ಆಯುರ್ವೇದ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರದ ಜನತೆಗೆ ಶುಭ ಕೋರಿದ್ದಾರೆ. ಭಗವಾನ್ ಧನ್ವಂತರಿಯ ಜನ್ಮ ದಿನದ ಈ ಶುಭ ಸಂದರ್ಭವು ನಮ್ಮ ಮಹಾನ್ ಸಂಸ್ಕೃತಿಯಲ್ಲಿ ಮಿಳಿತಗೊಂಡಿರುವ ಆಯುರ್ವೇದದ ಬಳಕೆ ಮತ್ತು ಕೊಡುಗೆಯೊಂದಿಗೆ ಸಂಪರ್ಕಿತವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದವು ಇಡೀ ಮನುಕುಲದ ಆರೋಗ್ಯಕರ ಜೀವನಕ್ಕೆ ಪ್ರಯೋಜಕಾರಿಯಾಗಲಿದೆ ಎಂದು ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
“ದೇಶದ ಸಮಸ್ತ ನಾಗರಿಕರಿಗೆ ಆಯುರ್ವೇದ ದಿನದ ಶುಭಾಶಯಗಳು. ಭಗವಾನ್ ಧನ್ವಂತರಿಯ ಜನ್ಮ ದಿನದ ಈ ಶುಭ ಸಂದರ್ಭವು ನಮ್ಮ ಮಹಾನ್ ಸಂಸ್ಕೃತಿಯಲ್ಲಿ ಆಯುರ್ವೇದದ ಬಳಕೆ ಮತ್ತು ಆದರ ಕೊಡುಗೆಗಳೊಂದಿಗೆ ಸಮ್ಮಿಳಿತವಾಗಿದ್ದು ಪ್ರಸ್ತುತ ಇದರ ಮಹತ್ವವನ್ನು ಇಡೀ ಜಗತ್ತು ಪುರಸ್ಕರಿಸಿದೆ. ಈ ಪ್ರಾಚೀನ ವೈದ್ಯಕೀಯ ಪದ್ಧತಿಯು ಇಡೀ ಮನುಕುಲದ ಆರೋಗ್ಯಪೂರ್ಣ ಜೀವನಕ್ಕೆ ಅನುಕೂಲಕರವಾಗಿರಲಿದೆ ಎಂದು ನನಗೆ ವಿಶ್ವಾಸವಿದೆ.”
समस्त देशवासियों को आयुर्वेद दिवस की बहुत-बहुत शुभकामनाएं। भगवान धन्वंतरि की जन्म-जयंती का यह पावन अवसर हमारी महान संस्कृति में आयुर्वेद की उपयोगिता और उसके योगदान से जुड़ा है, जिसके महत्त्व को आज पूरी दुनिया मान रही है। मुझे विश्वास है कि चिकित्सा की यह प्राचीन पद्धति पूरी…
— Narendra Modi (@narendramodi) October 29, 2024