ಗಡಿ ರಸ್ತೆಗಳ ಸಂಸ್ಥೆ (ಬಿ.ಆರ್.ಒ.) ನಿರ್ಮಿಸಿದ 90 ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಸುಮಾರು ರೂ. 2,900 ಕೋಟಿ ವೆಚ್ಚದ ಈ ಯೋಜನೆಗಳನ್ನು ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಇಂದು ರಾಷ್ಟ್ರಕ್ಕೆ ಸಮರ್ಪಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಕಳುಹಿಸಿದ್ದಾರೆ
"ಇವು ಪ್ರಮುಖ ಯೋಜನೆಗಳಾಗಿವೆ, ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುವಲ್ಲಿ ಬಹಳ ಮಹತ್ತರ ಮೈಲುಗಲ್ಲುಗಳಾಗಿವೆ!"
These are important projects which will go a long way in enhancing infrastructure in the border areas! https://t.co/3Q3AoiRuRO
— Narendra Modi (@narendramodi) September 12, 2023