ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀನಗರ ಕರಕುಶಲ ಮತ್ತು ಜಾನಪದ ಕಲೆಯ ತನ್ನ ವಿಶೇಷ ಸ್ಥಾನದೊಂದಿಗೆ ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ (ಯುಸಿಸಿಎನ್) ಕ್ಕೆ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಟ್ವೀಟ್‌ನಲ್ಲಿ ಪ್ರಧಾನಮಂತ್ರಿಯವರು;
"ಸುಂದರವಾದ ಶ್ರೀನಗರವು ತನ್ನ ಕರಕುಶಲ ಮತ್ತು ಜಾನಪದ ಕಲೆಗಾಗಿ ವಿಶೇಷ ಉಲ್ಲೇಖದೊಂದಿಗೆ @ಯುನೆಸ್ಕೋ ಸೃಜನಾತ್ಮಕ ನಗರಗಳ ಜಾಲ (ಯು.ಸಿ.ಸಿ.ಎನ್) ಕ್ಕೆ ಸೇರಿದೆ ಎಂದು ತಿಳಿದು ಸಂತೋಷವಾಯಿತು. ಇದು ಶ್ರೀನಗರದ ಅನುರೂಪದ ಸಾಂಸ್ಕೃತಿಕ ನೀತಿಗೆ ಸೂಕ್ತವಾದ ಮನ್ನಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನತೆಗೆ ಅಭಿನಂದನೆಗಳು.." ಎಂದು ತಿಳಿಸಿದ್ದಾರೆ.
Delighted that beautiful Srinagar joins the @UNESCO Creative Cities Network (UCCN) with a special mention for its craft and folk art. It is a fitting recognition for the vibrant cultural ethos of Srinagar. Congratulations to the people of Jammu and Kashmir.
— Narendra Modi (@narendramodi) November 8, 2021