ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್- ಮಾಹೇಸಾನಾ (64.27 ಕಿಮೀ) ಗೇಜ್ ಪರಿವರ್ತನೆ ಯೋಜನೆ ಪೂರ್ಣಗೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇದು ವಾಣಿಜ್ಯ ಮತ್ತು ಸಂಪರ್ಕ ವಿಷಯದಲ್ಲಿ ಅತ್ಯುತ್ತಮವೆನಿಸಲಿದೆ ಎಂದು ಶ್ರೀ ಮೋದಿ ತಿಳಿಸಿದರು.
ಈ ಯೋಜನೆಯು ರೈಲು ಕಾರ್ಯಾಚರಣೆ ಸುಗಮಗೊಳಿಸುತ್ತದೆ, ಅಹಮದಾಬಾದ್ ಮತ್ತು ಮಾಹೇಸಾನಾ ನಡುವಿನ ಪ್ರಯಾಣದ ಸಮಯವನ್ನು ತಗ್ಗಿಸಲಿದೆ ಮತ್ತು ಪ್ರಮುಖವಾಗಿ ಅಹಮದಾಬಾದ್-ದೆಹಲಿ ಮಾರ್ಗದಲ್ಲಿ ಸರಕು ಸಾಗಿಸುವ ಸಾಮರ್ಥ್ಯವನ್ನು ವೃದ್ಧಿಸಲಿದೆ.
ರೈಲ್ವೆ ಸಚಿವಾಲಯದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಮರುಟ್ವೀಟ್ ಮಾಡಿದ್ದಾರೆ;
"ವಾಣಿಜ್ಯ ಮತ್ತು ಸಂಪರ್ಕಕ್ಕೆ ಅತ್ಯುತ್ತಮವಾಗಿದೆ."
Great for commerce and connectivity. https://t.co/qxV2jwKz9r
— Narendra Modi (@narendramodi) March 6, 2023