ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಧರ್ಮನಿಷ್ಠೆ ಮತ್ತು ಭಕ್ತಿಯ ಈ ಪವಿತ್ರ ಸಂದರ್ಭವು ಜನರ ಜೀವನದಲ್ಲಿ ಹೊಸ ಸಂತೋಷ ಮತ್ತು ಶಕ್ತಿಯನ್ನು ತರಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್ ಮಾಡಿ,
"ಜನ್ಮಾಷ್ಟಮಿಯ ಶುಭಾಶಯಗಳು. ಭಕ್ತಿಯ ಈ ಪವಿತ್ರ ಸಂದರ್ಭವು ದೇಶದ ನಾಗರಿಕರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ನಾನು ಬಯಸುತ್ತೇನೆ. ಜೈ ಶ್ರೀ ಕೃಷ್ಣ!" ಎಂದು ಶುಭಾಶಯ ತಿಳಿಸಿದ್ದಾರೆ.
जन्माष्टमी की बहुत-बहुत बधाई। श्रद्धा और भक्ति का यह पावन अवसर मेरे सभी परिवारजनों के जीवन में नई ऊर्जा और नए उत्साह का संचार करे, यही कामना है। जय श्रीकृष्ण!
— Narendra Modi (@narendramodi) September 7, 2023