ನಾಗರಿಕ ಸೇವಾ ದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಗರಿಕ ಸೇವಾ ಅಧಿಕಾರಿಗಳಿಗೆ ಮತ್ತು ಅವರ ಕುಟುಂಬದವರಿಗೆ ಶುಭ ಕೋರಿದರು ಮತ್ತು ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.
“ಇಂದು ನಾಗರಿಕ ಸೇವಾ ದಿನ. ನಾನು ಎಲ್ಲ ನಾಗರಿಕ ಸೇವಾ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗೆ ಶುಭ ಕೋರುತ್ತೇನೆ. ಕೋವಿಡ್-19ಅನ್ನು ಸೋಲಿಸುವ ಭಾರತದ ಯಶಸ್ಸಿಗೆ ತಮ್ಮ ಪ್ರಯತ್ನಗಳ ಮೂಲಕ ಕೊಡುಗೆ ನೀಡುತ್ತಿರುವುದಕ್ಕೆ ಅಧಿಕಾರಿಗಳಿಗೆ ಮೆಚ್ಚುಗೆ ಸೂಚಿಸುತ್ತೇನೆ. ಅವರು ದಿನದ 24 ಗಂಟೆಯೂ ಅವಿರತವಾಗಿ ದುಡಿಯುತ್ತಿದ್ದಾರೆ. ಅಗತ್ಯವಿರುವವರಿಗೆ ನೆರವು ನೀಡುತ್ತಿದ್ದಾರೆ ಹಾಗೂ ಎಲ್ಲರೂ ಆರೋಗ್ಯದಿಂದ ಇರಬೇಕು ಎಂಬುದನ್ನು ಖಾತ್ರಿಪಡಿಸುತ್ತಿದ್ದಾರೆ.
ಈ ನಾಗರಿಕ ಸೇವಾ ದಿನದಂದು ಶ್ರೇಷ್ಠ ನಾಯಕ ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರು ನಮ್ಮ ಆಡಳಿತಾತ್ಮಕ ವ್ಯವಸ್ಥೆ ಹೇಗಿರಬೇಕು ಎಂಬುದರ ದೂರದೃಷ್ಟಿ ಹೊಂದಿದ್ದರು ಮತ್ತು ಅಂತಹ ವ್ಯವಸ್ಥೆಯನ್ನು ರೂಪಿಸುವಾಗ ಅದು ಪ್ರಗತಿಪರವಾಗಿರಬೇಕು ಮತ್ತು ಅನುಕಂಪ ಹೊಂದಿರಬೇಕೆಂದು ಬಲವಾಗಿ ಪ್ರತಿಪಾದಿಸಿದ್ದರು” ಎಂದು ಪ್ರಧಾನಮಂತ್ರಿ ಹೇಳಿದರು.
Today, on Civil Services Day I convey greetings to all Civil Servants and their families.
— Narendra Modi (@narendramodi) April 21, 2020
I appreciate their efforts in ensuring India successfully defeats COVID-19. They are working round the clock, assisting those in need and ensuring everyone is healthy.