ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರ್ಮಿಂಗ್‌ಹ್ಯಾಮ್‌ನ 2022 ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ದೀಪಕ್‌ ಪೂನಿಯಾ ಅವರಿಗೆ ಶುಭ ಕೋರಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ಟ್ವೀಟ್‌ ಮಾಡಿದ್ದಾರೆ;

‘‘ದೀಪಕ್‌ ಪೂನಿಯಾ ಅವರ ಅದ್ಭುತ ಕ್ರೀಡಾ ಪ್ರದರ್ಶನದ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅವರು, ಭಾರತದ ಹೆಮ್ಮೆ ಮತ್ತು ಭಾರತಕ್ಕೆ ಅನೇಕ ಪ್ರಶಸ್ತಿಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಚಿನ್ನದ ಪದಕವನ್ನು ಗೆದ್ದಾಗ ಸಂತೋಷಪಡುತ್ತಾನೆ. ಮುಂಬರುವ ಎಲ್ಲಾ ಪ್ರಯತ್ನಗಳಿಗೆ ಅವರಿಗೆ ಶುಭ ಹಾರೈಕೆಗಳು,’’ ಎಂದಿದ್ದಾರೆ.