ಫ್ರಾನ್ಸ್ ನ ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ 2024 ಮುಕ್ತಾಯಗೊಂಡಿದ್ದು, ಭಾರತೀಯ ಕ್ರೀಡಾ ತಂಡ ಹಾಕಿರುವ ಪ್ರಯತ್ನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರೀಡಾಪಟುಗಳನ್ನು ಹೀರೋಗಳೆಂದು ಕರೆದಿರುವ ಪ್ರಧಾನಿ ಮೋದಿ, ಅವರ ಮುಂದಿನ ಪಯಣಕ್ಕೆ ಶುಭ ಹಾರೈಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು,
"ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯಗೊಂಡಿದ್ದು, ತಮ್ಮ ಕ್ರೀಡಾ ಪ್ರದರ್ಶನ ಮೆರೆದ ಭಾರತೀಯ ತಂಡದ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಎಲ್ಲಾ ಕ್ರೀಡಾಪಟುಗಳು ತಮ್ಮ ಶಕ್ತಿಮೀರಿ ಪ್ರಯತ್ನ ಮಾಡಿದ್ದಾರೆ. ಅವರ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯಿದೆ. ನಮ್ಮ ಕ್ರೀಡಾ ವೀರರಿಗೆ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
As the Paris #Olympics conclude, I appreciate the efforts of the entire Indian contingent through the games. All the athletes have given their best and every Indian is proud of them. Wishing our sporting heroes the best for their upcoming endeavours.
— Narendra Modi (@narendramodi) August 11, 2024