ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಘನತೆವೆತ್ತ ಶ್ರೀ ಯೂನ್ ಸುಕ್-ಯೋಲ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸದಾಶಯ ಹಾಗು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.
ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;
" ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಘನತೆವೆತ್ತ ಶ್ರೀ ಯೂನ್ ಸುಕ್-ಯೋಲ್ ( @sukyeol__yoon ) ಅವರಿಗೆ ನನ್ನ ಹೃತ್ಪೂರ್ವಕ ಸದಾಶಯಗಳು ಮತ್ತು ಶುಭಹಾರೈಕೆಗಳನ್ನು ತಿಳಿಸುತ್ತಿದ್ದೇನೆ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಲು ಮತ್ತು ಭಾರತ- ದಕ್ಷಿಣ ಕೊರಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹಾಗು ಉತ್ಕೃಷ್ಟಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಬಯಸಿದ್ದೇನೆ."
I extend my heartfelt greetings and good wishes to ROK President @sukyeol__yoon as he commences his term in office today. I look forward to meeting him soon and working together to further strengthen and enrich the India-ROK ties.
— Narendra Modi (@narendramodi) May 10, 2022