ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾವೀರ ಜಯಂತಿಯಂದು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಭಗವಾನ್ ಮಹಾವೀರರ ಉದಾತ್ತ ಬೋಧನೆಗಳನ್ನು ಅವರು ನೆನಪಿಸಿಕೊಂಡಿದ್ದಾರೆ, ವಿಶೇಷವಾಗಿ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವ ಪಾಲಿಸುವಂತೆ ಅವರು ಜನತೆಗೆ ತರೆ ನೀಡಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ;
"ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭಾಶಯಗಳು.
ಭಗವಾನ್ ಮಹಾವೀರರ ಸನಾತನ ಬೋಧನೆಗಳು ಮತ್ತು ಜೀವ ದಯಕ್ಕೆ ಅವರು ನೀಡಿದ್ದ ಒತ್ತು ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜ ನಿರ್ಮಿಸಲು ಸಹಾಯ ಮಾಡುತ್ತದೆ.
ಭಗವಾನ್ ಮಹಾವೀರರ ಆಶೀರ್ವಾದವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಹೋದರತ್ವದ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಲಿ."
Mahavir Jayanti greetings to you all.
— Narendra Modi (@narendramodi) April 14, 2022
We recall the noble teachings of Bhagwan Mahavir, especially the emphasis on peace, compassion and brotherhood. pic.twitter.com/CyKPtNPKZi