ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಮಾಜಿ ಮುಖ್ಯಮಂತ್ರಿ ಶ್ರೀ ವಿ. ಎಸ್. ಅಚ್ಯುತಾನಂದನ್ ಅವರಿಗೆ 100ನೇ ಜನ್ಮದಿನದ ಶುಭಾಶಯ ಕೋರಿದರು. ಹಲವು ದಶಕಗಳ ಕಾಲ ಕೇರಳದ ಜನತೆಗೆ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ ಶ್ಲಾಘಿಸಿದ ಪ್ರಧಾನ ಮಂತ್ರಿಗಳು ಅಚ್ಯುತಾನಂದನ್ ಅವರು ದೀರ್ಘಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸಿದರು.
ಈ ಸಂಬಂಧ "ಎಕ್ಸ್ʼ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು,
"100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕೇರಳದ ಮಾಜಿ ಸಿಎಂ ಶ್ರೀ ವಿ.ಎಸ್. ಅಚ್ಯುತಾನಂದನ್ ಅವರಿಗೆ ವಿಶೇಷ ಶುಭಾಶಯಗಳು. ಅವರು ಹಲವು ದಶಕಗಳಿಂದ ಕೇರಳದ ಜನರಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ನಾನು ಅವರೊಂದಿಗೆ ನನ್ನ ನಡೆಸಿದ ಸಂವಾದವನ್ನು ನೆನಪಿಸಿಕೊಳ್ಳುತ್ತೇನೆ. ಅದರಲ್ಲೂ ವಿಶೇಷವಾಗಿ ನಾವಿಬ್ಬರೂ ನಮ್ಮ ನಮ್ಮ ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಸಂದರ್ಭವನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರು ದೀರ್ಘಕಾಲ ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ,ʼʼ ಎಂದು ಆಶಿಸಿದ್ದಾರೆ.
Greetings to former Kerala CM Shri VS Achuthanandan Ji on the special occasion of his 100th birthday. He has been working for the people of Kerala for decades. I recall my interactions with him, particularly when we both were serving as Chief Ministers of our respective states.… pic.twitter.com/zrIAxeuKOb
— Narendra Modi (@narendramodi) October 20, 2023
നൂറാം ജന്മദിനത്തിന്റെ വിശേഷ അവസരത്തില് മുന് കേരള മുഖ്യമന്ത്രി ശ്രീ വി എസ് അച്യുതാനന്ദൻജി ക്ക് ആശംസകള്. കേരളത്തിലെ ജനങ്ങള്ക്ക് വേണ്ടി പതിറ്റാണ്ടുകളായി അദ്ദേഹം പ്രവര്ത്തിക്കുന്നു. അദ്ദേഹവുമായുള്ള ഇടപഴകലുകള് ഞാന് ഓര്ക്കുന്നു, പ്രത്യേകിച്ചും ഞങ്ങള് രണ്ടുപേരും അതാത്… pic.twitter.com/v8YP9Pnd9k
— Narendra Modi (@narendramodi) October 20, 2023