ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರಾಖಂಡ್ ನ ರಿಷಿಕೇಶದ ಏಮ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಎಂ-ಕೇರ್ಸ್ ನಿಧಿಯಿಂದ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಿರುವ 35 ಒತ್ತಡ ಹೀರಿಕೊಳ್ಳುವ ಆಮ್ಲಜನಕ (ಪಿಎಸ್ ಎ) ಘಟಕಗಳನ್ನು ಲೋಕಾರ್ಪಣೆ ಮಾಡಿದರು. ಇದರೊಂದಿಗೆ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳು ಕಾರ್ಯಾರಂಭ ಮಾಡಿದಂತಾಗಿದೆ. ಕೇಂದ್ರ ಸಚಿವರುಗಳು, ಉತ್ತರಾಖಂಡ್ ಮುಖ್ಯಮಂತ್ರಿ, ರಾಜ್ಯ ಸಚಿವರು ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದಿನಿಂದ ಪವಿತ್ರ ನವರಾತ್ರಿ ಉತ್ಸವ ಆರಂಭವಾಗುತ್ತಿದೆ ಎಂದರು. ನವರಾತ್ರಿಯ ಮೊದಲ ದಿನ ಮಾತೆ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ ಎಂದು ಹೇಳಿದರು. ಶೈಲಪುತ್ರಿ ಹಿಮಾಲಯದ ಪುತ್ರಿ ಎಂದು ಅವರು ತಿಳಿಸಿದರು. “ಈ ದಿನ ನಾನು ಇಲ್ಲಿದ್ದೇನೆ. ಈ ಪವಿತ್ರ ಭೂಮಿಗೆ ನಮಿಸಲು ಬಂದಿದ್ದೇನೆ, ಹಿಮಾಲಯದ ಈ ಭೂಮಿಗೆ ನಮಿಸುತ್ತೇನೆ, ಜೀವನದಲ್ಲಿ ಇದಕ್ಕಿಂತ ದೊಡ್ಡ ಆಶೀರ್ವಾದವೇನಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ನಲ್ಲಿ ರಾಜ್ಯ ಅಸಾಧಾರಾಣ ಸಾಧನೆಗೈಯ್ದಿದೆ ಎಂದು ಅಭಿನಂದಿಸಿದರು. ಉತ್ತರಾಖಂಡ್ ಜೊತೆಗಿನ ತಮ್ಮ ಸಂಬಂಧ ಕೇವಲ ಹೃದಯದಲ್ಲಿಲ್ಲ, ಅದು ಕ್ರಿಯೆಯಲ್ಲೂ ಇದೆ, ಅದು ಕೇವಲ ಸಾರದಲ್ಲಲ್ಲ, ಅಂಶಗಳಲ್ಲೂ ಇದೆ ಎಂದರು.
ಇಂದಿನ ದಿನ ತಮ್ಮ ಜೀವನದ ಮಹತ್ವದ ದಿನವಾಗಿರುವುದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, 20 ವರ್ಷಗಳ ಹಿಂದೆ ಇದೇ ದಿನ ನನಗೆ ಸಾರ್ವಜನಿಕರ ಸೇವೆಗೈಯ್ಯುವ ಹೊಸ ಜವಾಬ್ದಾರಿ ದೊರಕಿತ್ತು ಎಂದು ನೆನಪು ಮಾಡಿಕೊಂಡರು. ಜನರಿಗೆ ಸೇವೆ ಮಾಡುವುದು, ಜನರೊಂದಿಗೆ ಜೀವಿಸುವುದು ಹಲವು ದಶಕಗಳಿಂದ ನಡೆದಿದೆ, ಆದರೆ 20 ವರ್ಷಗಳ ಹಿಂದೆ ಇದೇ ದಿನ ನನಗೆ ಗುಜರಾತ್ ಮುಖ್ಯಮಂತ್ರಿಯಾಗುವ ಹೊಸ ಜವಾಬ್ದಾರಿ ದೊರಕಿತ್ತು ಎಂದರು. ಈ ಪ್ರಯಾಣದ ಆರಂಭವು ತಾವು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳ ಬಳಿಕ ಉತ್ತರಾಖಂಡ್ ರಾಜ್ಯ ರಚನೆಯೊಂದಿಗೆ ಹೊಂದಿಕೆಯಾಯಿತು ಎಂದು ಅವರು ಉಲ್ಲೇಖಿಸಿದರು. ಜನರ ಆಶೀರ್ವಾದದಿಂದ ತಾವು ಪ್ರಧಾನಮಂತ್ರಿಯ ಸ್ಥಾನಕ್ಕೆ ಏರುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಅವರು ಹೇಳಿದರು. ಸರ್ಕಾರದ ಮುಖ್ಯಸ್ಥರಾಗಿ 21ನೇ ವರ್ಷಕ್ಕೆ ನಿರಂತರ ಪಯಣ ಮುಂದುವರಿಸಿರುವುದಕ್ಕಾಗಿ ದೇಶದ ಮತ್ತು ಉತ್ತರಾಖಂಡ್ ಜನತೆಗೆ ಪ್ರಧಾನಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಯೋಗ ಮತ್ತು ಆಯುರ್ವೇದದಂತಹ ಜೀವಶಕ್ತಿಯನ್ನು ಒಳಗೊಂಡ ಭೂಮಿಯಿಂದ ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಅತ್ಯಲ್ಪ ಅವಧಿಯಲ್ಲಿಯೇ ಕೊರೊನಾ ಸಾಂಕ್ರಾಮಿಕದ ವಿರುದ್ಧದ ಹೋರಾಟಕ್ಕೆ ದೇಶದಲ್ಲಿ ಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ನಮ್ಮ ದೇಶದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕದ ಮುನ್ನ ದೇಶದಲ್ಲಿ ಕೇವಲ ಒಂದೇ ಒಂದು ಪ್ರಯೋಗಾಲಯವಿತ್ತು, ಇದೀಗ ಸುಮಾರು 3ಸಾವಿರ ಪ್ರಯೋಗಾಲಯಗಳ ಜಾಲವೇ ಸೃಷ್ಟಿಯಾಗಿದೆ ಎಂದರು. ಭಾರತವು ಮಾಸ್ಕ್ ಮತ್ತು ಪಿಪಿಇ ಕಿಟ್ ಗಳು ಆಮದುದಾರನಿಂದ ರಫ್ತುದಾರನಾಗಿ ಬದಲಾಗಿದೆ. ದೇಶದ ದುರ್ಗಮ ಪ್ರದೇಶದಲ್ಲೂ ಹೊಸ ವೆಂಟಿಲೇಟರ್ ಗಳ ಸೌಕರ್ಯ ಒದಗಿಸಲಾಗಿದೆ. ಭಾರತವು ಮೇಡ ಇನ್ ಇಂಡಿಯಾ ಲಸಿಕೆಯನ್ನು ತ್ವರಿತ ಹಾಗೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿದೆ. ಭಾರತ ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕೀಕರಣ ಅಭಿಯಾನವನ್ನು ಜಾರಿಗೊಳಿಸಿದೆ. ಭಾರತ ಏನು ಸಾಧನೆ ಮಾಡಿದೆಯೋ ಅದು ನಮ್ಮ ದೃಢನಿಶ್ಚಯ, ನಮ್ಮ ಸೇವೆ ಮತ್ತು ನಮ್ಮ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಸಾಮಾನ್ಯ ದಿನಗಳಲ್ಲಿ ಭಾರತ ಪ್ರತಿದಿನ ಸುಮಾರು 900 ಮೆಟ್ರಿಕ್ ಟನ್ ದ್ರವರೂಪದ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನೆ ಮಾಡುತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಉತ್ಪಾದನೆ ಪ್ರಮಾಣವನ್ನು 10ಪಟ್ಟು ಅಧಿಕಗೊಳಿಸಲಾಗಿದೆ. ಇದು ಜಗತ್ತಿನ ಯಾವುದೇ ರಾಷ್ಟ್ರಕ್ಕೆ ಊಹಿಸಲಾಗದ ಗುರಿ, ಆದರೆ ಭಾರತ ಅದನ್ನು ಸಾಧಿಸಿ ತೋರಿಸಿದೆ ಎಂದರು.
ಭಾರತ ಈವರೆಗೆ 93 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿರುವುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಚಾರ ಎಂದು ಪ್ರಧಾನಮಂತ್ರಿ ಹೇಳಿದರು. ಸದ್ಯದಲ್ಲೇ ಭಾರತ ಲಸಿಕೆ ನೀಡಿಕೆಯಲ್ಲಿ 100 ಕೋಟಿ ಗಡಿ ದಾಟಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹೇಗೆ ಲಸಿಕೆ ನೀಡಲಾಗುತ್ತದೆ ಎಂಬುದನ್ನು ಕೋವಿನ್ ವೇದಿಕೆಯನ್ನು ನಿರ್ಮಿಸುವ ಮೂಲಕ ಇಡೀ ಜಗತ್ತಿಗೆ ದಾರಿ ತೋರಿಸಲಾಗಿದೆ ಎಂದು ಅವರು ಹೇಳಿದರು.
ನಾಗರಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಬರುವವರೆಗೂ ಮತ್ತು ನಂತರ ಕ್ರಮ ಕೈಗೊಳ್ಳುವವರೆಗೆ ಸರ್ಕಾರ ಕಾಯುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರದ ವ್ಯವಸ್ಥೆ ಮತ್ತು ಮನೋಭಾವದಲ್ಲಿದ್ದ ತಪ್ಪುಕಲ್ಪನೆಯನ್ನು ಹೋಗಲಾಡಿಸಿದೆ ಎಂದರು. ಇದೀಗ ಸರ್ಕಾರವೇ ಪ್ರಜೆಗಳ ಬಳಿ ಹೋಗುತ್ತಿದೆ ಎಂದು ಹೇಳಿದರು.
ಕಳೆದ 6-7 ವರ್ಷಗಳವರೆಗೆ ಕೇವಲ ಕೆಲವೇ ರಾಜ್ಯಗಳಲ್ಲಿ ಮಾತ್ರ ಏಮ್ಸ್ ಸೌಕರ್ಯವಿತ್ತು, ಆದರೆ ಇಂದು ಬಹುತೇಕ ಎಲ್ಲ ರಾಜ್ಯಗಳಲ್ಲೂ ಏಮ್ಸ್ ಸ್ಥಾಪನೆ ನಿಟ್ಟಿನಲ್ಲಿ ಕಾರ್ಯ ನಡೆದಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ನಾವು 6 ಏಮ್ಸ್ ಆಸ್ಪತ್ರೆಗಳಿಂದ 22 ಏಮ್ಸ್ ಗಳ ಬಲಿಷ್ಠ ಜಾಲ ನಿರ್ಮಾಣದತ್ತ ವೇಗವಾಗಿ ಸಾಗಿದ್ದೇವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಇರಬೇಕೆಂಬುದು ಸರ್ಕಾರದ ಗುರಿಯಾಗಿದೆ. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಾಖಂಡ್ ರಾಜ್ಯ ರಚನೆಯ ಕನಸನ್ನು ನನಸಾಗಿಸಿದರು ಎಂದು ಅವರು ಸ್ಮರಿಸಿದರು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಸಂಪರ್ಕ, ಅಭಿವೃದ್ಧಿ ಜೊತೆ ನೇರ ಸಂಬಂಧ ಹೊಂದಿದೆ ಎಂದು ನಂಬಿದ್ದರು. ಅವರ ಸ್ಫೂರ್ತಿಯಿಂದಾಗಿ ಇಂದು ದೇಶದಲ್ಲಿ ಅನಿರೀಕ್ಷಿತ ವೇಗ ಮತ್ತು ವ್ಯಾಪ್ತಿಯಲ್ಲಿ ಸಂಪರ್ಕ ಮೂಲಸೌಕರ್ಯ ವೃದ್ಧಿ ಕಾರ್ಯ ನಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು.
2019ರಲ್ಲಿ ಜಲಜೀವನ್ ಮಿಷನ್ ಗೆ ಚಾಲನೆ ನೀಡಿದಾಗ ಉತ್ತರಾಖಂಡ್ ನಲ್ಲಿ 1,30,000 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕವಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಉತ್ತರಾಖಂಡ್ ನಲ್ಲಿ 7,10,000ಕ್ಕೂ ಅಧಿಕ ಮನೆಗಳಿಗೆ ಕೊಳಾಯಿ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದರು. ಎರಡೇ ವರ್ಷದಲ್ಲಿ ಸಮಾರು 6 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಪ್ರತಿಯೊಬ್ಬ ಯೋಧ , ಪ್ರತಿಯೊಬ್ಬ ಮಾಜಿ ಯೋಧರ ಹಿತ ಕಾಯಲು ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಶ್ರೇಣಿ- ಒಂದು ಪಿಂಚಣಿ ಯೋಜನೆ ಜಾರಿಗೊಳಿಸುವ ಮೂಲಕ ಸಶಸ್ತ್ರ ಪಡೆಗಳ 40 ವರ್ಷಗಳ ಹಿಂದಿನ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದು ಅವರು ಹೇಳಿದರು.
आज से नवरात्र का पावन पर्व भी शुरु हो रहा है।
— PMO India (@PMOIndia) October 7, 2021
आज प्रथम दिन मां शैलपुत्री की पूजा होती है।
मां शैलपुत्री, हिमालय पुत्री हैं।
और आज के दिन मेरा यहां होना, यहां आकर इस मिट्टी को प्रणाम करना, हिमालय की इस धरती को प्रणाम करना, इससे बड़ा जीवन में कौन सा धन्य भाव हो सकता है: PM
आज के ही दिन 20 साल पहले मुझे जनता की सेवा का एक नया दायित्व मिला था।
— PMO India (@PMOIndia) October 7, 2021
लोगों के बीच रहकर, लोगों की सेवा करने की मेरी यात्रा तो कई दशक पहले से चल रही थी, लेकिन आज से 20 वर्ष पूर्व, गुजरात के मुख्यमंत्री के रूप में मुझे नई जिम्मेदारी मिली थी: PM @narendramodi
देश के दूर-दराज वाले इलाकों में भी नए वेंटिलेटर्स की सुविधाएं,
— PMO India (@PMOIndia) October 7, 2021
मेड इन इंडिया कोरोना वैक्सीन का तेज़ी से और बड़ी मात्रा में निर्माण,
दुनिया का सबसे बड़ा और सबसे तेज़ टीकाकरण अभियान
भारत ने जो कर दिखाया है, वो हमारी संकल्पशक्ति, हमारे सेवाभाव, हमारी एकजुटता का प्रतीक है: PM
कोरोना से लड़ाई के लिए इतने कम समय में भारत ने जो सुविधाएं तैयार कीं, वो हमारे देश के सामर्थ्य को दिखाता है।
— PMO India (@PMOIndia) October 7, 2021
सिर्फ 1 टेस्टिंग लैब से करीब 3 हजार टेस्टिंग लैब्स का नेटवर्क,
मास्क और किट्स के आयातक से निर्यातक बनने का सफर: PM @narendramodi
सामान्य दिनों में भारत में एक दिन में 900 मीट्रिक टन, लिक्विड मेडिकल ऑक्सीजन का प्रॉडक्शन होता था।
— PMO India (@PMOIndia) October 7, 2021
डिमांड बढ़ते ही भारत ने मेडिकल ऑक्सीजन का प्रॉडक्शन 10 गुना से भी ज्यादा बढ़ाया।
ये दुनिया के किसी भी देश के लिए अकल्पनीय लक्ष्य था, लेकिन भारत ने इसे हासिल करके दिखाया: PM
ये हर भारतवासी के लिए गर्व की बात है कि कोरोना वैक्सीन की 93 करोड़ डोज लगाई जा चुकी है।
— PMO India (@PMOIndia) October 7, 2021
बहुत जल्द हम 100 करोड़ के आंकड़े को पार कर जाएंगे।
भारत ने Cowin प्लेटफॉर्म का निर्माण करके पूरी दुनिया को राह दिखाई है कि इतने बड़े पैमाने पर वैक्सीनेशन किया कैसे जाता है: PM @narendramodi
आज सरकार इस बात का इंतज़ार नहीं करती कि नागरिक उसके पास अपनी समस्याएं लेकर आएंगे तब कोई कदम उठाएंगे।
— PMO India (@PMOIndia) October 7, 2021
सरकारी माइंडसेट और सिस्टम से इस भ्रांति को हम बाहर निकाल रहे हैं।
अब सरकार नागरिक के पास जाती है: PM @narendramodi
6-7 साल पहले तक सिर्फ कुछ राज्यों तक ही एम्स की सुविधा थी, आज हर राज्य तक एम्स पहुंचाने के लिए काम हो रहा है
— PMO India (@PMOIndia) October 7, 2021
6 एम्स से आगे बढ़कर 22 एम्स का सशक्त नेटवर्क बनाने की तरफ हम तेज़ी से आगे बढ़ रहे हैं
सरकार का ये भी लक्ष्य है कि देश के हर जिले में कम से कम एक मेडिकल कॉलेज जरूर हो: PM
उत्तराखंड के निर्माण का सपना अटल जी ने पूरा किया था।
— PMO India (@PMOIndia) October 7, 2021
अटल जी मानते थे कनेक्टिविटी का सीधा कनेक्शन विकास से है।
उन्हीं की प्रेरणा से आज देश में कनेक्टिविटी के इंफ्रास्ट्रक्चर के लिए अभूतपूर्व स्पीड और स्केल पर काम हो रहा है: PM @narendramodi
2019 में जल जीवन मिशन शुरू होने से पहले उत्तराखंड के सिर्फ 1 लाख 30 हजार घरों में ही नल से जल पहुंचता था।
— PMO India (@PMOIndia) October 7, 2021
आज उत्तराखंड के 7 लाख 10 हजार से ज्यादा घरों में नल से जल पहुंचने लगा है।
यानि सिर्फ 2 वर्ष के भीतर राज्य के करीब-करीब 6 लाख घरों को पानी का कनेक्शन मिला है: PM
हमारी सरकार, हर फौजी, हर पूर्व फौजी के हितों को लेकर भी पूरी गंभीरता से काम कर रही है।
— PMO India (@PMOIndia) October 7, 2021
ये हमारी ही सरकार है जिसने वन रैंक वन पेंशन को लागू करके अपने फौजी भाइयों की 40 साल पुरानी मांग पूरी की: PM @narendramodi