ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗಡಿ ಭದ್ರತಾ ಪಡೆ ಸಂಸ್ಥಾಪನಾ ದಿನದ ಅಂಗವಾಗಿ ಬಿಎಸ್ಎಫ್ ಯೋಧರು ಮತ್ತು ಅವರ ಕುಟುಂಬ ವರ್ಗದವರಿಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಭಾರತದ ಗಡಿ ಭದ್ರತಾ ಪಡೆಯ ಸಂಸ್ಥಾಪನೆಯ ವಿಶೇಷ ದಿನವಾದ ಇಂದು ಬಿಎಸ್ಎಫ್ ನ ಎಲ್ಲಾ ಭಾರತೀಯ ಯೋಧರು ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು. ಬಿಎಸ್ಎಫ್ ತನ್ನ ಪರಾಕ್ರಮ, ಶೌರ್ಯ ವಿಶಿಷ್ಟ ರೀತಿಯಲ್ಲಿ ಗುರುತಿಸಿಕೊಂಡಿದ್ದು, ರಾಷ್ಟ್ರವನ್ನು ರಕ್ಷಿಸುವ ಅದರ ಬದ್ಧತೆಗೆ ಸರಿಸಾಟಿಯಿಲ್ಲ ಮತ್ತು ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ನಾಗರಿಕರಿಗೆ ನೆರವು ನೀಡುತ್ತಿರುವ ಬಿಎಸ್ಎಫ್ ಭಾರತದ ಹೆಮ್ಮೆಯಾಗಿದೆ” ಎಂದರು.
Best wishes to all @BSF_India personnel and their families on the special occasion of their Raising Day. BSF has distinguished itself as a valorous force, unwavering in their commitment to protect the nation and assist citizens during natural calamities. India is proud of BSF!
— Narendra Modi (@narendramodi) December 1, 2020