ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿ.ಡಬ್ಲ್ಯೂ.ಜಿ 2022 ನ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು,
" ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದ ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಬಗ್ಗೆ ಹೆಮ್ಮೆಯಾಗುತ್ತಿದೆ. ಸಿ.ಡಬ್ಲ್ಯೂ.ಜಿಗೆ ತೆರಳುವ ಮುನ್ನ ಟ್ರೀಸಾ ಅವರು ಗಾಯತ್ರಿ ಅವರೊಂದಿಗೆ ಹೊಂದಿರುವ ಸ್ನೇಹದ ಬಗ್ಗೆ ತಮಗೆ ತಿಳಿಸಿದ್ದರು. ಆದರೆ ಗೆದ್ದರೆ ಹೇಗೆ ಸಂಭ್ರಮಿಸಬೇಕು ಎಂಬ ಬಗ್ಗೆ ಆಕೆಗೆ ಖಚಿತತೆ ಇರಲಿಲ್ಲ. ಈಗ ತಮ್ಮ ಯೋಜನೆಗಳನ್ನು ಅವರು ರೂಪಿಸಿರಬಹುದು” ಎಂದು ಹೇಳಿದ್ದಾರೆ.
Proud of Treesa Jolly and Gayatri Gopichand for winning the Bronze medal in Badminton Doubles. Before leaving for the CWG, Treesa told me about her friendship with Gayatri but she was not sure about how she will celebrate if she won a medal. I hope she's made her plans now. :) pic.twitter.com/Eobar3Gkcl
— Narendra Modi (@narendramodi) August 8, 2022