ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನದಿಂದ ಸಂಭವಿಸಿದ ಜೀವಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ, ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದುಃಖದ ಸಮಯದಲ್ಲಿ ಇಂಡೋನೇಷ್ಯಾ ಜೊತೆ ಭಾರತ ದೇಶ ನಿಂತಿರುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ:
"ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನದಿಂದುಂಟಾಗಿರುವ ಜೀವಹಾನಿ ಮತ್ತು ಆದಂತಹ ಆಸ್ತಿ ನಷ್ಟವನ್ನು ಕಂಡು ಮನಸಿಗೆ ತುಂಬಾ ನೋವಾಗಿದೆ. ಭೂಕಂಪನದ ಸಂತ್ರಸ್ತರಿಗೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಮನಸಿನಾಳದ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.ಅಲ್ಲದೇ ಈ ದುಃಖದ ಸಮಯದಲ್ಲಿ ಭಾರತವು ಇಂಡೋನೇಷ್ಯಾದೊಂದಿಗೆ ನಿಂತಿರುವುದಾಗಿ ಹೇಳಿದ್ದಾರೆ.
Saddened by the loss of lives and damage to property from the earthquake in Indonesia. Deepest condolences to the victims and their families. Wish a speedy recovery to the injured. India stands with Indonesia in this hour of grief. @jokowi
— Narendra Modi (@narendramodi) November 22, 2022