ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರೈತರ ಸಂತೋಷವು ಹೊಸ ಹುರುಪಿನಿಂದ ಕೆಲಸ ಮಾಡಲು ಸರ್ಕಾರವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಖಾರಿಫ್ ಬೆಳೆಗಳ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಸಚಿವ ಸಂಪುಟದ ಇತ್ತೀಚಿನ ನಿರ್ಧಾರವನ್ನು ರೈತರು ಸ್ವಾಗತಿಸಿದ ಹಿನ್ನೆಲೆಯ ದೂರದರ್ಶನ ವಾಹಿನಿಯ ಟ್ವೀಟ್ ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು:
"ರೈತ ಸಹೋದರ ಸಹೋದರಿಯರ ಸಂತೋಷವೇ ಅವರಿಗಾಗಿ ಹೆಚ್ಚು ಹೆಚ್ಚು ಕೆಲಸ ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
किसान भाई-बहनों की यही खुशी तो है, जो हमें उनके लिए ज्यादा से ज्यादा काम करने की प्रेरणा देती है। https://t.co/W2Uwgwn5B3
— Narendra Modi (@narendramodi) June 9, 2023