ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ಎಐಐಎಂಎಸ್ ಮತ್ತು ರಸಗೊಬ್ಬರ ಘಟಕ ಹಾಗೂ ಗೋರಖ್‌ಪುರದಲ್ಲಿ ಐಸಿಎಂಆರ್‌ನ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆಗಾಗಿ ಉತ್ತರ ಪ್ರದೇಶದ ಜನರನ್ನು ಪ್ರಧಾನಿ ಅಭಿನಂದಿಸಿದರು. 5 ವರ್ಷಗಳ ಹಿಂದೆ ಎಐಐಎಂಎಸ್ ಮತ್ತು ರಸಗೊಬ್ಬರ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದ ಅವರು ಇಂದು ಎರಡನ್ನೂ ಉದ್ಘಾಟಿಸಿದರು. ಒಮ್ಮೆ ಕೈಗೊಂಡ ಯೋಜನೆಗಳನ್ನು ಪೂರ್ಣಗೊಳಿಸುವ ಸರ್ಕಾರದ ಕಾರ್ಯಶೈಲಿಯನ್ನು ಪ್ರಧಾನಿ ಒತ್ತಿ ಹೇಳಿದರು.
ಡಬಲ್ ಇಂಜಿನ್ ಸರ್ಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ವೇಗವೂ ದ್ವಿಗುಣಗೊಳ್ಳುತ್ತದೆ ಎಂದು ಪ್ರಧಾನಿ ಹೇಳಿದರು. ಸದುದ್ದೇಶದಿಂದ ಕೆಲಸ ಮಾಡಿದಾಗ ಯಾವುದೇ ವಿಪತ್ತುಗಳೂ ಅಡ್ಡಿಯಾಗಲಾರವು. ಬಡವರು, ದುರ್ಬಲರು ಮತ್ತು ಹಿಂದುಳಿದವರ ಬಗ್ಗೆ ಕಾಳಜಿ ವಹಿಸುವ ಸರ್ಕಾರವಿದ್ದಾಗ, ಅದು ಕಷ್ಟಪಟ್ಟು ಕೆಲಸ ಮಾಡುತ್ತದೆ ಮತ್ತು ಫಲಿತಾಂಶಗಳನ್ನು ತೋರಿಸುತ್ತದೆ ಎಂದರು. ನವ ಭಾರತವು ಸಂಕಲ್ಪ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.
ಮೂರು ಹಂತದ ವಿಧಾನದಲ್ಲಿ, ಶೇ.100 ರಷ್ಟು ಬೇವಿನ ಲೇಪನದ ಯೂರಿಯಾವನ್ನು ಪರಿಚಯಿಸುವ ಮೂಲಕ ಸರ್ಕಾರವು ಯೂರಿಯಾದ ದುರ್ಬಳಕೆಯನ್ನು ತಡೆದಿದೆ ಎಂದು ಪ್ರಧಾನಿ ಹೇಳಿದರು. ಕೋಟ್ಯಂತರ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಇದರಿಂದ ಅವರ ಜಮೀನಿಗೆ ಯಾವ ರೀತಿಯ ಗೊಬ್ಬರ ಬೇಕು ಎಂದು ನಿರ್ಧರಿಸಬಹುದು ಎಂದು ಹೇಳಿದರು. ಯೂರಿಯಾ ಉತ್ಪಾದನೆ ಹೆಚ್ಚಿಸಲು ಸರ್ಕಾರ ಒತ್ತು ನೀಡಿದೆ. ಉತ್ಪಾದನೆಯನ್ನು ಹೆಚ್ಚಿಸಲು ಮುಚ್ಚಿದ ರಸಗೊಬ್ಬರ ಘಟಕಗಳನ್ನು ಮತ್ತೆ ತೆರೆಯಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ 5 ರಸಗೊಬ್ಬರ ಘಟಕಗಳು ಪೂರ್ಣಗೊಂಡರೆ, ದೇಶದಲ್ಲಿ 60 ಲಕ್ಷ ಟನ್ ಯೂರಿಯಾ ಲಭ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಗಾರರಿಗಾಗಿ ಮಾಡಿದ ಅಭೂತಪೂರ್ವ ಕೆಲಸಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ಪ್ರಧಾನಿ ಶ್ಲಾಘಿಸಿದರು. ಸರ್ಕಾರವು ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆಯನ್ನು ಇತ್ತೀಚೆಗೆ 300 ರೂ.ವರೆಗೆ ಹೆಚ್ಚಿಸಿದೆ ಮತ್ತು ಹಿಂದಿನ ಸರ್ಕಾರಗಳು ಕಳೆದ 10 ವರ್ಷಗಳಲ್ಲಿ ಕಬ್ಬು ರೈತರಿಗೆ ಪಾವತಿಸಿದಷ್ಟೇ ಹಣವನ್ನು ಈಗ ನೀಡಲಾಗಿದೆ ಎಂದು ಅವರು ಶ್ಲಾಘಿಸಿದರು.
ಸ್ವಾತಂತ್ರ್ಯದ ನಂತರ ಈ ಶತಮಾನದ ಆರಂಭದವರೆಗೂ ದೇಶದಲ್ಲಿ ಒಂದೇ ಒಂದು ಎಐಐಎಂಎಸ್ ಇತ್ತು ಎಂದು ಪ್ರಧಾನಿ ಹೇಳಿದರು. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಇನ್ನೂ 6 ಏಮ್ಸ್‌ಗೆ ಅನುಮೋದನೆ ನೀಡಿದ್ದರು. ಕಳೆದ 7 ವರ್ಷಗಳಲ್ಲಿ 16 ಹೊಸ ಏಮ್ಸ್‌ಗಳನ್ನು ನಿರ್ಮಿಸುವ ಕೆಲಸ ದೇಶಾದ್ಯಂತ ನಡೆಯುತ್ತಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಇರಬೇಕು ಎಂಬುದು ತಮ್ಮ ಸರ್ಕಾರದ ಗುರಿ ಎಂದು ಅವರು ಘೋಷಿಸಿದರು.
ಈ ಪ್ರದೇಶದ ರೈತರಿಗೆ ರಸಗೊಬ್ಬರ ಮತ್ತು ಉದ್ಯೋಗವನ್ನು ಒದಗಿಸುವಲ್ಲಿ ಗೋರಖ್‌ಪುರದ ರಸಗೊಬ್ಬರ ಘಟಕದ ಮಹತ್ವ ಎಲ್ಲರಿಗೂ ತಿಳಿದಿದೆ ಎಂದು ಪ್ರಧಾನಿ ಹೇಳಿದರು. ಈ ಘಟಕದ ಮಹತ್ವ ತಿಳಿದಿದ್ದರೂ ಹಿಂದಿನ ಸರಕಾರಗಳು ಪುನರಾರಂಭಿಸಲು ಆಸಕ್ತಿ ತೋರಿಸಲಿಲ್ಲ ಎಂದರು. ಗೋರಖ್‌ಪುರದಲ್ಲಿ ಎಐಐಎಂಎಸ್‌ಗಾಗಿ ಹಲವು ವರ್ಷಗಳಿಂದ ಬೇಡಿಕೆ ಇರುವುದು ಎಲ್ಲರಿಗೂ ತಿಳಿದಿತ್ತು. ಆದರೆ 2017 ರ ಮೊದಲು ಸರ್ಕಾರವನ್ನು ನಡೆಸುತ್ತಿದ್ದವರು ಗೋರಖ್‌ಪುರದಲ್ಲಿ ಏಮ್ಸ್ ನಿರ್ಮಾಣಕ್ಕೆ ಭೂಮಿ ನೀಡದೆ ಇರಲು ಎಲ್ಲಾ ರೀತಿಯ ಸಮರ್ಥನೆಗಳನ್ನು ನೀಡುತ್ತಿದ್ದರು ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳಲ್ಲಿ ತೀವ್ರ ಇಳಿಕೆ ಮತ್ತು ವೈದ್ಯಕೀಯ ಮೂಲಸೌಕರ್ಯಗಳ ಬೆಳವಣಿಗೆಯನ್ನು ಪ್ರಧಾನಿ ಗಮನಿಸಿದರು. ಏಮ್ಸ್ ಮತ್ತು ಐಸಿಎಂಆರ್ ಕೇಂದ್ರದೊಂದಿಗೆ ಜಪಾನೀಸ್ ಎನ್ಸೆಫಾಲಿಟಿಸ್ ವಿರುದ್ಧದ ಹೋರಾಟವು ಹೊಸ ಶಕ್ತಿಯನ್ನು ಪಡೆಯುತ್ತದೆ ಎಂದು ಅವರು ಹೇಳಿದರು.
ಅಧಿಕಾರದ ಪ್ರದರ್ಶನ, ಅಧಿಕಾರ ರಾಜಕಾರಣ, ಹಗರಣಗಳು ಮತ್ತು ಮಾಫಿಯಾಗಳು ಈ ಹಿಂದೆ ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡಿದ್ದವು ಎಂದು ಪ್ರಧಾನಿ ಟೀಕಿಸಿದರು. ಇಂತಹ ಶಕ್ತಿಗಳ ವಿರುದ್ಧ ಜನರು ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದರು.
ಇಂದು ನಮ್ಮ ಸರ್ಕಾರ ಬಡವರಿಗಾಗಿ ಸರ್ಕಾರಿ ಗೋಡೌನ್‌ಗಳನ್ನು ತೆರೆದಿದೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ಪ್ರತಿ ಮನೆಗೆ ಆಹಾರವನ್ನು ತಲುಪಿಸುವಲ್ಲಿ ನಿರತರಾಗಿದ್ದಾರೆ. ಉತ್ತರ ಪ್ರದೇಶದ ಸುಮಾರು 15 ಕೋಟಿ ಜನರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಇತ್ತೀಚೆಗೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಹೋಳಿಯ ನಂತರಕ್ಕೂ ವಿಸ್ತರಿಸಲಾಗಿದೆ. ಹಿಂದಿನ ಸರ್ಕಾರಗಳು ಕ್ರಿಮಿನಲ್‌ಗಳಿಗೆ ರಕ್ಷಣೆ ನೀಡುವ ಮೂಲಕ ಉತ್ತರ ಪ್ರದೇಶದ ಹೆಸರನ್ನು ಕೆಡಿಸಿದ್ದವು. ಇಂದು ಮಾಫಿಯಾ ಜೈಲಿನಲ್ಲಿದೆ ಮತ್ತು ಹೂಡಿಕೆದಾರರು ರಾಜ್ಯದಲ್ಲಿ ಮುಕ್ತವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಡಬಲ್ ಎಂಜಿನ್‌ನ ಡಬಲ್ ಅಭಿವೃದ್ಧಿಯಾಗಿದೆ. ಅದಕ್ಕಾಗಿಯೇ ಉತ್ತರ ಪ್ರದೇಶ ಡಬಲ್ ಎಂಜಿನ್ ಸರ್ಕಾರದಲ್ಲಿ ನಂಬಿಕೆ ಹೊಂದಿದೆ ಎಂದು ಪ್ರಧಾನಿ ಹೇಳಿದರು.
5 साल पहले मैं यहां एम्स और खाद कारखाने का शिलान्यास करने आया था।
— PMO India (@PMOIndia) December 7, 2021
आज इन दोनों का एक साथ लोकार्पण करने का सौभाग्य भी आपने मुझे ही दिया है।
ICMR के रीजनल मेडिकल रिसर्च सेंटर को भी आज अपनी नई बिल्डिंग मिली है।
मैं यूपी के लोगों को बधाई देता हूं: PM @narendramodi in Gorakhpur
जब डबल इंजन की सरकार होती है, तो डबल तेजी से काम भी होता है।
— PMO India (@PMOIndia) December 7, 2021
जब नेक नीयत से काम होता है, तो आपदाएं भी अवरोध नहीं बन पातीं।
जब गरीब-शोषित-वंचित की चिंता करने वाली सरकार होती है, तो वो परिश्रम भी करती है, परिणाम भी लाकर दिखाती है: PM @narendramodi
हमने यूरिया का गलत इस्तेमाल रोका, यूरिया की 100% नीम कोटिंग की।
— PMO India (@PMOIndia) December 7, 2021
हमने करोड़ों किसानों को soil health card दिए ताकि उन्हें पता चल सके उनके खेत को किस तरह की खाद की जरूरत है।
हमने यूरिया के उत्पादन को बढ़ाने पर जोर दिया। बंद पड़े fertilizer plants को फिर से खोलने पर ताकत लगाई: PM
पहले की 2 सरकारों ने 10 साल में जितना भुगतान गन्ना किसानों को किया था लगभग उतना योगी जी की सरकार ने अपने साढ़े 4 साल में किया है: PM @narendramodi
— PMO India (@PMOIndia) December 7, 2021
मैं आज योगी जी सरकार की इस बात के लिए सराहना करूंगा कि उन्होंने गन्ना किसानों के लिए बीते सालों में अभूतपूर्व काम किया है।
— PMO India (@PMOIndia) December 7, 2021
गन्ना किसानों के लिए लाभकारी मूल्य, हाल में साढ़े 3 सौ रुपए तक बढ़ाया है: PM @narendramodi
आज़ादी के बाद से इस सदी की शुरुआत तक देश में सिर्फ 1 एम्स था।
— PMO India (@PMOIndia) December 7, 2021
अटल जी ने 6 और एम्स स्वीकृत किए थे।
बीते 7 वर्षों में 16 नए एम्स बनाने पर देशभर में काम चल रहा है।
हमारा लक्ष्य ये है कि देश के हर जिले में कम से कम एक मेडिकल कॉलेज जरूर हो: PM @narendramodi
सब जानते थे कि गोरखपुर में एम्स की मांग बरसों से हो रही थी।
— PMO India (@PMOIndia) December 7, 2021
लेकिन 2017 से पहले जो सरकार चला रहे थे, उन्होंने एम्स के लिए जमीन देने में हर तरह के बहाने बनाए: PM @narendramodi
सब जानते थे कि गोरखपुर का फर्टिलाइजर प्लांट, इस पूरे क्षेत्र के किसानों के लिए, यहां रोजगार के लिए कितना जरूरी था।
— PMO India (@PMOIndia) December 7, 2021
लेकिन पहले की सरकारों ने इसे शुरू करवाने में कोई दिलचस्पी नहीं दिखाई: PM @narendramodi
लाल टोपी वालों को सरकार बनानी है, आतंकवादियों पर मेहरबानी दिखाने के लिए, आतंकियों को जेल से छुड़ाने के लिए।
— PMO India (@PMOIndia) December 7, 2021
और इसलिए, याद रखिए, लाल टोपी वाले यूपी के लिए रेड अलर्ट हैं यानि खतरे की घंटी: PM @narendramodi
आज पूरा यूपी भली-भांती जानता है कि लाल टोपी वालों को लाल बत्ती से मतलब रहा है, आपकी दुख-तकलीफों से नहीं।
— PMO India (@PMOIndia) December 7, 2021
लाल टोपी वालों को सत्ता चाहिए, घोटालों के लिए, अपनी तिजोरी भरने के लिए, अवैध कब्जों के लिए, माफियाओं को खुली छूट देने के लिए: PM @narendramodi
आज हमारी सरकार ने सरकारी गोदाम गरीबों के लिए खोल दिए हैं और योगी जी हर घर अन्न पहुंचाने में जुटे हैं।
— PMO India (@PMOIndia) December 7, 2021
इसका लाभ यूपी के लगभग 15 करोड़ लोगों को हो रहा है।
हाल ही में पीएम गरीब कल्याण अन्न योजना को, होली से आगे तक के लिए बढ़ा दिया गया है: PM @narendramodi
पहले की सरकारों ने अपराधियों को संरक्षण देकर यूपी का नाम बदनाम कर दिया था।
— PMO India (@PMOIndia) December 7, 2021
आज माफिया जेल में हैं और निवेशक दिल खोल कर यूपी में निवेश कर रहे हैं।
यही डबल इंजन का डबल विकास है।
इसलिए डबल इंजन की सरकार पर यूपी को विश्वास है: PM @narendramodi