ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ತಿಳಿಸಿದ್ದಾರೆ.
ನಾರಿ ಶಕ್ತಿಯ ಬಲ, ಧೈರ್ಯ ಮತ್ತು ಮಾನಸಿಕ ಸಾಮಥ್ಯ೯ಕ್ಕೆ ವಂದಿಸಿದ ಪ್ರಧಾನ ಮಂತ್ರಿಗಳು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಶ್ಲಾಘಿಸಿದ್ದಾರೆ.
ಈ ಬಗ್ಗೆ "ಎಕ್ಸ್"ನಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು,
“ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು! ನಮ್ಮ ನಾರಿ ಶಕ್ತಿಯ ಬಲ, ಧೈರ್ಯ ಮತ್ತು ಮಾನಸಿಕ ಸಾಮಥ್ಯ೯ ಗುಣಕ್ಕೆ ವಂದಿಸುತ್ತೇವೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಅವರ ಸಾಧನೆಗಳನ್ನು ಶ್ಲಾಘಿಸುತ್ತೇವೆ. ಶಿಕ್ಷಣ, ಉದ್ಯಮಶೀಲತೆ, ಕೃಷಿ, ತಂತ್ರಜ್ಞಾನ ಮತ್ತು ಇತರೆ ಕ್ಷೇತ್ರಗಳಲ್ಲಿ ಹೆಚ್ಚಿನ ಉಪಕ್ರಮಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕಳೆದ ದಶಕದಲ್ಲಿ ನಮ್ಮ ಸಾಧನೆಗಳಲ್ಲಿ ಇದು ಪ್ರತಿಫಲಿಸುತ್ತದೆ,ʼʼ ಎಂದು ಹೇಳಿದ್ದಾರೆ.
Greetings on International Women's Day! We salute the strength, courage, and resilience of our Nari Shakti and laud their accomplishments across various fields. Our government is committed to empowering women through initiatives in education, entrepreneurship, agriculture,…
— Narendra Modi (@narendramodi) March 8, 2024