ಇಂದು ದೇವ್ ದೀಪಾವಳಿ ದಿನ ಲಕ್ಷಾಂತರ ದೀವಟಿಗೆಗಳೊಂದಿಗೆ ವಾರಣಾಸಿಯ ಕಾಶಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು:
“ದೇವ ದೀಪಾವಳಿಯಂದು ಲಕ್ಷಾಂತರ ದೀಪಗಳಿಂದ ಬೆಳಗಿದ ಬಾಬಾ ವಿಶ್ವನಾಥನ ನಗರವಾದ ಕಾಶಿಯ ವೈಭವವು ಮನಸ್ಸನ್ನು ಆಕರ್ಷಿಸುತ್ತದೆ. ದೀಪಗಳನ್ನು ದಾನ ಮಾಡುವ ಈ ಸಂಪ್ರದಾಯಕ್ಕೆ ಪ್ರಪಂಚದಾದ್ಯಂತದ ಜನರು ಸಾಕ್ಷಿಯಾಗುತ್ತಾರೆ. ಗಂಗಾಮಾತೆಯ ದಡದ ಸುತ್ತಲೂ ಹರಡಿರುವ ದಿವ್ಯ ಬೆಳಕು ಪ್ರತಿಯೊಬ್ಬರ ಜೀವನವನ್ನು ಸಂತೋಷ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದಿಂದ ಬೆಳಗಿಸಲಿ ಎಂದು ನಾನು ಬಯಸುತ್ತೇನೆ.'' ಎಂದು ಬರೆದುಕೊಂಡಿದ್ದಾರೆ.
देव दीपावली पर लाखों दीयों से जगमग बाबा विश्वनाथ की नगरी काशी का भव्य स्वरूप मन को मोह लेता है। दीपदान की इस परंपरा का दुनिया भर के लोग साक्षी बनते हैं। मेरी कामना है कि मां गंगा के तट पर चारों ओर फैली दिव्य ज्योति हर किसी के जीवन को सुख, शांति, समृद्धि और उत्तम स्वास्थ्य से रोशन… pic.twitter.com/6G9dCDKMS6
— Narendra Modi (@narendramodi) November 15, 2024