ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಲೈಟ್ ಹೌಸ್ ಗಳನ್ನು ಪ್ರಮುಖ ಪ್ರವಾಸಿ ತಾಣಗಳಾಗಿ ನೋಡುತ್ತಿರುವುದು ಸಂತಸದ ವಿಷಯವಾಗಿದೆ ಎಂದಿದ್ದಾರೆ.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರು ಗೋವಾ ಮುಖ್ಯಮಂತ್ರಿ ಶ್ರೀ ಡಾ. ಪ್ರಮೋದ್ ಪಿ. ಸಾವಂತ್ ಮತ್ತು ಕೇಂದ್ರ ರಾಜ್ಯ ಸಚಿವ ಶ್ರೀ ಶ್ರೀಪಾದ್ ವೈ ನಾಯಕ್ ಅವರೊಂದಿಗೆ ಗೋವಾದ ಅಗುವಾಡಾ ಕೋಟೆಯಲ್ಲಿ ಪ್ರಪ್ರಥಮ ಭಾರತೀಯ ಲೈಟ್ ಹೌಸ್ ಉತ್ಸವವನ್ನು ಉದ್ಘಾಟಿಸಿರುವುದಾಗಿ ಸರಣಿ X ಪೋಸ್ಟ್ ಗಳಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಾಚೀನ ಕಾಲದಿಂದಲೂ ನಾವಿಕರು ಹಾಗೂ ಪ್ರವಾಸಿಗರನ್ನು ತಮ್ಮ ರಹಸ್ಯ ರಮಣೀಯ ಆಕರ್ಷಣೆ ಮತ್ತು ವಿಶಿಷ್ಟ ರಚನೆಗಳಿಂದ ಆಕರ್ಷಿಸಿದ ಕಡಲ ನೌಕಾಯಾನದ ಅತ್ಯಗತ್ಯ ಭಾಗವಾದ ಲೈಟ್ ಹೌಸ್ ಗನ್ನು ಆಚರಿಸಲು ಇಂಡಿಯನ್ ಲೈಟ್ ಹೌಸ್ ಉತ್ಸವವನ್ನು ನಡೆಸಲಾಗುತ್ತಿದೆ.
ಕೇಂದ್ರ ಸಚಿವರ ಎಕ್ಸ್ ಪೋಸ್ಟ್ ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
"ಪ್ರಮುಖ ಪ್ರವಾಸಿ ತಾಣಗಳಾಗಿ ಲೈಟ್ ಹೌಸ್ ಗಳತ್ತ ಹೆಚ್ಚುತ್ತಿರುವ ಜನತೆಯ ಉತ್ಸಾಹವನ್ನು ನೋಡಿ ಸಂತಸವಾಗುತ್ತಿದೆ. ಈ ವಿಷಯದ ಬಗ್ಗೆ #MannKiBaat ಸಮಯದಲ್ಲಿ ನಾನು ಹೇಳಿದ್ದನ್ನು https://youtu.be/kP_qEIipwqE?si=-_wpXAj5aoIdSXls ಇಲ್ಲಿ ಉಲ್ಲೇಖಿಸಿದ್ದೇನೆ. " ಎಂದು ಪೋಸ್ಟ್ ಮಾಡಿದ್ದಾರೆ.
Glad to see growing enthusiasm towards Lighthouses as key tourist spots. Here is what I had said during #MannKiBaat on the topic. https://t.co/j0uyrMkKD2 https://t.co/xwiDWkiRQa
— Narendra Modi (@narendramodi) September 24, 2023