ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎನ್‌ಸಿಸಿ ದಿನದ ಅಂಗವಾಗಿ ಎನ್‌ಸಿಸಿ ಕೆಡೆಟ್ ಗಳಿಗೆ ಶುಭ ಕೋರಿದ್ದಾರೆ. “ಭಾರತ ದೇಶಾದ್ಯಂತ ಇರುವ ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳು ತಮ್ಮ ಬೆಂಬಲ ಮತ್ತು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮತ್ತಷ್ಟು ಶ್ರೀಮಂತಗೊಳಿಸುವಂತೆ ಶ್ರೀ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ “ಎನ್‌ಸಿಸಿ ದಿನದ ಶುಭಾಶಯಗಳು. ‘ಏಕತೆ ಮತ್ತು ಶಿಸ್ತು’ ಎಂಬ ಧ್ಯೇಯವಾಕ್ಯದಿಂದ ಪ್ರೇರಿತವಾಗಿ, ಎನ್‌ಸಿಸಿ ಯು ಭಾರತದ ಯುವಕರಿಗೆ ತಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಉತ್ತಮ ಅನುಭವವನ್ನು ನೀಡುತ್ತದೆ. ಈ ವರ್ಷದ ಎನ್‌ಸಿಸಿ ರಾಲಿಯಲ್ಲಿ ನನ್ನ ಭಾಷಣ ಇಲ್ಲಿದೆ.
ಕೆಲವು ದಿನಗಳ ಹಿಂದೆ ಝಾನ್ಸಿಯಲ್ಲಿ ನಡೆದ ‘ರಾಷ್ಟ್ರ ರಕ್ಷಾ ಸಮರ್ಪಣಾ ಪರ್ವ್’ ಸಂದರ್ಭದಲ್ಲಿ, ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ಮೊದಲ ಸದಸ್ಯನಾಗಿ ನೋಂದಾಯಿಸಿಕೊಳ್ಳುವ ಗೌರವ ನನಗೆ ದೊರೆತಿತ್ತು. ಹಳೆಯ ವಿದ್ಯಾರ್ಥಿಗಳ ಸಂಘದ ರಚನೆಯು ಎನ್ ಸಿಸಿಯೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನೂ ಒಟ್ಟುಗೂಡಿಸುವ ಶ್ಲಾಘನೀಯ ಪ್ರಯತ್ನವಾಗಿದೆ.
A few days back, during the 'Rashtra Raksha Samparpan Parv’ in Jhansi, I was honoured to register as the first member of the NCC Alumni Association. The formation of an Alumni Association is a commendable effort to bring together all those who have been associated with NCC. pic.twitter.com/MFuCf5YD0g
— Narendra Modi (@narendramodi) November 28, 2021
ಭಾರತದಾದ್ಯಂತ ಇರುವ ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳು ತಮ್ಮ ಬೆಂಬಲ ಮತ್ತು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಎನ್ ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಶ್ರೀಮಂತಗೊಳಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಭಾರತ ಸರ್ಕಾರವು ಎನ್‌ಸಿಸಿ ಅನುಭವವನ್ನು ಇನ್ನಷ್ಟು ರೋಮಾಂಚಕ ಮತ್ತು ಅರ್ಥಪೂರ್ಣಗೊಳಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. https://t.co/CPMGLryRXX" ಎಂದು ಹೇಳಿದ್ದಾರೆ.