ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಭಾರತದ ಖ್ಯಾತ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸಿದ್ದಾರೆ.
"ರಾಷ್ಟ್ರೀಯ ಕ್ರೀಡಾ ದಿನವು ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆ ತಂದುಕೊಟ್ಟ ಕ್ರೀಡಾಪಟುಗಳ ಅದ್ಭುತ ಸಾಧನೆಗಳನ್ನು ಆಚರಿಸುವ ದಿನವಾಗಿದೆ. ಅವರ ಪರಿಶ್ರಮ ಮತ್ತು ದೃಢತೆಯು ಅತ್ಯುತ್ತಮವಾದುದು” ಎಂದು ಪ್ರಧಾನಿಯವರು ಹೇಳಿದ್ದಾರೆ.
“ರಾಷ್ಟ್ರೀಯ ಕ್ರೀಡಾ ದಿನವಾದ ಇಂದು, ನಾವು ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸುತ್ತೇವೆ, ಹಾಕಿ ಸ್ಟಿಕ್‌ನೊಂದಿಗೆ ಅವರ ಮಾಟಗಾರಿಕೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.
ನಮ್ಮ ಪ್ರತಿಭಾವಂತ ಕ್ರೀಡಾಪಟುಗಳ ಯಶಸ್ಸಿಗೆ ಅವರ ಕುಟುಂಬಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ನೀಡಿದ ಅತ್ಯುತ್ತಮ ಬೆಂಬಲವನ್ನು ಶ್ಲಾಘಿಸುವ ದಿನವೂ ಇದಾಗಿದೆ.
ಭಾರತದಲ್ಲಿ ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸಲು ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸಂದರ್ಭದಲ್ಲಿ, ಪ್ರತಿಯೊಬ್ಬರೂ ಕ್ರೀಡೆ ಮತ್ತು ಸದೃಢತೆಯ ವ್ಯಾಯಾಮವನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಹಾಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಎಲ್ಲರೂ ಸಂತೋಷದಿಂದ ಆರೋಗ್ಯದಿಂದ ಇರಲಿ! " ಎಂದು ಪ್ರಧಾನಿ ತಿಳಿಸಿದ್ದಾರೆ.
Government of India is making numerous efforts to popularise sports and support sporting talent in India. At the same time, I urge everyone to make sports and fitness exercises a part of their daily routine. There are many benefits of doing so. May everyone be happy and healthy!
— Narendra Modi (@narendramodi) August 29, 2020
Today, on #NationalSportsDay, we pay tributes to Major Dhyan Chand, whose magic with the hockey stick can never be forgotten.
— Narendra Modi (@narendramodi) August 29, 2020
This is also a day to laud the outstanding support given by the families, coaches and support staff towards the success of our talented athletes.
#NationalSportsDay is a day to celebrate the remarkable achievements of all those exemplary sportspersons who have represented India in various sports and made our nation proud. Their tenacity and determination are outstanding.
— Narendra Modi (@narendramodi) August 29, 2020