ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮುಕ್ತ ಎಕರೆ ಪರವಾನಗಿ ನೀತಿಯಡಿ ಒಡಿಶಾದ ಮಹಾನದಿ ಕಡಲತೀರದ ಜಲಾನಯನ ಪ್ರದೇಶದಲ್ಲಿ ಮೊದಲ ಅನ್ವೇಷಣಾ ಬಾವಿ ಪುರಿ-1 ಅನ್ನು ಪ್ರಾರಂಭಿಸುವ ಮೂಲಕ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ ನ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಈ ಕುರಿತು ಟ್ವೀಟ್ ಮಾಡಿದ್ದಾರೆ.
"ಇದು ಗಮನಾರ್ಹವಾಗಿದೆ ಮತ್ತು ಇದು ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರರಾಗುವ ನಮ್ಮ ಪ್ರಯತ್ನಗಳನ್ನು ಉತ್ತೇಜಿಸುತ್ತದೆ." ಎಂದು ಹೇಳಿದ್ದಾರೆ.
This is noteworthy and it invigorates our efforts towards being Aatmanirbhar in the energy sector. https://t.co/nc4uNMuDjc
— Narendra Modi (@narendramodi) February 17, 2023