ಜನುಮ ದಿನದ ಶುಭ ಕೋರಿದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ:
“ಮಾನ್ಯ @ rashtrapatibhvn ಅವರೇ, ನಿಮ್ಮ ಶುಭ ಹಾರೈಕೆಗಳಿಗೆ ತುಂಬು ಹೃದಯದ ಧನ್ಯವಾದಗಳು! ನಿಮ್ಮ ಪ್ರೇರಣಾದಾಯಕ ಮಾರ್ಗದರ್ಶನವು ಸ್ವಾವಲಂಬಿ ಮತ್ತು ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಸ್ಫೂರ್ತಿ ನೀಡಲಿದೆ. ದೇಶ ಮತ್ತು ದೇಶದ ಜನರಿಗಾಗಿ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಯಾವುದೇ ಅವಕಾಶವನ್ನೂ ಕೈಚೆಲ್ಲುವುದಿಲ್ಲ.”
माननीय @rashtrapatibhvn जी, आपकी शुभकामनाओं के लिए हृदय से बहुत-बहुत आभार! आपका प्रेरक मार्गदर्शन आत्मनिर्भर और विकसित भारत के संकल्प को साकार करने में बहुत उत्साहित करने वाला है। देश और देशवासियों के प्रति हम अपने दायित्व को पूरा करने में कोई कोर-कसर नहीं छोड़ेंगे। https://t.co/GAjjpc7ElJ
— Narendra Modi (@narendramodi) September 17, 2024
ಉಪರಾಷ್ಟ್ರಪತಿಗಳಿಗೆ ಪ್ರಧಾನಮಂತ್ರಿಗಳು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ:
“ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರೇ ನಿಮ್ಮ ಶುಭ ಹಾರೈಕೆಗಳಿಗೆ ನಾನು ಆಭಾರಿಯಾಗಿದ್ದೇನೆ. ವಿವಿಧ ವಿಷಯಗಳ ಕುರಿತಂತೆ ನಿಮ್ಮ ಮಾರ್ಗದರ್ಶನ ಮತ್ತು ಒಳನೋಟಗಳನ್ನ ನಾನು ಗೌರವಿಸುತ್ತೇನೆ.”
I am grateful for your wishes, VP Jagdeep Dhankhar Ji. I also cherish your guidance and insights on various issues. https://t.co/8jG8XvAFg3
— Narendra Modi (@narendramodi) September 17, 2024
ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪ್ರತಿಯೊಬ್ಬರಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ: “ನನಗೆ ಜನುಮ ದಿನದ ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಜನರಿಗಾಗಿ ನಾನು ಹೆಚ್ಚು ಶ್ರಮಿಸಲು ಈ ಆತ್ಮೀಯತೆಯು ನನಗೆ ಅಪಾರ ಬಲವನ್ನು ನೀಡಲಿದೆ”
ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಜನರಿಂದ ಇಷ್ಟೊಂದು ಆತ್ಮೀಯತೆ ಪಡೆದು ನಾನು ವಿನೀತನಾಗಿದ್ದೇನೆ ಮತ್ತು ಧನ್ಯನಾಗಿದ್ದೇನೆ.
ಜನುಮದಿನದ ಶುಭ ಕೋರಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಈ ಪ್ರೀತಿಯು ಜನರಿಗಾಗಿ ನಾನು ಹೆಚ್ಚು ಹೆಚ್ಚು ಶ್ರಮಿಸಲು ನನಗೆ ಅಪಾರ ಬಲವನ್ನು ನೀಡಲಿದೆ.
ಮೂರನೇ ಅವಧಿಯ ಆಡಳಿತದಲ್ಲಿ ನೂರು ದಿನಗಳನ್ನು ಪೂರೈಸಿದ ಸುಸಂದರ್ಭವೂ ಇದಾಗಿದೆ. ಕಳೆದ 100 ವರ್ಷಗಳಲ್ಲಿ ಅನೇಕ ಜನಪರ ಮತ್ತು ಅಭಿವೃದ್ಧಿ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಇವು ವಿಕಸಿತ ಭಾರತದ ನಿರ್ಮಾಣದ ನಮ್ಮ ಯತ್ನಕ್ಕೆ ಬಲ ನೀಡಲಿದೆ ಎಂಬುದು ನನಗೆ ಸಂತಸ ತಂದಿದೆ.
ಇಂದು ಸಮಾಜ ಸೇವಾ ಚಟುವಟಿಕೆಗಳಲ್ಲಿ ಅನೇಕರು ತೊಡಗಿಸಿಕೊಂಡಿದ್ದಾರೆ. ಅವರ ಉತ್ಸಾಹಕ್ಕೆ ನಾನು ವಂದಿಸುತ್ತೇನೆ ಮತ್ತು ಅವರ ಈ ಪ್ರಯತ್ನಗಳಿಗೆ ನನ್ನ ಮೆಚ್ಚುಗೆಯನ್ನು ತಿಳಿಸುತ್ತಿದ್ದೇನೆ.”
Humbled and honoured to receive so much warmth from people.
— Narendra Modi (@narendramodi) September 17, 2024
I thank each and every person who has conveyed birthday greetings to me. This affection gives me immense strength to keep working harder for the people.
This is also the time our third term completes 100 days. I am…