ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ದಮನ್ ನಲ್ಲಿ ನಮೋ ಪಥ, ದೇವ್ಕಾ ಕಡಲತೀರವನ್ನು ದೇಶಕ್ಕೆ ಸಮರ್ಪಿಸಿದರು. ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು ಕಟ್ಟಡ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದರು. ಅವರು ನಯಾ ಭಾರತ್ ಸೆಲ್ಫಿ ಪಾಯಿಂಟ್ ಗೂ ಭೇಟಿ ನೀಡಿದರು.
ಸುಮಾರು 165 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ 5.45 ಕಿ.ಮೀ ದೇವ್ಕಾ ಸೀಫ್ರಂಟ್ ದೇಶದ ಒಂದು ರೀತಿಯ ಕರಾವಳಿ ವಾಯುವಿಹಾರವಾಗಿದ್ದು, ಇದು ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಈ ಕಡಲತೀರವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಸ್ಮಾರ್ಟ್ ಲೈಟಿಂಗ್, ಪಾರ್ಕಿಂಗ್ ಸೌಲಭ್ಯಗಳು, ಉದ್ಯಾನಗಳು, ಆಹಾರ ಮಳಿಗೆಗಳು, ಮನರಂಜನಾ ಪ್ರದೇಶಗಳು ಮತ್ತು ಭವಿಷ್ಯದಲ್ಲಿ ಐಷಾರಾಮಿ ಟೆಂಟ್ ನಗರಗಳನ್ನು ಒದಗಿಸುವುದು ಸೇರಿದಂತೆ ಸೀಫ್ರಂಟ್ ಅನ್ನು ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗಿದೆ.
ಪ್ರಧಾನಮಂತ್ರಿಯವರೊಂದಿಗೆ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ಡಿಯು ಮತ್ತು ಲಕ್ಷದ್ವೀಪದ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಪಟೇಲ್ ಉಪಸ್ಥಿತರಿದ್ದರು.