ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವಬ್ಯಾಂಕ್ ನ ಲಾಜಿಸ್ಟಿಕ್ ಪರ್ಫಾರ್ಮೆನ್ಸ್ ಇಂಡೆಕ್ಸ್ ನಲ್ಲಿ ಭಾರತ 16 ಸ್ಥಾನ ಜಿಗಿದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಮಂತ್ರಿಯವರು;
"ನಮ್ಮ ಸುಧಾರಣೆಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಸುಧಾರಿಸುವತ್ತ ಗಮನ ಹರಿಸುವ ಉತ್ತೇಜನಕಾರಿ ಪ್ರವೃತ್ತಿ. ಈ ಲಾಭಗಳು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ವ್ಯವಹಾರಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದಿದ್ದಾರೆ."
An encouraging trend, powered by our reforms and focus on improving logistics infrastructure. These gains will reduce costs and make our businesses more competitive. https://t.co/x18UXFZ62T
— Narendra Modi (@narendramodi) April 22, 2023