ವಾರಣಾಸಿಯಲ್ಲಿ 644 ಕೋಟಿ ರೂ.ಗಳ ವೆಚ್ಚದಲ್ಲಿ 3.85 ಕಿ.ಮೀ ಉದ್ದದ ಸಾರ್ವಜನಿಕ ಸಾರಿಗೆ ರೋಪ್ ವೇ ನಿರ್ಮಾಣವನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ.
ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿಯವರು ವಾರಣಾಸಿಯಲ್ಲಿ 644 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3.85 ಕಿ.ಮೀ ಉದ್ದದ ಸಾರ್ವಜನಿಕ ಸಾರಿಗೆ ರೋಪ್ ವೇ ಬಗ್ಗೆ ಮಾಹಿತಿ ನೀಡಿದ್ದಾರೆ.
ಅದರ ಬಗ್ಗೆ ಪ್ರಧಾನಿಯವರು ಶ್ಲಾಘಿಸಿ;
"ನಂಬಿಕೆ ಮತ್ತು ತಂತ್ರಜ್ಞಾನದ ಅದ್ಭುತ ಸಂಗಮ! ವಾರಣಾಸಿಯಲ್ಲಿ ನಿರ್ಮಿಸಲಾಗುತ್ತಿರುವ ಈ ರೋಪ್ ವೇ ಭಕ್ತರಿಗೆ ಪ್ರಯಾಣದ ಅನುಭವವನ್ನು ಬಹಳ ಆಸಕ್ತಿದಾಯಕ ಮತ್ತು ಸ್ಮರಣೀಯವಾಗಿಸುತ್ತದೆ, ಇದು ಬಾಬಾ ವಿಶ್ವನಾಥನ ದರ್ಶನ ಪಡೆಯಲು ಸಹ ಅನುವು ಮಾಡಿಕೊಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
आस्था और टेक्नोलॉजी का अद्भुत संगम! वाराणसी में तैयार हो रहे इस रोप-वे से श्रद्धालुओं के लिए यात्रा का अनुभव बहुत रोचक और यादगार तो होगा ही, इससे बाबा विश्वनाथ के दर्शन में भी उन्हें बहुत सुविधा होगी। https://t.co/AMbBQsdEdr
— Narendra Modi (@narendramodi) March 29, 2023