅನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸುತ್ತದೆ, ಜೊತೆಗೆ ಭೂಗ್ರಹದ ರಕ್ಷಣೆಗೆ ಕೊಡುಗೆ ನೀಡುತ್ತದೆ.”
Outstanding news!
— Narendra Modi (@narendramodi) March 16, 2024
In about a month since it was launched, over 1 crore households have already registered themselves for the PM-Surya Ghar: Muft Bijli Yojana.
Registrations have been pouring in from all parts of the nation. Assam, Bihar, Gujarat, Maharashtra, Odisha, Tamil…